Breaking News

ರಾಜಕೀಯ

ಸುವರ್ಣಸೌಧಕ್ಕೆ ನುಗ್ಗಲು ಪ್ರತಿಭಟನಾನಿರತ ವಕೀಲರ ಯತ್ನ: ಪೊಲೀಸರೊಂದಿಗೆ ನೂಕಾಟ-ತಳ್ಳಾಟ

ಬೆಳಗಾವಿ: ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಆಗ್ರಹಿಸಿ ವಕೀಲರ ಸಂಘದಿಂದ ನಡೆದಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದು ಕೊಂಡಿದ್ದು, ರಾಷ್ಟ್ರೀಯ ಹೆದ್ದಾರಿ ಮೂಲಕ ಬಂದು ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸುತ್ತಿದ್ದಾರೆ ಈ ವೇಳೆ ರಾಷ್ಟ್ರೀಯ ಹೆದ್ದಾರಿ ಮೇಲೆ ಕಿಲೋಮೀಟರ್ ಗಟ್ಟಲೇ ಸಂಚಾರ ದಟ್ಟಣೆ ಉಂಟಾಗಿದೆ.   ಸುವರ್ಣ ವಿಧಾನಸೌಧದ ಗೇಟಿನೆದುರು ವಕೀಲರು ಮುತ್ತಿಗೆ ಹಾಕಲು ಮುಂದಾಗಿದ್ದಾರೆ. ಗೇಟ್ ಒಳಗೆ ನುಗ್ಗಲು ಯತ್ನಿಸಿದ್ದಾರೆ. ಗೇಟ್ ಮುಂದೆ ನೂಕು‌ನುಗ್ಗಲು ನಡೆದಿದ್ದು, ತಳ್ಳಾಟ …

Read More »

ಈಗಾಗಲೇ ಮಹಾಜನ ವರದಿ ಇತ್ಯರ್ಥ : ಸಿದ್ದರಾಮಯ್ಯ

ಮಹಾರಾಷ್ಟ್ರ ರಾಜ್ಯ ಸರ್ಕಾರದ ನಿರ್ಣಯವನ್ನು ಖಂಡಿಸಿ ಕಾಂಗ್ರೆಸ್ ಸಿ ಎಲ್ ಪಿ ಅದ್ಯಕ್ಷ ಸಿದ್ದರಾಮಯ್ಯ ಮಾದ್ಯಮಗಳೊಂದಿಗೆ ಮಾತನಾಡುತ್ತಾ ಈಗಾಗಲೇ ಮಹಾಜನ್ ಆಯೋಗ ವರದಿ ಇತ್ಯರ್ಥ ಆಗಿದೆ ಆದರೆ ಮಹಾರಾಷ್ಟ್ರ ಸರ್ಕಾರ ನಮಗೆ ಸೇರಬೇಕು ಎಂದು ನಿರ್ಣಯ ಮಾಡಿದರೆ ಅದಕ್ಕೆ ಕಾನೂನು ಬಲ ಇಲ್ಲಾ, ನಾವು ನಮ್ಮ ವಿಧಾನಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದ್ದೇವೆ. ಮಹಾರಾಷ್ಟ್ರ ವಿಧಾನಸಭೆ ನಿರ್ಣಯಕ್ಕೆ ಕವಡೆ ಕಾಸಿನ‌‌ಕಿಮ್ಮತ್ತು ಇಲ್ಲ ಎಂದರು.

Read More »

ಗೋವಾಕ್ಕೆ ಬಂದಿದ್ದ ಮುಂಬೈ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಬಸ್ ಚಾಲಕ

ಪಣಜಿ: ರಜೆ ಇದ್ದ ಕಾರಣಕ್ಕೆ ಗೋವಾಕ್ಕೆ ಬಂದಿದ್ದ ಮುಂಬೈ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಬಸ್ ಚಾಲಕನನ್ನು ಬಂಧಿಸಲಾಗಿದೆ. ಗೋವಾದಲ್ಲಿ ವಿಹಾರಕ್ಕೆ ಬಂದಿದ್ದ ಮುಂಬೈ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 35 ವರ್ಷದ ಬಸ್ ಚಾಲಕನನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.   ಶಂಕಿತ ಆರೋಪಿಯನ್ನು ದಕ್ಷಿಣ ಗೋವಾದ ಮೊರ್ಮುಗಾವೊದ ಜುವಾರಿನಗರ ಪ್ರದೇಶದ ನಿವಾಸಿ ಚಂದ್ರಶೇಖರ್ ವಾಸು ಲಮಾಣಿ ಎಂದು ಪೊಲೀಸರು ಗುರುತಿಸಲಾಗಿದೆ. ಅತ್ಯಾಚಾರ ಸಂತ್ರಸ್ತೆ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದು, ಬಸ್ …

Read More »

ಮಹಾರಾಷ್ಟ್ರ ರಾಜ್ಯಕ್ಕೆ ಕರ್ನಾಟಕದ ಒಂದಿಂಚೂ ಜಾಗ ಕೊಡುವುದಿಲ್ಲ ಎಂದ ಕಾಂಗ್ರೆಸ್ ಮುಖಂಡ ಈಶ್ವರ ಖಂಡ್ರೆ

ಮಹಾರಾಷ್ಟ್ರ ರಾಜ್ಯಕ್ಕೆ ಕರ್ನಾಟಕದ ಒಂದಿಂಚೂ ಜಾಗ ಕೊಡುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ಈಶ್ವರ ಖಂಡ್ರೆ ಹೇಳಿದರು. ಮಹಾರಾಷ್ಟ್ರ ರಾಜ್ಯದವರು ವಿನಾಕಾರಣ ರಾಜಕೀಯ ದುರುದ್ದೇಶದಿಂದ ಹೀಗೆ ಮಾಡ್ತಾ ಇದ್ದಾರೆ ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಒಂದಿಂಚೂ ಜಾಗ ಕೂಡ ಮಹಾರಾಷ್ಟ್ರಕ್ಕೆ ಹೋಗೋದು ಸಾಧ್ಯವಿಲ್ಲ ಎಂದು ಮಾದ್ಯಮಗಳಿಗೆ ಮಾಹಿತಿ ನೀಡಿದರು.

Read More »

ಪೋಲಿಸ್ ಇನ್ಸಪೇಕ್ಟರ ರನ್ನು ಗದರಿಸಿದ ಶಾಸಕ

ಸುವರ್ಣಸೌಧ ವಿ ಐ ಪಿ ಗೇಟ ಮುಂದೆ ನಿಂತಿದ್ದ ಕುಣಿಗಲ್ ಶಾಸಕ ರಂಗನಾಥ ಮತ್ತು ಅವರ ಸಂಗಡಿಗರನ್ನು ಪೋಲಿಸ್ ಇನ್ಸಪೇಕ್ಟರ ದೂರು ಸರಿಯಿರಿ ಎಂದು ಗದರಿಸಿದರು ಕೂಡಲೇ ಗರಂ ಆದ ಶಾಸಕ ರಂಗನಾಥ ಇನ್ಸಪೇಕ್ಟರ ರನ್ನು ಹಿಗ್ಗಾ ಮುಗ್ಗಾ ತರಾಟೆಗೆ ತಗೆದುಕೊಂಡರು. ನನಗೆ ನೀವು ಯಾರು ಎಂದು ಗೊತ್ತಾಗಿಲ್ಲಾ ಎಂದು ಇನ್ಸಪೇಕ್ಟರ, ಗೋತ್ತಾಗದಿದ್ದರೆ ಗೋತ್ತು ಮಾಡಿಕೋಳ್ಳ ಬೇಕು , ಎಲ್ಲಾ ಶಾಸಕರನ್ನು ಹೀಗೆ ಕೇಳ್ತಿರಾ ಎಂದು ಗದರಿಸಿದರು.

Read More »

ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ: ಶೇ.5ರಷ್ಟು ಡಿಎ, ಫಿಟ್ಮೆಂಟ್ ಅಂಶ ಹೆಚ್ಚಳ, ಸ್ಯಾಲರಿ ಹೆಚ್ಚಳ

ನವದೆಹಲಿ : ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಮನೆ ಬಾಡಿಗೆ ಭತ್ಯೆ, ಡಿಎ ಹೆಚ್ಚಳ, ಡಿಎ ಬಾಕಿ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಫಿಟ್ಮೆಂಟ್ ಫ್ಯಾಕ್ಟರ್ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಶೀಘ್ರದಲ್ಲೇ ನಿರ್ಧಾರಗಳನ್ನ ತೆಗೆದುಕೊಳ್ಳುವ ಸಾಧ್ಯತೆಯಿದೆ. ದೀರ್ಘಕಾಲದಿಂದ, ಕೇಂದ್ರ ಸರ್ಕಾರಿ ನೌಕರರು ಫಿಟ್ಮೆಂಟ್ ಅಂಶವನ್ನು ಹೆಚ್ಚಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ವರದಿಗಳನ್ನ ನಂಬುವುದಾದ್ರೆ, ಫಿಟ್ಮೆಂಟ್ ಫ್ಯಾಕ್ಟರ್’ನ ದೀರ್ಘಕಾಲದ ಬೇಡಿಕೆಯ ಬಗ್ಗೆ ಕೇಂದ್ರವು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಇನ್ನು ವರದಿಗಳ …

Read More »

ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಎರಡು ಹೆಜ್ಜೆ ಮುಂದೆ ಹೋಗಿದ್ದೇವೆ: ಸಿಎಂ ಬೊಮ್ಮಾಯಿ

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರದ ಕುರಿತು ಹೈಕಮಾಂಡ್ ಜೊತೆ ವಿಸ್ತೃತ ಚರ್ಚೆ ನಡೆದಿದ್ದು, ಕಳೆದ ಬಾರಿಗಿಂತ ಎರಡು ಹೆಜ್ಜೆ ಮುಂದೆ ಹೋಗಿದ್ದೇವೆ. ಸಂಪುಟ ವಿಸ್ತರಣೆ ವಿಷಯ ಅಂತಿಮ ಹಂತಕ್ಕೆ ಬಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ನವದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಒಂದು ಪ್ರಕ್ರಿಯೆ, ಇದೀಗ ಈ ವಿಷಯದಲ್ಲಿ ಕಳೆದ ಬಾರಿಗಿಂತ ಎರಡು …

Read More »

ಸರ್ ಕೊಲೆ ಮಾಡ್ತಾರೆ ಬದುಕಿಸಿ: ಪೊಲೀಸರಿಗೆ ಗೋಗರೆದು ಶರಣಾದ ರೌಡಿ ಶೀಟರ್ ಸ್ಟಾರ್ ನವೀನ್

ಬೆಂಗಳೂರು : ಬೆಂಗಳೂರು ಸಿಸಿಬಿ ಮತ್ತು ಸೌಥ್ ಪೊಲೀಸರು ಹುಡುಕಾಡುತ್ತಿದ್ದ ರೌಡಿ ಶೀಟರ್ ನವೀನ್ ಅಲಿಯಾಸ್ ಸ್ಟಾರ್ ಇದ್ದಕ್ಕಿದ್ದಂತೆ ಸಿದ್ದಾಪುರ ಪೊಲೀಸರಿಗೆ ಕರೆ ಮಾಡಿ ಸರ್ ನನ್ನ ಉಳಿಸಿ, ಇಲ್ಲದಿದ್ದರೆ ನನ್ನ ಕೊಲೆ ಮಾಡುತ್ತಾರೆ ಎಂದು ಗೋಗರೆದಿದ್ದ. ಇನ್ನೂ ನವೀನ ತಮಿಳುನಾಡಿನಿಂದ ಮೈಸೂರಿಗೆ ಬರುವಾಗ ಫಾಲೋ ಮಾಡಿದ ಗ್ಯಾಂಗ್‌ನಿಂದ ಈತ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಮೈಸೂರಿಗೆ ಎದುರಾಳಿಗಳಿಗೆ ಮೆಸೇಜ್ ಪಾಸ್​ ಮಾಡಿದ್ದ ವಿಷಯ ಕೇಳಿಸಿಕೊಂಡು ಜಾಗೃತನಾದ ರೌಡಿಶೀಟರ್ ನವೀನ ತಕ್ಷಣ ಸಿಸಿಬಿ …

Read More »

8 ತಿಂಗಳು ತಿರುಪತಿ ತಿಮ್ಮಪ್ಪನ ದರ್ಶನ ಬಂದ್.?

ತಿರುಪತಿ: ಗರ್ಭಗುಡಿ ಮೇಲಿನ ಗೋಪುರದ ಚಿನ್ನದ ಲೇಪನ ಕಾರ್ಯ ಕೈಗೊಳ್ಳುವುದರಿಂದ ಎಂಟು ತಿಂಗಳ ಕಾಲ ತಿರುಪತಿ ತಿರುಮಲದಲ್ಲಿ ತಿಮ್ಮಪ್ಪನ ದರ್ಶನ ಬಂದ್ ಆಗಲಿದೆ. ತಾತ್ಕಾಲಿಕವಾಗಿ ಗರ್ಭಗುಡಿ ನಿರ್ಮಿಸಿ ಭಕ್ತರಿಗೆ ದರ್ಶನ ಕಲ್ಪಿಸಲು ಚಿಂತನೆ ನಡೆದಿದೆ.   ವಿಶ್ವದ ಶ್ರೀಮಂತ ದೇಗುಲ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ವಾರ್ಷಿಕ ಒಂದು ಕೋಟಿಗೂ ಅಧಿಕ ಭಕ್ತರು ಬರುತ್ತಾರೆ. ಗರ್ಭಗುಡಿಯನ್ನು ಕನಿಷ್ಠ ಆರರಿಂದ ಎಂಟು ತಿಂಗಳ ಕಾಲ ಮುಚ್ಚುವ ಸಾಧ್ಯತೆ ಇದ್ದು, ಗರ್ಭಗುಡಿಯ ಮೇಲೆ ಮೂರು ಅಂತಸ್ತಿನ …

Read More »

ವಿಧಾನಸಭೆಯಲ್ಲಿ `SC-ST’ ಮೀಸಲಾತಿ ಹೆಚ್ಚಳ ಮಸೂದೆ ಪಾಸ್

ಬೆಳಗಾವಿ : ಪರಿಶಿಷ್ಟ ಜಾತಿ (SC) ಮತ್ತು ಪಂಗಡದ (ST) ವರ್ಗಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲು ಹೆಚ್ಚಿಸುವ ಮಸೂದೆಗೆ ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರ ನೀಡಿದೆ. ಈ ಮೂಲಕ ಎಸ್ ಸಿ ಗೆ ಪ್ರಸ್ತುತ ಶೇ. 15 ರಷ್ಟು ಇದ್ದ ಮೀಸಲು 17 ಕ್ಕೆ ಹಾಗೂ ಎಸ್ ಟಿ ಗೆ ಇದ್ದ ಶೇ. 3 ರಷ್ಟು ಮೀಸಲು ಶೇ. 7 ಕ್ಕೆ ಹೆಚ್ಚಾಗಲಿದೆ.   ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ …

Read More »