Breaking News

ರಾಜಕೀಯ

ರೈತರ ಖಾತೆಗೆ ಕಿಸಾನ್ ಸಮ್ಮಾನ್ ನಿಧಿ: ಸಚಿವೆ ಶೋಭಾ ಕರಂದ್ಲಾಜೆ

ಬೆಳಗಾವಿ: ಫೆ.27 ರಂದು ಬೆಳಗಾವಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಿಸಾನ್ ಸಮ್ಮಾನ್ ನಿಧಿಯನ್ನು ನೇರವಾಗಿ ರೈತರ ಖಾತೆಗೆ ವರ್ಗಾವಣೆ ಮಾಡಲಿದ್ದಾರೆ ಎಂದು ಕೇಂದ್ರ ಕೃಷಿ ಇಲಾಖೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.   ಪ್ರಧಾನಮಂತ್ರಿಗಳ ಕಾರ್ಯಕ್ರಮ ನಡೆಯಲಿರುವ ಬಿ.ಎಸ್.ಯಡಿಯೂರಪ್ಪ ಮಾರ್ಗದಲ್ಲಿರುವ ಮಾಲಿನಿ ಸಿಟಿಯಲ್ಲಿ ವೇದಿಕೆ ನಿರ್ಮಾಣ ಮತ್ತಿತರ ಸಿದ್ಧತೆಗಳನ್ನು ಗುರುವಾರ ಪರಿಶೀಲಿಸಿ ಮಾತನಾಡಿದ ಅವರು, ಇದು ಸಂಪೂರ್ಣ ರೈತರ ಕಾರ್ಯಕ್ರಮವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ರೈತರು …

Read More »

ಬಿಸಿಯನ್ನು ತಾಳಿಕೊಳ್ಳಬಲ್ಲ ಗೋಧಿ ತಳಿ ಅಭಿವೃದ್ಧಿ: ಐಸಿಎಆರ್‌ನ ಹೊಸ ಸಂಶೋಧನೆ

ನವದೆಹಲಿ: ಬಿಸಿಯನ್ನೂ ತಾಳಿಕೊಳ್ಳಲು ಸಾಧ್ಯವಿರುವ ಗೋಧಿ ತಳಿಯನ್ನು ಭಾರತೀಯ ಕೃಷಿ ಸಂಶೋಧನಾ ಪರಿಷತ್ತು(ಐಸಿಎಆರ್‌) ಅಭಿವೃದ್ಧಿಪಡಿಸಿದೆ. ಬೇಸಿಗೆ ಸಮೀಪಿಸುತ್ತಿದೆ. ಹವಾಮಾನ ಬದಲಾವಣೆ ಹಿನ್ನೆಲೆಯಲ್ಲಿ ಗೋಧಿ ಬೆಳೆಯುವ ಪ್ರದೇಶಗಳಲ್ಲಿ ತಾಪಮಾನ ಸರಾಸರಿ 3-5 ಸೆಲಿÏಯಸ್‌ ಏರಿಕೆಯಾಗುವ ಸಾಧ್ಯತೆಯಿದೆ. ಕಳೆದ ವರ್ಷ ಬೇಸಿಗೆಯಲ್ಲಿ ತಾಪಮಾನ ಹೆಚ್ಚಳದಿಂದ ಗೋಧಿ ಬೆಳೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ಈ ಹಿನ್ನೆಲೆಯಲ್ಲಿ ಐಸಿಎಆರ್‌ ವಿಜ್ಞಾನಿಗಳು ಬಿಸಿಯನ್ನೂ ತಾಳಿಕೊಳ್ಳುವ ಗೋಧಿ ತಳಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಜನವರಿಯಲ್ಲಿ ಏಕದಳ ಧಾನ್ಯಗಳ ಕೊರತೆ ದಾಖಲೆಯ ಶೇ. …

Read More »

ಲಂಚಕ್ಕೆ ಕೈಯೊಡ್ದಿದ್ದ ಇಂಜಿನಿಯರ್ ಲೋಕಾಯುಕ್ತ ಬಲೆಗೆ

ಹರಿಹರ: ಲಂಚಕ್ಕೆ ಕೈಯೊಡ್ದಿದ್ದ ಹರಿಹರ ತಾಲೂಕಿನ ಬೆಸ್ಕಾಂ ಇಂಜಿನಿಯರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಬೆಸ್ಕಾಂ ಕಚೇರಿಯ ಸಹಾಯಕ ಕಾರ್ಯಪಡೆ ಇಂಜಿನಿಯರ್ ಬಿ.ಎಂ.ಕರಿಬಸವಯ್ಯ ಲೋಕಾಯುಕ್ತ ಬಲೆಗೆ ಬಿದ್ದವರು. ಕೆಇಬಿ ಗುತ್ತಿಗೆದಾರ ಬೇವಿನಹಳ್ಳಿ ಮಹೇಶ್ವರಪ್ಪನಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಇಂಜಿನಿಯರ್ ಕರಿಬಸವಯ್ಯನನ್ನು ಬಂಧಿಸಿದ್ದಾರೆ. ಕಡತ ವಿಲೇವಾರಿಗಾಗಿ 15 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕರಿಬಸವಯ್ಯ, ಅದಾಗಲೇ 9ಸಾವಿರ ರೂಪಾಯಿ ಪಡೆದಿದ್ದ. ಉಳಿದ …

Read More »

ತಾವು ಮಾಡಿದ್ದ ವಾಂತಿಯನ್ನು ತಾವೇ ತಿನ್ನುವಂತಾಗಿದೆ: ಬಿಜೆಪಿ ನಾಯಕರ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ಸರಣಿ ಟ್ವೀಟ್​ ಮೂಲಕ ವಾಗ್ದಾಳಿ ನಡೆಸಿದ್ದಾರೆ.   ಮಾಂಸ ತಿನ್ನುವುದು ತಿನ್ನದಿರುವುದು, ದೇವಸ್ಥಾನಗಳಿಗೆ ಹೋಗುವುದು ಹೋಗದಿರುವುದು ಅವರವರ ವೈಯಕ್ತಿಕ ಆಯ್ಕೆಗಳಾಗಿವೆ. ಇದು ರಾಜಕೀಯ ಚರ್ಚೆಯ ವಸ್ತು ಆಗಬಾರದು. ರಾಜಕೀಯ ನಾಯಕರು ಜನತೆಯ ಕಲ್ಯಾಣ, ರಾಜ್ಯದ ಅಭಿವೃದ್ದಿ ಬಗ್ಗೆ ಚರ್ಚಿಸಬೇಕು. ಪರದೂಷಣೆಯಲ್ಲಿ ನಿರತರಾಗಿರುವ …

Read More »

ಹ್ಯಾಪಿ ಎಂಡಿಂಗ್ʼ ಬೇಕು ಅಂತ ಯುವತಿ ಮೇಲೆ ʼಅತ್ಯಾಚಾʼರವೆಸಗಿದ ಕಾಮುಕ..!

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಮಸಾಜ್ ಪಾರ್ಲರ್‌ಗಳ ಹಾವಳಿ ಹೆಚ್ಚಾಗಿದೆ. ಸಾವಿರಾರು ಪಾರ್ಲರ್ ಗಳು ತಲೆ ಎತ್ತಿವೆ. ಇಂತಹ ಪಾರ್ಲರ್ ಗಳಲ್ಲಿ ‌ಕೆಲಸ ಮಾಡುವ ಯುವತಿಯರು ಎಷ್ಟರ ಮಟ್ಟಿಗೆ‌ ಸೇಫ್ ಅನ್ನೋದೆ ಈಗಿನ ಪ್ರಶ್ನೆಯಾಗಿದೆ. ಜಯನಗರ ಪೊಲೀಸ್ ಠಾಣಾ‌ ವ್ಯಾಪ್ತಿಯಲ್ಲಿನ ಮ್ಯಾಜಿಕ್ ಟೆಚ್ ಯೂನಿಸೆಕ್ಸ್ ಸೆಲೂನ್ ಪಾರ್ಲರ್ ಒಂದರಲ್ಲಿ ಇದೀಗ ಅತ್ಯಾಚಾರದ ಆರೋಪವೊಂದು ಕೇಳಿ ಬಂದಿದೆ.‌ಕಾಮಕ ರವೀಂದ್ರ ಶೆಟ್ಟಿ ಎಂಬಾತ ಯುವತಿಯ ಮೇಲೆ ತನ್ನ ಕ್ರೌರ್ಯ ಮೆರೆದಿದ್ದಾನೆ.   ಮಸಾಜ್ ಪಾರ್ಲರ್‌ನಲ್ಲಿ …

Read More »

ಭಾರತದಲ್ಲೂ ಶೀಘ್ರದಲ್ಲೇ ಭಾರಿ ಭೂಕಂಪ ಸಾಧ್ಯತೆ!; ತಜ್ಞರ ಎಚ್ಚರಿಕೆ

ನವದೆಹಲಿ: ಕಳೆದ ಎರಡು ಮೂರು ವಾರಗಳಲ್ಲಿ ಟರ್ಕಿ-ಸಿರಿಯಾದಲ್ಲಿ ಸಂಭವಿಸಿದ ಭೀಕರ ಸರಣಿ ಭೂಕಂಪದಲ್ಲಿ 50 ಸಾವಿರಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದರು. ಅಲ್ಲದೆ ಭಾರಿ ಆಸ್ತಿ-ಪಾಸ್ತಿ ಹಾನಿಗೀಡಾಗಿದ್ದು, ಇನ್ನೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇದರ ನಡುವೆ ಭಾರತದಲ್ಲೂ ಸದ್ಯದಲ್ಲೇ ಭಾರಿ ಭೂಕಂಪ ಸಂಭವಿಸಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ನ್ಯಾಷನಲ್​ ಜಿಯೋಫಿಸಿಕಲ್ ರಿಸರ್ಚ್​ ಇನ್​ಸ್ಟಿಟ್ಯೂಟ್​(ಎನ್​ಜಿಆರ್​​ಐ) ತಜ್ಞರು ಈ ಕುರಿತು ಎಚ್ಚರಿಕೆ ನೀಡಿದ್ದಾರೆ. ಹಿಮಾಲಯ ಭಾಗದಲ್ಲಿ ಭೂಕಂಪ ಆಗುವ ಸಾಧ್ಯತೆಗಳಿದ್ದು, ಹಿಮಾಚಲಪ್ರದೇಶ ಮತ್ತು ಉತ್ತರಾಖಂಡದಲ್ಲಿ …

Read More »

ದೇಶದಲ್ಲಿ ಭೂಕಂಪನ , ಜಲ ಪ್ರಳಯ ಸಂಭವಿಸುತ್ತೆ’ : ಬಬಲಾದಿ ಸದಾಶಿವ ಮಠದ ಸ್ವಾಮೀಜಿ ಭವಿಷ್ಯ

ವಿಜಯಪುರ : ಜಿಲ್ಲೆಯ ಬಬಲೇಶ್ವರ ತಾಲೂಕಿನ ಹೊಳೆ ಬಬಲಾದಿ ಸದಾಶಿವ ಮುತ್ಯಾನ ಮಠದ ಸ್ವಾಮೀಜಿ 2023 ರ ಕಾಲಜ್ಞಾನ ಬಗ್ಗೆ ಭವಿಷ್ಯ ನುಡಿದಿದ್ದಾರೆ. ದೇಶದಲ್ಲಿ ಭೂಕಂಪನ ಹಾಗೂ ಜಲಪ್ರಳಯ ಉಂಟಾಗಲಿದೆ ಎಂದು ಹೊಳೆಬಬಲಾದಿ ಮಠಾಧೀಶರು ಮತ್ತು ಕಾರ್ಣಿಕರಾದ ಶ್ರೀ ಸಿದ್ಧರಾಮಯ್ಯ ಹೊಳಿಮಠ ಭವಿಷ್ಯ ನುಡಿದಿದ್ದಾರೆ. ರಾಜ್ಯದಲ್ಲಿ ಭೂಮಿ ಕುಪ್ಪಳಿಸಲಿದೆ ಎಂದು ಸಿದ್ಧರಾಮಯ್ಯ ಹೊಳಿಮಠ ಸ್ವಾಮೀಜಿ ಇದೀಗ ಭವಿಷ್ಯ ನುಡಿದಿದ್ದಾರೆ. ಸಜ್ಜನರು ಕೂಡ ದುರ್ಜನರಾಗುತ್ತಾರೆ, ಹಿಂಗಾರು ಮುಂಗಾರು ಮಳೆ ಉತ್ತಮವಾಗಲಿದೆ.ನಮ್ಮ ನಮ್ಮಲ್ಲಿ …

Read More »

2024ರ ಲೋಕಸಭೆ ಚುನಾವಣೆ: ಕಾಂಗ್ರೆಸ್ ನೇತೃತ್ವದ ಸರ್ಕಾರವೇ ಅಧಿಕಾರಕ್ಕೆ- ಖರ್ಗೆ

ಕೊಹಿಮಾ: ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಅವರಂತಹ ನೂರು ಮಂದಿ ಬಂದರೂ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ನಾಗಾಲ್ಯಾಂಡ್‌ನಲ್ಲಿ ಚುನಾವಣೆ ರ್‍ಯಾಲಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.   ದೇಶವನ್ನು ಉತ್ತಮವಾಗಿ ಮುನ್ನಡೆಸುವ ವ್ಯಕ್ತಿ ತಾನೊಬ್ಬನೇ, ಬೇರೆ ಯಾರು ಇಲ್ಲ ಎಂದುಕೊಂಡಿದ್ದಾರೆ. ನಿಮ್ಮ ಈ ಎಲ್ಲಾ ನಂಬಿಕೆಗಳು ಮುಂದಿನ ಚುನಾವಣೆಯಲ್ಲಿ ಹುಸಿಯಾಗಲಿವೆ ಎಂದರು. ನೀವು ಸರ್ವಾಧಿಕಾರಿ ಅಲ್ಲ, ಜನರಿಂದ ಆಯ್ಕೆಯಾದ ನಿಮಗೆ …

Read More »

ಮುಗಳಖೋಡ: ‘ವಿವಿಧ ಸಮಾಜಗಳ ಏಳಿಗೆಗಾಗಿ ಬಿಜೆಪಿ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿದೆ’ ಎಂದ ಬಿಜೆಪಿ

ಮುಗಳಖೋಡ: ‘ವಿವಿಧ ಸಮಾಜಗಳ ಏಳಿಗೆಗಾಗಿ ಬಿಜೆಪಿ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿದೆ’ ಎಂದು ಬಿಜೆಪಿ ವಿಜಯಪುರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಉಮೇಶ್ ಕಾರಜೋಳ ಹೇಳಿದರು. ‘ಮಾಳಿ-ಮಾಲಗಾರ, ಹಡಪದ, ಹೂಗಾರ, ಗಾಣಿಗೆ ಸಮಾಜದ ನಿಗಮ ಘೋಷಣೆ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಭಿನಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.   ಡಾ.ಸಿ.ಬಿ. ಕುಲಿಗೋಡ ಮಾತನಾಡಿ, ‘ನಿಗಮ ಘೋಷಿಸಲು ಕಾರಣರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಲಕ್ಷ್ಮಣ ಸವದಿ, ಶಾಸಕರಾದ ಪಿ. ರಾಜೀವ್, ಬಾಲಚಂದ್ರ …

Read More »

ಫೆ. 27ರಂದು ಸೋಮವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ರವರೆಗೆ ವಿದ್ಯುತ್ ವ್ಯತ್ಯಯ

ಬೆಳಗಾವಿ: ಇಲ್ಲಿನ 110 ಕೆವಿ  ವಡಗಾಂವ ಉಪಕೇಂದ್ರ ವಿದ್ಯುತ್ ಸರಬರಾಜು ಆಗುವ ಬೆಳಗಾವಿ ನಗರದ ವಿವಿಧ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಪೂರಕಗಳ ಮೇಲೆ ಬರುವ ಪ್ರದೇಶಗಳಲ್ಲಿ ಫೆ. 27ರಂದು ಸೋಮವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ರವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ. ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು ಎಫ್-04 ಬಜಾರ ಗಲ್ಲಿ ವ್ಯಾಪ್ತಿಯ ಭಾರತ ನಗರ,ಲಕ್ಷ್ಮೀ ನಗರ, ಗಣೇಶಪುರಗಲ್ಲಿ, ಜೇಡಗಲ್ಲಿ, ಅಳ್ವಾನ ಗಲ್ಲಿ, ಮಂಗಾಯಿ ನಗರ, ಪಾಟೀಲಗಲ್ಲಿ, ಯರಮಾಳ ರೋಡ, ಬಾಝಾರಗಲ್ಲಿ, …

Read More »