ಪುರಿ/ಅಹಮದಾಬಾದ್: ಒಡಿಶಾದ ಪುರಿಯಲ್ಲಿ ಮಂಗಳವಾರ ವಿಶ್ವವಿಖ್ಯಾತ ಜಗನ್ನಾಥ ರಥಯಾತ್ರೆ ವೇಳೆ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ. ಇದರಿಂದ 14 ಜನರು ಗಾಯಗೊಂಡಿದ್ದು, ಸುಮಾರು 82 ಪ್ರಜ್ಞೆ ತಪ್ಪಿ ಬಿದ್ದಿರುವ ಘಟನೆ ವರದಿಯಾಗಿದೆ. ಮತ್ತೊಂದೆಡೆ, ಗುಜರಾತ್ನ ಅಹಮದಾಬಾದ್ನಲ್ಲೂ ನಡೆಯುತ್ತಿದ್ದ ಜಗನ್ನಾಥ ರಥಯಾತ್ರೆಯಲ್ಲಿ ದುರ್ಘಟನೆ ಸಂಭವಿಸಿದೆ. ಮನೆಯೊಂದರ ಬಾಲ್ಕನಿಯ ಒಂದು ಭಾಗ ಕುಸಿದು ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, 31 ಮಂದಿ ಗಾಯಗೊಂಡಿದ್ದಾರೆ. ಪುರಿಯಲ್ಲಿ ಭಗವಾನ್ ಜಗನ್ನಾಥ ಮತ್ತು ಸಹೋದರ ಬಲಭದ್ರ ಮತ್ತು ಸುಭದ್ರೆಯ ಬೃಹತ್ …
Read More »ಅನೈತಿಕ ಸಂಬಂಧ.. ಪ್ರಿಯಕರನಿಂದಲೇ ಕೊಲೆಯಾದ ಮಹಿಳೆ
ದಾವಣಗೆರೆ: ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹಲವಾಗಲು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಾಲ್ಕು ತಿಂಗಳ ಹಿಂದೆ ನಡೆದಿದ್ದ ವಿವಾಹಿತ ಮಹಿಳೆ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಅನೈತಿಕ ಸಂಬಂಧ ಹೊಂದಿದ್ದ ಮಹಿಳೆ ತನ್ನ ಪ್ರಿಯಕರನ ಕೈಯಲ್ಲೇ ಕೊಲೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ನಿಟ್ಟೂರು ಗ್ರಾಮದ ನಿವಾಸಿ ಕವಿತಾ ಕೊಲೆಯಾದ ಮಹಿಳೆ. ಸಲೀಂ ಮುನ್ನಾ ಖಾನ್ ಕೊಲೆ ಆರೋಪಿ. ಮೃತ ಮಹಿಳೆ ವಿವಾಹಿತೆಯಾಗಿದ್ದರು ಕೂಡ ಪರ ಪುರುಷನೊಂದಿಗೆ ಅನೈತಿಕ …
Read More »ಭಾರತೀಯ ಅಂಚೆ ಕಚೇರಿಯಲ್ಲಿರುವ ಎಟಿಎಂನಲ್ಲಿ ಕಳ್ಳತನ
ಭಾರತೀಯ ಅಂಚೆ ಕಚೇರಿಯಲ್ಲಿರುವ ಎಟಿಎಂನಲ್ಲಿ ಕಳ್ಳತನವಾಗಿರುವ ಘಟನೆ ವಿಜಯಪುರ ನಗರದ ಬಸವೇಶ್ವರ ಸರ್ಕಲ್ ಬಳಿಯಲ್ಲಿ ನಡೆದಿದೆ. ಎಟಿಎಂನಲ್ಲಿರುವ ಎಷ್ಟು ಹಣ ಕಳ್ಳತನ ಆಗಿದೆ ಎನ್ನುವುದು ಮಾಹಿತಿ ಸಿಕ್ಕಿಲ್ಲ. ಆದ್ರೇ, ಭಾರತೀಯ ಅಂಚೆಯ ಎಟಿಎಂ ಒಡೆದು ಕಳ್ಳರು ಕಳ್ಳತನಗೈದು ಎಸ್ಕೇಪ್ ಆಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Read More »ಬಸ್ ಇಲ್ಲದೆ ಪರದಾಟ ; ಜೆಸಿಬಿಯಲ್ಲಿಯೇ ಶಾಲೆಗೆ ತೆರಳಿದ ವಿದ್ಯಾರ್ಥಿಗಳು.
ಕೊಪ್ಪಳ : ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಶಾಖಾಪುರ ಗ್ರಾಮದಲ್ಲಿ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದ ಕಾರಣ ಪ್ರೌಢಶಾಲೆ ವಿದ್ಯಾರ್ಥಿಗಳು ಜೆಸಿಬಿ ಯಂತ್ರದಲ್ಲಿ ಕುಳಿತು ಶಾಲೆಗೆ ತೆರಳಿದ ಘಟನೆ ನಡೆದಿದೆ. ಸಮವಸ್ತ್ರ ಧರಿಸಿದ್ದ ಹತ್ತಾರು ವಿದ್ಯಾರ್ಥಿಗಳು ಕೊಪ್ಪಳ-ಕುಷ್ಟಗಿ ರಾಜ್ಯ ಹೆದ್ದಾರಿಯಲ್ಲಿ ಜೆಸಿಬಿಯ ಹಿಂದಿನ ಬಕೆಟ್ ಮತ್ತು ಕ್ಯಾಬಿನ್ ಒಳಗೆ ಕುಳಿತು ಶಾಲೆಗೆ ತೆರಳಿದರು. ಶಾಖಾಪುರ ಕ್ರಾಸ್ ಸಮೀಪ ವಿದ್ಯಾರ್ಥಿಗಳು ನಿಂತಿದ್ದರೂ ಕುಷ್ಟಗಿಯಿಂದ ಕೊಪ್ಪಳಕ್ಕೆ ಹೋಗುವ ಸಾರಿಗೆ ಬಸ್ಗಳು ನಿಲ್ಲುವುದಿಲ್ಲ. ಬಹುತೇಕ ಬಸ್ಗಳು …
Read More »ಹೆಂಡತಿ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಆರೋಪದ ಮೇಲೆ ಯುವಕನೊಬ್ಬನನ್ನು ಆಕೆಯ ಪತಿ ಬರ್ಬರವಾಗಿ ಹತ್ಯೆಗೈದ ಘಟನೆ ನಡೆದಿದೆ.
ಬೆಳಗಾವಿ : ಬೆಳಗಾವಿ ಜಿಲ್ಲೆಯ ಯರಗಟ್ಟಿ (Yaragatti) ತಾಲೂಕಿನ ಹಲಕಿ ಗ್ರಾಮದ ಸಮೀಪ ಹೆಂಡತಿ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಆರೋಪದ ಮೇಲೆ ಯುವಕನೊಬ್ಬನನ್ನು ಆಕೆಯ ಪತಿ ಬರ್ಬರವಾಗಿ ಹತ್ಯೆಗೈದ ಘಟನೆ ನಡೆದಿದೆ. ರಮೇಶ್ ಗುಂಜಗಿ(24) ಕೊಲೆಯಾದ ಯುವಕನಾಗಿದ್ದು, ಯಲ್ಲಪ್ಪ ಕಸೊಳ್ಳಿ ಎಂಬಾತ ಬರ್ಬರವಾಗಿ ಹತ್ಯೆಗೈದಿದ್ದಾನೆ. ಬೈಲಹೊಂಗಲ ತಾಲೂಕಿನ ವನ್ನೂರ ಗ್ರಾಮದ ನಿವಾಸಿಯಾಗಿರುವ ರಮೇಶ್ ಗುಂಜಗಿ, ಎರಡು ತಿಂಗಳ ಹಿಂದೆ ಮನೆ ಪಕ್ಕದ ಮಹಿಳೆಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದನು. ಈ ವಿಷಯ ತಿಳಿದ …
Read More »ಸ್ಮಶಾನ ಭೂಮಿ ನೀಡುವಂತೆ ರಸ್ತೆ ಮಧ್ಯೆ ಶವ ವಿಟ್ಟು ಪ್ರತಿಭಟನೆ
ಧಾರವಾಡ: ಸ್ಮಶಾನ ಭೂಮಿ ನೀಡುವಂತೆ ಶವ ವಿಟ್ಟು ಆಕ್ರೋಶ ಹೊರ ಹಾಕಿರುವ ಘಟನೆ ಧಾರವಾಡ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ನಡೆದಿದೆ. ತಡವಾಗಿ ಬೆಳಕಿಗೆ ಬಂದ ಪ್ರಕರಣವಾಗಿದ್ದು, ಹಲವಾರು ವರ್ಷಗಳಿಂದ ಸ್ಮಶಾನಕ್ಕೆ ಬೇಡಿಕೆಯಿಟ್ಟರೂ ಉಪಯೋಗವಾಗದೆ. ರಸ್ತೆ ಮಧ್ಯೆ ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ. ಗ್ರಾಮದಲ್ಲಿ ಗಂಗವ್ವ ಬೆಳಹಾರ(65) ನಿಧನರಾಗಿದ್ದು, ಅಂತ್ಯಸಂಸ್ಕಾರಕ್ಕೆ ಜಾಗ ಸಿಗದೆ ಆಕ್ರೋಶಗೊಂಡಿದ್ದಾರೆ. ಇನ್ನೂ ಈ ವೇಳೆ ಸ್ಥಳಕ್ಕೆ ಪೊಲೀಸರ ಆಗಮಿಸಿ ಗ್ರಾಮಸ್ಥರ ಮನವೋಲಿಕೆ ಮಾಡಲು ಮುಂದಾಗಿದ್ದರು. ಈ ಮೊದಲಿದ್ದ ಖಾಸಗಿ …
Read More »ಬೆಳಗಾವಿಯ ವ್ಯಾಕ್ಸಿನ್ ಡಿಪೋ ಪ್ರದೇಶದಲ್ಲಿ ಕಾಮಗಾರಿಗೆ 100 ಕೋಟಿ ವೆಚ್ಚ ಮಾಡಿದ್ದಾರೆ. ಆದ್ರೇ ಇದಕ್ಕೆ ಡಿಎಚ್ಒ ಅವರ ಅನುಮತಿಯನ್ನೇ ಪಡೆದಿಲ್ಲವಂತೆ.
Vaccine Depo Under Smart City: ಬೆಳಗಾವಿಯ ವ್ಯಾಕ್ಸಿನ್ ಡಿಪೋ ಪ್ರದೇಶದಲ್ಲಿ ಕಾಮಗಾರಿಗೆ 100 ಕೋಟಿ ವೆಚ್ಚ ಮಾಡಿದ್ದಾರೆ. ಆದ್ರೇ ಇದಕ್ಕೆ ಡಿಎಚ್ಒ ಅವರ ಅನುಮತಿಯನ್ನೇ ಪಡೆದಿಲ್ಲವಂತೆ. ವ್ಯಾಕ್ಸಿನ್ ಡಿಪೋ ಆರೋಗ್ಯ ಇಲಾಖೆಗೆ ಸೇರಿದ ಜಾಗ, ಆದರೆ ಅವರ ಅನುಮತಿಯನ್ನೇ ಪಡೆಯದೇ ಕಾಮಗಾರಿ ಮಾಡಿದ್ದಾರಂತೆ. ಬೆಳಗಾವಿಯಲ್ಲಿ ಹಿರಿಯ ಶ್ರೇಣಿಯ ಅಧಿಕಾರಿಗಳ ನಡುವೆ ಕಾಮಗಾರಿ ಫೈಟ್ ಶುರುವಾಗಿದೆ. ಅದು ಯಾವ ಹಂತಕ್ಕೆ ಹೋಗಿದೆ ಅಂದ್ರೇ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಆಗುವ …
Read More »ಕಾಡಲ್ಲಿ ಯುವತಿಯ ಶವ ಪತ್ತೆ; ಆಕೆಯ ಮೂವರು ಚಿಕ್ಕಮ್ಮಂದಿರ ಬಂಧನ: ಆಗಿದ್ದೇನು?
ಉತ್ತರಕನ್ನಡ: ದೇವಿಮನೆ ಘಟ್ಟ ಪ್ರದೇಶದ ಕಾಡಿನಲ್ಲಿ ಅಪರಿಚಿತ ಶವ ಪತ್ತೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಆ ಸಂಬಂಧ ಐವರನ್ನು ಬಂಧಿಸಿದ್ದಾರೆ. ವಿಶೇಷವೆಂದರೆ ಆರೋಪಿಗಳ ಪೈಕಿ ಸಾವಿಗೀಡಾದ ಯುವತಿ ಮೂವರು ಚಿಕ್ಕಮ್ಮಂದಿರೂ ಇದ್ದಾರೆ. ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ದೇವಿಮನೆ ಪ್ರದೇಶದಲ್ಲಿ ಅಪರಿಚಿತ ಯುವತಿಯ ಶವ ಪತ್ತೆಯಾಗಿತ್ತು. ಪ್ರಕರಣವನ್ನು ಭೇದಿಸಿದ ಪೊಲೀಸರು ಆಕೆಯನ್ನು ಶಿಗ್ಗಾವಿ ಮೂಲದ ತನುಜಾ (26) ಎಂದು ಪತ್ತೆ ಹಚ್ಚಿದ್ದಲ್ಲದೆ, ಆರೋಪಿಗಳನ್ನೂ ಪತ್ತೆ ಹಚ್ಚಿ ಬಂಧಿಸಿದ್ದಾರೆ. 3 ಕೋಟಿ …
Read More »4 ದಿನದಲ್ಲಿ 12.51 ಲಕ್ಷ ಗ್ರಾಹಕರು ನೋಂದಣಿ: ಸಾರ್ವಜನಿಕರ ಅನುಕೂಲಕ್ಕೆ ಹೊಸ ಲಿಂಕ್ ಬಿಡುಗಡೆ!
ಗೃಹಜ್ಯೋತಿನೋಂದಣಿ ಪ್ರಕ್ರಿಯೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಬುಧವಾರ ಸಂಜೆ ವೇಳೆಗೆ ಒಟ್ಟು 12.51 ಲಕ್ಷ ಗ್ರಾಹಕರು ಸೇವಾ ಸಿಂಧು ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಗೃಹಜ್ಯೋತಿ ಯೋಜನೆಗೆ ನೋಂದಣಿ ಪ್ರಕ್ರಿಯೆ ಜೂನ್ 18ರಂದು ಆರಂಭಗೊಂಡಿದ್ದು, ತಾಂತ್ರಿಕ ದೋಷಗಳ ನಡುವೆಯೂ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ದಿನ- 96,305, 2ನೇ ದಿನ- 3,34,845 3ನೇ ದಿನ- 4,64,225 ಹಾಗೂ 4ನೇ ದಿನ 3.56 ಲಕ್ಷ ಗ್ರಾಹಕರು ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. …
Read More »1 – 10ನೇ ತರಗತಿ ಮಕ್ಕಳಿಗೆ ಭರ್ಜರಿ ಸುದ್ದಿ: ಶಾಲಾ ಬ್ಯಾಗ್ ಹೊರೆ ಇಳಿಕೆ
ಬೆಂಗಳೂರು: ಯಶಪಾಲ ಶರ್ಮಾ ಸಮಿತಿಯ ಹೊರೆಯಿಲ್ಲದ ಕಲಿಕೆ ಅನುಸಾರ 1 ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶಾಲಾ ಬ್ಯಾಗ್ ಹೊರೆ ತಗ್ಗಿಸುವ ಬಗ್ಗೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹೊರೆಯಿಲ್ಲದೇ ಸಂತಸದಾಯಕವಾಗಿ ಕಲಿಯುವ ವಾತಾವರಣವನ್ನು ರೂಪಿಸುವ ಸಲುವಾಗಿ Centre for Child and Law, NLSUI, Benga ri ರವರ ಸಹಯೋಗದೊಂದಿಗೆ ಡಿ.ಎಸ್.ಇ.ಆರ್.ಟಿ ರವರು ಅಧ್ಯಯನ …
Read More »
Laxmi News 24×7