Breaking News

ಬೆಳಗಾವಿ

ತನ್ನ 15 ವರ್ಷದ ಮಗನ ಜೀವ ಉಳಿಸಲು ತನ್ನ ಕಿಡ್ನಿಯನ್ನೇ ದಾನಮಾಡಿದ ತಾಯಿ

ಬೆಳಗಾವಿ: ತನ್ನ 15 ವರ್ಷದ ಮಗನ ಜೀವ ಉಳಿಸಲು ತನ್ನ ಕಿಡ್ನಿಯನ್ನೇ ದಾನಮಾಡಿದ ತಾಯಿ ಈಗ ಆರ್ಥಿಕ ನೆರವು ನೀಡುವ ದಾನಿಗಳತ್ತ ಮುಖ ಮಾಡಿದ್ದಾರೆ. ದುಡಿದು ಮಗನನ್ನು ಸಲಹುವ ತಾಯಿಯ ಸಂಕಟಕ್ಕೀಗ ಮಾನವೀಯ ನೆಲೆಯಲ್ಲಿ ನೆರವಿನ ಹಸ್ತ ಚಾಚುವ ಉದಾರ ಹೃದಯಿಗಳ ಅಗತ್ಯ ಬಂದೊದಗಿದೆ. ಅಥಣಿ ತಾಲೂಕಿನ ಮದಬಾವಿಯ ಪ್ರಜ್ವಲ್ ಮಹಾದೇವ ನಿವಾಲಗಿ 9ನೇ ತರಗತಿಯಲ್ಲಿ ಓದುತ್ತಿರುವ ಪ್ರತಿಭಾವಂತ ಬಾಲಕ. ಈತ ಶೋಭಾ- ಮಹಾದೇವ ದಂಪತಿಯ ಏಕಮಾತ್ರ ಪುತ್ರ. ಶೋಭಾ ಅವರು …

Read More »

ಗಡಿ ಭಾಗದವರಿಗೆ ಮಹಾರಾಷ್ಟ್ರ ಸರ್ಕಾರದ ವಿಮೆ; ಹೇಗೆ ತಡೆಯಬೇಕು ಯೋಚಿಸುತ್ತೇನೆ:ಸಿಎಂ

ಬೆಳಗಾವಿ: ‘ಕರ್ನಾಟಕ ಗಡಿ ಭಾಗದ 865 ಹಳ್ಳಿಗಳಿಗೂ ಅನ್ವಯ ಆಗುವಂತೆ ಮಹಾರಾಷ್ಟ್ರ ಸರ್ಕಾರ ಆರೋಗ್ಯ ವಿಮೆ ನೀಡಿದ್ದರೆ, ಅದನ್ನು ಪರಿಶೀಲಿಸಿ ಹೇಗೆ ತಡೆಯಬೇಕು ಯೋಚಿಸುತ್ತೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.   ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಮಹಾರಾಷ್ಟ್ರ ಸರ್ಕಾರ ಆರೋಗ್ಯ ವಿಮೆ ನೀಡಿದ್ದಕ್ಕೆ ನಾನೇಕೆ ರಾಜೀನಾಮೆ ಕೊಡಬೇಕು. ನಾಡು, ನುಡಿ, ಗಡಿ ಜನರ ರಕ್ಷಣೆ ವಿಚಾರದಲ್ಲಿ ನಾನು ಡಿ.ಕೆ.ಶಿವಕುಮಾರ ಅವರಿಂದ ಪಾಠ ಕಲಿಯಬೇಕಾಗಿಲ್ಲ’ ಎಂದರು. ‘ನಾವು ಕೂಡ …

Read More »

ಕೆಕೆ ಕೊಪ್ಪ ಕ್ರಾಸ್ ಬಳಿ ಅಪರಿಚಿತ ವಾಹನವೊಂದು ಬೈಕ್ ಸವಾರನನ್ನು ಬಲಿತೆಗೆದುಕೊಂಡಿದೆ.

ಬೆಳಗಾವಿ: ಇಲ್ಲಿನ ಕೆಕೆ ಕೊಪ್ಪ ಕ್ರಾಸ್ ಬಳಿ ಅಪರಿಚಿತ ವಾಹನವೊಂದು ಬೈಕ್ ಸವಾರನನ್ನು ಬಲಿತೆಗೆದುಕೊಂಡಿದೆ. ಸುಳೇಬಾವಿ ಗ್ರಾಮದ ರಾಮು ನಾರಾಯಣ ಬಂಗೋಡಿ (54) ಮೃತಪಟ್ಟವರು. ಅವರು ವಡಗಾವಿ ದೇವಾಂಗನಗರ ನಿವಾಸಿ, ಗೋಪಾಲ ಬಸಪ್ಪ ತಾಳೂಕರ (58) ಅವರೊಂದಿಗೆ ಬುಧವಾರ ಮಧ್ಯಾಹ್ನ ಹಿರೇಬಾಗೇವಾಡಿಯಿಂದ ಬೈಕ್ ನಲ್ಲಿ ಬರುತ್ತಿದ್ದಾಗ ಹಿಂಬದಿಯಿಂದ ಅಪರಿಚಿತ ವಾಹನ ಗುದ್ದಿದೆ. ಗೋಪಾಲ ತಾಳೂಕರ ಅವರಿಗೆ ಗಾಯಗಳಾಗಿದ್ದು ತಲೆ ಹಾಗೂ ಮುಖಕ್ಕೆ ತೀವ್ರ ಏಟು ತಗುಲಿದ ರಾಮು ಬಂಗೋಡಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. …

Read More »

ಮುಖ್ಯಮಂತ್ರಿ ಭೇಟಿಗಾಗಿ ಒಂದು ಗಂಟೆ ಕಾದು ವಾಪಸ್‌ ಆದ ಶಾಸಕಿ ಕುಸುಮಾವತಿ ಶಿವಳ್ಳಿ

ಹುಬ್ಬಳ್ಳಿ: ಕುಂದಗೋಳ ಶಾಸಕಿ ಕುಸುಮಾವತಿ ಶಿವಳ್ಳಿ ಅವರು ಮುಖ್ಯಮಂತ್ರಿಗಳ ಭೇಟಿಗಾಗಿ ಸುಮಾರು ಒಂದು ಗಂಟೆ ಕಾದರೂ ಭೇಟಿಯಾಗದ ಹಿನ್ನೆಲೆಯಲ್ಲಿ ವಾಪಸ್ಸು ತೆರಳಿದ ಘಟನೆ ನಡೆಯಿತು. ಇಲ್ಲಿನ ಆದರ್ಶ ನಗರದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ಶಾಸಕಿ ಕುಸುಮಾವತಿ ತೆರಳಿದ್ದರು. ಸುಮಾರು ಒಂದು ಗಂಟೆ ಕಾಲ ಕಾದರು ಕುಳಿತರು. ಆದರೆ ಬೆಳಗಾವಿಗೆ ತೆರಳುವ ಭರದಲ್ಲಿ ಭೇಟಿಯಾಗದೆ ಸಿಎಂ ಬೊಮ್ಮಾಯಿ ಹೊರಟು ಹೋದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕಿ ಕುಸುಮಾವತಿ ಶಿವಳ್ಳಿ, ಕ್ಷೇತ್ರದ …

Read More »

ಕಣ್ಣೀರು ಹಾಕಿ ಮಾತನಾಡಿದ C.M.ಬೊಮ್ಮಾಯಿ!

ಹುಬ್ಬಳ್ಳಿ: ತಮ್ಮ ಹಳೆ ಸ್ನೇಹಿತರು ಸಂಬಂಧಿಕರನ್ನು ನೋಡಿ ಭಾವುಕಾರದ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಹುಟ್ಟೂರಿನಲ್ಲಿ ಕಣ್ಣೀರು ಹಾಕಿದರು. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನಲ್ಲಿರುವ ತಮ್ಮ ತಂದೆ ತಾಯಿ ಜನಿಸಿದ ಬಾಳಿ ಬದುಕಿದ ಕಮಡೊಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದು ಆ ಸಂದರ್ಭ ತಮ್ಮ ಬಾಲ್ಯದ ನೆನಪು ಮೆಲುಕು ಹಾಕಿ ಕಣ್ಣೀರಿಟ್ಟರು. ಇದೇ ಸಂದರ್ಭ ಅವರು ಸಿಎಂ ಹುದ್ದೆಗೆ ಏರಲು ಸ್ನೇಹಿತರ ಸಹಾಯವನ್ನು ಸಿಎಂ ಬೊಮ್ಮಾಯಿ ನೆನೆದರು. ಇದೇ ಸಂದರ್ಭ ಮುಖ್ಯಮಂತ್ರಿ ಬೊಮ್ಮಾಯಿ …

Read More »

ಕಾಡುಕೋಣ ಬೇಟೆಯಾಡಿ ಮಾಂಸ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆ ತಂಡ ಬಂಧಿಸಿದೆ.

ಖಾನಾಪುರ: ತಾಲೂಕಿನ ನಂದಗಡದಲ್ಲಿ ಕಾಡುಕೋಣ ಬೇಟೆಯಾಡಿ ಮಾಂಸ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆ ತಂಡ ಬಂಧಿಸಿದೆ. ಡೆವಿಡ್ ಫಿಗೇರ್ ಮತ್ತು ಹಸನ್ ಬೇಪಾರಿ ಬಂಧಿತರು. ಇವರಿಂದ 11 ಕೆಜಿ ಕಾಡುಕೋಣದ ಮಾಂಸ, ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ, ೆರಡು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.     ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.     ಬೆಳಗಾವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ ಅವರ …

Read More »

ಬೆಳಗಾವಿ ನಗರದ ಕ್ಲಬ್ ರೋಡ್ ನಲ್ಲಿರುವ ಸಿಪಿಇಡಿ ಗ್ರೌಂಡ್‌ನಲ್ಲಿ17ರಂದು ಅಪ್ಪು ಜನ್ಮದಿನೋತ್ಸವ

ಬೆಳಗಾವಿ: ಡಾ. ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಮಾರ್ಚ್ 17ರಂದು  ‘ಅಪ್ಪು ಜನ್ಮದಿನೋತ್ಸವ’  ಕಾರ್ಯಕ್ರಮ ಆಯೋಜಿಸಲಾಗಿದೆ. ನಗರದ ಕ್ಲಬ್ ರೋಡ್ ನಲ್ಲಿರುವ ಸಿಪಿಇಡಿ ಗ್ರೌಂಡ್‌ನಲ್ಲಿ ಅದ್ಧೂರಿ ಸಮಾರಂಭವನ್ನು ಅಪ್ಪು ಅಭಿಮಾನಿ ಬಳಗ ಅಯೋಜಿಸಿದೆ. ಅಂದು ಸಂಜೆ 4.30ರಿಂದ ಕಾರ್ಯಕ್ರಮಗಳು ಆರಂಭವಾಗಲಿದ್ದು, ಈ ಶುಭ ಸಂದರ್ಭದಲ್ಲಿ ಮಮತ ಕ್ರಿಯೇಷನ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಪರ್ಯಾಯ ಕನ್ನಡ ಚಲನಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗುವುದು ಎಂದು ಅಪ್ಪು ಜನ್ಮದಿನೋತ್ಸವ ದ ಸಂಘಟಕ …

Read More »

ಮಾ.20ರಂದುಬೆಳಗಾವಿಗೆ ಆಗಮಿಸಲಿದ್ದಾರೆ ರಾಹುಲ್ ಗಾಂಧಿ

ಬೆಳಗಾವಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾ.20ರಂದು ಬೆಳಗಾವಿಗೆ ಆಗಮಿಸಲಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಆಗಮಿಸುತ್ತಿದ್ದಾರೆ. ರಾಹುಲ್ ಗಾಂಧಿ ಭೇಟಿ ಹಿನ್ನೆಲೆಯಲ್ಲಿ, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ದಿನಾಂಕ 16-03-2023 ರಂದು ಬೆಳಿಗ್ಗೆ 10 ಗಂಟೆಗೆ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಬೆಳಗಾವಿ ವಿಭಾಗದ ಕಾಂಗ್ರೆಸ್ ಮುಖಂಡರುಗಳ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಈ ಸಭೆಯನ್ನು ಕರೆದಿದ್ದಾರೆ. ಈ ಸಭೆಯಲ್ಲಿ ಚಿಕ್ಕೋಡಿ, ಬೆಳಗಾವಿ …

Read More »

ಚುನಾವಣಾ ಆಯೋಗದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ಬೆಳಗಾವಿ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ರಚಿಸಲಾಗಿರುವ ತಂಡಗಳು ಕಾರ್ಯೋನ್ಮುಖರಾಗಿ ಚುರುಕಿನಿಂದ ಕೆಲಸ ಮಾಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು. ಮುಂಬರುವ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ (ಮಾ.13) ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗಡಿಭಾಗದ ಚೆಕ್ ಪೋಸ್ಟ್ ಗಳಲ್ಲಿ ಈಗಾಗಲೇ ನಿಯೋಜಿಸಲಾಗಿರುವ ತಂಡಗಳು ಪ್ರತಿಯೊಂದು ವಾಹನಗಳ ಮೇಲೆ ನಿಗಾ ವಹಿಸಬೇಕು. ಪ್ರತಿಯೊಂದು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ …

Read More »

ಮಾ.16ರಂದು ಶಿವಚರಿತ್ರ’ ಉದ್ಘಾಟನಾ ಸಮಾರಂಭ

ಬೆಳಗಾವಿ: ಇಲ್ಲಿನ ಶಹಾಪುರದ ಛತ್ರಪತಿ ಶಿವಾಜಿ ಉದ್ಯಾನವನ ಬಳಿ ಮಾ.16ರಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರ ಕನಸಿನ ಕೂಸಾದ ‘ಶಿವಚರಿತ್ರ’ ಉದ್ಘಾಟನಾ ಸಮಾರಂಭ ನಡೆಯಲಿದೆ. ಸಂಜೆ 5.30ಕ್ಕೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಉದ್ಘಾಟಿಸಲಿದ್ದಾರೆ. ಇನ್ನೂ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.

Read More »