ಬೆಳಗಾವಿ -: ಕೊರೋನ ಇಡೀ ದೇಶವನ್ನೇ ತಲ್ಲಣಗೊಳಿಸಿದ್ದು, ಜನರನ್ನು ರಕ್ಷಿಸಲು ಸರಕಾರಕ್ಕೆ ಎಲ್ಲರ ಸಹಾಯ ಸಹಕಾರ ಅವಶ್ಯವಿದೆ. ಈ ನಿಟ್ಟಿನಲ್ಲಿ ಬೆಳಗಾವಿ ಡಿಸಿಸಿ ಬ್ಯಾಂಕಿನಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ 1 ಕೋಟಿ ರೂ. ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಡಿಸಿಸಿ ಬ್ಯಾಂಕಿನ ಅಧ್ಯಕ್ಷ, ಮಾಜಿ ಸಂಸದ ರಮೇಶ ಕತ್ತಿ ತಿಳಿಸಿದ್ದಾರೆ. ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ದೇಶದಿಂದ ಕೊರೋನ ರೋಗ ಹೊಡೆದೋಡಿಸಲು ಸರಕಾರಗಳಿಗೆ ನೆರವು …
Read More »ಬೆಳಗಾವಿ ಕರೊನಾ ಸೈನಿಕರಿಗೆ ಮಾಸ್ಕ್, ಟಿಷರ್ಟ್, ಸ್ಯಾನಿಟೈಸರ್ ವಿತರಣೆ
ಬೆಳಗಾವಿ ಕರೊನಾ ಸೈನಿಕರಿಗೆ ಮಾಸ್ಕ್, ಟಿಷರ್ಟ್, ಸ್ಯಾನಿಟೈಸರ್ ವಿತರಣೆ ಆಹಾರ, ಔಷಧಿ ವಿತರಣೆ ಮತ್ತು ತುರ್ತು ಸೇವೆಗೆ ಸಜ್ಜಾಗಲು ಕರೆ ಬೆಳಗಾವಿ, ಎಪ್ರಿಲ್ 16(ಕರ್ನಾಟಕ ವಾರ್ತೆ) ಕೋವಿಡ್-೧೯ ಕುರಿತು ಜನಜಾಗೃತಿ ಮೂಡಿಸುವುದರ ಜತೆಗೆ ತುರ್ತು ಸಂದರ್ಭದಲ್ಲಿ ಅಗತ್ಯ ನೆರವು ನೀಡಲು ಸಜ್ಜಾಗಿರುವ “ಕರೊನಾ ಸೈನಿಕರಿಗೆ” (ಸ್ವಯಂಸೇವಕರು) ಗುರುವಾರ ನಗರದ ವಾರ್ತಾಭವನದಲ್ಲಿ ಟಿ-ಶರ್ಟ್, ಸ್ಯಾನಿಟೈಸರ್ ಹಾಗೂ ಮಾಸ್ಕ್ ಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ …
Read More »ಸರ್ಕಿಟ್ ಹೌಸ್ ನಲ್ಲಿ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಮುಂಜಾಗ್ರತೆಯ ಕ್ರಮಗಳನ್ನು ಕೈಗೊಂಡು ಸಭೆ
ಇಂದು ಬೆಳಗಾವಿಯ ಸರ್ಕಿಟ್ ಹೌಸ್ ನಲ್ಲಿ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಮುಂಜಾಗ್ರತೆಯ ಕ್ರಮಗಳನ್ನು ಕೈಗೊಂಡು, ಸಾಮಾಜಿಕ ಅಂತರ ಕಾಯ್ದುಕೊಂಡು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಜಿಲ್ಲೆಯಲ್ಲಿ ಕೊರೋನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಕೈಗೊಳ್ಳಲಾಗುತ್ತಿರುವ ಕ್ರಮಗಳ ಕುರಿತು ಚರ್ಚಿಸಿ, ಸಭೆ ಉದ್ದೇಶಿಸಿ ಮಾತನಾಡಲಾಯಿತು. ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಅಭಯ ಪಾಟೀಲ, ಶ್ರೀ ಅನಿಲ ಬೆನಕೆ, ಜಿಲ್ಲಾಧಿಕಾರಿಗಳಾದ ಶ್ರೀ ಡಾ. ಎಸ್.ಬಿ. ಬೊಮ್ಮನಹಳ್ಳಿ, ಪೊಲೀಸ ಆಯುಕ್ತರಾದ ಶ್ರೀ ಲೋಕೇಶ ಕುಮಾರ್, …
Read More »Big breaking”ಬೆಳಗಾವಿಯಲ್ಲಿ ನಾಳೆಯಿಂದ ಕರೋನಾ ವೈರಸ್ ತಪಾಸಣಾ ಪ್ರಯೋಗಾಲಯ ಪ್ರಾರಂಭ
“ಬೆಳಗಾವಿಯಲ್ಲಿ ನಾಳೆಯಿಂದ ಕರೋನಾ ವೈರಸ್ ತಪಾಸಣಾ ಪ್ರಯೋಗಾಲಯ ಪ್ರಾರಂಭ” ಮಹಾಮಾರಿ ಕೊರೋನಾ ವೈರಸ್ ಪರೀಕ್ಷೆ ಬೆಳಗಾವಿಯ ಪಾರಂಪರಿಕ ಚಿಕಿತ್ಸಾ ವಿದ್ಯಾಲಯದಲ್ಲಿ ನಾಳೆಯಿಂದ ನಡೆಯಲಿದ್ದು, 3- 4 ದಿನಗಳ ಕಾಲ ವರದಿಗಾಗಿ ಕಾಯುವ ಸಂದಿಗ್ಧತೆ ತಪ್ಪಲಿದೆ. ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಕೊರೋನಾ ಪರೀಕ್ಷೆಗೆ ಅನುಮತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಈವರೆಗೆ ಬೆಂಗಳೂರು ಮತ್ತು ಶಿವಮೊಗ್ಗಕ್ಕೆ ರಕ್ತ, ಗಂಟಲು ದ್ರವವನ್ನು ಕಳಿಸಿ ಪರೀಕ್ಷೆ ವರದಿ ಪಡೆಯಲಾಗುತ್ತಿತ್ತು, ಜಿಲ್ಲಾಧಿಕಾರಿಗಳು ಹಾಗೂ …
Read More »ಸರ್ಕಾರದ ಮಾರ್ಗಸೂಚಿ ಪ್ರಕಾರವೇ ಹೋಟೆಲ್ ಸೇರಿದಂತೆ ವಿವಿಧ ಕಡೆಗಳಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ: ಬೊಮ್ಮನಹಳ್ಳಿ
ಬೆಳಗಾವಿ : ಸರ್ಕಾರದ ಮಾರ್ಗಸೂಚಿ ಪ್ರಕಾರವೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಸೇರಿದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಹೋಟೆಲ್ ಸೇರಿದಂತೆ ವಿವಿಧ ಕಡೆಗಳಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಸ್ಪಷ್ಟಪಡಿಸಿದ್ದಾರೆ. ಕ್ವಾರಂಟೈನ್ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿರುವುದು ಸತ್ಯಕ್ಕೆ ದೂರವಾಗಿರುತ್ತದೆ. ಎಲ್ಲ ಕ್ವಾರಂಟೈನ್ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ವೈಯಕ್ತಿಕ ಸ್ವಚ್ಛತೆ ಸೇರಿದಂತೆ ಎಲ್ಲ ಬಗೆಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ. ಕ್ವಾರಂಟೈನ್ …
Read More »ರೈತರು ಬೆಳೆದ ತರಕಾರಿಗಳನ್ನು,ಸರ್ಕಾರವೆ ನೇರವಾಗಿ ತೆಗೆದುಕೊಂಡು ಜನರಿಗೆ ವಿತರಿಸುವ ಕಾರ್ಯಕ್ಕಾಗಿ ಚಿಂತನೆ ಮಾಡಬೇಕು
ಗೋಕಾಕ: ರೈತರು ಬೆಳೆದ ತರಕಾರಿಗಳನ್ನು ಮತ್ತು ಬೆಳೆಗಳನ್ನು ಸರ್ಕಾರವೆ ನೇರವಾಗಿ ತೆಗೆದುಕೊಂಡು ಜನರಿಗೆ ವಿತರಿಸುವ ಕಾರ್ಯಕ್ಕಾಗಿ ಚಿಂತನೆ ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸಲಹೆ ನೀಡಿದರು. ಇಂದು ನಗರದಲ್ಲಿ ಮಾತನಾಡಿ ರೈತರು ಬೆಳೆದ ತರಕಾರಿಗಳು ನಾಶವಾಗುತ್ತಿವೆ. ಇದನ್ನು ಕಡಿಮೆ ದರದಲ್ಲಿ ನೀಡಲು ರೈತರು ಮುಂದಾಗಿದ್ದಾರೆ. ಇದರಿಂದ ಜನಸಾಮಾನ್ಯರಿಗೂ ಮತ್ತು ರೈತರಿಗೂ ಸ್ವಲ್ಪ ಮಟ್ಟಿಗೆ ಅನುಕೂಲ ಆಗುತ್ತದೆ ಎಂದರು. ಕೊರೋನಾ ಸಂಕಷ್ಟದಲ್ಲಿ ಎಲ್ಲ ವರ್ಗದವರಿಗೂ ಅನಾನುಕೂಲವಾಗಿದೆ. ಹೀಗಾಗಿ ರೈತರು …
Read More »ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿರುವುದು ಸತ್ಯಕ್ಕೆ ದೂರವಾಗಿರುತ್ತದೆ:ಡಾ.ಎಸ್.ಬಿ.ಬೊಮ್ಮನಹಳ್ಳಿ
ಬೆಳಗಾವಿ, : ಸರ್ಕಾರದ ಮಾರ್ಗಸೂಚಿ ಪ್ರಕಾರವೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಸೇರಿದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಹೋಟೆಲ್ ಸೇರಿದಂತೆ ವಿವಿಧ ಕಡೆಗಳಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಸ್ಪಷ್ಟಪಡಿಸಿದ್ದಾರೆ. ಕ್ವಾರಂಟೈನ್ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿರುವುದು ಸತ್ಯಕ್ಕೆ ದೂರವಾಗಿರುತ್ತದೆ. ಎಲ್ಲ ಕ್ವಾರಂಟೈನ್ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ವೈಯಕ್ತಿಕ ಸ್ವಚ್ಛತೆ ಸೇರಿದಂತೆ ಎಲ್ಲ ಬಗೆಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ. ಕ್ವಾರಂಟೈನ್ …
Read More »ಬೆಳಗಾವಿಯಲ್ಲಿ 5 ಹೊಸ ಕೊರೊನ ಸೋಂಕಿತರ ಪ್ರಕರಣ,ಒಟ್ಟೂ 41 ಜನರಿಗೆ ಸೋಂಕು
ಬೆಳಗಾವಿ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡಿದ್ದು, ರಾಜ್ಯದಲ್ಲಿ ಇಂದು ಹೊಸದಾಗಿ ಮತ್ತೆ 44 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 359ಕ್ಕೆ ಏರಿಕೆಯಾಗಿದೆ. ಬೆಳಗಾವಿಯಲ್ಲಿ 5 ಹೊಸ ಕೊರೊನ ಸೋಂಕಿತರ ಪ್ರಕರಣ ಕಂಡುಬಂದಿದ್ದು, ಇವರಲ್ಲಿ ಮೂವರನ್ನು ಐಸಿಯುನಲ್ಲಿ ಇರಿಸಲಾಗಿದೆ. ಇದರಿಂದಾಗಿ ಬೆಳಗಾವಿಯಲ್ಲಿ ಒಟ್ಟೂ 41 ಜನರಿಗೆ ಸೋಂಕು ತಗುಲಿದಂತಾಗಿದೆ. ಬೆಂಗಳೂರಿನಲ್ಲಿ 1 ಹೊಸ ಪ್ರಕರಣ ಪತ್ತೆಯಾಗಿದೆ., ಬೆಳಿಗ್ಗೆಯಷ್ಟೇ ರಾಜ್ಯದಲ್ಲಿ 38 ಪ್ರಕರಣ …
Read More »ಚಿಕ್ಕೋಡಿ -ಸದಲಗಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ವಿವಿಧ ಗ್ರಾಮಗಳಲ್ಲಿ ಮಾಜಿ ಸಚಿವ, ಮಾಜಿ ಸಂಸದ ಪ್ರಕಾಶ ಹುಕ್ಕೇರಿ, ಪರಿಶೀಲನೆ
ಚಿಕ್ಕೋಡಿ – ಚಿಕ್ಕೋಡಿ -ಸದಲಗಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ವಿವಿಧ ಗ್ರಾಮಗಳಲ್ಲಿ ಮಾಜಿ ಸಚಿವ, ಮಾಜಿ ಸಂಸದ ಪ್ರಕಾಶ ಹುಕ್ಕೇರಿ, ಲಾಕ್ ಡೌನ್ ನಿರ್ವಹಣೆ ಹಾಗೂ ಕೋವಿಡ್ 19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು. ಚಿಕ್ಕಲವಾಳ, ರಾಮಪುರ, ಪಾಂಗೇರಿ ಮೊದಲಾದ ಗ್ರಾಮಗಳಿಗೆ ತೆರಳಿದ ಪ್ರಕಾಶ ಹುಕ್ಕೇರಿ ಅಲ್ಲಿನ ಪರಿಸ್ಥಿತಿಯ ಅವಲೋಕನ ನಡೆಸಿದರು. ಈ ವೇಳೆ ಗ್ರಾಮಸ್ಥರ ಸಭೆ ನಡೆಸಿದ ಅವರು, ಮಹಾಮಾರಿ ಕೊರೋನಾ …
Read More »ಬೆಳಗಾವಿ-ಅನಗತ್ಯ ವಾಗಿ ಸುತ್ತಾಡುವವರಿಗೆ ಖಾಕಿ ಖದರ್ ಗೊತ್ತಾಗಲಿದೆ………
ವ್ಯಾಪಕವಾಗಿ ಹರಡುತ್ತಿರುವ ವೈರಸ್…ಬೆಳಗಾವಿ ಪೋಲೀಸ್ ಫುಲ್ ಸೀರಿಯಸ್…..!!!! ನಾಳೆಯಿಂದ ಅನಗತ್ಯವಾಗಿ ಸುತ್ತಾಡಿದ್ರೆ ಕೇಸ್ ಬಿಳೋದು ಗ್ಯಾರಂಟಿ… ಅನಗತ್ಯ ವಾಗಿ ಸುತ್ತಾಡುವವರಿಗೆ ಖಾಕಿ ಖದರ್ ಗೊತ್ತಾಗಲಿದೆ. ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು ಇದನ್ನು ಬೆಳಗಾವಿ ಪೋಲೀಸರು ಗಂಭೀರವಾಗಿ ಪರಿಗಣಿಸಿದ್ದು ನಾಳೆಯಿಂದ ಅತ್ಯಂತ ಕಟ್ಟು ನಿಟ್ಟಿನ ಲಾಕ್ ಡೌನ್ ಅನುಷ್ಠಾನ ಗೊಳಿಸಲು ನಿರ್ಧರಿಸಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸೊಂಕಿತರ ಸಂಖ್ಯೆ 36 ಕ್ಕೆ ಏರಿಕೆ ಆಗುತ್ತಿದ್ದಂತೆಯೇ ತುರ್ತು ಸಭೆ …
Read More »