Breaking News

ಬೆಳಗಾವಿ

ಧುಳಗೌಡ ಪಾಟೀಲ ಅವರು ವ್ಯಯಕ್ತಿಕವಾಗಿ 50 ಸಾವಿರ ಮಹಾವೀರ ಮೊಹಿತೆ ಅವರು 25 ಸಾವಿರ ರೂ. ಕೆಪಿಸಿಸಿ ಕೊರೋನಾ ಪರಿಹಾರ ನಿಧಿಗೆ ನೀಡಿದರು.

ಗೋಕಾಕ: ಕೆಪಿಸಿಸಿ ಕೊರೋನಾ ಪರಿಹಾರ ನಿಧಿಗೆ ಇಂದು 75 ಸಾವಿರ ರೂ. ಚೆಕ್ ಗಳನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸ್ವೀಕರಿಸಿದರು. ಧುಳಗೌಡ ಪಾಟೀಲ ಅವರು ವ್ಯಯಕ್ತಿಕವಾಗಿ 50 ಮತ್ತು ರಾಯಬಾಗ ತಾಲೂಕಿನ‌ ಕಾಂಗ್ರೆಸ್ ಮುಖಂಡರಾದ ಮಹಾವೀರ ಮೊಹಿತೆ ಅವರು 25 ಸಾವಿರ ರೂ. ಕೆಪಿಸಿಸಿ ಕೊರೋನಾ ಪರಿಹಾರ ನಿಧಿಗೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ವೀರಕುಮಾರ ಪಾಟೀಲ, ಲಕ್ಷ್ಮಣರಾವ ಚಿಂಗಳೆ ಸೇರಿ ಇತರರು ಇದ್ದರು.

Read More »

ಬೆಳಗಾವಿಯಲ್ಲಿ ಮತ್ತೆ 2 ಪಾಸಿಟಿವ್ ಕೇಸ್ ಪತ್ತೆ ಆಗಿವೆ. ಸೊಂಕಿತರ ಸಂಖ್ಯೆ 45ಕ್ಕೇರಿದೆ

ಬೆಳಗಾವಿ- ಬೆಳಗಾವಿ ಪಾಲಿಗೆ ಇಂದು ಕ್ರವಾರ ಮಧ್ಯಾಹ್ನ ಬಿಡುಗಡೆಯಾದ ಹೆಲ್ತ ಬುಲಿಟೀನ್ ನಲ್ಲಿ ಜಿಲ್ಲೆಯ ರಾಯಬಾಗ ಕುಡಚಿಯ ಎರಡು ಪಾಸಟೀವ್ ಕೇಸ್ ಪತ್ತೆಯಾಗಿವೆ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 45ಕ್ಕೇರಿದೆ. ಮಹಾಮಾರಿ ಕೊರೋನಾ ದಿನದಿಂದ ದುನಕ್ಕೆ ಬೆಳಗಾವಿ ಜಿಲ್ಲೆಯಿಂದ ದೂರ..ದೂರವಾಗುತ್ತಿದೆ ಕಳೆದ ಒಂದು ವಾರದಿಂದ ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ವೈರಸ್ ಮೈನಸ್ ಆಗುತ್ತಲೇ ಇದೆ.ಆದ್ರೆ ಇಂದು ಮತ್ತೆ ಇಬ್ಬರ ರಿಪೋರ್ಟ್ ಪಾಸಿಟೀವ್ ಬಂದಿದ್ದು ಜಿಲ್ಲೆಗೆ ಆಘಾತ ತಂದಿದೆ. ಇಂದು ಬಿಡುಗಡೆಯಾದ ಹೆಲ್ತ್ …

Read More »

ಬೆಳಗಾವಿ -ಇಬ್ಬರು ನಕಲಿ ಪತ್ರಕರ್ತರ ಬಂಧನ…..

ಧಾರವಾಡ ( ಕರ್ನಾಟಕ ವಾರ್ತೆ) ಏ.23: ಇಲ್ಲಿನ ಬೇಲೂರು ಕೈಗಾರಿಕಾಭಿವೃದ್ಧಿ ಪ್ರದೇಶದಲ್ಲಿರುವ ಬಿಎಂಎನ್ ಅಗ್ರೋ ಫುಡ್ಸ್ ಸಂಸ್ಥೆಗೆ ಭೇಟಿ ನೀಡಿ, ಪತ್ರಕರ್ತರು ಎಂದು ಹೇಳಿ ಕೊಂಡು ಬೆದರಿಕೆ ಒಡ್ಡಿ, 25 ಸಾವಿರ ರೂ.ಹಣದ ಬೇಡಿಕೆ ಇಟ್ಟಿದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಜೆಕೆ 24×7 ನ್ಯೂಸ್ ಚಾನೆಲ್ ವರದಿಗಾರ ಎಂದು ಹೇಳಿಕೊಂಡ ಅನ್ವರ್ ಕೆ.ಜಮಾದಾರ ಹಾಗೂ ಜೆಎಂ ಆರ್ ಚಾನೆಲ್ ವರದಿಗಾರ ಎಂದು ಹೇಳಿಕೊಂಡ ನಿಝಾಮ್ ಅಬ್ದುಲ್ …

Read More »

ಬೆಳಗಾವಿಯ ಹಿರಿಯ ಕನ್ನಡ ಹೋರಾಟಗಾರಶ್ಯಾಮಸುಂದರ ಢವಳಿ ಅವರು ಇಂದು  ಮಧ್ಯಾನ್ಹ ನಿಧನ 

ಬೆಳಗಾವಿ – ಬೆಳಗಾವಿಯ ಹಿರಿಯ ಕನ್ನಡ ಹೋರಾಟಗಾರ,ಬೆಳಗಾವಿ ಜಿಲ್ಲಾ ಔದ್ಯೋಗಿಕ ಸಹಕಾರ ಬ್ಯಾಂಕಿನ ಮಾಜಿ ನಿರ್ದೇಶಕ ಶ್ಯಾಮಸುಂದರ ಢವಳಿ ಅವರು ಇಂದು  ಮಧ್ಯಾನ್ಹ ನಿಧನ ಹೊಂದಿದರು. ಅವರಿಗೆ 51 ವರ್ಷ ವಯಸ್ಸಾಗಿತ್ತು. ಪತ್ನಿಮತ್ತು ಇಬ್ಬರು ಪುತ್ರರನ್ನು ಬಿಟ್ಟು ಅಗಲಿದ್ದಾರೆ.  ಇಂದು ಸಂಜೆ ಖಾಸಬಾಗ ರುದ್ರಭೂಮಿಯಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ವಡಗಾವಿ, ಖಾಸಬಾಗದ ಅನೇಕ ಗಣ್ಯರು ಪಾಲ್ಗೊಂಡಿದ್ದರು.        1982 ರ ಗೋಕಾಕ ಚಳವಳಿಯಿಂದ ಇತ್ತೀಚಿನವರೆಗಿನ ಎಲ್ಲ ಕನ್ನಡ ಪರ ಹೋರಾಟಗಳಲ್ಲಿ ಪಾಲ್ಗೊಂಡಿದ್ದ ಅವರು ಬೆಳಗಾವಿ …

Read More »

ರಾಜ್ಯ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್, ಗುರುವಾರ ಮಾತ್ರ ಬೆಳಗಾವಿ ಜಿಲ್ಲೆಯಲ್ಲಿಒಂದು ಸೋಂಕಿತರಿರುವುದು ಧೃಡಪಟ್ಟಿಲ್ಲ

ಬೆಳಗಾವಿ: ರಾಜ್ಯ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ನ ಮಾಹಿತಿ ಪ್ರಕಾರ ಇಂದು ಒಂದೇ ದಿನಕ್ಕೆ 18 ಕೊರೊನಾ ಸೋಂಕು ತಗುಲಿದವರು ಪತ್ತೆಯಾಗಿದ್ದಾರೆ. ಆದ್ರೆ ಬೆಳಗಾವಿ ಜಿಲ್ಲೆಯಲ್ಲಿ ಗುರುವಾರ ಮಾತ್ರ ಒಂದು ಸೋಂಕಿತರಿರುವುದು ಧೃಡಪಟ್ಟಿಲ್ಲ. ಇದರಿಂದ ಜಿಲ್ಲೆಯ ಜನರು ನಿಟ್ಟಿಸಿರು ಬಿಡುವಂತಾಗಿದೆ. ಹೆಚ್ಚು ಸೋಂಕಿತರು ಪತ್ತೆಯಾದ ಪಟ್ಟಿಯಲ್ಲಿ ಬೆಳಗಾವಿ ಮೂರನೇ ಸ್ಥಾನದಲ್ಲಿದ್ದು, ಜಿಲ್ಲೆಯಲ್ಲಿ ಒಟ್ಟು 43 ಪ್ರಕರಣಗಳು ಪತ್ತೆಯಾಗಿದೆ. ಸೋಂಕಿತರಲ್ಲಿ ಮೂವರು ಡಿಶ್ಚಾರ್ಜ್ ಆಗಿದ್ದಾರೆ. ಒಬ್ಬರ ಮೃತ ಪಟ್ಟಿದ್ದಾರೆ. ಉಳಿದ …

Read More »

ವಿದ್ಯಾರ್ಥಿ ಬಂಧುತ್ವ ವೇದಿಕೆ ಕರ್ನಾಟಕ ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಆಹ್ವಾನಿಸಿದೆ.

ಬೆಳಗಾವಿ: ಬಸವ ಜಯಂತಿಯ ನಿಮಿತ್ತ ಮಾನವ ಬಂಧುತ್ವ ವೇದಿಕೆ ಅಂಗ ಸಂಸ್ಥೆಯಾದ ವಿದ್ಯಾರ್ಥಿ ಬಂಧುತ್ವ ವೇದಿಕೆ ಕರ್ನಾಟಕ ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಆಹ್ವಾನಿಸಿದೆ. “ಬಸವ ತತ್ವಗಳಿಂದ ಅಖಂಡ ಕರ್ನಾಟಕದ ಕಲ್ಯಾಣ ಸಾಧ್ಯ” ಎಂಬ ವಿಷಯದ ಕುರಿತು 8 ನಿಮಿಷಗಳ ವಿಡಿಯೋ ಗಳನ್ನು ಆಹ್ವಾನಿಸಲಾಗಿದೆ. ಅತ್ಯುತ್ತಮ ವಿಷಯ ಮಂಡನೆ ಒಳಗೊಂಡ ವಿಡಿಯೋ ಗಳನ್ನೂ ಆಯ್ಕೆ ಮಾಡಿ ಪ್ರಥಮ, ದ್ವೀತಿಯ, ತೃತೀಯ ಮತ್ತು ಸಮಾಧಾನಕರ ಶ್ರೇಣಿಯ 5 ಬಹುಮಾನ ಗಳನ್ನು …

Read More »

ಲಾಕ್ ಡೌನ್: ವಲಸೆ ಕಾರ್ಮಿಕರನ್ನು ಖುದ್ದಾಗಿ ಭೇಟಿ ಮಾಡಿ ಅಹವಾಲು ಆಲಿಸಿದ ರೈಲ್ವೆ ಸಚಿವ ಸುರೇಶ್ ಅಂಗಡಿ

ಲಾಕ್ ಡೌನ್: ವಲಸೆ ಕಾರ್ಮಿಕರನ್ನು ಖುದ್ದಾಗಿ ಭೇಟಿ ಮಾಡಿ ಅಹವಾಲು ಆಲಿಸಿದ ರೈಲ್ವೆ ಸಚಿವ ಸುರೇಶ್ ಅಂಗಡಿ ಬೆಳಗಾವಿ, ಏ.೨೩(ಕರ್ನಾಟಕ ವಾರ್ತೆ): ಲಾಕ್ ಡೌನ್ ಹಿನ್ನೆಲೆಯಲ್ಲಿ ನಗರದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಸತಿನಿಲಯದಲ್ಲಿ ಆಶ್ರಯ ಪಡೆದಿರುವ ರಾಜಸ್ತಾನ ಮತ್ತಿತರ ರಾಜ್ಯಗಳ ವಲಸೆ ಕಾರ್ಮಿಕರನ್ನು ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಅವರು ಭೇಟಿ ಮಾಡಿದರು. ವಿವಿಧ ರಾಜ್ಯಗಳ ವಲಸೆ ಕಾರ್ಮಿಕರನ್ನು ಇರಿಸಲಾಗಿರುವ ಆಶ್ರಯ ಕೇಂದ್ರಕ್ಕೆ ಗುರುವಾರ …

Read More »

ಮನೆ ಮನೆಗೆ ತೆರಳಿ ಆರೋಗ್ಯ ಮಾಡುವ ಆಶಾ ಕಾರ್ಯಕರ್ತರಿಗೆ ಕೊರೋನಾ ಸೈನಿಕರ ಸಾಥ್

ಗೋಕಾಕ :ಮಹಾಮಾರಿ ಕೊರೋನಾ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ತಾಲೂಕಿನಾದ್ಯಂತ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಇವರ ಈ ಕಾರ್ಯಕ್ಕೆ ಗುರವಾರದಂದು ನಗರದ ಎಲ್ಲಾ ವಾರ್ಡ್ಗಳಲ್ಲಿಯೂ  ಸೈನಿಕರು ಸಾಥ್ ನೀಡಿದರು.

Read More »

ಸಂಬಂಧಗಳ ಕೊಂಡಿ ಕಳಚಿದ ಕೊರೋನಾ : ಮಗಳ ಆಗಮನಕ್ಕೆ ಕಾದು ಕುಳಿತ ಮಲ್ಲಪ್ಪ

ಗೋಕಾಕ :ಭಾರತೀಯರಲ್ಲಿ ಸಂಬಂಧಗಳ ಕೊಂಡಿ ಅತ್ಯಂತ ಬಲಿಷ್ಠವಾಗಿತ್ತು. ಆದರೆ ಕೊರೋನಾ ವೈರಸ್ ದೇಶದ ಜನಜೀವನದ ಪ್ರಮುಖವಾಗಿದ್ದ ಸಂಬಂಧವನ್ನೇ ಅಸ್ತವ್ಯಸ್ತಗೊಳಿಸಿದೆ. ಅಷ್ಟೇಅಲ್ಲ, ಸಂಬಂಧಗಳ ಬಣ್ಣವನ್ನೂ ಬಯಲು ಮಾಡಿದೆ. ಹೇಗೆ ಅಂತ ನೀವು ಪ್ರಶ್ನಿಸುವಿರಾ ಹಾಗಾದರೆ ಇಲ್ಲಿನೋಡಿ ಎರಡು ಮಕ್ಕಳ ಇದ್ದರೂ ಓರ್ವನ ಬಾಳು ಹೇಗೆ ಬೀದಿಗೆ ಬಂದಿದೆ ಎಂದು ತಿಳಿಯಿರಿ. ಮಲ್ಲಪ್ಪ ಅಕ್ಕಿವಾಟ ಎಂಬವನು ಪಕ್ಕದ ರಾಯಬಾಗ ತಾಲೂಕಿನ ಬೂದಿಹಾಳ ಗ್ರಾಮದವನು. ಸದ್ಯ ಗೋಕಾಕದ ಬಸವೇಶ್ವರ ವೃತ್ತದಲ್ಲಿನ ಅಂಗಡಿಯೊಂದರ ಮುಂಭಾಗದಲ್ಲಿ ಒಲೆ …

Read More »

ಪಕ್ಷಿಗಳ ಆರ್ಥನಾದಕ್ಕೆ ಸ್ಪಂದಿಸಿ, ಅವುಗಳಿಗೆ ಆಹಾರ ಮತ್ತು ನೀರು ಪೂರೈಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ಸತೀಶ್ ಜಾರಕಿಹೊಳಿ ಅಭಿಮಾನಿಗಳುದ

ಗೋಕಾಕ: ತಾಲೂಕಿನ ಕೊಣ್ಣೂರ ಪಟ್ಟಣದಲ್ಲಿ ಶಾಸಕ ಸತೀಶ್ ಜಾರಕಿಹೊಳಿ ರವರ ಪ್ರೋತ್ಸಾಹದಿಂದ  ಪ್ರತಿವರ್ಷದಂತೆ ಈ ವರ್ಷವು ಕೂಡ ಕರ್ನಾಟಕ ವಿಶ್ವನಿರ್ಮಾಣ ಸೇನೆ ಪದಾಧಿಕಾರಿಗಳು ಪಕ್ಷಿಗಳ ಆರ್ಥನಾದಕ್ಕೆ ಸ್ಪಂದಿಸಿ, ಅವುಗಳಿಗೆ ಆಹಾರ ಮತ್ತು ನೀರು ಪೂರೈಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಪಕ್ಷಿ ಪ್ರೇಮಿಗಳ ಮೆಚ್ಚುಗೆ ಪಾತ್ರರಾಗಿದ್ದಾರೆ. ಮಾರಕ ಕೊರೊನಾ ಆರ್ಭಟಕ್ಕೆ ದೇಶದ ಜನರು ಕಂಗಾಲಾಗಿದ್ದಾರೆ. ಜತೆಗೆ ಲಾಕ್ ಡೌನ್ ದಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಕರ್ನಾಟಕ ವಿಶ್ವ ನಿರ್ಮಾಣ ಸೇನೆಯ ಪದಾಧಿಕಾರಿಗಳು ಸಹಾಯ ಹಸ್ತ …

Read More »