ಬೆಳಗಾವಿ: ಪದೇ, ಪದೇ ಬೆಳಗಾವಿ ಗಡಿ ವಿವಾದದ ಕ್ಯಾತೆ ತೆಗೆದು ಜನರ ಮಧ್ಯೆ ಭಾಷಾ ವೈಷ್ಯಮದ ಬೀಜ ಬಿತ್ತಿ ಕನ್ನಡಿಗರನ್ನು ಕೆಣಕುವ ಚಾಳಿಯನ್ನು ಮಹಾರಾಷ್ಟ್ರದ ರಾಜಕಾರಣಿಗಳು ಮುಂದುವರಿಸಿದ್ದಾರೆ. ಬೆಳಗಾವಿ, ನಿಪ್ಪಾಣಿ ಬೀದರ್, ಬಾಲ್ಕೀ, ಮಹಾರಾಷ್ಟ್ರಕ್ಕೆ ಸೇರಿಸುವುದು ಬಾಳಾಸಾಹೇಬ್ ಠಾಖ್ರೆ ಅವರ ಕನಸಾಗಿತ್ತು, ಮಹಾರಾಷ್ಟ್ರ ಸರ್ಕಾರ ಬಾಳಾಸಾಹೇಬ್ ಅವರ ಕನಸನ್ನು ನನಸು ಮಾಡುತ್ತದೆ ಎಂದು ಡಿಸಿಎಂ, ಎನ್‍ಸಿಪಿ ಅಜೀತ್ ಪವಾರ್ ಹೇಳಿಕೆ ನೀಡುವ ಮೂಲಕ ನಿನ್ನೆ ಮತ್ತೆ ಗಡಿ ಕ್ಯಾತೆ ತೆಗೆದಿದ್ದಾರೆ. …
Read More »ಅನುದಾನ ಬಳಸದೆ ವಾಪಸ್ : ಕ್ರಮಕ್ಕೆ ಶಿಫಾರಸ್ಸು
ಬೆಳಗಾವಿ: ‘2019-20ನೇ ಸಾಲಿನಲ್ಲಿ ಬಿಡುಗಡೆಯಾದ ಅನುದಾನ ಬಳಸದೆ ವಾಪಸ್ ಆಗಲು ಕಾರಣರಾದ ಅಧಿಕಾರಿಗಳ ಕುರಿತು ತನಿಖಾ ಸಮಿತಿಯು ವರದಿ ನೀಡಿದೆ. ಅದನ್ನು ಕೂಲಂಕುಷವಾಗಿ ಪರಿಶೀಲಿಸಿ ಸದಸ್ಯರ ಒಮ್ಮತದ ಅಭಿಪ್ರಾಯದಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಕಳುಹಿಸಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ದರ್ಶನ್ ಎಚ್.ವಿ. ತಿಳಿಸಿದರು. ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ರಮೇಶ ದೇಶಪಾಂಡೆ, ‘ನಿಗದಿತ ದಿನಕ್ಕಿಂತ ತಡವಾಗಿ ಬಿಲ್ ಸಲ್ಲಿಸಲಾಗಿದೆ. ಜೊತೆಗೆ ತಾಂತ್ರಿಕ ನೆಪವೊಡ್ಡಿ ಬಿಲ್ ಪಾಸ್ …
Read More »ಡಿಸಿಸಿ ಬ್ಯಾಂಕಿನಿಂದ ರೈತರ ಆರ್ಥಿಕಾಭಿವೃದ್ಧಿಗೆ ಹೊಸ ಯೋಜನೆಗಳು ಅನುಷ್ಠಾನಗೊಳ್ಳಲಿ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಬಿಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷ ರಮೇಶ ಕತ್ತಿ ಅವರು ಬಾಲಚಂದ್ರ ಜಾರಕಿಹೊಳಿ ಅವರ ನಿವಾಸಕ್ಕೆ ಭೇಟಿ ನೀಡಿ ಅಭಿನಂದನೆ ಸಲ್ಲಿಕೆ
ಗೋಕಾಕ : ಶತಮಾನೋತ್ಸವದ ಹೊಸ್ತಿಲಿನಲ್ಲಿರುವ ಬಿಡಿಸಿಸಿ ಬ್ಯಾಂಕಿನಿಂದ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಬಿಡಿಸಿಸಿ ಬ್ಯಾಂಕಿನ ನೂತನ ಆಡಳಿತ ಮಂಡಳಿಗೆ ಸಲಹೆ ಮಾಡಿದರು. ಪ್ರತಿಷ್ಠಿತ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನೂತನ ಅಧ್ಯಕ್ಷರಾದ ಬಳಿಕ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಗೋಕಾಕ ನಿವಾಸಕ್ಕೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿ, ಸತ್ಕಾರ ಮಾಡಿದ …
Read More »ಮರಾಠ ಅಭಿವೃಧಿ ಪ್ರಾಧಿಕಾರ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರದ ವಿರುದ್ಧ ರಾಜ್ಯಾದ್ಯಂತ ತೀವ್ರ ವಿರೋಧ ಸಿಎಂ ಮನೆ ಮುಂದೆ ಪ್ರತಿಭಟನೆ ಮಾಡುವುದಾಗಿ ಕರವೇ ಕಾರ್ಯಕರ್ತರು ಎಚ್ಚರಿಕೆ
ಬೆಳಗಾವಿ; ಸರ್ಕಾರದಿಂದ ಮರಾಠ ಅಭಿವೃಧಿ ಪ್ರಾಧಿಕಾರ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರದ ವಿರುದ್ಧ ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಸರಕಾರದ ವಿರುದ್ಧ ಕರವೇ ಕಾರ್ಯಕರ್ತರು ಸಿಎಂ ಯಡಿಯೂರಪ್ಪ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಮರಾಠಿ ಪ್ರಾಧಿಕಾರ ರಚನೆಯಿಂದ ಕನ್ನಡಿಗರಿಗೆ ಅನ್ಯಾಯ ಮಾಡಲಾಗುತ್ತಿದೆ. ಹೀಗಾಗಿ ಈ ಕೂಡಲೇ ಯಡಿಯೂರಪ್ಪ ಈ ಆದೇಶವನ್ನು ಹಿಂಪಡೆಯಬೇಕು. ಆದೇಶ ಹಿಂಪಡೆಯದಿದ್ದರೆ ಸಿಎಂ ಮನೆ ಮುಂದೆ ಪ್ರತಿಭಟನೆ ಮಾಡುವುದಾಗಿ …
Read More »30 ಹಾಸಿಗೆಗಳ ತಾಯಿ ಮಕ್ಕಳ ‘ಸ್ಮಾರ್ಟ್’ ಆಸ್ಪತ್ರೆಯನ್ನು ಶಾಸಕ ಅನಿಲ್ ಬೆನಕೆ ಮಂಗಳವಾರ ಉದ್ಘಾಟಿಸಿದರು.
ಬೆಳಗಾವಿ: ಸ್ಮಾರ್ಟ್ ಸಿಟಿ ಯೋಜನೆಯಡಿ ಶ್ರೀನಗರದ ವಂಟಮುರಿ ಕಾಲನಿಯಲ್ಲಿ ನಿರ್ಮಿಸಲಾಗಿರುವ 30 ಹಾಸಿಗೆಗಳ ತಾಯಿ ಮಕ್ಕಳ ‘ಸ್ಮಾರ್ಟ್’ ಆಸ್ಪತ್ರೆಯನ್ನು ಶಾಸಕ ಅನಿಲ್ ಬೆನಕೆ ಮಂಗಳವಾರ ಉದ್ಘಾಟಿಸಿದರು. ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿನ ಶ್ರೀನಗರದ ಡಬಲ್ ರಸ್ತೆಯಲ್ಲಿರುವ ವಂಟಮುರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ 2.75 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಿಸಲಾಗಿದ್ದು, ಇದರಿಂದ ಸ್ಥಳೀಯ ಜನರಿಗೆ ಉತ್ತಮ ವೈದ್ಯಕೀಯ ಸೇವೆ ಲಭಿಸಲಿದೆ ಎಂದು ತಿಳಿಸಿದರು. ಸ್ಮಾರ್ಟ್ …
Read More »ಸಂಗೊಳ್ಳಿ ರಾಯಣ್ಣನ ತಲೆಮೇಲೆ ಕಾಲಿಟ್ಟ ವ್ಯಕ್ತಿಯೊಬ್ಬ ಮತ್ತೊಂದು ಅವಾಂತರ ಸೃಷ್ಟಿಸಿದ್ದಾನೆ.
ಬೆಳಗಾವಿ: ಇತ್ತೀಚೆಗೆ ಪೀರಣವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ ಕುರಿತ ಹೋರಾಟ, ವಿವಾದ ಮರೆಯುವ ಮುನ್ನವೇ ವ್ಯಕ್ತಿಯೊಬ್ಬ ಮತ್ತೊಂದು ಅವಾಂತರ ಸೃಷ್ಟಿಸಿದ್ದಾನೆ. ಪೀರಣವಾಡಿಯಲ್ಲಿ ಪುನರ್ ನಿರ್ಮಾಣಗೊಂಡಿರುವ ವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ತಲೆ ಮೇಲೆ ವ್ಯಕ್ತಿಯೊಬ್ಬ ನಿಂತು ಹೊಸ ವಿವಾದ ಸೃಷ್ಟಿಸಿದ್ದಾನೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗಿದ್ದು, ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ವ್ಯಕ್ತಿ ಉದ್ದೇಶಪೂರ್ವಕವಾಗಿ ಈ ಕೃತ್ಯವೆಸಗಿದ್ದಾನೋ ಅಥವಾ ಮಾನಸಿಕ …
Read More »ಅತಿಥಿ ಶಿಕ್ಷಕರಿಗೆ ಲಾಕ್ ಡೌನ್ ಅವಧಿಯನ್ನು ಕರ್ತವ್ಯ ನಿರತ ಎಂದು ಪರಿಗಣಿಸಿ ಗೌರವಧನ ನೀಡುವಂತೆ ಯಡಿಯೂರಪ್ಪರವರಿಗೆ ಮನವಿ ಮಾಡಿದ ಸತೀಶ್ ಜಾರಕಿಹೊಳಿ
ಬೆಳಗಾವಿ: ಕೋವಿಡ್ 19ಗೆ ಸಂಬಂಧಿಸಿದಂತೆ ಪ್ರಾಥಮಿಕ, ಪ್ರೌಢ ಶಿಕ್ಷಣ, ಕಾಲೇಜು ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ಲಾಕ್ ಡೌನ್ ಅವಧಿಯನ್ನು ಕರ್ತವ್ಯ ನಿರತ ಎಂದು ಪರಿಗಣಿಸಿ ಗೌರವಧನ ನೀಡುವಂತೆ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಸಿಎಂ ಯಡಿಯೂರಪ್ಪರವರಿಗೆ ಮನವಿ ಮಾಡಿದ್ದಾರೆ. ಈ ಮನವಿ ಕುರಿತು ಸಿಎಂ ಯಡಿಯೂರಪ್ಪನವರು ಶೀಘ್ರವೇ ಸೂಕ್ತ ನಿರ್ಧಾರ ಕೈಗೊಂಡು ಗೌರವಧನ ಬಿಡುಗಡೆಗೆ ಆದೇಶ ನೀಡಬೇಕೆಂದು ಅವರು …
Read More »ನಗರ್ ಸಭೆ ಸದಸ್ಯರಿಂದ ಶ್ರೀ ಲಖನ ಹಾಗೂ ಶ್ರೀ ಸಂತೋಷ್ ಜಾರಕಿಹೊಳಿ ಅವರಿಗೆ ಸನ್ಮಾನ..
ಗೋಕಾಕ: ನಗರಸಭೆ ಇಂದ ಆಯ್ಕೆ ಆದ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಅವರ್ ಅಭಿಮಾನಿ ಗಳು ಇಂದು ಶ್ರೀ ಲಖನ ಜಾರಕಿಹೊಳಿ ಹಾಗೂ ಶ್ರೀ ಸಂತೋಷ್ ಜಾರಕಿಹೊಳಿ ಅವರಿಗೆ ಇಂದು ದೀಪಾವಳಿ ಹಾಗೂ ನಗರ್ ಸಭೆ ಇಂದ ಆಯ್ಕೆ ಆದ ಅಧ್ಯಕ್ಷ ಹಾಗೂ ಉಪಾ ಧ್ಯಕ್ಷ ರು ಸನ್ಮಾನಿಸಿದರು ಇಂದು ಗೋಕಾಕ ನಗರದಲ್ಲಿ ಲಖನ ಜಾರಕಿಹೊಳಿ ಅವರ್ ಕಚೇರಿಯಲ್ಲಿ ಉದ್ಯಮಿ ಹಾಗೂ ಯುವ ಮುಖಂಡ ರಾದ ಲಖನ ಜಾರಕಿಹೊಳಿ ಅವರಿಗೆ ಹಾಗೂ …
Read More »ಜಾರಕಿಹೋಳಿ ಕುಟುಂಬ, ಕತ್ತಿ ಕುಟುಂಬ ಹಾಗು ಲಕ್ಷಣ ಸವದಿ ಈ ಮೂವರು ಇಡಿ ಬೆಳಗಾವಿ ಜಿಲ್ಲೆಯನ್ನೇ ತಮ್ಮ ಹಿಡಿತದಲ್ಲಿ ಇಟ್ಟುಕೊಂಡ ನಾಯಕರು.
ಚಿಕ್ಕೋಡಿ: ಜಾರಕಿಹೋಳಿ ಕುಟುಂಬ, ಕತ್ತಿ ಕುಟುಂಬ ಹಾಗು ಲಕ್ಷಣ ಸವದಿ ಈ ಮೂವರು ಇಡಿ ಬೆಳಗಾವಿ ಜಿಲ್ಲೆಯನ್ನೇ ತಮ್ಮ ಹಿಡಿತದಲ್ಲಿ ಇಟ್ಟುಕೊಂಡ ನಾಯಕರು. ಹಾಗಾಗಿಯೇ ಜನ ಇವರನ್ನ ಜಿಲ್ಲೆಯ ಸಾಹುಕಾರರು ಎಂದೇ ಕರೆಯುತ್ತಾರೆ. ಜಿಲ್ಲೆಯಲ್ಲಿ ತಮ್ಮದೆ ಆದ ಹಿಡಿತ ಹೊಂದಿರುವ ಈ ಮೂವರು ನಾಯಕರು ತಮ್ಮದೆ ರಾಜಕೀಯ ಲೆಕ್ಕಾಚಾರಗಳನ್ನ ಹಾಕಿ ರಾಜಕೀಯ ಮಾಡುತ್ತ ಬಂದಿದ್ದಾರೆ. ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯೂ ಅಷ್ಟೇ. ಈ ಮೂವರು ನಾಯಕರು ಒಂದೇ ಪಕ್ಷದಲ್ಲಿ ಇದ್ದರೂ …
Read More »ಸಂಬಳದ ನಿರೀಕ್ಷೆಯಲ್ಲಿರುವ ಕೆಎಸ್ ಆರ್ ಟಿಸಿ ನೌಕರರಿಗೆ ಇನ್ನೊಂದು ವಾರದಲ್ಲಿ ವೇತನ ಪಾವತಿ ಮಾಡಲಾಗುವುದು ಎಂದು ಡಿಸಿಎಂ ಲಕ್ಷ್ಮಣ ಸವದಿ ಭರವಸೆ ನೀಡಿದ್ದಾರೆ.
ಬೆಳಗಾವಿ : ಸಂಬಳದ ನಿರೀಕ್ಷೆಯಲ್ಲಿರುವ ಕೆಎಸ್ ಆರ್ ಟಿಸಿ ನೌಕರರಿಗೆ ಇನ್ನೊಂದು ವಾರದಲ್ಲಿ ವೇತನ ಪಾವತಿ ಮಾಡಲಾಗುವುದು ಎಂದು ಡಿಸಿಎಂ ಲಕ್ಷ್ಮಣ ಸವದಿ ಭರವಸೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೀಪಾವಳಿ ಹಬ್ಬದಂದು ಕತ್ತಲಲ್ಲಿದ್ದೇವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಾರಿಗೆ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿರುವುದು ಗಮನಕ್ಕೆ ಬಂದಿದೆ. ಹಬ್ಬದ ಸಂದರ್ಭದಲ್ಲಿ ಅವರಿಗೆ ಮುಂಚಿತವಾಗಿ ಹಣ ನೀಡಬೇಕಾಗಿತ್ತು. ಸಾರಿಗೆ ಇಲಾಖೆ ಸಿಬ್ಬಂದಿ ಸಾಮಾನ್ಯ ಕುಟುಂಬದಿಂದ ಬಂದವರು. ಮುಂಚಿತವಾಗಿ ಸಂಬಳ ನೀಡದಕ್ಕೆ ವಿಷಾದ …
Read More »
Laxmi News 24×7