ಗೋಕಾಕ : ರಾಜ್ಯ ಸರ್ಕಾರದ ವಿದ್ಯುತ್ ದರ ಏರಿಕೆ ನಿರ್ಧಾರವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಗೋಕಾಕ ಬ್ಲಾಕ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಇಲ್ಲಿನ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರ ಏಕಾಏಕಿ ವಿದ್ಯುತ್ ದರ ಏರಿಸಿರುವುದು ಅತ್ಯಂತ ಅವೈಜ್ಞಾನಿಕವಾಗಿದೆ. ಇಂತಹ ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲಿ ಬಿಜೆಪಿ ಸರ್ಕಾರ ಕೈಗೊಂಡಿರುವ ನಿರ್ಧಾರ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ತೀರ್ಮಾನ ಖಂಡನೀಯ ಎಂದು ಸಿಎಂ …
Read More »ಬೆಳಗಾವಿ ಜಿಲ್ಲೆ ವಿಭಜನೆ ಬೇಕಾ..? ಕಮೆಂಟ್ ಮಾಡಿ ತಿಳಿಸಿ
ಬೆಳಗಾವಿ – ಬಳ್ಳಾರಿ ಜಿಲ್ಲೆ ವಿಭಜನೆ ಘೋಷಣೆ ಬೆನ್ನಲ್ಲೇ ಬೆಳಗಾವಿ ಜಿಲ್ಲೆ ಸದ್ದು ಕೇಳಿಬಂದಿದೆ. ರಾಜ್ಯದಲ್ಲೇ ದೊಡ್ಡದಾಗಿರುವ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ 3 ಜಿಲ್ಲೆಯನ್ನಾಗಿಸಬೇಕೆನ್ನುವ ಪ್ರಸ್ತಾವನೆಗೆ 2 ದಶಕಗಳ ಇತಿಹಾಸವಿದೆ. ಯಾವ ದೃಷ್ಟಿಯಿಂದ ನೋಡಿದರೂ ಜಿಲ್ಲೆಯ ವಿಭಜನೆ ಅಗತ್ಯ, ಅನಿವಾರ್ಯ. ಕೇವಲ ಭಾಷೆ ಮತ್ತು ಗಡಿ ವಿವಾದದ ಕಾರಣದಿಂದ ಜಿಲ್ಲಾ ವಿಭಜನೆಯನ್ನು ಮುಂದೂಡಲಾಗುತ್ತಿದೆ. ಬೆಳಗಾವಿಯನ್ನು ಎರಡು ವಿಭಾಗ ಮಾಡಬೇಕೋ, ಮೂರು ವಿಭಾಗ ಮಾಡಬೇಕೋ? ವಿಭಜಿಸುವುದಾದರೆ ಯಾವ್ಯಾವುದು ಜಿಲ್ಲಾ ಕೇಂದ್ರವಾಗಬೇಕು? ವಿಭಜಿತವಾಗಲಿರುವ …
Read More »ಐಸಿಸಿಆರ್ ಅಧ್ಯಕ್ಷರನ್ನು ಭೇಟಿಯಾದ ಡಾ. ಸೋನಾಲಿ ಸರನೋಬಾತ್
ಐಸಿಸಿಆರ್ ಅಧ್ಯಕ್ಷರನ್ನು ಭೇಟಿಯಾದ ಡಾ. ಸೋನಾಲಿ ಸರನೋಬಾತ್ ದೆಹಲಿ: ಭಾರತೀಯ ಸಂಸ್ಕೃತಿಕ ಸಂಬಂಧಗಳ ಮಂಡಳಿಯ ಅಧ್ಯಕ್ಷ (ಐಸಿಎಂಆರ್) ಡಾ. ವಿನಯ ಸಹಸ್ತ್ರಬುದ್ಧೆ ಅವರು ನವದೆಹಲಿಯಲ್ಲಿ ಲಲಿತಕಲಾ ಅಕಾಡೆಮಿ ಸದಸ್ಯೆ ಡಾ. ಸೋನಾಲಿ ಸರನೋಬಾತ್ ಅವರು ಭೇಟಿ ಮಾಡಿ ಕೆಲಹೊತ್ತು ಚರ್ಚೆ ನಡೆಸಿದರು. ಡಾ. ಸೋನಾಲಿಗೆ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಉತ್ತಮ ಪರ್ಚಾನೆ ಸಾಥ್ ನೀಡಿದ್ದಾರೆ. ಲಲಿತಕಲಾ ಅಕಾಡೆಮಿಯ ಯೋಜನೆಗಳ ಅನುಷ್ಠಾನ ಹಾಗೂ ಅದಕ್ಕೆ ಎದುರಾಗುವ ಸವಾಲುಗಳು, ಅಕಾಡೆಮಿ ಕಾರ್ಯವ್ಯಾಪ್ತಿ ವಿಸ್ತರಣೆ …
Read More »ಲೋಕಸಭಾ ಉಪಚುನಾವಣೆಗೆ ಸ್ಪರ್ಧಿಸಲು ನನಗೆ ಆಸಕ್ತಿ ಇಲ್ಲ : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ
ಬೆಳಗಾವಿ : ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಸ್ಪರ್ಧಿಸಲು ನನಗೆ ಆಸಕ್ತಿ ಇಲ್ಲ ಅಂತಾ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು. ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು , ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕುರಿತು ಮುಂದಿನ ತಿಂಗಳಿನ ಮೊದಲ ವಾರದಲ್ಲಿ ಎರಡನೇ ಸುತ್ತಿನ ಸಭೆ ನಡೆಸಲಾಗುತ್ತದೆ. ಈ ವೇಳೆ ಅಭ್ಯರ್ಥಿ ಆಯ್ಕೆ ಮಾಡಲಾಗುವುದು ಎಂದರು. ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಗಳ ಕೊರತೆ ಇಲ್ಲ. ಮುಂದಿನ …
Read More »ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅಭಿಮತ… ಬೆಳಗಾವಿ ಜಿಲ್ಲೆ ವಿಭಜನೆಯಾಗಿ ಚಿಕ್ಕೋಡಿ, ಗೋಕಾಕ ಹೊಸ ಜಿಲ್ಲೆ ಅಸ್ತಿತ್ವಕ್ಕೆ ಬರಲಿ…
ಚಿಕ್ಕೋಡಿ ಹಾಗೂ ಗೋಕಾಕ ಹೊಸ ಜಿಲ್ಲೆ ರಚನೆಯಾಗಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಯಮಕನಮರಡಿ ಕಾಂಗ್ರೆಸ್ ಶಾಸಕ ಸತೀಶ ಜಾರಕಿಹೊಳಿ ಅಭಿಮತ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಭಿವೃದ್ದಿ ನಿಟ್ಟಿನಲ್ಲಿ 18 ಶಾಸಕರನ್ನು ಹೊಂದಿರುವ ದೊಡ್ಡ ಜಿಲ್ಲೆ ಬೆಳಗಾವಿ ವಿಭಜನೆಯಾಗುವುದು ಅನಿವಾರ್ಯ. ಜಿಲ್ಲೆ ವಿಭಜನೆ ಬಗ್ಗೆ ಮೊದಲಿನಿಂದಲೂ ನಾವು ಆ ಕುರಿತು ಪ್ರತಿಪಾದಿಸುತ್ತ ಬಂದಿರುವುದಾಗಿ ಹೇಳಿದರು. ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಕುರಿತು ತಮ್ಮ ಹೆಸರು ಕೇಳಿ …
Read More »ಪಿಕೆಪಿಎಸ್‍ಗಳು ರೈತರ ಜೀವನಾಡಿಗಳು : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ 42 ಲಕ್ಷ ರೂ. ವೆಚ್ಚದ ಕಲ್ಲೋಳಿ ಪಿಕೆಪಿಎಸ್ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ : ‘ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ರೈತರಿಗೆ ಕಷ್ಟಕರ ಸಮಸ್ಯೆಗಳು ಎದುರಾದಾಗ ಅವರಿಗೆ ಸಾಲ ಸೌಲಭ್ಯಗಳನ್ನು ನೀಡುವ ಮೂಲಕ ರೈತರ ಜೀವನಾಡಿಗಳು’ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಮಂಗಳವಾರ ಸಂಜೆ ತಾಲೂಕಿನ ಕಲ್ಲೋಳಿ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕಲ್ಲೋಳಿ ಪಿಕೆಪಿಎಸ್ 100 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ಈ …
Read More »ಗೋಕಾಕ: ತಾಪಂ. ಕಚೇರಿ ಎದುರು ಕೂಲಿ ಕಾರ್ಮಿಕರ ಪ್ರತಿಭಟನೆ
ಗೋಕಾಕ : ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ನೀಡುವಂತೆ ಒತ್ತಾಯಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ಕೂಲಿ ಕಾರ್ಮಿಕರು ಇಂದು ತಾಪಂ. ಕಚೇರಿ ಎದುರು ಧರಣಿ ಕುಳಿತು ಪ್ರತಿಭಟನೆ ನಡೆಸಿದರು. ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಕುರಿತು ಯಾವುದೇ ಮಾಹಿತಿ ನೀಡುತ್ತಿಲ್ಲ. ಅರ್ಜಿಗಳಿಗೆ ಸ್ವೀಕೃತಿ ನೀಡುವುದಿಲ್ಲ. ಕೂಲಿ ಕಾರ್ಮಿಕರು ಕೆಲಸ ನೀಡುವಂತೆ ಮನವಿ ಮಾಡಿಕೊಂಡರೆ, ಅರಣ್ಯ ಇಲಾಖೆ ಅಧಿಕಾರಿಗಳನ್ನು ಕೇಳಿ …
Read More »ಮಾಜಿ ಗ್ರಾಮ ಪಂಚಾಯತಿ ಸದಸ್ಯನೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಆತನಿಗೆ ಥಳಿಸಿ ,ಕಟ್ಟಿ ಹಾಕಿ ನಂತರ ಪೋಲೀಸರಿಗೆ ಒಪ್ಪಿಸಿದ್ದಾರೆ.
ಬೆಳಗಾವಿ- ದೂರದ ಮುಂಡಗೋಡದಿಂದ ಬೆಳಗಾವಿಗೆ ಹಮಾಲಿ ಕೆಲಸಕ್ಕೆಂದು ಮಾಜಿ ಗ್ರಾಮ ಪಂಚಾಯತಿ ಸದಸ್ಯನೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಿ,ಅತ್ಯಾಚಾರ ನಡೆಸಿದ ಆರೋಪಿಯನ್ನು ಹಿಡಿದು ಆತನಿಗೆ ಮನಬಂದಂತೆ ಥಳಿಸಿ ಸ್ಥಳಿಯರು ಆರೋಪಿಯನ್ನು ಪೋಲೀಸರಿಗೆ ಒಪ್ಪಸಿದ ಘಟನೆ ಮಾರ್ಕೆಟ್ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮುಂಡಗೋಡ ಮೂಲದ ಮಾಜಿ ಗ್ರಾಪಂ ಸದಸ್ಯ ಪರುಶರಾಮ್ ದೇಮಾಣಿ ಮಡಿವಾಳರ ಎಂಬಾತ ಬೆಳಗಾವಿಯ ರವಿವಾರ ಪೇಠೆಯಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದ,ಮಾರ್ಕೆಟ್ ಪೋಲೀಸ್ ಠಾಣೆಯ …
Read More »ಬೆಳಗಾವಿ ಜಿಲ್ಲೆಯ 18 ಜನ ಶಾಸಕರ ಪೈಕಿ 13 ಜನ ಬಿಜೆಪಿ ಶಾಸಕರಿದ್ದಾರೆ. ಈ ಪೈಕಿ ಇದೀಗ 9 ಜನರಿಗೆ ಸರ್ಕಾರದಲ್ಲಿ ಸಚಿವ, ನಿಗಮ ಸೇರಿ ಮಹತ್ವ ಹುದ್ದೆ
ಬೆಳಗಾವಿ : ಜಿಲ್ಲೆಯ 18 ಜನ ಶಾಸಕರ ಪೈಕಿ 13 ಜನ ಬಿಜೆಪಿ ಶಾಸಕರಿದ್ದಾರೆ. ಈ ಪೈಕಿ ಇದೀಗ 9 ಜನರಿಗೆ ಸರ್ಕಾರದಲ್ಲಿ ಸಚಿವ, ನಿಗಮ ಸೇರಿ ಮಹತ್ವ ಹುದ್ದೆ ಪಡೆದುಕೊಂಡಿದ್ದಾರೆ. ಈಗ ಮತ್ತೆ ಹಾಲಿ ಹಾಗೂ ಮಾಜಿ ಶಾಸಕರಿಗೆ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನಗಳು ಒಲಿದು ಬಂದಿದ್ದು, ಬೆಳಗಾವಿ ಜಿಲ್ಲೆ. ಈಗ, ರಾಜಕೀಯ ಶಕ್ತಿ ಕೇಂದ್ರವಾಗಿ ಮಾರ್ಪಡುತ್ತಿದೆ. ಬಿ.ಎಸ್.ಯಡಿಯೂರಪ್ಪ ಸರ್ಕಾರದಲ್ಲಿ ಎಲಿಲ್ಲದ ಪ್ರಶಸ್ತ್ಯ ದೊರೆಯುತ್ತಿದೆ. ಅಂಬೇಡ್ಕರ್ ಅಭಿವೃದ್ಧಿ ನಿಗಮದ …
Read More »ಬಂದಗೆ ಬೆಂಬಲ ಇಲ್ಲ ಯತ್ನಾಳ್ ನನ್ನ ಮಸಿ ಹಚ್ಚದೆ ಬಿಡಲ್ಲ:ಕರವೇ ಗಜ ಸೇನೆ ,ಪವನ ಮಹಾಲಿಂಗಪುರ
ಬೆಳಗಾವಿ: ಮರಾಠಾ ಅಭಿವೃದ್ಧಿ ನಿಗಮಕ್ಕೆ ಯಡಿಯೂರಪ್ಪ ನವರೂ 50 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ ವಿಷಯ ರಾಜ್ಯಾದ್ಯಂತ ಬಹಳ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿತ್ತು, ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ ಅವರು ಕರ್ನಾಟಕ ಬಂದ ಘೋಷಣೆ ಮಾಡಿದ್ದರು, ಆದರೆ ಇದಕ್ಕೆ ಎಲ್ಲ ಕಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತ ವಾಗುತ್ತದೆ. ಡಿಸೆಂಬರ ಐದ ರಂದು ಹಮ್ಮಿಕೊಂಡಿರುವ ಕನ್ನಡ ಸಂಘಟನೆ ಗಳ ಬಂದ ಗೆ ಕರವೇ ಗಜಸೇನೆ ವತಿಯಿಂದ ಬೆಂಬಲ ಇಲ್ಲ …
Read More »
Laxmi News 24×7