Breaking News

ಬೆಳಗಾವಿ

ಜಗತ್ತಿನ ಎಲ್ಲೆಡೆ ಭಾರತದ ಅಲೆ : ಅತ್ಯುನ್ನತ ಹುದ್ದೆಗಳಲ್ಲಿ ಭಾರತೀಯರ ಮಿಂಚು

ಹೊಸದಿಲ್ಲಿ: ಜಗದೆಲ್ಲೆಡೆ ಚದುರಿ, ನೆಲೆ ಕಂಡಿರುವ ಭಾರತೀಯರು ಆಯಾ ರಾಷ್ಟ್ರಗಳಲ್ಲಿ ನಾಯಕತ್ವದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅಮೆರಿಕದ “ಇಂಡಿಯಾನ್ಪೊರಾ’ ಪ್ರಕಟಿಸಿರುವ “ಗವರ್ನ್ಮೆಂಟ್‌ ಲೀಡರ್ಸ್‌- 2021’ರ ಪಟ್ಟಿಯ ಪ್ರಕಾರ ಬರೋಬ್ಬರಿ 15 ರಾಷ್ಟ್ರಗಳಲ್ಲಿ ಭಾರತೀಯರೇ ಚಾಲಕ ಸ್ಥಾನಗಳಲ್ಲಿ ಇದ್ದಾರೆ. 15 ದೇಶಗಳಲ್ಲಿ ನಿರ್ಣಾಯಕರು 15 ರಾಷ್ಟ್ರಗಳಲ್ಲಿ ಸಾರ್ವಜನಿಕ ಸೇವೆ, ಅತ್ಯುನ್ನತ ಹುದ್ದೆಗಳಲ್ಲಿ ಭಾರತೀಯ ಮೂಲದವರೇ ಇದ್ದಾರೆ. ಈ ಪೈಕಿ 60 ನಾಯಕರು ಕ್ಯಾಬಿನೆಟ್‌ ದರ್ಜೆಯ ಸ್ಥಾನಮಾನ ಹೊಂದಿರುವುದು ವಿಶೇಷ. ಎಲ್ಲೆಲ್ಲೂ ಭಾರತೀಯರು …

Read More »

ಬೆಳಗಾವಿ ನಗರ ಸಿಸಿಐಬಿ ತಂಡದಿಂದ ಸುಮಾರು ೧೩ ಲಕ್ಷ ಮೌಲ್ಯದ ಮಿಲಿಟರಿ ಮತ್ತು ಅಂತರ್‌ರಾಜ್ಯ ಮದ್ಯ ಜಪ್ತಿ

ಬೆಳಗಾವಿ – ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯ ವಿಜಯ ನಗರದ ರಕ್ಷಕ ಕಾಲೋನಿಯಲ್ಲಿ ಗೋವಾ ರಾಜ್ಯದಲ್ಲಿ ಮಾರಾಟ ಮಾಡುವ & ಮಿಲಿಟರಿ ಕ್ಯಾಂಟೀನ್ ಮುಖಾಂತರ ಸೈನಿಕರಿಗೆ ಮಾರಾಟ ಮಾಡುವ ವಿವಿಧ ಕಂಪನಿಯ ಸರಾಯಿ ಬಾಟಲ & ಚೀಲಗಳನ್ನು ಸ್ಥಳಿಯರಿಗೆ ಎರಡುಪಟ್ಟು ದರದಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿಡಲಾಗಿತ್ತು. ಆರೋಪಿತರಾದ ರಾಜೇಶ ಕೇಶವ ನಾಯಿಕ, (೩೭) ಸಾ: ಕುಮಾರಸ್ವಾಮಿ ಲೇಔಟ್, ಬೆಳಗಾವಿ, ಶಂಕರ ಬಸವಂತ ದೇಸನೂರ, (೩೮) ಸಾ|| ಸಿಸಿಬಿ ನಂ. …

Read More »

ಗೋಕಾಕದಲ್ಲಿಂದು ಗೋಕಾಕ-ಮೂಡಲಗಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಬಾಲಚಂದ್ರ ಜಾರಕಿಹೊಳಿ

ಗೋಕಾಕ: ಸಾರ್ವಜನಿಕರಿಗೆ ಸಮರ್ಪಕವಾಗಿ ಪಡಿತರ ಧಾನ್ಯಗಳನ್ನು ವಿತರಿಸುತ್ತಿಲ್ಲ ಎಂಬ ವ್ಯಾಪಕ ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಕೂಡಲೇ ಅಗತ್ಯ ಕ್ರಮ ಕೈಗೊಂಡು ನ್ಯಾಯಬೆಲೆ ಅಂಗಡಿಯವರಿಗೆ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಅರಭಾವಿ ಶಾಸಕ ಹಾಗೂ ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಂಗಳವಾರ ಸಂಜೆ ಇಲ್ಲಿನ ತಹಶೀಲ್ದಾರ ಕಚೇರಿಯಲ್ಲಿ ಗೋಕಾಕ ಮತ್ತು ಮೂಡಲಗಿ ತಾಲೂಕುಗಳ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ …

Read More »

ರಾಜಾಪೂರದಲ್ಲಿ 8.17 ಕೋಟಿ ರೂ. ವೆಚ್ಚದ ಜಲಜೀವನ ಮಿಷನ್ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ

  ಘಟಪ್ರಭಾ : ಜಲಜೀವನ ಮಿಷನ್ ಕಾಮಗಾರಿಗಾಗಿ ರಾಜಾಪೂರ, ತುಕ್ಕಾನಟ್ಟಿ, ದಂಡಾಪೂರ, ದುರದುಂಡಿ ಹಾಗೂ ಬಡಿಗವಾಡ ಗ್ರಾಮ ಪಂಚಾಯತಿಗಳಿಗೆ 8.17 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಇದರಿಂದ ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಲಭ್ಯಕ್ಕೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಅರಭಾವಿ ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಸೋಮವಾರದಂದು ಇಲ್ಲಿಗೆ ಸಮೀಪದ ರಾಜಾಪೂರ ಗ್ರಾಮದಲ್ಲಿ 8.17 ಕೋಟಿ ರೂ. ವೆಚ್ಚದ ಜೆಜೆಎಂ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ …

Read More »

ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹಾಗೂ ಸರ್ವ ಸದಸ್ಯರು ಗಳಿಗೆ ಸನ್ಮಾನ ಕಾರ್ಯಕ್ರಮ

ಗೋಕಾಕ ತಾಲೂಕಿನ ಶಿಂದಿಕುರಬೇಟ ಗ್ರಾಮ ಪಂಚಾಯತ್ ಕಾರ್ಯಾಲಯ ದಲ್ಲಿ ಮೊದಲ ಸಭೆ ಯಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹಾಗೂ ಸರ್ವ ಸದಸ್ಯರು ಗಳಿಗೆ ಸನ್ಮಾನ ಕಾರ್ಯಕ್ರಮ ಜರಗಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ರೇಣುಕಾ ಈರಪ್ಪ ಪಾಟೀಲ ಹಾಗೂ ಉಪಾಧ್ಯಕ್ಷ ಶ್ರೀ ಭೀಮಪ್ಪ ಯಲ್ಲಪ್ಪ ಬಿರನಾಳಿ ಹಾಗೂ ಸರ್ವ ಸದಸ್ಯರು ಹಾಗೂ ಪಿಡಿಒ ಸಾಯೀಶ್ವರಿ ಮೆಣಸಿನಕಾಯಿ ಮತ್ತು ಲೇಕ್ಕಾಧಿಕಾರಿ …

Read More »

ಅನುದಾನಕ್ಕಾಗಿ ಆಗ್ರಹಿಸಿ ಕಲ್ಯಾಣ ಕರ್ನಾಟಕದ 1500 ಶಾಲೆಗಳು ಬಂದ್..!

ಬೆಳಗಾವಿ, ಫೆ.15- ಕಲ್ಯಾಣ ಕರ್ನಾಟಕ ಭಾಗದ ಅನುದಾನ ರಹಿತ ಶಾಲೆಗಳಿಗೆ ಅನುದಾನ ನೀಡಬೇಕೆಂದು ಆಗ್ರಹಿಸಿ 1500 ಶಾಲೆಗಳು ಇಂದು ಬಂದ್ ಮಾಡಿ ಪ್ರತಿಭಟನೆ ನಡೆಸಿವೆ. ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ, ಯಾದಗಿರಿ, ವಿಜಯಪುರ ಸೇರಿದಂತೆ ಆರು ಜಿಲ್ಲೆಗಳ 1500 ಶಾಲೆಗಳು ಅನುದಾನಕ್ಕೆ ಆಗ್ರಹಿಸಿ ಇಂದು ಶಾಲಾ-ಕಾಲೇಜುಗಳನ್ನು ಬಂದ್ ಮಾಡಿ ಕಲ್ಯಾಣ ಕರ್ನಾಟಕ ಅನುದಾನ ರಹಿತ ಶಾಲೆಗಳ ಒಕ್ಕೂಟ ಪ್ರತಿಭಟನೆ ನಡೆಸಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದೆ. 2013-14ರಲ್ಲಿ …

Read More »

ವೀರರಾಣಿ ಚೆನ್ನಮ್ಮ ಹಾಗೂ ರಾಯಣ್ಣನ ಪುತಳಿ ಪ್ರತಿಷ್ಠಾಪಿಸಿವವಂತೆವೀರ ಕನ್ನಡಿಗರ ಘರ್ಜನೆ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಮಣಗುತ್ತಿ ಗ್ರಾಮದಲ್ಲಿ ಶಿವಾಜಿ ಮಹಾರಾಜರ ಪುತ್ತಳಿ ಜೊತೆಗೆ ಬಾಬಾಸಾಹೇಬ್ ಅಂಬೇಡ್ಕರ್, ಮಹರ್ಷಿ ವಾಲ್ಮೀಕಿ, ಬಸವೇಶ್ವರ ಪುತಳಿನ್ನು ನಿರ್ಮಿಸಲು ಸರಕಾರ ಈಗಾಗಲೇ ಸಮ್ಮತಿ ನೀಡಿದೆ.. ಅದರ ಜೊತೆ ವೀರರಾಣಿ ಕಿತ್ತೂರು ಚೆನ್ನಮ್ಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಸಹ ಮಣಗುತ್ತಿ ಗ್ರಾಮದಲ್ಲಿ ಪ್ರತಿಷ್ಠಾಪಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ವೀರ ಕನ್ನಡಿಗರ ಘರ್ಜನೆ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Read More »

ಗೋಕಾಕ: ಕೊಳೆತ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

ಗೋಕಾಕ: ಸಮೀಪದ ಮರಡಿಮಠ ಗ್ರಾಮದ ಬಳಿಯ ಕೊಣ್ಣೂರು ಪುರಸಭೆ ಕಟ್ಟಡದ ಪಕ್ಕ ಕೊಳೆತ ಸ್ಥಿತಿಯಲ್ಲಿ ಅನಾಮಧೇಯ ಯುವಕನ ಶವ ಪತ್ತೆಯಾಗಿದೆ.   ಕೊಳೆತ ಸ್ಥಿತಿಯಲ್ಲಿರುವುದರಿಂದ ಯುವಕ ಯಾರೆಂದು ತಿಳಿದು ಬಂದಿಲ್ಲ. ಸ್ಥಳಕ್ಕೆ ಗೋಕಾಕ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೋಕಾಕ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಲೋಕಸಭಾ ಉಪಚುನಾವಣೆಯಲ್ಲಿ ಮತ್ತೇ ಅರಳಲಿದೆ ಕಮಲ : ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಗೋಕಾಕ : ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ್ದು, ಎಲ್ಲ 33 ಗ್ರಾಮ ಪಂಚಾಯತಿಗಳಲ್ಲಿ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿದಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ರವಿವಾರದಂದು ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಜರುಗಿದ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಅವರು, ಇದರಿಂದ ತಳಮಟ್ಟದಿಂದ ಪಕ್ಷ ಸಂಘಟಿಸಲು ಗ್ರಾಮ ಪಂಚಾಯತಿ ಚುನಾವಣೆ ಉತ್ತಮ ಅಡಿಪಾಯ ಎಂದು …

Read More »

ಗೋಕಾಕ : ಇಬ್ಬರು ಮಕ್ಕಳೊಂದಿಗೆ ಘಟಪ್ರಭಾ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ !

ಗೋಕಾಕ : ಮನೆಯಲ್ಲಿ ಜಗಳವಾಡಿ ಇಬ್ಬರು ಮಕ್ಕಳೊಂದಿಗೆ ಕಾಣೆಯಾಗಿದ್ದ ಮಹಿಳೆ ಘಟಪ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಗೋಕಾಕ ತಾಲ್ಲೂಕಿನ ಅರಭಾಂವಿಯ ಸಾವಿತ್ರಿ ರಾಜು ಬನಾಜ(30), ಪೂಜಾ (4) ಲಕ್ಷ್ಮಿ (2), ಮೃತರು. ಮನೆಯಲ್ಲಿ ಜಗಳವಾಡಿ ತಮ್ಮಇಬ್ಬರು ಮಕ್ಕಳನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ, ಕಾಣೆಯಾಗಿದ್ದರು. ಈ ಬಗ್ಗೆ ಗಂಡನ ಮನೆಯವರು ಪೊಲೀಸ್ ಠಾಣೆಗೆ ಶುಕ್ರವಾರ ದೂರು ನೀಡಿದ್ದರು. ಆದ್ರೆ ಭಾನುವಾರ ಬೆಳಿಗ್ಗೆ ಗೋಕಾಕ …

Read More »