ಬೆಳಗಾವಿ: ಬಿಮ್ಸ್ ನಲ್ಲಿ ಕೋವಿಡ್ ಸಂಬಂಧಿಸಿದ ಬೆಡ್ ಗಳು ಭರ್ತಿಯಾಗಿದ್ದರೆ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಯಡಿ ನೋಂದಾಯಿಸಲ್ಪಟ್ಟಿರುವ ಖಾಸಗಿ ಆಸ್ಪತ್ರೆಗೆ ಕಳುಹಿಸಬೇಕು. ಇಂತಹ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು. ಜಿಲ್ಲೆಯಲ್ಲಿ ಕೋವಿಡ್ ಹಾಗೂ ಪ್ರವಾಹ ನಿರ್ವಹಣೆಗೆ ಸಂಬಂಧಿಸಿದಂತೆ ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಹಿರಿಯ ಅಧಿಕಾರಿಗಳ ಜತೆ …
Read More »ಸೋಯಾಬಿನ ಬೆಳೆಯನ್ನು ಬಿತ್ತನೆ ಮಾಡುವ ರೈತರು ಹದವಾದ ಮಳೆಯಾದ ಮೇಲೆ ಭೂಮಿಯ ತೇವಾಂಶ ನೋಡಿಕೋಂಡು ಬಿತ್ತನೆ ಮಾಡಬೇಕು: ಸಹಾಯಕ ಕೃಷಿ ನಿರ್ದೇಶಕ ಎಂ.ಎಂ. ನದಾಫ
ಗೋಕಾಕ: ಸೋಯಾಬಿನ ಬೆಳೆಯನ್ನು ಬಿತ್ತನೆ ಮಾಡುವ ರೈತರು ಹದವಾದ ಮಳೆಯಾದ ಮೇಲೆ ಭೂಮಿಯ ತೇವಾಂಶ ನೋಡಿಕೋಂಡು ಬಿತ್ತನೆ ಮಾಡಬೇಕು ಎಂದು ಗೋಕಾಕ ಹಾಗೂ ಮೂಡಲಗಿ ತಾಲೂಕಿನ ರೈತರಿಗೆ ಸಹಾಯಕ ಕೃಷಿ ನಿರ್ದೇಶಕ ಎಂ.ಎಂ. ನದಾಫ ರವರು ಸಲಹೆ ನೀಡಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಸೋಯಾಬಿನ ಬಿತ್ತನೆ ಮಾಡಲು ಜೂನ ಮೊದಲನೆಯ ವಾರದಿಂದ ಜುಲೈ 2ನೇ ವಾರದವರೆಗೆ ಅವಕಾಶ ಇದ್ದು ಸಾಕಷ್ಠು ಮಳೆಯಾಗಿ ಭೂಮಿ ಹಸಿಯಾದ ನಂತರ …
Read More »ಗ್ರೇಡ್-2 ತಹಶೀಲ್ದಾರಾಗಿ ಅಧಿಕಾರವನ್ನು ಸ್ವೀಕರಿಸಿದ ಎಲ್.ಎಚ್.ಭೋವಿ
ಗೋಕಾಕ: ಸಮೀಪದ ಅರಭಾವಿ ನಾಡ ಕಛೇರಿಯಲ್ಲಿ ಉಪತಹಶೀಲ್ದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಲ್.ಎಚ್.ಭೋವಿ ಅವರು ಸರ್ಕಾರದ ಆದೇಶ ಮೇರೆಗೆ ಗ್ರೇಡ್-2 ತಹಶೀಲ್ದಾರರಾಗಿ ಪದನೊತ್ತಿ ಹೊಂದಿ ಸೋಮವಾರದಂದು ಇಲ್ಲಿಯ ತಹಶೀಲ್ದಾರ ಕಚೇರಿಯಲ್ಲಿ ಗ್ರೇಡ್-2 ತಹಶೀಲ್ದಾರಾಗಿ ಅಧಿಕಾರವನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ಗ್ರೇಡ್-2 ತಹಶೀಲ್ದಾರ ಎಮ್.ಎ.ಚೌಧರಿ, ಪ್ರಥಮ ದರ್ಜೆ ಸಹಾಯಕ ಆರ್.ಆಯ್. ನೇಸರಗಿ, ಗೋಕಾಕ ಕಂದಾಯ ನಿರೀಕ್ಷಕ ಎಸ್.ಎನ್.ಹಿರೇಮಠ ಸೇರಿದಂತೆ ಇತರೆ ಸಿಬ್ಬಂದಿಗಳು ಶುಭ ಹಾರೈಸಿದರು. ಎಲ್.ಎಚ್.ಭೋವಿ ಅವರು ಸರ್ಕಾರದ …
Read More »‘ಎಲ್ಲವನ್ನೂ ಸಿಎಂ ಮಾಡೋದಾದ್ರೆ ಬೆಳಗಾವಿಯ ನಾಲ್ವರು ಸಚಿವರು ಯಾಕೆ?’ – ಸತೀಶ್ ಜಾರಕಿಹೊಳಿ
ಬೆಳಗಾವಿ, ಮೇ 31: ”ಎಲ್ಲವನ್ನೂ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರೇ ಮಾಡುವುದಾದರೆ ಜಿಲ್ಲೆಯ ನಾಲ್ವರು ಸಚಿವರು ಯಾಕಾಗಿ ಇದ್ದಾರೆ” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಟೀಕಿಸಿದ್ದಾರೆ. ಮಂಗಳ ಬಿಮ್ಸ್ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಸರಿಪಡಿಸಲು ಸ್ವತಃ ಮುಖ್ಯಮಂತ್ರಿಗಳೇ ಬೆಳಗಾವಿಗೆ ಬರುವುದಾಗಿ ಹೇಳಿದ್ದರು. ಈ ವಿಚಾರದಲ್ಲಿ ಜಿಲ್ಲೆಯ ಸಚಿವರುಗಳ ಬಗ್ಗೆ ಲೇವಡಿ ಮಾಡಿರುವ ಸತೀಶ್ ಜಾರಕಿಹೊಳಿ, ”ಮುಖ್ಯಮಂತ್ರಿಗಳೇ ಬೆಳಗಾವಿಗೆ ಬರುವುದಾಗಿ ಹೇಳಿದ್ದಾರೆ. ಎಲ್ಲವೂ ಮುಖ್ಯಮಂತ್ರಿಗಳೇ ಮಾಡುವುದಾದರೆ ಜಿಲ್ಲೆಯ ನಾಲ್ವರು ಸಚಿವರು ಯಾಕೆ …
Read More »ಶಾಸಕ ಪಿ.ರಾಜೀವ್ ವಿರುದ್ಧ ಸಂವಸುದ್ದಿ ಗ್ರಾಮಸ್ಥರು ಆಕ್ರೋಶ: ಸಂವಸುದ್ದಿ ಗ್ರಾಮದಲ್ಲಿ ಒಂದೇ ತಿಂಗಳಲ್ಲಿ 70 ಮಂದಿ ಸಾವು
ಬೆಳಗಾವಿ: ಮಹಾಮಾರಿ ಕೊರೊನಾ ಎಲ್ಲೆಡೆ ತನ್ನ ಕಬಂದ ಬಾಹುಗಳನ್ನು ಚಾಚುತ್ತ ಸಾಗಿದೆ. ಕೊರೊನಾಗೆ ಬಲಿಯಾಗುವವರ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇನ್ನು ಒಂದು ಕಡೆ ಕೊರೊನಾ ನರಕ ತೋರಿಸುತಿದ್ರೆ ಮತ್ತೊಂದೆಡೆ ಇತರ ಖಾಯಿಲೆಗಳಿಗೆ ಬಲಿಯಾಗುತ್ತಿರುವ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಸದ್ಯ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಸಂವಸುದ್ದಿ ಗ್ರಾಮದಲ್ಲಿ ಒಂದೇ ತಿಂಗಳಲ್ಲಿ 80 ಜನ ಬಲಿಯಾಗಿದ್ದಾರೆ. 80 ಜನರ ಪೈಕಿ 10 ಜನರು ಕೊರೊನಾ ಸೋಂಕಿಗೆ ಬಲಿಯಾದ್ರೆ ಉಳಿದ …
Read More »B.I.M.S.ಅವ್ಯವಸ್ಥೆಯ ಹಿನ್ನೆಲೆಯಲ್ಲಿ ಯಡಿಯೂರಪ್ಪ ಬೆಳಗಾವಿಗೆ ಆಗಮಿಸುತ್ತಿದ್ದಾರೆ.
ಬೆಳಗಾವಿ– ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಳಗಾವಿ ಭೇಟಿ ದಿನಾಂಕ ನಿಗದಿಯಾಗಿದ್ದು, ಬೆಳಗಾವಿಯಲ್ಲಿ ಅಧಿಕಾರಿಗಳ ಸರಣಿ ಸಭೆ ಆರಂಭವಾಗಿದೆ. ಕೊರೋನಾ ನಿಯಂತ್ರಣದಲ್ಲಿ ಆಗುತ್ತಿರುವ ಅವ್ಯವಸ್ಥೆಯ ಹಿನ್ನೆಲೆಯಲ್ಲಿ ಯಡಿಯೂರಪ್ಪ ಬೆಳಗಾವಿಗೆ ಆಗಮಿಸುತ್ತಿದ್ದಾರೆ. ವಿಶೇಷವಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಯಾರ ನಿಯಂತ್ರಣವೂ ಇಲ್ಲದೆ ಕೊರೋನಾ ಅವ್ಯವಸ್ಥೆ ತೀವ್ರವಾಗಿದೆ. ಯಾರಿಗೆ ಬೆಡ್ ಸಿಗುತ್ತದೆ, ಎಷ್ಟು ಜನ ಸಾಯುತ್ತಿದ್ದಾರೆ, ಯಾರಿಗೆ ಚಿಕಿತ್ಸೆ ಸಿಗುತ್ತಿದೆ ಯಾವುದೂ ಜನಸಾಮಾನ್ಯರಿಗಿರಲಿ, ಮಂತ್ರಿಗಳಿಗೂ ತಿಳಿಯದಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿಯ ಮಂತ್ರಿಗಳು, ಶಾಸಕರು ನಿರಂತರ …
Read More »ಬೆಡ್ಗೆ ಒಬ್ಬ ಮಂತ್ರಿ, ಆಕ್ಸಿಜನ್‌ಗೆ ಒಬ್ಬ ಮಂತ್ರಿ, ಸ್ಮಶಾನಕ್ಕೆ ಒಬ್ಬ ಮಂತ್ರಿ ಮಾಡಿದರೂ ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡೂ ವಿಫಲವಾಗಿವೆ
ಬೆಳಗಾವಿ : ಬೆಡ್ಗೆ ಒಬ್ಬ ಮಂತ್ರಿ, ಆಕ್ಸಿಜನ್‌ಗೆ ಒಬ್ಬ ಮಂತ್ರಿ, ಸ್ಮಶಾನಕ್ಕೆ ಒಬ್ಬ ಮಂತ್ರಿ ಮಾಡಿದರೂ ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡೂ ವಿಫಲವಾಗಿವೆ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪಿಸಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯಲ್ಲಿ ನಿತ್ಯ 7 ಸಾವಿರ ಟೆಸ್ಟಿಂಗ್ ಮಾಡಿಸಿ ಅಂತಾ ಸರ್ಕಾರ ಹೇಳಿದೆ. ಆದರೆ ಬೆಳಗಾವಿಯಲ್ಲಿ ವೈದ್ಯರೇ ಇಲ್ಲ. ಪ್ರಾಥಮಿಕ ಆಸ್ಪತ್ರೆಗಳು ಸೋರುತ್ತಿವೆ. ಪ್ರಾಣ ಉಳಿಸಿಕೊಳ್ಳಲು …
Read More »ಸಾರ್ವಜನಿಕ ಜಾಗದಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ,66 ಲೀಟರ್ ಸಾರಾಯಿ ಹಾಗೂ 3,440ರೂಪಾಯಿ ಪೊಲಿಸರ ವಶಕ್ಕೆ
ಬೆಳಗಾವಿ: ಸಾರ್ವಜನಿಕ ಜಾಗದಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿರುವ ಘಟನೆ ಬೆಳಗಾವಿಯ ಕಪಿಲೇಶ್ವರ್ ಮಂದಿರದ ಓವರ್ ಬ್ರಿಡ್ಜ್ ಕೆಳಗೆ ನಡೆದಿದೆ. ಮಾರ್ಕೆಟ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಬಂಧಿತನಿಂದ ಸುಮಾರು 26,136 ರೂಪಾಯಿ ಮೌಲ್ಯದ 66 ಲೀಟರ್ ಸಾರಾಯಿ ಹಾಗೂ 3,440ರೂಪಾಯಿಯನ್ನು ಪೊಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಬೆಳಗಾವಿ ನಗರ ಡಿಸಿಪಿ ಡಾ.ವಿಕ್ರಮ್ ಆಮ್ಟೆ ತಿಳಿಸಿದ್ದಾರೆ.
Read More »ಬೆಳಗಾವಿಯಲ್ಲಿ ಬರೋಬ್ಬರಿ 46 ಮಕ್ಕಳಲ್ಲಿ ಕೊರೊನಾ ಸೋಂಕು
ಬೆಳಗಾವಿ: ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದೀಗ ಮಕ್ಕಳಲ್ಲಿಯೂ ಮಹಾಮಾರಿ ಕಾಡುತ್ತಿದೆ. ಬೆಳಗಾವಿಯಲ್ಲಿ ಬರೋಬ್ಬರಿ 46 ಮಕ್ಕಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. 18 ವರ್ಷದೊಳಗಿನ 46 ಮಕ್ಕಳು ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ. ಮೇ 18ರಂದು 20 ಮಕ್ಕಳಲ್ಲಿ ಪಾಸಿಟಿವ್ ಬಂದಿದ್ದು, ಇದೀಗ ಎರಡೇ ದಿನದಲ್ಲಿ 46 ಮಕ್ಕಳಿಗೆ ಸೋಂಕು ಹರಡಿರುವುದು ಆತಂಕಕ್ಕೀಡುಮಾಡಿದೆ. ರಾಜ್ಯದಲ್ಲಿ ಚಿಕ್ಕ ಮಕ್ಕಳು ಕೂಡ ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, ಕೊರೊನಾ 3ನೇ ಅಲೆ ಅಬ್ಬರ …
Read More »ಗೋಕಾಕ್ ತಾಲೂಕಿನ ಲೊಳಸರ ಗ್ರಾಮದಲ್ಲಿ ಆಟವಾಡುತ್ತಿದ್ದ ಮಗು ಚರಂಡಿಗೆ ಬಿದ್ದು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ
ಬೆಳಗಾವಿ: ಕೊರೊನಾ ಲಾಕ್ ಡೌನ್ ನಡುವೆ ಬೆಳಗಾವಿಯಲ್ಲಿ ದುರಂತವೊಂದು ಸಂಭವಿಸಿದೆ. ಮನೆಮುಂದೆ ಆಟವಾಡುತ್ತಿದ್ದ ಮಗು ಚರಂಡಿಗೆ ಬಿದ್ದು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ಗೋಕಾಕ್ ತಾಲೂಕಿನ ಲೊಳಸರ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮನೆ ಮುಂದೆ ಇದ್ದ ಚಂಡಿಗೆ ಸಾದಿಕಾ ಸದ್ದಾಂ ಎಂಬ ಒಂದು ವರ್ಷದ ಮಗು ಬಿದ್ದು ಸಾವನ್ನಪ್ಪಿದೆ. ಚರಂಡಿ ನೀರು ಮನೆ ಮುಂದೆ ಕಟ್ಟಿಕೊಂಡಿದ್ದರೂ ಈ ಬಗ್ಗೆ ಮನೆಯವರಾಗಲಿ, ಸಂಬಂಧಪಟ್ಟವರಾಗಲಿ ಗಮನಹರಿಸಿಲ್ಲ. ಆಟವಾಡಲು ಹೋದ ಮಗು ಆಯತಪ್ಪಿ …
Read More »
Laxmi News 24×7