Breaking News

ಬೆಳಗಾವಿ

ಕಾಂಗ್ರೆಸ್ ಸತ್ಯ ಹೇಳಿದ ದಿನ ಅವರಿಗೆ ಸಾವು ಬರುತ್ತೆ: ಕಾರಜೋಳ

ಕಾಂಗ್ರೆಸ ಪಕ್ಷದವರು ಎಂದೂ ಸತ್ಯ ಹೇಳುವುದಿಲ್ಲ. ಅವರು ಸತ್ಯ ಮಾತನಾಡಿದ ದಿನ ಅವರಿಗೆ ಸಾವು ಬರುತ್ತದೆ ಎಂದು ಸಚಿವ ಗೋವಿಂದ ಕಾರಜೋಳ, ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಚಿಕ್ಕೋಡಿಯಲ್ಲಿ ಪ್ರವಾಹ ಕುರಿತು ಅಧಿಕಾರಿಗಳೊಂದಿಗೆ ಮುಂಜಾಗೃತಾ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೋದಿ ಬಾಂಬ್ ಹಾರಿಸಿ ಪಾಕಿಸ್ತಾನ ಹೆಸರು ಹೇಳುತ್ತಾರೆ ಎಂಬ ಸತೀಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದರು. ಕಾಂಗ್ರೆಸ್ಸಿಗರು ಸುಳ್ಳು ಹೇಳುವುದರಲ್ಲಿ ನಿಸ್ಸಿಮರು. ಸಿದ್ದರಾಮಯ್ಯ ಅವರು 7 ಕೆಜಿ ಅಕ್ಕಿ …

Read More »

ವಿವಿಧ ಅಂಗಡಿಗಳ ಮೇಲೆ ಪುರಸಭೆ ಅಧಿಕಾರಿಗಳ ದಾಳಿ: ೧೫೦ ಕೆಜಿ ಪ್ಲಾಸ್ಟಿಕ್ ಚೀಲ ವಶ೨೩ ಸಾವಿರ ದಂಡ

ಬೈಲಹೊಂಗಲ ಪಟ್ಟಣದ ವಿವಿಧ ಅಂಗಡಿಗಳ ಮೇಲೆ ಸೋಮವಾರ ಪುರಸಭೆಯ ಆರೋಗ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಸುಮಾರು ೧೫೦ ಕೆ.ಜಿ ಪ್ಲಾಸ್ಟಿಕ್ ವಶಪಡಿಸಿಕೊಂಡು ರೂ. ೨೩ ಸಾವಿರ ದಂಡ ವಿದಿಸಿ ಪ್ಲಾಸ್ಟಿಕ್ ಬಳಕೆ ಹಾಗೂ ಮಾರಾಟ ಮಾಡದಿರುವ ಬಗ್ಗೆ ಎಚ್ಚರಿಕೆ ನೀಡಿದರು. ಪುರಸಭೆ ಮುಖ್ಯಾಧಿಕಾರಿ ಕವಿರಾಜ ನಾಗನೂರ ಮಾತನಾಡಿ, ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಮಾರಾಟ ಹಾಗೂ ಬಳಕೆಯನ್ನು ಜುಲೈ ೧ ರಿಂದ ಸುಪ್ರೀಂ ಕೋರ್ಟ ಆದೇಶದ ಮೇರೆಗೆ ಕೇಂದ್ರ ಸರ್ಕಾರ …

Read More »

ರಾಜಕಾರಣದ ಗುಂಗಿನಲ್ಲಿಬಾಲ್ಯದ ಗೆಳೆಯರೇ ವಿಲನ್‌!

ಬೆಳಗಾವಿ: ಬಾಲ್ಯದ ಗೆಳೆಯರಾಗಿದ್ದ ಇಬ್ಬರೂ ಡಿಗ್ರಿವರೆಗೂ ಒಂದೇ ಕಡೆಗೆ ಓದಿ ರಾಜಕಾರಣದ ಗುಂಗಿನಲ್ಲಿ ಕಮಲ ಅರಳಿಸಲು ನಾ ಮೇಲೆ, ನೀ ಮೇಲೆ ಎಂಬ ಪ್ರತಿಷ್ಠೆಯಲ್ಲಿ ದ್ವೇಷ ಸಾಧಿಸಿಕೊಂಡು ಕೊನೆಗೆ ಕೊಲೆಯಲ್ಲಿ ಗೆಳೆತನ ಜತೆಗೆ ರಾಜಕಾರಣದ ಪ್ರತಿಷ್ಠೆಯನ್ನು ಮಣ್ಣು ಪಾಲು ಮಾಡಿಕೊಂಡಿದ್ದಾರೆ.   ಹುಕ್ಕೇರಿ ತಾಲೂಕಿನ ಹಿಡಕಲ್‌ ಡ್ಯಾಂ ಗ್ರಾಮದ ಪರಶುರಾಮ ಹಲಕರ್ಣಿ(32) ಎಂಬ ಯುವಕ ಕೊಲೆಗೀಡಾಗಿದ್ದಾನೆ. ಇದೇ ಗ್ರಾಮದ ಮೂವರು ಪರಶುರಾಮನನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾರೆ. ಪ್ರಮುಖ ಆರೋಪಿ …

Read More »

ವಡೇರಹಟ್ಟಿ ಗ್ರಾಮದಲ್ಲಿ ಶ್ರೀ ಚಂದ್ರಮ್ಮ ದೇವಿ ಸಮುದಾಯ ಭವನವನ್ನು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ

ಮೂಡಲಗಿ: ವಡೇರಹಟ್ಟಿ ಗ್ರಾಮದಲ್ಲಿ ಶ್ರೀ ಚಂದ್ರಮ್ಮ ದೇವಿ ಸಮುದಾಯ ಭವನವನ್ನು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಅವರು ಉದ್ಘಾಟಿಸಿದರು.       ನಂತರ ಮಾತನಾಡಿದ ಅವರು ಶಾಸಕರ ವಿಶೇಷ ಅನುದಾನ ಅಡಿಯಲ್ಲಿ ನಿರ್ಮಿಸಲಾದ ನೂತನ ಸಮುದಾಯ ಭವನವನ್ನು ಎಲ್ಲರೂ ಸದುಪಯೋಗ ಪಡೆದುಕೊಳ್ಳಿ ಎಂದರು.ನಾವು ಸದಾ ನಿಮ್ಮ ಸೇವೆಗೆ ಸಿದ್ಧ, ನಾವು ನಿಮ್ಮ ಕುಟುಂಬದವರೇ ಕ್ಷೇತ್ರದಲ್ಲಿ ಯಾವುದೇ ಕಾರ್ಯ ಇದ್ದರೂ ನಿಮ್ಮೊಂದಿಗೆ ಇರುತ್ತೇವೆ ಎಂದರು.ನಂತರ ಗ್ರಾಮದ ಹಿರಿಯರು ಯುವ ನಾಯಕ …

Read More »

ಬೈಲಹೊಂಗಲ ಪಟ್ಟಣದ ಧಾರವಾಡ- ಸವದತ್ತಿ ಮಾರ್ಗದ ಬೈಪಾಸ್ ರಸ್ತೆಯ ಮೇಲೆ ಧರಣಿ ಕುಳಿತ ಪ್ರತಿಭಟನಾಕಾರರು,

ಬೈಲಹೊಂಗಲ (ಬೆಳಗಾವಿ ಜಿಲ್ಲೆ): ಪಟ್ಟಣದ ಎಲ್ಲ 27 ವಾರ್ಡ್‌ಗಳಲ್ಲಿಯೂ ರಸ್ತೆಗಳು ಸಂಪೂರ್ಣ ಹಾಳಾಗಿವೆ. ತಕ್ಷಣ ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿ ಸಾರ್ವಜನಿಕರು ಸೋಮವಾರ ರಸ್ತೆ ತಡೆ ನಡೆಸಿದರು.   ಬೈಲಹೊಂಗಲ ಪಟ್ಟಣದ ಧಾರವಾಡ- ಸವದತ್ತಿ ಮಾರ್ಗದ ಬೈಪಾಸ್ ರಸ್ತೆಯ ಮೇಲೆ ಧರಣಿ ಕುಳಿತ ಪ್ರತಿಭಟನಾಕಾರರು, ಸ್ಥಳೀಯ ಶಾಸಕ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸ್ಥಳೀಯ ಪುರಸಭೆ ಅಧಿಕಾರಿಗಳು ಹಾಗೂ ಸದಸ್ಯರ ವಿರುದ್ಧವೂ ಕಿಡಿ ಕಾರಿದರು.   ಜೆಡಿಎಸ್ ಜಿಲ್ಲಾ …

Read More »

ಮಳೆರಾಯನ ಅಬ್ಬರ.. ಚರಂಡಿ ವ್ಯವಸ್ಥೆ ಇಲ್ಲದೇ ರಸ್ತೆಗಳು ಜಲಾವೃತ.

ಬೆಳಗಾವಿ : ಬೆಳಗಾವಿಯಲ್ಲಿ ಮಳೆರಾಯನ ಅಬ್ಬರ ಜೋರಾಗಿದ್ದು, ಸತತ ಮಳೆಗೆ ಬೆಳಗಾವಿ ಜನರ ಸ್ಥಿತಿ ಅಯೋ ಮಯವಾಗಿದೆ. ಚರಂಡಿ ವ್ಯವಸ್ಥೆ ಇಲ್ಲದೇ ಹಲವು ರಸ್ತೆಗಳು ಜಲಾವೃತವಾಗಿದೆ. ಉಜ್ವಲ ನಗರ, ಓಂಕಾರ ನಗರ, ಮಹಾಂತೇಶ ನಗರ ಬ್ರಿಡ್ಜ್ , ಬೆಳಗಾವಿ ನಗರ ಸೇರಿ ಹಲವು ರಸ್ತೆಗಳು ಸಂಪೂರ್ಣ ಜಲಾವೃತವಾಗಿದೆ. ಜಲಾವೃತಗೊಂಡ ರಸ್ತೆಯಲ್ಲಿ ಭಯದಲ್ಲೇ ಬೈಕ್ ಸವಾರರ ಸಂಚಾರ ಮಾಡುತ್ತಿದ್ದಾರೆ. ಚರಂಡಿ ವ್ಯವಸ್ಥೆ ಕಲ್ಪಿಸದ ಬೆಳಗಾವಿ ಪಾಲಿಕೆ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

Read More »

ಬೆಳಗಾವಿನಗರದ ಜೀವನಾಡಿ ರಕ್ಕಸಕೊಪ್ಪ ಡ್ಯಾಂ ಭರ್ತಿ

ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ (Maharashtra Western hills) ಧಾರಾಕಾರ ಮಳೆ (Rainfall) ಮುಂದುವರಿದಿದ್ದು, ಬೆಳಗಾವಿ ಜಿಲ್ಲೆಯ ನದಿಗಳು (Belagavi Rivers) ಮೈದುಂಬಿ ಹರಿಯುತ್ತಿವೆ. ಬೆಳಗಾವಿ ಜಿಲ್ಲೆಯ ಮಲಪ್ರಭಾ (Malaprabha), ಘಟಪ್ರಭಾ (Ghataprabha), ಮಾರ್ಕಂಡೇಯ (Markandeya) ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ‌.‌ ಇದೇ ರೀತಿ ಇನ್ನೂ ಹದಿನೈದು ದಿನಗಳ ಕಾಲ ಮಳೆ ಮುಂದುವರಿದರೆ ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಉಂಟಾಗಲಿದೆ. ಸದ್ಯ ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು …

Read More »

ಸಿ.ಎಂ. ಆಯ್ಕೆ ಚುನಾವಣೆ ಮುಗಿದ ಮೇಲೆ ನೋಡೋಣ ನಾನು ಆ ರೇಸ್‍ನಲ್ಲಿ ಇಲ್ಲ

ಮುಖ್ಯಮಂತ್ರಿ ಆಯ್ಕೆ ಚುನಾವಣೆ ಮುಗಿದ ಮೇಲೆ ನೋಡೋಣ, ಸದ್ಯಕ್ಕೆ ನಾನು ಸಿಎಂ ರೇಸ್‍ನಲ್ಲಿ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಹಾರೂಗೇರಿ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಬೃಹತ್ ಸೈಕಲ್ ಜಾಥಾ ಸಮಾರೋಪ ಸಮಾವೇಶದಲ್ಲಿ ಭಾಗಿಯಾಗಲು ಆಗಮಿಸಿದ್ದ ವೇಳೆ ಸಿದ್ದರಾಮಯ್ಯ ಸಿಎಂ ಆಗುವ ಇಂಗಿತ ವಿಚಾರಕ್ಕೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಸತೀಶ ಜಾರಕಿಹೊಳಿ ಚುನಾವಣೆ ಆದ ಮೇಲೆ ಮುಖ್ಯಮಂತ್ರಿಗಳ ಆಯ್ಕೆ ಆಗುತ್ತದೆ. ಸಧ್ಯಕ್ಕೆ ನಾನು ಸಿಎಂ ರೇಸ್‍ನಲ್ಲಿ ಇಲ್ಲ …

Read More »

ಕಮತನೂರ ಗೇಟ ಬಳಿ ದಾಳಿ ಮಾಡಿ 18.30 ಲಕ್ಷ ರೂಪಾಯಿ ಮೌಲ್ಯದ 280 ಬಾಕ್ಸ ಮದ್ಯವನ್ನು ವಶಕ್ಕೆ ಪಡೆದುಕೊಂಡ ಅಬಕಾರಿ ಅಧಿಕಾರಿಗಳು

ಗೋವಾ ರಾಜ್ಯದಿಂದ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ವಿವಿಧ ಕಂಪನಿಯ 18.30 ಲಕ್ಷ ರೂಪಾಯಿ ಮೌಲ್ಯದ ಸಾರಾಯಿಯನ್ನು ಚಿಕ್ಕೋಡಿ ವಲಯದ ಅಬಕಾರಿ ಅಧಿಕಾರಿಗಳು ಲಾರಿ ಸಮೇತ ವಶಪಡಿಸಿಕೊಂಡಿದ್ದಾರೆ. ಹೌದು ಗೋವಾ ರಾಜ್ಯದಿಂದ ಅಂಬೋಲಿ ಮಾರ್ಗವಾಗಿ ಐಚರ್ ಲಾರಿಯೊಂದರಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವೇಳೆ ಹುಕ್ಕೇರಿ ತಾಲೂಕಿನ ಕಮತನೂರ ಗೇಟ ಬಳಿ ದಾಳಿ ಮಾಡಿದ ಅಬಕಾರಿ ಅಧಿಕಾರಿಗಳು 18.30 ಲಕ್ಷ ರೂಪಾಯಿ ಮೌಲ್ಯದ 280 ಬಾಕ್ಸ ಮದ್ಯವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಕ್ರಮ ಸಾರಾಯಿ …

Read More »

ಜನರು ಆಶೀರ್ವಾದ ಮಾಡಿದಾಗ ಮಾತ್ರ ಮುಖ್ಯಮಂತ್ರಿಯಾಗಲು ಸಾಧ್ಯ. ಎಲ್ಲರಿಗೂ ಮುಖ್ಯಮಂತ್ರಿ ಆಗುವ ಆಸೆ ಇರುತ್ತದೆ : ಮಾಧುಸ್ವಾಮಿ

ಅಥಣಿ (ಬೆಳಗಾವಿ): ಎಲ್ಲರಿಗೂ ಸಿಎಂ ಆಗೋಕೆ ಆಸೆ ಇರುತ್ತದೆ. ಸಿದ್ದರಾಮಯ್ಯ ಅವರಿಗೂ ಆಸೆಯಿದೆ. ಜನರು ಆಶೀರ್ವಾದ ಮಾಡಿದಾಗ ಮಾತ್ರ ಮುಖ್ಯಮಂತ್ರಿ ಆಗುವುದಕ್ಕೆ ಸಾಧ್ಯ. ಈಗಾಗಲೇ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ, ಇನ್ನೊಮ್ಮೆ ಸಿಎಂ ಆಗ್ಬೇಕು ಅಂತ ಆಸೆ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಜನರು ತೀರ್ಮಾನ ಮಾಡಬೇಕೆಂದು ಎಂದು ಚಿಕ್ಕ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿದರು.   ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಾಡಗಿ ಗ್ರಾಮದಲ್ಲಿ ಕೆರೆ ತುಂಬಿಸುವ …

Read More »