Breaking News

ಬೆಳಗಾವಿ

ಕಲ್ಲೋಳಿಯಲ್ಲಿ 5.50 ಕೋಟಿ ರೂಗಳ ವೆಚ್ಚದ ನಗರೋತ್ಥಾನ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ

*ಮೂಡಲಗಿ:* ನಗರೋತ್ಥಾನ ಯೋಜನೆಯಡಿ ಕೈಗೊಳ್ಳುತ್ತಿರುವ ಕಾಮಗಾರಿಗಳನ್ನು ಗುಣಮಟ್ಟದಿಂದ ಕೈಗೊಳ್ಳುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡುವಂತೆ ಶಾಸಕ, ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ತಾಲೂಕಿನ ಕಲ್ಲೋಳ್ಳಿ ಪಟ್ಟಣದಲ್ಲಿ 5.50ಕೋಟಿ ರೂಗಳ ವೆಚ್ಚದ ನಗರೋತ್ಥಾನ ಯೋಜನೆಯಡಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಪಟ್ಟಣದ ವ್ಯಾಪ್ತಿಯಲ್ಲಿ ಬರುವ ರಸ್ತೆ ನಿರ್ಮಾಣ ಮತ್ತು ಒಳಚರಂಡಿ ಕಾಮಗಾರಿಗಳು ಆದಷ್ಟು ಬೇಗನೇ ಪೂರ್ಣ ಮಾಡುವಂತೆ ಸೂಚಿಸಿದರು. ಕಲ್ಲೋಳಿ ಪಟ್ಟಣದ ನಾಗರೀಕರಿಗೆ …

Read More »

ಪೊಲೀಸ್ ಫೋನ್ ಇನ್ ಕಾರ್ಯಕ್ರಮ; 6ನೇ ಕಾರ್ಯಕ್ರಮದಲ್ಲೂ ಸಮಸ್ಯೆಗಳ ಮಹಾಪೂರ

ಬೆಳಗಾವಿ : ಬೆಳಗಾವಿ ಎಸ್ಪಿ ಸಂಜೀವ್ ಪಾಟೀಲ ಆರಂಭಿಸಿರುವ ಫೋನ್ ಇನ್ ಕಾರ್ಯಕ್ರಮದ 6ನೇ ಕಾರ್ಯಕ್ರಮದಲ್ಲೂ ಅಕ್ರಮ ಮದ್ಯದ ಘಾಟು ಜೋರಾಗಿತ್ತು. ಬಂದಿದ್ದ 51 ಕರೆಗಳ ಪೈಕಿ ಅಗ್ರಸ್ಥಾನ ಅಕ್ರಮ ಮದ್ಯದ ಸಮಸ್ಯೆಗೆ. ಪೊಲೀಸರು ಸಾರ್ವಜನಿಕರ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಆರಂಭಿಸಿರುವ ಪೋನ್ ಇನ್ ಕಾರ್ಯಕ್ರಮದ ಆರನೇ ಕಾರ್ಯಕ್ರಮ ಗುರುವಾರ ನಡೆಯಿತು. ಬೆಳಗಾವಿ ಜಿಲ್ಲೆಯ ಜನರು ಪೋನ್ ಮಾಡಿ ತಮ್ಮ ಅಳಲನ್ನು ತೋಡಿಕೊಂಡರು. ಒಟ್ಟೂ 51 ಕರೆಗಳನ್ನು ಸ್ವೀಕರಿಸಲಾಗಿದ್ದು, …

Read More »

ಸವದತ್ತಿ ಬಳಿ ವ್ಯಕ್ತಿಯ ಮರ್ಡರ್…..

ಸವದತ್ತಿ: ಇಲ್ಲಿಯ ಹೂಲಿಯಲ್ಲಿ ವ್ಯಕ್ತಿಯೋರ್ವನನ್ನು ಮರ್ಡರ್ ಮಾಡಲಾಗಿದೆ. ಗುರುವಾರ ಮಧ್ಯಾಹ್ನ 3.30ರ ವೇಳೆಗೆ ಘಟನೆ ನಡೆದಿದೆ. ಮಲ್ಲಪ್ಪ ಗಂಗಪ್ಪ ನಂದೆಣ್ಣವರ್ ಎನ್ನುವ 62 ವರ್ಷದ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ. 30 ವರ್ಷದ ಉಮೇಶ ಫಕೀರಪ್ಪ ಹಾವುಕಡದ್ ಆರೋಪಿ. ಉಮೇಶ್ ಮಲ್ಲಪ್ಪನ ಸಹೋದರ ಸಂಬಂಧಿಯಾಗಿದ್ದಾನೆ. ಕೊಲೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪೊಲೀಸರು ತನಿಖೆ ನಡೆಸಿದ್ದಾರೆ.

Read More »

ಗೋಕಾಕ: ನಗರದ ಲಕ್ಷ್ಮೀ ಎಜ್ಯುಕೇಶನ್ ಟ್ರಸ್ಟನ ವಿವಿಧ ಅಂಗ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಚರಸಿಲಾದ ಸನತ ಜಾರಕಿಹೊಳಿ

ಗೋಕಾಕ: ನಗರದ ಲಕ್ಷ್ಮೀ ಎಜ್ಯುಕೇಶನ್ ಟ್ರಸ್ಟನ ವಿವಿಧ ಅಂಗ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಚರಸಿಲಾದ ಗಣರಾಜ್ಯೋತ್ಸವ ಧ್ವಜಾರೋಹಣವನ್ನು ಪಾಲಿಟೇಕ್ನಿಕನ ಪ್ರಾಚಾರ್ಯ ಎಚ್ ಎಸ್ ಅಡಿಬಟ್ಟಿ ನೆರವೇರಿಸಿದರು. ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ ಹಾಗೂ ವಿವಿಧ ಅಂಗ ಸಂಸ್ಥೆಗಳ ಮುಖ್ಯಸ್ಥರು ಇದ್ದರು.

Read More »

ಗೋಕಾಕ: ನಗರದ ಮಯೂರ ಶಾಲೆಯಲ್ಲಿ ಆಚರಿಸಲಾದ….

ಗೋಕಾಕ: ನಗರದ ಮಯೂರ ಶಾಲೆಯಲ್ಲಿ ಆಚರಿಸಲಾದ ಗಣರಾಜ್ಯೋತ್ಸವ ಧ್ವಜಾರೋಹಣವನ್ನು ಆಡಳಿತಾಧಿಕಾರಿ ಎಸ್ ಡಿ ಮುರಗೋಡ ನೆರವೇರಿಸಿದರು. ಮುಖ್ಯೋಪಾಧ್ಯಾಯಿನಿ ಸಿ ಬಿ ಪಾಗದ, ಶಿಕ್ಷಕ ಎನ್ ಕೆ ಮಕಾನದಾರ ಇದ್ದರು.

Read More »

ಸಂವಿಧಾನದ ಆಶಯದಂತೆ ಸಹಬಾಳ್ವೆಯಿಂದ ಬದುಕುವಂತಾಗಲಿ: ಸಚಿವ ಗೋವಿಂದ ಕಾರಜೋಳ

ಬೆಳಗಾವಿ: ‘ಸರ್ವಜನಾಂಗದ ಶಾಂತಿಯ ತೋಟ’ವೆಂದು ರಾಷ್ಟಕವಿ ಕುವೆಂಪು ಅವರು ಕರ್ನಾಟಕವನ್ನು ವ್ಯಾಖ್ಯಾನಿಸಿದ್ದಾರೆ. ಇಂತಹ ತೋಟದಲ್ಲಿ ನಾವೆಲ್ಲಾ ಸಾಮರಸ್ಯದಿಂದ ಬೆಳೆದುನಿಂತ ಫಲಪುಷ್ಪಗಳು. ಈ ನೆಲದ ಮಣ್ಣಿನ ಗುಣ, ಗಣತಂತ್ರ ವ್ಯವಸ್ಥೆಯ ಮತ್ತು ಸಂವಿಧಾನದ ಮೂಲ ಆಶಯಗಳನ್ನಿಟ್ಟುಕೊಂಡು ಎಲ್ಲರೂ ಸಹಬಾಳ್ವೆಯಿಂದ ಬದುಕಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ನೀರಾವರಿ ಸಚಿವ ಗೋವಿಂದ ಕಾರಜೋಳ ಹೇಳಿದರು. ಅವರು ನಗರದಲ್ಲಿ ಗಣರಾಜ್ಯೋತ್ಸವ ನಿಮಿತ್ತ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಗಣರಾಜ್ಯ ದಿನವು ದೇಶದ ನಾಗರಿಕರಿಗೆ ತನ್ನ ರಾಷ್ಟ್ರದ …

Read More »

ಬೆಳಗಾವಿ : ಧ್ವಜಾರೋಹಣದ ವೇಳೆ ಎಡವಟ್ಟು ಮಾಡಿಕೊಂಡ ಚಿಕ್ಕೋಡಿ ಉಪ ವಿಭಾಗಾಧಿಕಾರಿ.!

ಚಿಕ್ಕೋಡಿ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪ ವಿಭಾಗಾಧಿಕಾರಿ ಮಾಧವ ಗಿತ್ತೆ ಧ್ವಜಾರೋಹಣ ವೇಳೆ ಭಾರೀ ಎಡವಟ್ಟು ಮಾಡಿಕೊಂಡಿದ್ದಾರೆ.   ಧ್ವಜಾರೋಹಣ ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದಲ್ಲದೆ, ತರಾತುರಿಯಲ್ಲಿ ಬೂಟು ಕಾಲಿನಲ್ಲೇ ಧ್ವಜಾರೋಹಣ ಮಾಡಿದ್ದಾರೆ. ಅಲ್ಲದೇ ಅಂಬೇಡ್ಕರ್ ಹಾಗೂ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲು ಮುಂದಾಗಿದ್ದಾರೆ.   ಸಿಬ್ಬಂದಿಗಳು ಹೇಳಿದ ಬಳಿಕ ಉಪ ವಿಭಾಗಾಧಿಕಾರಿ ಮಾಧವ ಗಿತ್ತೆ ಶೂ ಬಿಚ್ಚಿದ್ದಾರೆ. ಶೂವನ್ನ ಸಿಬ್ಬಂದಿಗಳು ಕೈಯಿಂದ ತೆಗೆದು ಬೇರೆಡೆಗೆ ಇಟ್ಟಿದ್ದಾರೆ.   ಮಾಧವ …

Read More »

ಬೀದಿಬದಿ ವ್ಯಾಪಾರಿಗಳಿಗೆ ಸರ್ಕಾರ ಎಲ್ಲ ಸೌಲಭ್ಯ ಒದಗಿಸಲಿ: ಯುವ ನಾಯಕ ರಾಹುಲ್ ಜಾರಕಿಹೊಳಿ

ಬೆಳಗಾವಿ : ಬೀದಿಬದಿ ವ್ಯಾಪಾರಿಗಳು ಮಳೆ, ಗಾಳಿ, ಬಿಸಿಲು ಲೆಕ್ಕಿಸದೇ ರಸ್ತೆ ಬದಿಯಲ್ಲಿ ಕುಳಿತು ವ್ಯಾಪಾರ ಮಾಡುತ್ತಾರೆ, ಅವರ ಆರೋಗ್ಯ, ಬದುಕು, ಭವಿಷ್ಯದ ಬಗ್ಗೆ ಸರ್ಕಾರ ವಿಚಾರ ಮಾಡಿ ಸೌಲಭ್ಯ ಒದಗಿಸಬೇಕು, ಮೊದಲಿನಿಂದಲೂ ನಮ್ಮ ತಂದೆಯವರು, ಬಡವರ ಶೋಷಿತರ ಪರವಾಗಿ ನಿಂತವರು, ನಮ್ಮ ಕುಟುಂಬ ಹಾಗೂ ನಮ್ಮ ತಂದೆ ಸತೀಶ ಜಾರಕಿಹೊಳಿ ಅವರು ಶ್ರಮಿಕ ಬೀದಿಬದಿ ವ್ಯಾಪಾರಿಗಳ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಹೇಳಿದರು. ನಗರದಲ್ಲಿ …

Read More »

ಗೋಕಾಕ : ನಗರದ ಜೆಎಸ್‍ಎಸ್ ಕಾಲೇಜಿನಲ್ಲಿ 13ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಮತದಾರರ ಗುರುತಿನ ಚೀಟಿ ವಿತರಿಸುತ್ತಿರುವ ಗಣ್ಯರು.

ಗೋಕಾಕ: ನಮ್ಮ ದೇಶದ ಮತದಾರರನ್ನು ಸಬಲೀಕರಣ, ಜಾಗೃಕ, ಸುರಕ್ಷಿತ ಮತ್ತು ಮಾಹಿತಿದಾರರನ್ನಾಗಿ ಮಾಡುವುದು. ಚುನಾವಣೆಯ ಸಮಯದಲ್ಲಿ ದೇಶದ ಮತದಾರರ ಸಕ್ರಿಯ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು ಹಾಗೂ ಜವಾಬ್ದಾರಿಯುರ ನಾಗರಿಕರಾಗಲು ಅವರಿಗೆ ಸಹಕರಿಸುವುದು ರಾಷ್ಟ್ರೀಯ ಮತದಾರರ ದಿನದ ಧ್ಯೇಯವಾಗಿದೆ ಎಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮುರಳೀಧರ ದೇಶಪಾಂಡೆ ಹೇಳಿದರು. ಬುಧವಾರದಂದು ನಗರದ ಜೆಎಸ್‍ಎಸ್ ಕಾಲೇಜಿನಲ್ಲಿ ತಾಲೂಕಾಡಳಿತ, ತಾಪಂ, ನಗರಸಭೆ, ಶಿಕ್ಷಣ ಇಲಾಖೆ ಸೇರಿದಂತೆ ಇತರ ಇಲಾಖೆಗಳು ಆಶ್ರಯದಲ್ಲಿ ಹಮ್ಮಿಕೊಂಡ 13ನೇ ರಾಷ್ಟ್ರೀಯ ಮತದಾರರ …

Read More »

ಮೂಡಲಗಿ ತಾಲ್ಲೂಕು ರಡ್ಡಿ ಸಮಾಜಕ್ಕೆ ೨೨ ಗುಂಟೆ ನಿವೇಶನ – ಶಾಸಕ ಬಾಲಚಂದ್ರ ಜಾರಕಿಹೊಳಿ*

  *ಮೂಡಲಗಿ*: ಮೂಡಲಗಿ ತಾಲೂಕಿನ ರಡ್ಡಿ ಸಮಾಜ ಭಾಂದವರಿಗೆ ಸಮುದಾಯ ಭವನ ನಿರ್ಮಿಸಲು ಪುರಸಭೆಯಿಂದ 22 ಗುಂಟೆ ನಿವೇಶನ ನೀಡಲಾಗುವುದು ಎಂದು ಶಾಸಕ ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಭರವಸೆ ನೀಡಿದರು. ಬುಧವಾರದಂದು ಮೂಡಲಗಿ ಪಟ್ಟಣದ ಬಸವ ರಂಗ ಮಂಟಪದಲ್ಲಿ ತಾಲೂಕಾ ಮಟ್ಟದ ರಡ್ಡಿ ಬಳಗ ಹಮ್ಮಿಕೊಂಡಿದ್ದ ದಾರ್ಶನಿಕ ಕವಿ, ಮಹಾಯೋಗಿ ವೇಮನರ 611ನೇ ಜಯಂತ್ಯುತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜ ಬಾಂಧವರು ಈ ಸಮುದಾಯ …

Read More »