ಗೋಕಾಕ: ನಗರದ ಲಕ್ಷ್ಮೀ ಎಜ್ಯುಕೇಶನ್ ಟ್ರಸ್ಟನ ವಿವಿಧ ಅಂಗ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಚರಸಿಲಾದ ಗಣರಾಜ್ಯೋತ್ಸವ ಧ್ವಜಾರೋಹಣವನ್ನು ಪಾಲಿಟೇಕ್ನಿಕನ ಪ್ರಾಚಾರ್ಯ ಎಚ್ ಎಸ್ ಅಡಿಬಟ್ಟಿ ನೆರವೇರಿಸಿದರು. ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ ಹಾಗೂ ವಿವಿಧ ಅಂಗ ಸಂಸ್ಥೆಗಳ ಮುಖ್ಯಸ್ಥರು ಇದ್ದರು.
Read More »ಗೋಕಾಕ: ನಗರದ ಮಯೂರ ಶಾಲೆಯಲ್ಲಿ ಆಚರಿಸಲಾದ….
ಗೋಕಾಕ: ನಗರದ ಮಯೂರ ಶಾಲೆಯಲ್ಲಿ ಆಚರಿಸಲಾದ ಗಣರಾಜ್ಯೋತ್ಸವ ಧ್ವಜಾರೋಹಣವನ್ನು ಆಡಳಿತಾಧಿಕಾರಿ ಎಸ್ ಡಿ ಮುರಗೋಡ ನೆರವೇರಿಸಿದರು. ಮುಖ್ಯೋಪಾಧ್ಯಾಯಿನಿ ಸಿ ಬಿ ಪಾಗದ, ಶಿಕ್ಷಕ ಎನ್ ಕೆ ಮಕಾನದಾರ ಇದ್ದರು.
Read More »ಸಂವಿಧಾನದ ಆಶಯದಂತೆ ಸಹಬಾಳ್ವೆಯಿಂದ ಬದುಕುವಂತಾಗಲಿ: ಸಚಿವ ಗೋವಿಂದ ಕಾರಜೋಳ
ಬೆಳಗಾವಿ: ‘ಸರ್ವಜನಾಂಗದ ಶಾಂತಿಯ ತೋಟ’ವೆಂದು ರಾಷ್ಟಕವಿ ಕುವೆಂಪು ಅವರು ಕರ್ನಾಟಕವನ್ನು ವ್ಯಾಖ್ಯಾನಿಸಿದ್ದಾರೆ. ಇಂತಹ ತೋಟದಲ್ಲಿ ನಾವೆಲ್ಲಾ ಸಾಮರಸ್ಯದಿಂದ ಬೆಳೆದುನಿಂತ ಫಲಪುಷ್ಪಗಳು. ಈ ನೆಲದ ಮಣ್ಣಿನ ಗುಣ, ಗಣತಂತ್ರ ವ್ಯವಸ್ಥೆಯ ಮತ್ತು ಸಂವಿಧಾನದ ಮೂಲ ಆಶಯಗಳನ್ನಿಟ್ಟುಕೊಂಡು ಎಲ್ಲರೂ ಸಹಬಾಳ್ವೆಯಿಂದ ಬದುಕಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ನೀರಾವರಿ ಸಚಿವ ಗೋವಿಂದ ಕಾರಜೋಳ ಹೇಳಿದರು. ಅವರು ನಗರದಲ್ಲಿ ಗಣರಾಜ್ಯೋತ್ಸವ ನಿಮಿತ್ತ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಗಣರಾಜ್ಯ ದಿನವು ದೇಶದ ನಾಗರಿಕರಿಗೆ ತನ್ನ ರಾಷ್ಟ್ರದ …
Read More »ಬೆಳಗಾವಿ : ಧ್ವಜಾರೋಹಣದ ವೇಳೆ ಎಡವಟ್ಟು ಮಾಡಿಕೊಂಡ ಚಿಕ್ಕೋಡಿ ಉಪ ವಿಭಾಗಾಧಿಕಾರಿ.!
ಚಿಕ್ಕೋಡಿ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪ ವಿಭಾಗಾಧಿಕಾರಿ ಮಾಧವ ಗಿತ್ತೆ ಧ್ವಜಾರೋಹಣ ವೇಳೆ ಭಾರೀ ಎಡವಟ್ಟು ಮಾಡಿಕೊಂಡಿದ್ದಾರೆ. ಧ್ವಜಾರೋಹಣ ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದಲ್ಲದೆ, ತರಾತುರಿಯಲ್ಲಿ ಬೂಟು ಕಾಲಿನಲ್ಲೇ ಧ್ವಜಾರೋಹಣ ಮಾಡಿದ್ದಾರೆ. ಅಲ್ಲದೇ ಅಂಬೇಡ್ಕರ್ ಹಾಗೂ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲು ಮುಂದಾಗಿದ್ದಾರೆ. ಸಿಬ್ಬಂದಿಗಳು ಹೇಳಿದ ಬಳಿಕ ಉಪ ವಿಭಾಗಾಧಿಕಾರಿ ಮಾಧವ ಗಿತ್ತೆ ಶೂ ಬಿಚ್ಚಿದ್ದಾರೆ. ಶೂವನ್ನ ಸಿಬ್ಬಂದಿಗಳು ಕೈಯಿಂದ ತೆಗೆದು ಬೇರೆಡೆಗೆ ಇಟ್ಟಿದ್ದಾರೆ. ಮಾಧವ …
Read More »ಬೀದಿಬದಿ ವ್ಯಾಪಾರಿಗಳಿಗೆ ಸರ್ಕಾರ ಎಲ್ಲ ಸೌಲಭ್ಯ ಒದಗಿಸಲಿ: ಯುವ ನಾಯಕ ರಾಹುಲ್ ಜಾರಕಿಹೊಳಿ
ಬೆಳಗಾವಿ : ಬೀದಿಬದಿ ವ್ಯಾಪಾರಿಗಳು ಮಳೆ, ಗಾಳಿ, ಬಿಸಿಲು ಲೆಕ್ಕಿಸದೇ ರಸ್ತೆ ಬದಿಯಲ್ಲಿ ಕುಳಿತು ವ್ಯಾಪಾರ ಮಾಡುತ್ತಾರೆ, ಅವರ ಆರೋಗ್ಯ, ಬದುಕು, ಭವಿಷ್ಯದ ಬಗ್ಗೆ ಸರ್ಕಾರ ವಿಚಾರ ಮಾಡಿ ಸೌಲಭ್ಯ ಒದಗಿಸಬೇಕು, ಮೊದಲಿನಿಂದಲೂ ನಮ್ಮ ತಂದೆಯವರು, ಬಡವರ ಶೋಷಿತರ ಪರವಾಗಿ ನಿಂತವರು, ನಮ್ಮ ಕುಟುಂಬ ಹಾಗೂ ನಮ್ಮ ತಂದೆ ಸತೀಶ ಜಾರಕಿಹೊಳಿ ಅವರು ಶ್ರಮಿಕ ಬೀದಿಬದಿ ವ್ಯಾಪಾರಿಗಳ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಹೇಳಿದರು. ನಗರದಲ್ಲಿ …
Read More »ಗೋಕಾಕ : ನಗರದ ಜೆಎಸ್‍ಎಸ್ ಕಾಲೇಜಿನಲ್ಲಿ 13ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಮತದಾರರ ಗುರುತಿನ ಚೀಟಿ ವಿತರಿಸುತ್ತಿರುವ ಗಣ್ಯರು.
ಗೋಕಾಕ: ನಮ್ಮ ದೇಶದ ಮತದಾರರನ್ನು ಸಬಲೀಕರಣ, ಜಾಗೃಕ, ಸುರಕ್ಷಿತ ಮತ್ತು ಮಾಹಿತಿದಾರರನ್ನಾಗಿ ಮಾಡುವುದು. ಚುನಾವಣೆಯ ಸಮಯದಲ್ಲಿ ದೇಶದ ಮತದಾರರ ಸಕ್ರಿಯ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು ಹಾಗೂ ಜವಾಬ್ದಾರಿಯುರ ನಾಗರಿಕರಾಗಲು ಅವರಿಗೆ ಸಹಕರಿಸುವುದು ರಾಷ್ಟ್ರೀಯ ಮತದಾರರ ದಿನದ ಧ್ಯೇಯವಾಗಿದೆ ಎಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮುರಳೀಧರ ದೇಶಪಾಂಡೆ ಹೇಳಿದರು. ಬುಧವಾರದಂದು ನಗರದ ಜೆಎಸ್‍ಎಸ್ ಕಾಲೇಜಿನಲ್ಲಿ ತಾಲೂಕಾಡಳಿತ, ತಾಪಂ, ನಗರಸಭೆ, ಶಿಕ್ಷಣ ಇಲಾಖೆ ಸೇರಿದಂತೆ ಇತರ ಇಲಾಖೆಗಳು ಆಶ್ರಯದಲ್ಲಿ ಹಮ್ಮಿಕೊಂಡ 13ನೇ ರಾಷ್ಟ್ರೀಯ ಮತದಾರರ …
Read More »ಮೂಡಲಗಿ ತಾಲ್ಲೂಕು ರಡ್ಡಿ ಸಮಾಜಕ್ಕೆ ೨೨ ಗುಂಟೆ ನಿವೇಶನ – ಶಾಸಕ ಬಾಲಚಂದ್ರ ಜಾರಕಿಹೊಳಿ*
*ಮೂಡಲಗಿ*: ಮೂಡಲಗಿ ತಾಲೂಕಿನ ರಡ್ಡಿ ಸಮಾಜ ಭಾಂದವರಿಗೆ ಸಮುದಾಯ ಭವನ ನಿರ್ಮಿಸಲು ಪುರಸಭೆಯಿಂದ 22 ಗುಂಟೆ ನಿವೇಶನ ನೀಡಲಾಗುವುದು ಎಂದು ಶಾಸಕ ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಭರವಸೆ ನೀಡಿದರು. ಬುಧವಾರದಂದು ಮೂಡಲಗಿ ಪಟ್ಟಣದ ಬಸವ ರಂಗ ಮಂಟಪದಲ್ಲಿ ತಾಲೂಕಾ ಮಟ್ಟದ ರಡ್ಡಿ ಬಳಗ ಹಮ್ಮಿಕೊಂಡಿದ್ದ ದಾರ್ಶನಿಕ ಕವಿ, ಮಹಾಯೋಗಿ ವೇಮನರ 611ನೇ ಜಯಂತ್ಯುತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜ ಬಾಂಧವರು ಈ ಸಮುದಾಯ …
Read More »ಗೋಕಾಕ : ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ.!
ಗೋಕಾಕ : ಗೋಕಾಕ ತಾಲೂಕಿನ ವಾಲ್ಮೀಕಿ ನಗರದಲ್ಲಿ ಕುಡಿದ ಅಮಲಿನಲ್ಲಿ ಅಣ್ಣ ತಮ್ಮಂದಿರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಕುಡಿದ ಅಮಲಿನಲ್ಲಿ ತಿಲಕ ಎಂಬಾತ ಚೇತನ ಎಂಬ ಯುವಕನನ್ನು ಕೊಲೆ ಮಾಡಿದ್ದಾನೆ. ಗೋಕಾಕ ಫಾಲ್ಸ್ ನ ಸಮೀಪವಿರುವ ವಾಲ್ಮೀಕಿ ನಗರದಲ್ಲಿ ಇಬ್ಬರು ಒಂದೇ ಮನೆಯಲ್ಲಿ ವಾಸವಾಗಿದ್ದರು. ಇಬ್ಬರು ಕುಡಿದ ಅಮಲಿನಲ್ಲಿ ಜಗಳ ಮಾಡಿಕೊಂಡಿದ್ದಾರೆ. ಈ ವೇಳೆ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಗೋಕಾಕ ಗ್ರಾಮೀಣ ಪೊಲೀಸ್ …
Read More »ಖಾನಾಪುರ: ವೃದ್ಧೆಗೆ ನ್ಯುಮೋನಿಯಾ- ಜಿಲ್ಲಾಸ್ಪತ್ರೆಗೆ ದಾಖಲು
ಖಾನಾಪುರ ತಾಲ್ಲೂಕಿನ ನಾವಗಾ ಹೊರವಲಯದ ಅರಣ್ಯದಲ್ಲಿ ಸೋಮವಾರ ಪತ್ತೆಯಾದ 90 ವರ್ಷದ ವೃದ್ಧೆ ನ್ಯುಮೋನಿಯಾದಿಂದ ಬಳಲುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ. ‘ತೀವ್ರ ನಿತ್ರಾಣಗೊಂಡ ಅಜ್ಜಿ ಸರಿಯಾಗಿ ಮಾತನಾಡುವಷ್ಟು ಚೇತರಿಸಿಕೊಂಡಿಲ್ಲ. ತನ್ನ ಹೆಸರು ಅಂಬವ್ವ ಕಾಟಗಾರಿ, ಊರಿನ ಹೆಸರು ಉಗರಖೋಡ ಎಂದಷ್ಟೇ ಹೇಳಿದ್ದಾರೆ. ಅವರ ಗುರುತು ಪತ್ತೆಗೆ ಯತ್ನ ನಡೆದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ‘ನಾಲ್ಕೈದು ದಿನಗಳಿಂದ ಅನ್ನ-ನೀರು ಸೇವಿಸದೇ ಚಳಿಯಲ್ಲಿ ಬಿದ್ದಿದ್ದರಿಂದ ಅಜ್ಜಿ ದೇಹ …
Read More »ಛತ್ರಪತಿ ಶಿವಾಜಿ, ಹಿಂದೂ ದೇವತೆಗಳ ಅಶ್ಲೀಲ ಚಿತ್ರಣ: ಜಾಲತಾಣದಲ್ಲಿ ಪೋಸ್ಟ್
ಬೆಳಗಾವಿ: ಛತ್ರಪತಿ ಶಿವಾಜಿ ಹಾಗೂ ಹಿಂದೂ ದೇವತೆಗಳ ಚಿತ್ರಗಳಿಗೆ ಅಶ್ಲೀಲ ಚಿತ್ರಗಳನ್ನು ಅಂಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಈ ಚಿತ್ರಗಳು ಮಂಗಳವಾರ ನಗರದ ಹಲವರ ಮೊಬೈಲ್‌ಗಳಿಗೂ ಬಂದಿವೆ. ಸಾಮಾಜಿಕ ಜಾಲತಾಣಗಳಲ್ಲಿ ಇಸ್ಲಾಮ್ ಜಿಂದಾಬಾದ್ 786, ಕಿಂಗ್ ಕಿ ಜಾನ್, ಇಟ್ಸ್ ಅರ್ಮಾನ್ ಟೈಗರ್, ಆರ್.ಎಕ್ಸ್.ಇಮ್ರಾನ್, ಪ್ರಸಾದ್… ಎಂಬ ಹೆಸರಿನ ಖಾತೆಗಳಲ್ಲಿ ಈ ಪೋಸ್ಟರ್‌ಗಳು ಅಪ್ಲೋಡ್ ಆಗಿವೆ. ಕೆಲವು ಎರಡು ದಿನಗಳ ಹಿಂದೆ ಅಪ್ಲೋಡ್ ಮಾಡಿದ್ದು, ಇನ್ನು ಕೆಲವನ್ನು ಮಂಗಳವಾರವೇ ಹಾಕಲಾಗಿದೆ. ಈ …
Read More »