ಬೆಳಗಾವಿ-: ಜಿಲ್ಲೆಯ ಕಣಬರ್ಗಿ ಗ್ರಾಮದ ಆರಾಧ್ಯ ದೇವರಾದ ಶ್ರೀ ಸಿದ್ದೇಶ್ವರ ಮಂದಿರದ ಪುರಾತನ ಕಟ್ಟಡವನ್ನು ಜಿರ್ಣೋದ್ದಾರ ಮಾಡಿ ನವೀಕೃತ ಕಟ್ಟಡ ನಿರ್ಮಿಸಲಾಗಿದೆ. ಕಟ್ಟಡ ಕಾಮಗಾರಿಗೆ ಅನೇಕ ಭಕ್ತರು ಸಹ ಉದಾರವಾಗಿ ದೇಣಿಗೆಯನ್ನು ನೀಡಿದ್ದಾರೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. ದೇವಾಲಯದ ನವೀಕೃತ ಭವ್ಯ ಕಟ್ಟಡದ ಭವ್ಯ ಉದ್ಘಾಟನಾ, ವಾಸ್ತುಶಾಂತಿ ಹಾಗೂ ಕಳಸಾರೋಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಶ್ರೀ ಸಿದ್ಧೇಶ್ವರ ವ್ಯವಸ್ಥಾಪಕ ಮಂಡಳಿ ಕಣಬರ್ಗಿ ಹಾಗೂ ಶ್ರೀ ಸಿದ್ದೇಶ್ವರ …
Read More »ಹಾಸನ ಕ್ಷೇತ್ರಕ್ಕೆ ಭವಾನಿ ರೇವಣ್ಣ ಅನಿವಾರ್ಯವಲ್ಲ: ಹೆಚ್ ಡಿಕೆ ಪುನರುಚ್ಚಾರ
ಬೆಳಗಾವಿ: ಹಾಸನ ಟಿಕೆಟ್ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಮುಖ್ಯವಾಗಿ ಭವಾನಿ ರೇವಣ್ಣ ಅವರು ಈ ಚುನಾವಣೆಯಲ್ಲಿ ಅನಿವಾರ್ಯ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ.ಕುಮಾರಸ್ವಾಮಿ ಮತ್ತೊಮ್ಮೆ ಸ್ಪಷ್ಟಪಡಿಸಿದರು. ಹಾಸನ ಟಿಕೆಟ್ ವಿಚಾರ ಇನ್ನೊಂದು ವಾರದಲ್ಲಿ ಬಗೆಹರಿಯಲಿದೆ. ಚುನಾವಣೆ ಗೆಲ್ಲಬೇಕಾದ ಹಿನ್ನಲೆಯಲ್ಲಿ ನಾವು ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ ಎಂದರು. ನಮಗೆ 30 ರಿಂದ 40 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಕೊರತೆ ಇದೆ. ಈ ಕೊರತೆ ತುಂಬಿಕೊಳ್ಳಲು ಜನರ ವಿಶ್ವಾಸ ಪಡೆದುಕೊಳ್ಳುವ ಹೊಸ …
Read More »ರಾಮಕೃಷ್ಣ ಹೆಗಡೆಯನ್ನ ಮುಖ್ಯಮಂತ್ರಿ ಮಾಡಲು ಹೋಗಿ ದೇವೇಗೌಡರು ಜುಬ್ಬ ಹರಿಸಿಕೊಂಡು ಬಂದರು’
ರಾಮಕೃಷ್ಣ ಹೆಗಡೆಯನ್ನ ಮುಖ್ಯಮಂತ್ರಿ ಮಾಡಿದ್ದು ದೇವೇಗೌಡರು, ರಾಮಕೃಷ್ಣ ಹೆಗಡೆಯನ್ನ ಮುಖ್ಯಮಂತ್ರಿ ಮಾಡಲು ಹೋಗಿ ಬಂಗಾರಪ್ಪನವರ ಮನೆಯಲ್ಲಿ ದೇವೇಗೌಡರು ಜುಬ್ಬ ಹರಿಸಿಕೊಂಡು ಬಂದಿದ್ದಾರೆ. ಗೋಕರ್ಣ/ ಹಾಸನ: ರಾಮಕೃಷ್ಣ ಹೆಗಡೆಯನ್ನ ಮುಖ್ಯಮಂತ್ರಿ ಮಾಡಿದ್ದು ದೇವೇಗೌಡರು, ರಾಮಕೃಷ್ಣ ಹೆಗಡೆಯನ್ನ ಮುಖ್ಯಮಂತ್ರಿ ಮಾಡಲು ಹೋಗಿ ಬಂಗಾರಪ್ಪನವರ ಮನೆಯಲ್ಲಿ ದೇವೇಗೌಡರು ಜುಬ್ಬ ಹರಿಸಿಕೊಂಡು ಬಂದಿದ್ದಾರೆ. ರಾಜಕೀಯ ಗೊತ್ತಿಲ್ಲದ ನಳಿನ್ ಕುಮಾರ್ ಕಟೀಲ್ಗೆ ತಿಳುವಳಿಕೆ ಇಲ್ಲ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಗೋಕರ್ಣದ ಮಹಾಬಲೇಶ್ವರ ದೇವಾಲಯದಲ್ಲಿ …
Read More »ಅಧಿವೇಶನ: ಪೂರ್ಣ ಕಲಾಪ ಅನುಮಾನ
ಬೆಂಗಳೂರು: ಪಕ್ಷದ ಪರ ಅಲೆ ಎಬ್ಬಿಸಲು ವಿವಿಧ ಕಡೆಗಳಲ್ಲಿ ಯಾತ್ರೆ ನಡೆಸುತ್ತಿರುವ ನಾಯಕರು, ಮತ್ತೊಮ್ಮೆ ಗೆಲ್ಲಲೇಬೇಕೆಂಬ ಹಟಕ್ಕೆ ಬಿದ್ದಿರುವ ಎಲ್ಲ ಪಕ್ಷದ ಶಾಸಕರು ಕ್ಷೇತ್ರದಲ್ಲೇ ಬೆವರು ಹರಿಸುತ್ತಿರುವುದರಿಂ ದಾಗಿ 15 ನೇ ವಿಧಾನಸಭೆಯ ಕೊನೆಯ ಅಧಿವೇಶನದ ಕಲಾಪ ನಿಗದಿಯಾದಷ್ಟು ದಿನ ನಡೆಯುವುದೇ ಅನುಮಾನ. ಈ ಅಧಿವೇಶನ ಮುಗಿದ ತಿಂಗಳಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗಲಿದೆ. ಮುಂದೆಯೂ ತಮ್ಮ ಸ್ಥಾನ ಭದ್ರ ಪಡಿಸಿಕೊಳ್ಳುವ ಸಲುವಾಗಿ ಶಾಸಕರು ಹರಸಾಹಸ ಪಡುತ್ತಿದ್ದು, ಕ್ಷೇತ್ರದಲ್ಲೇ ಮೊಕ್ಕಾಂ …
Read More »ಬಳ್ಳಾರಿಯಲ್ಲಿ 20 ಜನರ ಮೇಲೆ ಬೀದಿ ನಾಯಿ ದಾಳಿ, ನಾಲ್ವರು ಐಸಿಯುಗೆ ದಾಖಲು
ಬಳ್ಳಾರಿಯಲ್ಲಿ ರೇಬಿಸ್ ಸೋಂಕಿತ ನಾಯಿಯೊಂದು ಎರಡು ಮಕ್ಕಳನ್ನು ಮಾರಣಾಂತಿಕವಾಗಿ ಕಚ್ಚಿದ ಎರಡು ತಿಂಗಳ ನಂತರ, ಬೀದಿ ನಾಯಿಗಳ ಗುಂಪೊಂದು ನಗರದ ಮೂರು ವಿವಿಧ ಸ್ಥಳಗಳಲ್ಲಿ 20 ಜನರ ಮೇಲೆ ದಾಳಿ ಮಾಡಿದೆ. ಬಳ್ಳಾರಿ: ಬಳ್ಳಾರಿಯಲ್ಲಿ ರೇಬಿಸ್ ಸೋಂಕಿತ ನಾಯಿಯೊಂದು ಎರಡು ಮಕ್ಕಳನ್ನು ಮಾರಣಾಂತಿಕವಾಗಿ ಕಚ್ಚಿದ ಎರಡು ತಿಂಗಳ ನಂತರ, ಬೀದಿ ನಾಯಿಗಳ ಗುಂಪೊಂದು ನಗರದ ಮೂರು ವಿವಿಧ ಸ್ಥಳಗಳಲ್ಲಿ 20 ಜನರ ಮೇಲೆ ದಾಳಿ ಮಾಡಿದೆ. ನಾಯಿ ಕಚ್ಚಿದ ನಾಲ್ಕು …
Read More »ಗ್ರಾಮ ಪಂಚಾಯತಿ ಉಪ ಚುನಾವಣೆ: ಅಧಿಸೂಚನೆ ಪ್ರಕಟ: ನಿತೇಶ್ ಪಾಟೀಲ
ಬೆಳಗಾವಿ : ಬೆಳಗಾವಿ ಜಿಲ್ಲೆಗೆ ಸಂಭಂದಿಸಿದಂತೆ ವಿವಿಧ ಕಾರಣಗಳಿಂದ ಖಾಲಿ ಇರುವ/ತೆರವಾಗಿರುವ ಗ್ರಾಮ ಪಂಚಾಯತಿ ಸದಸ್ಯ ಸ್ಥಾನಗಳನ್ನು ಭರ್ತಿ ಮಾಡಲು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಉಪ ಚುನಾವಣೆ -2023 ರ ಅಧಿಸೂಚನೆಯನ್ನು ಹೊರಡಿಸಿದ್ದಾರೆ. ರಾಮದುರ್ಗ ತಾಲೂಕಿನ ನರಸಾಪುರ 1 ಸದಸ್ಯ ಸ್ಥಾನ, ಬೆಳಗಾವಿ ತಾಲೂಕಿನ ಬೆಳಗುಂದಿ, ಹಿರೇಬಾಗೇವಾಡಿ, ಮೋದಗಾ ತಲಾ 1, ಖಾನಾಪುರ 1, ಕಾಗವಾಡ ತಾಲೂಕಿನ ಉಗಾರ ಬದ್ರುಕ 1, ಗೋಕಾಕ್ ತಾಲೂಕಿನ ನಲ್ಲಾನಟ್ಟಿ 1 ಸದಸ್ಯ …
Read More »ಚಿಕ್ಕೋಡಿ: ಸಂಬಂಧಿಯನ್ನೇ ಕೊಲೆಗೈದ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ
ಚಿಕ್ಕೋಡಿ: ಸಂಬಂಧಿಕ ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪಿಗೆ ಚಿಕ್ಕೋಡಿ 7 ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು 18 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದೆ. ಅಥಣಿ ತಾಲೂಕಿನ ತೇವರಟ್ಟಿ ಗ್ರಾಮದ ಆರೋಪಿ ಭೀಮಣ್ಣಾ ಭರಮು ಚಿಪ್ಪರಗಿ ಇತನಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ನೀಡಿದೆ. ಕಳೆದ 2007 ರಂದು ಅಣ್ಣಪ್ಪ ನೇಮಣ್ಣಾ ಚಿಪ್ಪರಗಿ ಕೊಲೆಯಾದ ವ್ಯಕ್ತಿ. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. …
Read More »ಕರ್ನಾಟಕ ವಿದ್ಯಾವರ್ಧಕ ಸಂಘ: 12 ಲೇಖಕಿಯರಿಗೆ ರತ್ನಮ್ಮ ಹೆಗ್ಗಡೆ ಪ್ರಶಸ್ತಿ
ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘವು ಮಹಿಳಾ ಸಾಹಿತ್ಯಕ್ಕೆ ನೀಡುವ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನವು ನಾಲ್ಕು ವರ್ಷಗಳ ಅವಧಿಗೆ 12 ಲೇಖಕಿಯರಿಗೆ ಲಭಿಸಿದೆ. 2018ರಿಂದ 2021ರವರೆಗೆ ಒಟ್ಟು 115 ಕೃತಿಗಳು ಆಯ್ಕೆಯಾಗಿ ಬಂದಿದ್ದವು. ನಿರ್ಣಾಯಕರು ಪ್ರತಿ ಸಾಲಿನಲ್ಲಿ ಮೂರು ಕೃತಿಗಳಂತೆ ಆಯ್ಕೆ ಮಾಡಿ ಒಟ್ಟು 12 ಕೃತಿಗಳಿಗೆ ಬಹುಮಾನ ನೀಡಿದ್ದಾರೆ. 2018ನೇ ಸಾಲಿನಲ್ಲಿ ಬೆಂಗಳೂರಿನ ಉಮಾ ಮುಕುಂದ ಅವರ ‘ಕಡೆ ನಾಲ್ಕು ಸಾಲು’ ಕವನ ಸಂಕಲನ, ಕೊಪ್ಪದ ದೀಪಾ …
Read More »ರಾಜ್ಯದ ಮುಖ್ಯಮಂತ್ರಿ ಆಗುವುದಿದ್ದರೆ ಅದು ಸತೀಶ ಜಾರಕಿಹೊಳಿಯವರು ಮಾತ್ರ: ಚನ್ನರಾಜ ಹಟ್ಟಿಹೊಳಿ
ಬೆಳಗಾವಿ: ಮುಂಬರುವ ದಿನಗಳಲ್ಲಿ ಉತ್ತರ ಕರ್ನಾಟಕ ಭಾಗದಿಂದ ಯಾರಾದರೂ ರಾಜ್ಯದ ಮುಖ್ಯಮಂತ್ರಿ ಆಗುವುದಿದ್ದರೆ ಅದು ಸತೀಶ ಜಾರಕಿಹೊಳಿಯವರು ಮಾತ್ರ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು. ಅವರು ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ತಾರೀಹಾಳ ಗ್ರಾಮದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಘಟಕಗಳ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಪಕ್ಷವನ್ನು ಜಿಲ್ಲೆಯಲ್ಲಿ ಬಲಪಡಿಸಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ …
Read More »ಸಂತೋಷ್ ಅಣ್ಣಾ ಜಾರಕಿಹೊಳಿ ಅವರ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ನಿಂದ ಈ ವರ್ಷದ ಕ್ಯಾಲೆಂಡರ್ ವಿತರಣೆ
: ಗೋಕಾಕ: ಗೋಕಾಕ ಶ್ರೀ ಸಂತೋಷ್ ಅಣ್ಣಾ ಜಾರಕಿಹೊಳಿ ಅವರ್ ಒಡೆತನದ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಡಿಂದ ಹೊಸ ವರ್ಷದ ಕ್ಯಾಲೆಂಡರ್ ವಿತರಣೆ ಮಾಡಿದ್ದಾರೆ. ಪ್ರತಿ ವರ್ಷ ದಂತೆ ಈ ವರ್ಷವೂ ಕೂಡ ಟೇಬಲ್ ಕ್ಯಾಲೆಂಡರ್, ಡೈರಿ ಕೂಡ ಎಲ್ಲ ವಿವಿಧ ಗ್ರಾಮ ಪಂಚಾಯತಿ ಗಳಿಗೆ, KSRTC ಕಚೇರಿ ಗಳಿಗೆ, ತಹಸೀಲ್ದಾರ ಆಫೀಸ್ ಗಳನ್ನ್ ಸೇರಿ ನಗರದ ಹಾಗೂ ಗೋಕಾಕ ನ ವಿವಿಧ ಗ್ರಾಮ ಗಳಲ್ಲಿ ವಿತರಣೆ ಮಾಡಿದ್ದಾರೆ.
Read More »
Laxmi News 24×7