Breaking News

ಬೆಳಗಾವಿ

ಶ್ರೇಷ್ಠ ಫೌಂಡೇಶನ್ ಅನ್ನಸಂತರ್ಪಣೆ ಕಾರ್ಯಕ್ಕೆ ಶತಕದ ಸಂಭ್ರಮ; ಸಂತೋಷ ಜಾರಕಿಹೊಳಿ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ

ಗೋಕಾಕ: ಗೋಕಾಕ ನಗರ ಅಂದ್ರೆ ಮೊದಲಿಗೆ ನೆನಪಾ ಗೋದೆ ಜಾರಕಿಹೊಳಿ ಸಹೋದರರು. ಜಾರಕಿಹೊಳಿ ಸಹೋದರರು ಬೇರೆ ಬೇರೆ ಪಕ್ಷ ಗಳಲ್ಲಿ ಇದ್ರು ಅವರ್ ಅವರ್ ಕಾರ್ಯ ವೈಖರಿ ಬೇರೆ ಬೇರೆ ಇದೆ . ಹಲವಾರು ಸಾಮಾಜಿಕ ಸಾಂಸ್ಕೃತಿಕ, ಕಾರ್ಯ ಕ್ರಮ ಗಳನ್ನ ಅವರು ಆವಾಗಾವಾಗ ಹಮ್ಮಿ ಕೊಳ್ಳುತ್ತಲೆ ಇರುತ್ತಾರೆ. ಇನ್ನು ಅವರ್ ಪುತ್ರರು ಕೂಡ ವಿವಿಧ ರೀತಿಯ ಸಾಮಾಜಿಕ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ಮಹತ್ವ ವನ್ನಾ ಕೊಡುತ್ತಾ ಬಂದಿದ್ದಾರೆ …

Read More »

ಮುಂಬೈನಲ್ಲಿ ಎಂಇಎಸ್‌ ಕಿತಾಪತಿ; ಕರ್ನಾಟಕ ಸರ್ಕಾರದ ವಿರುದ್ಧ ಮಹಾರಾಷ್ಟ್ರದಲ್ಲಿ ಪ್ರತಿಭಟನೆ

ಬೆಳಗಾವಿ: ಈಗಾಗಲೇ ಎಲ್ಲ ಚುನಾವಣೆಯಲ್ಲಿಯೂ ಸೋತು ಸುಣ್ಣವಾಗಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್‌) ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮತ್ತೆ ಬಾಲ ಬಿಚ್ಚಿದ್ದು, ಕರ್ನಾಟಕದಲ್ಲಿ ಬೇಳೆ ಬೇಯುತ್ತಿಲ್ಲ ಎಂದು ಮುಂಬೈನಲ್ಲಿ ಮಹಾರಾಷ್ಟ್ರ ಸರ್ಕಾರದ ಬಾಗಿಲು ತಟ್ಟಿದೆ.   ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಹೇಗಾದರೂ ಮಾಡಿ ಗೆಲ್ಲಬೇಕೆಂಬ ಹಠಕ್ಕೆ ಬಿದ್ದಿರುವ ಎಂಇಎಸ್‌ ಗಡಿ ವಿವಾದವನ್ನೇ ಅಸ್ತ್ರವಾಗಿ ಇಟ್ಟುಕೊಂಡು ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ಮಂಗಳವಾರ ಆಂದೋಲನ ನಡೆಸಿದೆ. ಬೆಳಗಾವಿಯಲ್ಲಿ ನಾಲ್ಕು ಸ್ಥಾನ ಗೆಲ್ಲಲು ಪ್ಲಾನ್‌ ಮಾಡಿಕೊಂಡು …

Read More »

ಮೋದಿ ಸಾವು ಯಾರೂ ಬಯಸಿಲ್ಲ ಸಾವಿಗೆ ಕಾಂಗ್ರೆಸ್‌ ಜಪ ಮಾಡುತ್ತಿದೆ ಎಂಬುದು ದೊಡ್ಡ ಸುಳ್ಳು: ಸಿದ್ದರಾಮಯ್ಯ

ಬೆಳಗಾವಿ: ‘ಪ್ರಧಾನಿ ನರೇಂದ್ರ ಮೋದಿ ಅವರ ಸಾವಿಗೆ ಕಾಂಗ್ರೆಸ್‌ ಜಪ ಮಾಡುತ್ತಿದೆ ಎಂಬುದು ದೊಡ್ಡ ಸುಳ್ಳು. ಈ ರೀತಿ ಯಾರೂ ಎಲ್ಲಿಯೂ ಹೇಳಿಲ್ಲ. ತಮ್ಮಷ್ಟಕ್ಕೆ ತಾವೇ ಇಂಥ ಭಾವುಕ ಸನ್ನಿವೇಶ ಹುಟ್ಟುಹಾಕುವುದು ಅವರಿಗೆ ಕರಗತ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.   ‘ಸಿದ್ದರಾಮಯ್ಯನನ್ನು ಮುಗಿಸಿಬಿಡಿ ಎಂದು ಅಶ್ವತ್ಥನಾರಾಯಣ ಬಹಿರಂಗವಾಗಿ ಹೇಳಿದರು. ನಮ್ಮ ಭಾವನೆಗಳು ಅವರಷ್ಟು ಕೆಟ್ಟದಾಗಿಲ್ಲ. ಪ್ರಧಾನಿ ಆರೋಗ್ಯವಾಗಿರಲಿ, ಹೆಚ್ಚು ಕಾಲ ಬದುಕಲಿ’ ಎಂದು ಅವರು ನಗರದಲ್ಲಿ ಬುಧವಾರ ಮಾಧ್ಯಮದವರ …

Read More »

ಮಲ್ಲಮ್ಮನ ಪ್ರತಿಮೆ ಲೋಕಾರ್ಪಣೆ ನಿರ್ಲಕ್ಷ್ಯ, ತೀವ್ರ ಪ್ರತಿಭಟನೆ

ಬೈಲಹೊಂಗಲ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದ ವೃತ್ತದಲ್ಲಿ ಪ್ರತಿಷ್ಠಾಪಿಸಿದ ಅಶ್ವಾರೂಢ ಕಂಚಿನ ಪ್ರತಿಮೆ ಅನಾವರಣ ಸಂಬಂಧವಾಗಿ ಮಂಗಳವಾರ ರಾತ್ರಿ ಗ್ರಾಮದಲ್ಲಿ ತೀವ್ರ ವಾಗ್ವಾದ ನಡೆಯಿತು. ಬೆಳವಡಿ ಮಲ್ಲಮ್ಮನ ಉತ್ಸವ ಮೆರವಣಿಗೆ ಬೆಳಿಗ್ಗೆಯೇ ನಡೆಯಿತು. ಇದಕ್ಕೂ ಮುನ್ನ ಪ್ರತಿಮೆ ಅನಾವರಣ ಕಾರ್ಯಕ್ರಮ ಇತ್ತು. ಆದರೆ, ಜಿಲ್ಲಾ ಉಸ್ತುವಾರಿ ಸಚಿವರೂ ಸೇರಿದಂತೆ ಯಾವೊಬ್ಬ ಜನಪ್ರತಿನಿಧಿ, ಅಧಿಕಾರಿಯೂ ಬರಲಿಲ್ಲ. ಇದರಿಂದ ಅನಾವರಣ ಕಾರ್ಯಕ್ರಮವನ್ನು ಮುಂದಕ್ಕೆ ಹಾಕುತ್ತ ಬರಲಾಯಿತು. ರಾತ್ರಿ 8ರ ನಂತರ ಸಂಸದೆ …

Read More »

ಬೆಳಗಾವಿ: ಮಾರ್ಚ್‌ 1ರಂದು ಸಿದ್ದರಾಮಯ್ಯ ‘ಪ್ರಜಾಧ್ವನಿ’ ಯಾತ್ರೆ

ಬೆಳಗಾವಿ: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ‘ಪ್ರಜಾಧ್ವನಿ’ ಯಾತ್ರೆಯ ಅಂಗವಾಗಿ ಮಾರ್ಚ್‌ 1ರಂದು ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಪಂತಬಾಳೆಕುದ್ರಿಯಲ್ಲಿ ಸಮಾವೇಶ ನಡೆಯಲಿದೆ.   ಬೆಳಿಗ್ಗೆ 10 ಗಂಟೆಗೆ ಶಿಂಧೋಳಿಯಿಂದ ಮೆರವಣಿಗೆ ನಡೆಯಲಿದೆ. 5 ಸಾವಿರ ಬೈಕುಗಳ ಸಮೇತ ಯುವಜನರು ಮೆರವಣಿಗೆಯಲ್ಲಿ ಪಾಲ್ಗೊಳ್ಳುವರು. ಅಲ್ಲಿಂದ ಪಂತಬಾಳೆಕುಂದ್ರಿಯ ವೈರ್‌ಲೆಸ್ ಮೈದಾನಕ್ಕೆ ತೆರಳಿ ಅಲ್ಲಿ ಸಮಾವೇಶ ನಡೆಸಲಾಗುವುದು. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, …

Read More »

ಚಿಕ್ಕೋಡಿ: ಆಲಿಸಿದ ಪಾಠ ಅರಿತು ಬಾಳಿರಿ

ಚಿಕ್ಕೋಡಿ: ‘ಸುಮಂಗಲಮ್ ಪಂಚಮಹಾಭೂತ ಲೋಕೋತ್ಸವ ಕೇವಲ ಉತ್ಸವವಾಗದೇ, ಇಲ್ಲಿ ಆಲಿಸಿದ, ವೀಕ್ಷಿಸಿದ ಎಲ್ಲ ಪಾಠವನ್ನು ಜೀವನದಲ್ಲಿ ಅಳವಡಿಸಿಕೊಂಡು ಪರಿಸರ ಸಮತೋಲನ ಕಾಪಾಡುವ ಮೂಲಕ ಮುಂದಿನ ಪೀಳಿಗೆಗೆ ಸ್ವಚ್ಛ ಪರಿಸರ ಉಳಿಸಬೇಕು’ ಎಂದು ಕೊಲ್ಹಾಪುರದ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಹೇಳಿದರು.   ಮಠದಲ್ಲಿ ಭಾನುವಾರ ಉತ್ಸವದ ಸಮಾರೋಪದ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ‘ಮನುಷ್ಯನಿಗಿಂತ ಮರೆಗುಳಿತನ ಹೊಂದಿರುವ ಜೀವಿ ಇನ್ನೊಂದಿಲ್ಲ. ವಿನಾಶ ಕಾಲ ಸಮೀಪಿಸುತ್ತಿದೆ ಎಂಬುದು ಮನುಕುಲ …

Read More »

ಬೆಳಗಾವಿಗರ ಪ್ರೀತಿ ಬಡ್ಡಿ ಸಮೇತ ವಾಪಸ್‌ : ಪ್ರಧಾನಿ ನರೇಂದ್ರ ಮೋದಿ

ಬೆಳಗಾವಿ: ‘ಬೆಳಗಾವಿ ಜನ ತೋರಿದ ಪ್ರೀತಿ, ಮಾಡಿದ ಆಶೀರ್ವಾದ ನನಗೆ ಸ್ಫೂರ್ತಿ ನೀಡಿದೆ. ಬೆಳಗಾವಿ ಕುಂದಾ, ಬೆಳಗಾವಿ ಮಂದಿ ಎರಡೂ ಬಹಳ ಸಿಹಿ. ನಿಮ್ಮ ಈ ಪ್ರೀತಿಯನ್ನು ಬಡ್ಡಿ ಸಮೇತ ವಾಪಸ್‌ ಕೊಡುತ್ತೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾನ ಮಾಡಿದರು.   ನಗರದಲ್ಲಿ ಸೋಮವಾರ ₹2,240 ಕೋಟಿ ವೆಚ್ಚದ ರೈಲ್ವೆ ಕಾಮಗಾರಿ, ಜಲಜೀವನ್ ಮಿಷನ್ ಯೋಜನೆಗಳ ಉದ್ಘಾಟನೆ- ಶಂಕುಸ್ಥಾಪನೆ ನೆರವೇರಿಸಿ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ₹16 ಸಾವಿರ ಕೋಟಿಯನ್ನು …

Read More »

ಬೆಳಗಾವಿ ಗ್ರಾಮೀಣ ಕ್ಷೇತ್ರ ಈಗ ಇಡೀ ರಾಜ್ಯದ ಗಮನ ಸೆಳೆದಿದೆ.

ಬೆಳಗಾವಿ: ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ತಮ್ಮ ರಾಜಕೀಯ ವೈರಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ನೇರವಾಗಿ ಅಖಾಡಕ್ಕೆ ಇಳಿದಿರುವ ಪರಿಣಾಮ ಬೆಳಗಾವಿ ಗ್ರಾಮೀಣ ಕ್ಷೇತ್ರ ಈಗ ಇಡೀ ರಾಜ್ಯದ ಗಮನ ಸೆಳೆದಿದೆ. ರಮೇಶ್‌ ಈ ಕ್ಷೇತ್ರದ ಅಭ್ಯರ್ಥಿಯಲ್ಲ. ಆದರೆ ಹೆಬ್ಟಾಳ್ಕರ್‌ಅವರನ್ನು ಸೋಲಿಸಲೇಬೇಕು ಎಂದು ಪಣ ತೊಟ್ಟಿರುವ ಕಾರಣ ಚುಣಾವಣ ಕಣ ರಣರಂಗವಾಗಿ ಬದಲಾಗಿದೆ. ಆರೋಪ-ಪ್ರತ್ಯಾರೋಪ ಪರಾಕಾಷ್ಠೆ ಮುಟ್ಟಿದೆ. ಕ್ಷೇತ್ರ ಪುನರ್‌ ವಿಂಗಡಣೆಯಿಂದ 2008ರಲ್ಲಿ ಉದಯವಾದ ಬೆಳಗಾವಿ ಗ್ರಾಮೀಣ ಕ್ಷೇತ್ರ …

Read More »

ಅಸಾಧ್ಯವನ್ನು ಸಾಧ್ಯವಾಗಿಸಿದ ಮೋದಿ: ಸಿಎಂ ಬೊಮ್ಮಾಯಿ

ಬೆಳಗಾವಿ: ಪ್ರಧಾನಿ ಮೋದಿ ದೇಶವನ್ನು ಅಸಾಧ್ಯದಿಂದ ಸಾಧ್ಯದ ಕಡೆಗೆ, ಅನಿಶ್ಚಿತತೆಯಿಂದ ನಿಶ್ಚಿತತೆಯೆಡೆಗೆ ತೆಗೆದುಕೊಂಡು ಹೋಗಿದ್ದಾರೆ. ಸಂಶಯವನ್ನು ಸಂಕಲ್ಪ ಮಾಡಿದ್ದಾರೆ. ಸಂಕಲ್ಪವನ್ನು ಸಿದ್ಧಿ ಮಾಡಿ ತೋರಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದರು.   ನಗರದ ಮಾಲಿನಿ ಸಿಟಿ ಮೈದಾನದಲ್ಲಿ ಸೋಮವಾರ ನಡೆದ 2,240 ಕೋಟಿ ರೂ. ವೆಚ್ಚದ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿ, ಮೋದಿ ಆಸೆಯಂತೆ ನವ ಭಾರತ ಮತ್ತು ನವ ಕರ್ನಾಟಕ ನಿರ್ಮಾಣಕ್ಕೆ ನಾವು ಸಿದ್ಧರಾಗಿದ್ದೇವೆ. …

Read More »

ಬೆಳಗಾವಿಯ ಕುಂದಾ ಮತ್ತು ಬೆಳಗಾವಿಯ ಜನರ ಪ್ರೀತಿ ಮರೆಯಲಾಗದ್ದು.: ಪ್ರಧಾನಿ ನರೇಂದ್ರ ಮೋದಿ

ಬೆಳಗಾವಿ:ಗೆ ಹೊಸ ಶಕ್ತಿ ನೀಡುವ ಯೋಜನೆಗಳನ್ನು ಜಾರಿಗೊಳಿಸಲಾಗಿದ್ದು,. ಇದು ಈ ಭಾಗದ ಕ್ಷಿಪ್ರಗತಿಯ ಬೆಳವಣಿಗೆಗೆ ಕಾರಣವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅವರು ಬೆಳಗಾವಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ, ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದರು. ಬಸವೇಶ್ವರರನ್ನು ಸ್ಮರಿಸಿ ಮಾತನ್ನು ಆರಂಭಿಸಿದ ಪ್ರಧಾನಿ, ಬೆಳಗಾವಿಯ ಕುಂದಾ ಮತ್ತು ಬೆಳಗಾವಿಯ ಜನರ ಪ್ರೀತಿ ಮರೆಯಲಾಗದ್ದು. ಬೆಳಗಾವಿಯ ಬಂಧುಗಳಿಗೆ ನಮಸ್ಕಾರಗಳು ಎಂದು ಕನ್ನಡದಲ್ಲಿ ಹೇಳಿದರು. ಬೆಳಗಾವಿಯ ಜನರ ಪ್ರೀತಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದೂ ಅವರು …

Read More »