Breaking News

ಬೆಳಗಾವಿ

ಆರೋಗ್ಯ ಕೇಂದ್ರಕ್ಕೆ ಬಾರದ ವೈದ್ಯರು, ನರ್ಸ್‌: 2 ತಾಸು ನರಳಾಡಿದ ತುಂಬು ಗರ್ಭಿಣಿ

ಕಿತ್ತೂರು : ಸಮೀಪದ ಸಂಗೊಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ, ಸೂಕ್ತ ಸಮಯಕ್ಕೆ ಗರ್ಭಿಣಿಗೆ ಚಿಕಿತ್ಸೆ ನೀಡದ ಶುಶ್ರೂಷಕಿಯನ್ನು ವರ್ಗಾವಣೆ ಮಾಡಿದ್ದು, ಆಸ್ಪತ್ರೆಯ ಇಬ್ಬರು ವೈದ್ಯರಿಗೂ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಲಾಗಿದೆ.   ತಾಲ್ಲೂಕಿನ ಕಡತನಾಳ ಗ್ರಾಮದ ರತ್ನವ್ವ ಕಾದ್ರೊಳ್ಳಿ ಅವರನ್ನು ಗುರುವಾರ ಹೆರಿಗೆಗೆ ಆರೋಗ್ಯ ಕೇಂದ್ರಕ್ಕೆ ತರಲಾಗಿತ್ತು. ಆದರೆ ಅಲ್ಲಿ ವೈದ್ಯರು, ನರ್ಸ್‌ ಸೇರಿದಂತೆ ಯಾರೂ ಇರಲಿಲ್ಲ. ಎರಡು ತಾಸು ಆಸ್ಪತ್ರೆಯ ಆವರಣದಲ್ಲೇ ಗರ್ಭಿಣಿ …

Read More »

ಬೆಳಗಾವಿ: ಜನರ ಮನಸೂರೆಗೊಂಡ ಫಲ-ಪುಷ್ಪ ಪ್ರದರ್ಶನ

ಬೆಳಗಾವಿ: ಒಂದೆಡೆ ಕಾಂತಾರ ಚಲನಚಿತ್ರದ ಪರಿಸರ ದೇವತೆ ಪಂಜುರ್ಲಿ, ಇನ್ನೊಂದೆಡೆ ಎತ್ತುಚಕ್ಕಡಿ ಕಟ್ಟಿ ಬಿತ್ತಲು ನಡೆದ ರೈತ, ಮತ್ತೊಂದೆಡೆ ಕೇಶರಾಶಿ ಹರಡಿ ನಿಂತ ಸುಂದರ ಜಲಕನ್ಯೆ, ಎಲ್ಲರನ್ನೂ ಬರಸೆಳೆಯುವ ನೆಚ್ಚಿನ ನಟ ಪುನೀತ್‌ ರಾಜ್‌ಕುಮಾರ್‌…   ಇಲ್ಲಿನ ಹ್ಯೂಮ್‌ ಪಾರ್ಕಿನಲ್ಲಿ ಆಯೋಜಿಸಿದ ಮೂರು ದಿನಗಳ 63ನೇ ಫಲ ಪುಷ್ಪ ಪ್ರದರ್ಶನದಲ್ಲಿ ಕಂಡುಬರುವ ದೃಶ್ಯಗಳಿವೆ. ಶುಕ್ರವಾರವೇ ಆರಂಭವಾದ ಈ ಪ್ರದರ್ಶನ ಪರಿಸರ ಪ್ರೇಮಿಗಳನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ವಿವಿಧ ಶಾಲಾ ಮಕ್ಕಳು, ಯುವಜನರು, ರೈತರು, …

Read More »

ಮದ್ಯದ ಅಂಗಡಿಗಳಿಗೆ ಡಿ.ಸಿ ಭೇಟಿ: ಪರಿಶೀಲನೆ

ಬೆಳಗಾವಿ: ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ಸವದತ್ತಿ ತಾಲ್ಲೂಕಿನ ಉಗರಗೋಳ ಗ್ರಾಮಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಎರಡು ಮದ್ಯದ ಅಂಗಡಿಗಳಿಗೆ ತೆರಳಿದರು. ಲೈಸೆನ್ಸ್, ಮದ್ಯದ ಸಂಗ್ರಹ ಹಾಗೂ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿದರು.   ಡಿ.ಸಿ ಗ್ರಾಮ ಪ್ರವೇಶಿಸುತ್ತಿದ್ದಂತೆ ತಡೆದ ಮಹಿಳೆಯರು, ಊರ ಮಧ್ಯದಲ್ಲಿರುವ ಎರಡು ಮದ್ಯದಂಗಡಿಗಳನ್ನು ಬೇರೆಡೆ ಸ್ಥಳಾಂತರಿಸುವಂತೆ ಒತ್ತಾಯಿಸಿದರು. ಆಗ, ಪಾಟೀಲ ಸ್ವತಃ ಅಂಗಡಿಗಳಿಗೆ ಹೋಗಿ ಪರಿಶೀಲಿಸಿದರು. ಸದ್ಯ ಮದ್ಯದ ಅಂಗಡಿಗಳನ್ನು ಸ್ಥಗಿತಗೊಳಿಸಲಾಗಿದೆ. ಸಮಗ್ರವಾಗಿ …

Read More »

ಸ್ಮಾರ್ಟ್ ಕ್ಯಾಷು ಫ್ಯಾಕ್ಟರಿಯನ್ನು ಮಾಜಿ ಸಚಿವರು, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಅವರು ಉದ್ಘಾಟಿಸಿದರು.

ಬೆಳಗಾವಿ ತಾಲೂಕಿನಲ್ಲಿ ಸ್ಮಾರ್ಟ್ ಕ್ಯಾಷು ಫ್ಯಾಕ್ಟರಿಯನ್ನು ಮಾಜಿ ಸಚಿವರು, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಅವರು ಉದ್ಘಾಟಿಸಿದರು. ಹೌದು ಬೆಳಗಾವಿ ತಾಲೂಕಿನ ಸುಪುತ್ರ, ಸಮಾಜ ಸೇವಕ, ಹಿಂಡಲಗಾ ಗ್ರಾ.ಪಂ. ಅಧ್ಯಕ್ಷ ನಾಗೇಶ್ ಮನ್ನೋಳ್ಕರ್ ಅವರು ಈ ಭಾಗದ ಜನರಿಗೆ ಉದ್ಯೋಗ ನೀಡುವ ಉದ್ದೇಶದಿಂದ ಕಾಜು ಫ್ಯಾಕ್ಟರಿಯನ್ನು ಸ್ಥಾಪಿಸಿದ್ದಾರೆ. ದೇಶದ ಪ್ರಸಿದ್ಧ ಎಮೋಸಿಸ್ ಗ್ರೂಪ್‍ನೊಂದಿಗೆ ಸ್ಮಾರ್ಟ್ ಕ್ಯಾಷು ಫ್ಯಾಕ್ಟರಿಯನ್ನು ಬೆಳಗುಂದಿ ಸಮೀಪ ಸೋನೋಲಿ ಎಳೆಬೈಲ ಗ್ರಾಮದಲ್ಲಿ ಪ್ರಾರಂಭ ಮಾಡಿದ್ದಾರೆ. ಶನಿವಾರ ಶಾಸಕ …

Read More »

ಸ್ಥಳೀಯ ಸಂಸ್ಥೆಗಳ ಆಸ್ತಿ ದಾಖಲೆಗೆ ಹೈಟೆಕ್ ಸ್ಪರ್ಶ: ಡಿಜಿಟಲೀಕರಣಕ್ಕೆ ‘ಇ-ಆಸ್ತಿ ತಂತ್ರಾಂಶ’ ಜಾರಿ; ಆನ್​ಲೈನ್​ನಲ್ಲೇ ಸಕಲ ಮಾಹಿತಿ

ಬೆಳಗಾವಿ :ನಗರ -ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಸರ್ಕಾರಿ, ಖಾಸಗಿ ಒಡೆತನದ ಲಕ್ಷಾಂತರ ಆಸ್ತಿ ದಾಖಲೆಗಳಿಗೆ ಇನ್ಮುಂದೆ ಹೈಟೆಕ್ ಸ್ಪರ್ಶ ಸಿಗಲಿದೆ. ಏಕಕಾಲದಲ್ಲಿ ಆನ್​ಲೈನ್​ನಲ್ಲಿಯೇ ಆಸ್ತಿ ದಾಖಲೆಗಳ ಮಾಹಿತಿ ಲಭ್ಯವಾಗಲಿದೆ. ಹೌದು. ರಾಜ್ಯದಲ್ಲಿ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸುಮಾರು 1.20 ಕೋಟಿ ಆಸ್ತಿಗಳಿವೆ. ಆದರೆ, ಲಕ್ಷಾಂತರ ಆಸ್ತಿಗಳ ದಾಖಲೆಗಳ ನಿರ್ವಹಣೆ, ಸಂರಕ್ಷಣೆ ಇಲ್ಲದೆ ಸಂಪೂರ್ಣ ಹಾಳಾಗಿವೆ. ಇದರಿಂದಾಗಿ ಸಾರ್ವಜನಿಕರಿಗೆ ಆಸ್ತಿಯ ಮೂಲ ದಾಖಲೆಗಳು ಲಭ್ಯವಾಗುತ್ತಿಲ್ಲ. …

Read More »

ರೈತರ ಆಕ್ರೋಶಕ್ಕೆ ಕಾರಣವಾಗಿದೆ ಲೈಲಾ ಶುಗರ್ಸ ಕಾರ್ಖಾನೆ

ಖಾನಾಪುರದ ಲೈಲಾ ಶುಗರ್ಸ್ ಕಾರ್ಖಾನೆಯಲ್ಲಿ ಕಬ್ಬು ಪೂರೈಕೆ ಮಾಡಿದ ರೈತರು ಸಕ್ಕರೆ ಪಡೆಯಲು ಪರದಾಡಿದ ಘಟನೆ ನಡೆದಿದೆ. ಹೌದು ಮಹಾಲಕ್ಷ್ಮೀ ಗ್ರುಪ್ ಸಂಚಾಲಿತ ಲೈಲಾ ಶುಗರ್ಸ್ ಕಾರ್ಖಾನೆಯಲ್ಲಿ ಕಳೆದ ದಿನಾಂಕ 14ರಿಂದ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಪ್ರತಿ ಟನ್ 25 ರೂಪಾಯಿ ದರದಲ್ಲಿ ಸಕ್ಕರೆ ಪಡೆದುಕೊಳ್ಳುವ ವ್ಯವಸ್ಥೆ ಮಾಡಿಕೊಡಲಾಗಿತ್ತು. ಆದರೆ ತಾಲೂಕಿನ ಗಡಿಭಾಗ ಸೇರಿದಂತೆ ತಾಲೂಕಿನ ಬೇರೆ ಕಡೆಯಿಂದ ಬಂದು ತಮ್ಮ ಸ್ಲೀಪ್ ತೋರಿಸಿ ಆಧಾರ್ ಕಾರ್ಡ್ …

Read More »

ಅಂತರರಾಷ್ಟ್ರೀಯ ವ್ಹೀಲ್‍ಚೇರ್ ಬಾಸ್ಕೇಟ್‍ಬಾಲ್ ಪಂದ್ಯಾವಳಿಯಲ್ಲಿ ಬೆಳಗಾವಿ ಜಿಲ್ಲೆಯ ಆಟಗಾರರು ಪದಕ ಬೇಟೆಯಾಡಿದ್ದಾರೆ.

ನೋಯ್ಡಾದಲ್ಲಿ ಜರುಗಿದ ಮೊದಲನೇ ಭಾರತೀಯ ಅಂತರರಾಷ್ಟ್ರೀಯ ವ್ಹೀಲ್‍ಚೇರ್ ಬಾಸ್ಕೇಟ್‍ಬಾಲ್ ಪಂದ್ಯಾವಳಿಯಲ್ಲಿ ಬೆಳಗಾವಿ ಜಿಲ್ಲೆಯ ಆಟಗಾರರು ಪದಕ ಬೇಟೆಯಾಡಿದ್ದಾರೆ. ಇದೇ ನ.6ರಿಂದ 11ರವರೆಗೆ ನೋಯ್ಡಾದಲ್ಲಿ ನಡೆದ ಅಂತರರಾಷ್ಟ್ರೀಯ ವ್ಹೀಲ್‍ಚೇರ್ ಬಾಸ್ಕೇಟ್‍ಬಾಲ್ ಪಂದ್ಯಾವಳಿಯಲ್ಲಿ ಬೆಳಗಾವಿಯ ಆಟಗಾರರಾದ ಬಸವರಾಜ್ ಸುಣಧೋಳಿ, ಲಲಿತಾ ಗವಸ, ಮಾಯಾ ಸಣ್ಣಲಿಂಗನ್ನವರ ಭಾರತ ತಂಡವನ್ನು ಪ್ರತಿನಿಧಿಸಿ ಬೆಳ್ಳಿ ಪದಕ ಗೆದ್ದಿದ್ದಾರೆ. ಈ ಕ್ರೀಡಾಪಟುಗಳ ಸಾಧನೆಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತಿ ಸಿಇಓಗಳು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕ …

Read More »

ರಮೇಶ್ ಸಾಹುಕಾರ ಜೆಡಿಎಸ್ ಸೇರ್ಪಡೆ ಬಗ್ಗೆ ವಿಶ್ವಾಸ ವ್ಯಕ್ತಡಿಸಿದ್ರ H.D K.?

ಜೆಡಿಎಸ್ ಬಿಟ್ಟು ಕಾಂಗ್ರೆಸ್, ಬಿಜೆಪಿಗೆ ಹೋಗಿರುವ ಬಹಳಷ್ಟು ನಾಯಕರು ಮನಪರಿವರ್ತನೆಯಾಗಿ ವಾಪಸ್ ಜೆಡಿಎಸ್‍ಗೆ ಬರಬಹುದು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇದೆ. ಈ ಸಮಯದಲ್ಲಿ ಏನಾದ್ರೂ ರಾಜಕೀಯ ದ್ರುವೀಕರಣ ಆಗಿ ರಮೇಶ ಜಾರಕಿಹೊಳಿ ಅವರು ಜೆಡಿಎಸ್ ಸೇರ್ಪಡೆಯಾಗುತ್ತಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಿಎಂ ಕುಮಾರಸ್ವಾಮಿ ನನ್ನ ಮುಂದೆ ಈಗ ಅದ್ಯಾವುದೂ ಪ್ರಶ್ನೆ ಇಲ್ಲ. ಈಗ ನನ್ನ ಮುಂದೆ …

Read More »

ಹಿಂದೂ ಎಂಬುದು ಧರ್ಮವಲ್ಲ: ಸಿದ್ಧರಾಮಶ್ರೀ

ಬೆಳಗಾವಿ: ‘ಹಿಂದೂ ಎಂಬುದು ಧರ್ಮವಲ್ಲ, ಅದು ಜೀವನಕ್ರಮವೆಂದು ಡಾ.ಸರ್ವ‍ಪಲ್ಲಿ ರಾಧಾಕೃಷ್ಣನ್ ಅವರೇ ಹೇಳಿದ್ದಾರೆ. ಆದರೆ, ಇಂದು ವೈದಿಕ ಧರ್ಮಕ್ಕೆ ಹಿಂದೂ ಧರ್ಮ ಎನ್ನಲಾಗುತ್ತಿದೆ. ಹೀಗೆ ಉಚ್ಚರಿಸಿದರೆ ಲಿಂಗಾಯತರೇನು ಹಿಂದೂಗಳಾಗು ವುದಿಲ್ಲ’ ಎಂದು ಗದುಗಿನ ತೋಂಟದಾರ್ಯ ಮಠದ ಪೀಠಾಧಿಪತಿ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.   ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವೇದ, ಆಗಮ, ಪುರಾಣವನ್ನು ವಿರೋಧಿಸಿದ ಲಿಂಗಾಯತ ಅವೈದಿಕ ಧರ್ಮವಾಗಿದೆ. ಲಿಂಗಾಯತರು ಮತ್ತು ಹಿಂದೂಗಳ ಆಚರಣೆಯಲ್ಲಿ ಸಾಕಷ್ಟು ಭಿನ್ನಾಭಿಪ್ರಾಯ ಇವೆ’ ಎಂದರು. ‘ಹಿಂದೂಗಳು …

Read More »

ರೈತನಿಗೆ ಪರಿಹಾರ ವಿಳಂಬ: ಅಧಿಕಾರಿಗಳ ವಾಹನ ಜಪ್ತಿ

ಚಿಕ್ಕೋಡಿ : ರಸ್ತೆ ನಿರ್ಮಿಸಲು ಸ್ವಾದೀನ ಪಡೆದಿದ್ದ ಭೂಮಿಗೆ ರೈತನಿಗೆ ₹11 ಲಕ್ಷ ಪರಿಹಾರಧನ ನೀಡಲು ವಿಳಂಬ ಹಿನ್ನೆಲೆಯಲ್ಲಿ ಕೋರ್ಟ್‌ ಆದೇಶದಂತೆ ಉಪವಿಭಾಗಾಧಿಕಾರಿ ಮತ್ತು ಲೋಕೋಪಯೋಗಿ ಇಲಾಖೆ ಎಇಇ ಅವರ ವಾಹನಗಳನ್ನು ಗುರುವಾರ ಜಪ್ತಿ ಮಾಡಲಾಗಿದೆ.   15 ವರ್ಷದ ಹಿಂದೆ ಚಿಕ್ಕೋಡಿ ತಾಲ್ಲೂಕಿನ ಮಾಂಗೂರ (ಈಗಿನ ನಿಪ್ಪಾಣಿ ತಾಲ್ಲೂಕು) ಗ್ರಾಮದ ರೈತ ಬುದ್ದಿರಾಜ ಶಾಂತಿನಾಥ ಪಾಟೀಲ ಅವರ 31 ಗುಂಟೆ ಭೂಮಿಯನ್ನು ಇಲಾಖೆ ಪಡೆದುಕೊಂಡಿತ್ತು. ಈವರೆಗೂ ರೈತನಿಗೆ ಪರಿಹಾರ ಧನ …

Read More »