Breaking News

ಚಿಕ್ಕೋಡಿ

ಅಂಗಡಿ ಕುಟುಂಬ ಹೊರತುಪಡಿಸಿ ಟಿಕೆಟ್ ನೀಡೋದಾದ್ರೆ ಕತ್ತಿಗೆ ನೀಡಿ – ಅಭಿಮಾನಿಗಳ ಆಗ್ರಹ

ಚಿಕ್ಕೋಡಿ(ಬೆಳಗಾವಿ): ಇತ್ತಿಚೆಗೆ ನಿಧನರಾದ ಬೆಳಗಾವಿ ಸಂಸದ ಹಾಗೂ ರಾಜ್ಯ ರೇಲ್ವೆ ಸಚಿವರಾಗಿದ್ದ ದಿ. ಸುರೇಶ್ ಅಂಗಡಿ ನಿಧನದ ಬೆನ್ನಲ್ಲೇ ಬೆಳಗಾವಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈಗಾಗಲೇ ಸುರೇಶ್ ಅಂಗಡಿ ಕುಟುಂಬಕ್ಕೆ ಸಾಂತ್ವನ ಹೇಳಲು ನಳಿನ್ ಕುಮಾರ್ ಭೇಟಿ ನೀಡಿ ಟಿಕೆಟ್ ಸಂಬಂಧಿಸಿದಂತೆ ಅನೌಪಚಾರಿಕ ಸಭೆ ಕೂಡ ನಡೆಸಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಮುಂಬರುವ ಉಪ ಚುನಾವಣೆಗೆ ಬಿಜೆಪಿ ಟಿಕೆಟ್ ಗಾಗಿ ಕಮಲ ನಾಯಕರಲ್ಲಿ ಪೈಪೋಟಿ ಶುರುವಾಗಿದ್ದು, ಈ ಪೈಕಿ ಹಲವು ನಾಯಕರು …

Read More »

ಆಪರೇಷನ್ ಕಮಲ ಮಾಡುವುದಕ್ಕೆ ದೆಹಲಿಗೆ ತೆರಳಿದ್ದೆನೆ ಎಂಬುವುದು ಸುಳ್ಳು. ನಾನು ಮಹಾದಾಯಿ ವಿಚಾರವಾಗಿ ಚರ್ಚಿಸಲು ಹೋಗಿದ್ದೆ

ಗೋಕಾಕ್: ಮಹಾರಾಷ್ಟ್ರದಲ್ಲಿ ಆಪರೇಷನ್ ಕಮಲ ಮಾಡುವುದಕ್ಕೆ ದೆಹಲಿಗೆ ತೆರಳಿದ್ದೆನೆ ಎಂಬುವುದು ಸುಳ್ಳು. ನಾನು ಮಹಾದಾಯಿ ವಿಚಾರವಾಗಿ ಚರ್ಚಿಸಲು ಹೋಗಿದ್ದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ. ನಗರದ ಅಡಿಬಟ್ಟಿ ಕಾಲೋನಿಯಲ್ಲಿ ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆ ಯಡಿಯಲ್ಲಿ ನಿರ್ಮಿಸಿದ ಪೌರಕಾರ್ಮಿಕರ ವಸತಿ ಸಮುಚ್ಛಯ ಕಟ್ಟಡಗಳನ್ನು ಇಂದು ಉದ್ಘಾಟಿಸಿ, ಮಾತನಾಡಿದರು. ಪೌರ ಕಾರ್ಮಿಕರಿಗಾಗಿ ಜಿ+2ಮಾದರಿಯಲ್ಲಿ ಮನೆ ನಿರ್ಮಾಣ ಮಾಡಿ ಕೊಡಲಾಗಿದೆ. ಮುಂದಿನ ಹಂತದಲ್ಲಿ 10 ಎಕರೆ ಜಾಗದಲ್ಲಿ ಇನ್ನಷ್ಟು ಮನೆಗಳನ್ನು …

Read More »

ಖಡಕಲಾಟ ಪೊಲೀಸರ್ ಭರ್ಜರಿ ಕಾರ್ಯಾಚರಣೆ 8.61 ಲಕ್ಷ ಮೌಲ್ಯದ ವಸ್ತುಗಳು ವಶ

  ಚಿಕ್ಕೋಡಿ:ರಸ್ತೆ ಬದಿಯಲ್ಲಿರುವ ಹಾಗೂ ಹೊಲ ಮನೆಯ ಹತ್ತಿರ ನಿಲ್ಲಿಸಿದ ಟ್ರಾಕ್ಟರ್ ಟ್ರೇಲರ್‌ಗಳನ್ನು ಹಾಗೂ ಡಿಸ್ಕ ಸಮೇತ 46 ಟಾಯರಗಳನ್ನು ಕಳ್ಳತನ ಮಾಡಿದ ಆರೋಪಿಗಳನ್ನು ಖಡಕಲಾಟ ಪೋಲಿಸರು ಬಂಧಿಸಿದ್ದಾರೆ.   ಆರೋಪಿತರು ನಿಪ್ಪಾಣಿ ತಾಲೂಕಿನ ಗಳತಗಾ ಗ್ರಾಮದ ಮಾರುತಿ ಬಸಪ್ಪಾ ಠೊಣ್ಣೆ (24), ಮಹಾದೇವ ಮುರಾರಿ ಮಾಕಾಳೆ (27), ‌ಬಾಬು ಸಿದ್ದಪ್ಪಾ ಡಾಲೆ (37), ಶಿವಾನಂದ ಮಾರುತಿ ಗಜಬರ (29), ಖಾನಾಪೂರ ತಾಲೂಕಿನ ಕಕ್ಕೇರಿ ಗ್ರಾಮದ ಸಂಜು ಬಿಷ್ಟಪ್ಪಾ ಅಂಬಡಗಟ್ಟಿ …

Read More »

ಬೆಳಗಾವಿ-ಕರಾಡ ರೈಲು ಮಾರ್ಗ ವಿಸ್ತರಣೆ ಎಂದು?

ಚಿಕ್ಕೋಡಿ: ಕರ್ನಾಟಕ-ಮಹಾರಾಷ್ಟ್ರದ ಬಹು ಬೇಡಿಕೆಯ ಕರಾಡ-ಧಾರವಾಡ ಹೊಸ ರೈಲು ಮಾರ್ಗದ ಈಗಾಗಲೇ ಧಾರವಾಡ-ಬೆಳಗಾವಿ ಹೊಸ ರೈಲು ಮಾರ್ಗಕ್ಕೆ ಹಸಿರು ನಿಶಾನೆ ಸಿಕ್ಕಿದ್ದು, ಉಳಿದ ಬೆಳಗಾವಿ-ಕರಾಡ ಹೊಸ ರೈಲು ಮಾರ್ಗ ವಿಸ್ತರಣೆ ಮಾಡಬೇಕು ಎಂದು ಗಡಿ ಜನರ ಒತ್ತಾಯವಾಗಿದೆ. ಗಡಿ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಕರಾಡ-ಧಾರವಾಡ(ಕೊಲ್ಲಾಪುರ, ನಿಪ್ಪಾಣಿ, ಸಂಕೇಶ್ವರ, ಬೆಳಗಾವಿ, ಕಿತ್ತೂರು ಮಾರ್ಗವಾಗಿ) ಹೊಸ ರೈಲು ಮಾರ್ಗ ರಚನೆಯಾಗಬೇಕೆಂದು ಕಳೆದ 2012ರಲ್ಲಿ ರೈಲ್ವೆ ಇಲಾಖೆ ಸರ್ವೇ ಕಾರ್ಯ ಕೈಗೊಂಡಿತ್ತು. ಇದೀಗ ಧಾರವಾಡ-ಬೆಳಗಾವಿ …

Read More »

ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಪಕ್ಷದಲ್ಲಿ ಅನೇಕ ಬದಲಾವಣೆ ಗಳಾಗಿವೆ:ಗಣೇಶ ಹುಕ್ಕೇರಿ

ಚಿಕ್ಕೋಡಿ: ಕಾಂಗ್ರೆಸ್ ಕಾರ್ಯಕರ್ತರು ಪ್ರತಿ ಮನೆಗೂ ತೆರಳಿ ಜನರ ಆರೋಗ್ಯ ಹಾಗೂ ಕೊರೊನಾ ಬಗ್ಗೆ ಮಾಹಿತಿ ನೀಡಲಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೇರು ಮಟ್ಟದಲ್ಲಿ ಸಂಘಟನೆ ಮಾಡಲಾಗುವುದು ಎಂದು ಶಾಸಕ ಗಣೇಶ ಹುಕ್ಕೇರಿ ಹೇಳಿದರು. ಪಟ್ಟಣದಲ್ಲಿ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಚಿಕ್ಕೋಡಿ-ಸದಲಗಾ ವಿಧಾನಸಭಾ ಮತದಾರರ ಸಂಘ ಇವರ ಸಹಯೋಗದಲ್ಲಿ ಬುಧವಾರ  ‘ಆರೋಗ್ಯ ಹಸ್ತ’ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದ …

Read More »

ಕಳಪೆ ಕಾಮಗಾರಿಯಿಂದ ಕಾಲುವೆ ಸೋರಿ ರೈತರ ಜಮೀನು ಸವಳಾಗಿ ಪರಿವರ್ತನೆ ಆಂಕರ್:

ಚಿಕ್ಕೋಡಿ ಕೊಚ್ಚಿಹೊದ ಕಾಲುವೆಯ ಸಿಮೆಂಟ ಕಾಂಕ್ರೆಟ್, ಮೊಳಕಾಲು ತನಕ ನೀರು ನಿಂತು ಕೆಸರು ಗದ್ದೆಯಂತಾಗಿರುವ ಜಮೀನು, ನೀರಾವರಿ ಇಲಾಖೆಯ ವಿರುದ್ಧ ಘೋಷಣೆ ಹಾಕುತ್ತಿರುವ ರೈತರು ಇವೇಲ್ಲ ದೃಶ್ಯಗಳು ಕಂಡು ಬಂದಿರುವುದು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಐನಾಪೂರ ಗ್ರಾಮದಲ್ಲಿ…. ಜವಳಿ ಸಚಿವ ಶ್ರೀಮಂತ ಪಾಟೀಲ ತವರು ಕ್ಷೇತ್ರದ ಐನಾಪೂರ ಗ್ರಾಮದ ರೈತರು ಗೋಳು ಯಾರು ಕೇಳದಂತಾಗಿದೆ. ಐನಾಪೂರ ಗ್ರಾಮದಿಂದ ಮಂಗಸೂಳಿ ಗ್ರಾಮದವರಗೆ ಐನಾಪೂರ ಏತ ನೀರಾವರಿ ಯೋಜನೆಯ ಕಾಲುವೆ ಮೂಲಕ …

Read More »

ಜಾಗನೂರಿನ ಆರೋಪಿಯನ್ನು ಚಿಕ್ಕೋಡಿ ಪೊಲೀಸರು ಬಂಧಿಸಿದ್ದಾರೆ

ಚಿಕ್ಕೋಡಿ ಉಪವಿಭಾಗವೂ ಸೇರಿ ಹಲವೆಡೆ ಬೈಕ್ ಕಳ್ಳತನ ಮಾಡಿದ ಜಾಗನೂರಿನ ಆರೋಪಿಯನ್ನು ಚಿಕ್ಕೋಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 5 ಬೈಕ್ ವಶಪಡಿಸಿಕೊಂಡಿದ್ದಾರೆ. ಚಿಕ್ಕೋಡಿ, ಮಹಾಲಿಂಗಪುರ, ಉಳ್ಳಾಗಡ್ಡಿ ಖಾನಾಪುರ, ಅಂಕಲಗಿ, ಹುಕ್ಕೇರಿ ಕಡೆ ಬೈಕ್ ಕಳ್ಳತನ ಮಾಡಿದ ಆರೋಪದ ಮೇಲೆ ಚಿಕ್ಕೋಡಿ ತಾಲೂಕು ಜಾಗನೂರು ಗ್ರಾಮದ ರವಿ ಮಾರುತಿ ಗಣಾಚಾರ ಎಂಬ ಯುವಕನನ್ನು ಚಿಕ್ಕೋಡಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಧಿತನಿಂದ 1.15 ಲಕ್ಷ ರೂ ಮೌಲ್ಯದ 5 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಪಿಎಸ್‍ಐ …

Read More »

ಮೀನುಗಾರರ ಬಲೆಗೆ ಸಿಕ್ಕಿ ಬಿದ್ದ ಮೊಸಳೆ ಮರಿ; ಅರಣ್ಯಾಧಿಕಾರಿಗಳಿಗೆ ಹಸ್ತಾಂತರ

ಚಿಕ್ಕೋಡಿ: ಮೀನುಗಾರರರು ಹಾಕಿದ್ದ ಬಲೆಗೆ ಸಿಕ್ಕಿದ್ದ ಮೋಸಳೆಮರಿಯನ್ನು ರಕ್ಷಿಸಿದ ಮೀನುಗಾರರು ಅದನ್ನು ಇಲಾಖಾ ಅಧಿಕಾರಿಗಳಿಗೆ ಹಸ್ತಾಂತರ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದಲ್ಲಿ ನಡೆದಿದೆ. ಮೀನು ಹಿಡಿಯುವ ಸಲುವಾಗಿ ಮೀನುಗಾರರು ನಿನ್ನೆ ಸಂಜೆ ದೂಧಗಂಗಾ ನದಿಗೆ ಬಲೆ ಹಾಕಿಬಂದಿದ್ದರು. ಇಂದು ಬೆಳಗ್ಗೆ ಹೋಗಿ ನೋಡಿದರೆ ಬಲೆಯಲ್ಲಿ ಮೊಸಳೆ ಸಿಕ್ಕಿಹಾಕಿಕೊಂಡಿದೆ. ಇದನ್ನು ಕಂಡ ಮೀನುಗಾರರಿಗೆ ಅಚ್ಚರಿ, ಭಯ ಎರಡೂ ಆಗಿದೆ, ಅದ್ಯ ಆ ಮೊಸಳೆ ಮರಿಯನ್ನು ಅರಣ್ಯ …

Read More »

ಗಂಡನನ್ನೇ ಕೊಂದು ಹೂತು ಹಾಕಿದ ಪತ್ನಿ

ಚಿಕ್ಕೋಡಿ: ಅಕ್ರಮ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದ ಗಂಡನನ್ನೇ ಹೆಂಡತಿ ಕೊಲೆ ಮಾಡಿ ಹೂತು ಹಾಕಿದ ಘಟನೆ ನಿಪ್ಪಾಣಿ ತಾಲೂಕಿನ ಹಂಚನಾಳ ಗ್ರಾಮದಲ್ಲಿ ತಡವಾಗಿ ಪತ್ತೆಯಾಗಿದೆ. ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕಾಗಲ್‌ ತಾಲೂಕಿನ ನೇರ್ಲೆ ಗ್ರಾಮದ ಸಚಿನ ಸದಾಶಿವ ಭೋಪಳೆ(35) ಕೊಲೆಯಾದ ವ್ಯಕ್ತಿ. ಕೊಲೆ ಮಾಡಿದ ಪತ್ನಿ ಅನಿತಾ ಭೋಪಳೆ(33) ಸಹಚರ ಸಹೋದರ ಹಂಚಿನಾಳ ಗ್ರಾಮದ ಕೃಷ್ಣಾತ್‌ ರಾಜಾರಾಮ ಘಾಟಗೆ(26) ಹಾಗೂ ಪತ್ನಿಯ ಸಹೋದರಿ ಕಾಗಲ್‌ ತಾಲೂಕಿನ ಸಿದ್ಧನೇರ್ಲಿ ಗ್ರಾಮದ ವನಿತಾ …

Read More »

ಪತಿ ಕೊಂದು ಎಮ್ಮೆ ಸತ್ತಿದೆ ಅಂತ ಹೂತು ಹಾಕಿದ್ದ ಕೇಸ್; ನಾಲ್ವರು ಆರೋಪಿಗಳ ಬಂಧನ

ಚಿಕ್ಕೋಡಿ: ಪತಿಯನ್ನು ಕೊಂದು ಎಮ್ಮೆ ಸತ್ತಿದೆ ಅಂತಾ ಹೊಲದಲ್ಲಿ ಹೂತು ಹಾಕಿದ್ದ ಆರೋಪದ ಮೇಲೆ ಪತ್ನಿ ಸೇರಿದಂತೆ ಆಕೆಯ ಸಂಬಂಧಿಕರನ್ನು ನಿಪ್ಪಾಣಿ ಪೊಲೀಸರು ಬಂಧಿಸಿದ್ದಾರೆ. ಮೃತ ಸಚಿನ್ ಪತ್ನಿ ಅನಿತಾ, ಕೃಷ್ಣಾ ಅಲಿಯಾಸ್ ಪಿಂಟು ರಾಜಾರಾಮ್ ಘಾಟಗೆ (26), ವನಿತಾ ಚವ್ಹಾಣ್​(29), ಗಣೇಶ ರೇಡೇಕರ(21),ಬಂಧಿತ ಆರೋಪಿಗಳು. ಅನಿತಾ ತಮ್ಮ ಪತಿಯನ್ನು ಹತ್ಯೆ ಮಾಡಿ ಸಹೋದರ, ಸಹೋದರಿಯ ಸಹಾಯದಿಂದ ಹೊಲದಲ್ಲಿ ಜೆಸಿಬಿಯಲ್ಲಿ ಗುಂಡಿತೋಡಿಸಿದ್ದ ಜಾಗದಲ್ಲಿ ಹೂತು ಪರಾರಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. …

Read More »