Breaking News

ಚಿಕ್ಕೋಡಿ

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಿ – ಮಂಜುಳಾ ನಾಯಿಕ.

ಹುಕ್ಕೇರಿ : ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಿ – ಮಂಜುಳಾ ನಾಯಿಕ. ಜನೇವರಿ 26 ರಂದು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸರಕಾರಿ ಅಧಿಕಾರಿಗಳು ಕಡ್ಡಾಯವಾಗಿ ಭಾಗ ವಹಿಸಬೇಕು ಎಂದು ಹುಕ್ಕೇರಿ ತಹಸಿಲ್ದಾರ ಮಂಜುಳಾ ನಾಯಿಕ ಹೇಳಿದರು. ಅವರು ಇಂದು ಗಣರಾಜ್ಯೋತ್ಸವ ಆಚರಣೆಯ ಪೂರ್ವ ಭಾವಿ ಸಭೆಯಲ್ಲಿ ಮಾತನಾಡುತ್ತಾ ಆರ್ ಟಿ ಆಯ್ ಕಾರ್ಯಕರ್ತ ರಾಜು ಕುರಂದವಾಡೆ ಯವರು ರಾಷ್ಟ್ರೀಯ ಹಬ್ಬಗಳಲ್ಲಿ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸುವದಿಲ್ಲಾ ಈ ಕುರಿತು …

Read More »

ಚಿಕ್ಕೋಡಿ ಹಿರಿಯ ಉಪನೋಂದಣಾಧಿಕಾರಿ ವಿರುದ್ಧ ರೈತರ ಪ್ರತಿಭಟನೆ:ನ್ಯಾಯ ಸಿಗದೇ ಹೋದರೆ ವಿಷಸೇವಿಸಿ ಆತ್ಮಹತ್ಯೆ

ಅನ್ಯಾಯವಾದ ರೈತರಿಗೆ ನ್ಯಾಯ ಸಿಗದೇ ಹೋದರೆ ವಿಷಸೇವಿಸಿ ಆತ್ಮಹತ್ಯೆ ಚಿಕ್ಕೋಡಿ ಹಿರಿಯ ಉಪನೋಂದಣಾಧಿಕಾರಿ ವಿರುದ್ಧ ರೈತರು ಪ್ರತಿಭಟನೆ ಚಿಕ್ಕೋಡಿ: ಭೂಮಿ ಖರೀದಿಯ ವ್ಯಾಜ್ಯವು ನ್ಯಾಯಾಲಯದಲ್ಲಿ ಇರುವಾಗಲೇ ಚಿಕ್ಕೋಡಿ ಉಪನೋಂದನಾಧಿಕಾರಿ ಮತ್ತೊಬ್ಬರಿಗೆ ಆಸ್ತಿಗಳನ್ನು ಮಾರಾಟ ಮಾಡಿ ನ್ಯಾಯಾಲಯದ ಆದೇಶ ಉಲ್ಲಂಘಿಸಿ ರೈತರಿಗೆ ಅನ್ಯಾಯ ಮಾಡಿದ್ದಾರೆ. ಬರುವ ಹದಿನೈದು ದಿನಗಳ ಒಳಗಾಗಿ ರೈತರಿಗೆ ನ್ಯಾಯ ಸಿಗದೇ ಹೋದರೆ ಮಿನಿವಿಧಾನಸೌಧದ ಮುಂಭಾಗದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರೈತರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಚಿಕ್ಕೋಡಿ …

Read More »

ಫೆಬ್ರುವರಿ ತಿಂಗಳಲ್ಲಿ ಕರಗಾಂವ ಏತ ನೀರಾವರಿ ಯೋಜನಗೆ ಚಾಲನೆ:ಶಾಸಕ ದುರ್ಯೋಧನ ಐಹೊಳೆ

ಫೆಬ್ರುವರಿ ತಿಂಗಳಲ್ಲಿ ಕರಗಾಂವ ಏತ ನೀರಾವರಿ ಯೋಜನಗೆ ಚಾಲನೆ:ಶಾಸಕ ದುರ್ಯೋಧನ ಐಹೊಳೆ ಚಿಕ್ಕೋಡಿ:ಸಹಸ್ರಾರು ಎಕರೆ ಜಮೀನು ಹಸಿರಾಗಲಿರುವ ಕರಗಾಂವ ಏತ ನೀರಾವರಿ ಯೋಜನೆಗೆ ಫೆಬ್ರುವರಿ ತಿಂಗಳಲ್ಲಿ ಭೂಮಿಪೂಜೆ ನೆರವೇರಿಸಲಾಗುವುದು. 100 ಕೋಟಿ ರೂ.ಮೊತ್ತದಲ್ಲಿ ಮೊದಲ ಹಂತದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಸಕಲ ಸಿದ್ಧತೆ ನಡೆದಿದೆ” ಎಂದು ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಹೇಳಿದರು. ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ 2 ಕೋಟಿ ರೂ. ಮೊತ್ತದ ರಸ್ತೆ ಸುಧಾರಣಾ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ …

Read More »

ಚಿಂಚಣಿ, ಶಿರಗಾಂವ, ಇಂಗಳಿ ಪಿಕೆಪಿಎಸ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಮೇಲುಗೈ ಎಂಎಲ್ಸಿ ಪ್ರಕಾಶ ಹುಕ್ಕೇರಿಯವರಿಂದ ಸನ್ಮಾನ

ಚಿಕ್ಕೋಡಿ:ಚಿಕ್ಕೋಡಿ ತಾಲ್ಲೂಕಿನ ಇಂಗಳಿ, ಶಿರಗಾಂವ, ಚಿಂಚಣಿ ಗ್ರಾಮದ ವಿವಿದೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರನ್ನು ಕರ್ನಾಟಕ ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿ 2 ಪ್ರಕಾಶ ಹುಕ್ಕೇರಿ ಸತ್ಕರಿಸಿ ,ಅಭಿನಂದಿಸಿದರು. ಚಿಕ್ಕೋಡಿ-ತಾಲ್ಲೂಕಿನ ಚಿಂಚಣಿ, ಶಿರಗಾಂವ ಹಾಗೂ ಇಂಗಳಿ ಗ್ರಾಮದ ವಿವಿದೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಮೂರೂ ಪಿಕೆಪಿಎಸ್ …

Read More »

ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಮಹಿಳೆ ನೇಣಿಗೆ ಶರಣಾ

ಚಿಕ್ಕೋಡಿ: ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಮಹಿಳೆ ನೇಣಿಗೆ ಶರಣಾಗಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ರಾಯಬಾಗ (Raibag) ತಾಲೂಕಿನ ನಿಡಗುಂದಿ (Nidagundi) ಗ್ರಾಮದಲ್ಲಿ ನಡೆದಿದೆ. ರಮ್ಯಾಶ್ರೀ ಬಸವರಾಜ ಹಂಪನ್ನವರ (25) ಮೃತ ಮಹಿಳೆ. ಅನಾರೋಗ್ಯದ ಸಮಸ್ಯೆಯಿಂದ ಮಹಿಳೆ ನೇಣಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ರಮ್ಯಾಶ್ರೀ ಕಳೆದ ನಾಲ್ಕು ವರ್ಷದ ಹಿಂದೆ ಬೇರೆ ಮದುವೆ ಆಗಿ ಪತಿಯಿಂದ ಬೇರ್ಪಟ್ಟಿದ್ದಳು. ಬಳಿಕ ಮೂರು ತಿಂಗಳ ಹಿಂದೆ ನಿಡಗುಂದಿ ಗ್ರಾಮದ ಬಸವರಾಜ ಹಂಪನ್ನವರ …

Read More »

30 ಗುಂಟೆಯಲ್ಲಿ ಬದನೆಕಾಯಿ ಬೆಳೆದು 15 ಲಕ್ಷ ರೂಪಾಯಿ ಲಾಭಗಳಿಸಿದ ಹಜಾರೆ ಸಹೋದರರ

  ಚಿಕ್ಕೋಡಿ: ಭೂಮಿ ತಾಯಿಯನ್ನು ನಂಬಿದ ರೈತನಿಗೆ ಎಂದಿಗೂ ಮೋಸವಾಗಿಲ್ಲ ಎಂಬುದು ಹಿರಿಯರ ಮಾತಿನಂತೆ ಇಲ್ಲೋಬ್ಬ ಯುವ ರೈತ 30 ಗುಂಟೆಯಲ್ಲಿ ಕೇವಲ ಆರು ತಿಂಗಳಲ್ಲಿಯೇ ಬದನೆಕಾಯಿ ಬೆಳೆದು 15 ಲಕ್ಷ ರೂ ಬಂಪರ ಬೆಳೆ ತೆಗೆದು ಇತರ ರೈತನಿಗೆ ಮಾದರಿಯಾಗಿದ್ದಾನೆ. ಚಿಕ್ಕೋಡಿ ತಾಲೂಕಿನ ಕಾಡಾಪೂರ ಗ್ರಾಮದ ಯುವ ರೈತರಾದ ಅನಿಲ ಹಜಾರೆ ಮತ್ತು ಸುನೀಲ ಹಜಾರೆ ಅವರು ತಮ್ಮ ಅರ್ಧ ಎಕರೆಯಲ್ಲಿ 1093 ತಳಿಯ ಬದನೆಕಾಯಿ ಬೆಳೆ ನಾಟಿ …

Read More »

ಚಿಕ್ಕೋಡಿ ಜಿಲ್ಲೆ ಆಗದಿದ್ದರೆ, ಪ್ರತ್ಯೇಕ ರಾಜ್ಯದ ಕೂಗು ಶ್ರೀ ಸಂಪಾದನಾ ಮಹಾಸ್ವಾಮಿಜೀ ಹೇಳಿಕೆ

:ಬೆಳಗಾವಿಯಲ್ಲಿ ಸೋಮವಾರದಿಂದ ನಡೆಯುವ ಚಳಿಗಾಲದ ಅಧಿವೇಶನವನ್ನು ಗಮನಸೆಳೆಯುವ ನಿಟ್ಟಿನಲ್ಲಿ, ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ಆಗ್ರಹಿಸಿ ಡಿಸೆಂಬರ್ 9 ರಿಂದ ಅಧಿವೇಶನ ಮುಗಿಯುವವರೆಗೂ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಚಿಕ್ಕೋಡಿ ಚರಮೂರ್ತಿ ಮಠದ ಸಂಪಾದನಾ ಮಹಾಸ್ವಾಮಿಜಿಯವರು ಹೇಳಿದರು. ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಐದು ದಶಕಗಳಿಂದ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ಹೋರಾಟಗಳನ್ನು, ಸತ್ಯಾಗ್ರಹಗಳನ್ನು, ಧರಣಿಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದೇವೆ‌. ಆದ್ರೂ ಸಹ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ …

Read More »

ಶೀಘ್ರ ಕನಕ ಭವನ ನಿರ್ಮಾಣ: ಪ್ರಕಾಶ ಹುಕ್ಕೇರಿ

ಚಿಕ್ಕೋಡಿ: ಹಾಲುಮತ ಸಮಾಜದವರಿಗೆ ಅನುಕೂಲದ ದೃಷ್ಟಿಯಿಂದ ಚಿಕ್ಕೋಡಿ ಪಟ್ಟಣದಲ್ಲಿ ಹೈಟೆಕ್ ಕನಕ ಭವನ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಶೀಘ್ರದಲ್ಲಿ ಕನಕ ಭವನ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ 2 ಪ್ರಕಾಶ ಹುಕ್ಕೇರಿ ಹೇಳಿದರು. ಪಟ್ಟಣದ ಐಎಂಎ ಸಭಾಭವನದಲ್ಲಿ ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡ ಸಂತ ಶ್ರೇಷ್ಠ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಟ್ಟಣದಲ್ಲಿ ಕನಕ ಭವನ, ವಾಲ್ಮೀಕಿ ಭವನ ನಿರ್ಮಾಣದ ಭರವಸೆ …

Read More »

ಸೌಕರ್ಯ, ಸಿಬ್ಬಂದಿ: ಕೊರತೆ ಆಸ್ಪತ್ರೆಗೇ ಬೇಕಿದೆ ಚಿಕಿತ್ಸೆ!

ಚಿಕ್ಕೋಡಿ: ಪಟ್ಟಣದ ಹೊರವಲಯದಲ್ಲಿ ₹20 ಕೋಟಿ ವೆಚ್ಚದಲ್ಲಿ ಐದು ಎಕರೆಯಲ್ಲಿ ತಲೆ ಎತ್ತಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ ಆಗದಿದ್ದರೂ, ಸೇವೆ ಆರಂಭಿಸಿ ತಿಂಗಳಾಗಿದೆ. ಒಳರೋಗಿಗಳ ವಿಭಾಗ ಕಾರ್ಯಾರಂಭ ಮಾಡಿದ್ದು, ವೈದ್ಯರು, ಸಿಬ್ಬಂದಿ ಹಾಗೂ ಮೂಲಸೌಕರ್ಯ ಕೊರತೆ ಎದ್ದು ಕಾಣುತ್ತಿದೆ.   100 ಹಾಸಿಗೆಗಳ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅ.17ರಿಂದ ನ.16ರವರೆಗೆ 35 ಹೆರಿಗೆಯಾಗಿವೆ. ಈ ಪೈಕಿ 12 ಸಿಸೇರಿಯನ್‌ ಹೆರಿಗೆಯಾಗಿವೆ. ಆದರೆ, ಆರೋಗ್ಯ ಮತ್ತು …

Read More »

ಚಿಕ್ಕೋಡಿಯಲ್ಲಿ ವಿಜೃಂಭಣೆಯಿಂದ ಜರುಗಿದ ಮೇದಾರ ಕೇತಯ್ಯಾ ಜಯಂತಿ

ಚಿಕ್ಕೋಡಿಯಲ್ಲಿ ವಿಜೃಂಭಣೆಯಿಂದ ಜರುಗಿದ ಮೇದಾರ ಕೇತಯ್ಯಾ ಜಯಂತಿ ಚಿಕ್ಕೋಡಿ: ಪಟ್ಟಣದಲ್ಲಿ ಇವತ್ತು ಶಿವಶರಣ ಮೇದಾರ ಕೇತಯ್ಯಾನವರ 894 ನೇ ಜಯಂತೋತ್ಸವ ವಿಜೃಂಭಣೆಯಿಂದ ಜರುಗಿತು. ಪ್ರಾರಂಭದಲ್ಲಿ ಮೇದಾರ ಕೇತಯ್ಯ ಅವರ ಭಾವಚಿತ್ರದ ಮೆರವಣಿಗೆಯು ಸಕಲ ವಾದ್ಯ ಮೇಳದೊಂದಿಗೆ,ಸುಮಂಗಲಿಯರ ಕುಂಭದೊಂದಿಗೆ ಚಿಕ್ಕೋಡಿ ಪಟ್ಟಣದ್ಯಾಂತ ಜರುಗಿತು. ಮೇದಾರ ಕೇತಯ್ಯಾ ಭವನದಿಂದ ಪ್ರಾರಂಭವಾದ ಮೆರವಣಿಗೆಯು ಅಂಕಲಿಕೂಟ, ಗುರುವಾರ ಪೇಟ, ಪುರಸಭೆ, ಬಸವೇಶ್ವರ ವೃತ್ತದವರೆಗೆ ಅತ್ಯಂತ ವಿಜೃಂಭಣೆಯಿಂದ ಸಾಗಿತು. ಬಳಿಕ ಬಸವಣ್ಣನವರ ಹಾಗೂ ಮೇದಾರ ಕೇತಯ್ಯಾನವರ ಭಾವಚಿತ್ರಕ್ಕೆ …

Read More »