ಗೋಕಾಕ: ಇಂದಿನ ಮಕ್ಕಳು ಮುಂದಿನ ಭವಿಷ್ಯ ಹಾಗೂ ಎಂದು ರಾಜ್ಯಾದ್ಯಂತ ಪಲ್ಸ ಪೋಲಿಯೋ ದಿನಾಚರಣೆ ಸದಾ ಸಾಮಾಜಿಕ ಕಳಕಳಿ ಹಾಗೂ ಕಾಳಜಿ ಯಲ್ಲಿರುವ ಶ್ರೀ ಸಂತೋಷ್ ಜಾರಕಿಹೊಳಿ ಅವರು ಯಾವತ್ತೂ ಪ್ರಚಾರ ಬೇಡ ಎಂದು ಹೇಳುತ್ತಾರೆ ಆದರೆ ಅವರ ಗೆಳೆಯರ ಬಳಗ ಸಾಹುಕಾರರು ಮಾಡುವ ಚಿಕ್ಕ ಚಿಕ್ಕ ಕೆಲಸ ಗಳು ಸಮಾಜಕ್ಕೆ ತಿಳಿಯಲಿ ಎಂದು ಅವರು ಮಾಡುವ ಎಲ್ಲ ಕೆಲಸ ಕಾರ್ಯ ಗಳನ್ನ ಸೇರಿ ಹಿಡಿದು ವಾಹಿನಿಗೆ ಸಂದೇಶ ರವಾನೆ …
Read More »ಗೋಕಾಕ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಗೋಕಾಕ ಆಯ್ಕೆ
ಗೋಕಾಕ: ಇಲ್ಲಿನ ನಗರಸಭೆ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಕುತ್ಬುದ್ಧೀನ್ ಗೋಕಾಕ ಶನಿವಾರ ಆಯ್ಕೆಯಾಗಿದ್ದಾರೆ. ಕುತ್ಬುದ್ಧೀನ್ ಅವರು ಮೂರು ಬಾರಿ ನಗರಸಭೆಗೆ ಆಯ್ಕೆಯಾಗಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಮುಖಂಡರಾದ ಲಖನ್ ಜಾರಕಿಹೊಳಿ ಹಾಗೂ ಅಂಬಿರಾವ್ ಪಾಟೀಲ ಅವರ ಸೂಚನೆಯ ಮೇರೆಗೆ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಂಚ್ಯಾಳ, ನಗರ ಸೇವಕರಾದ ಅಬ್ಬಾಸ ದೇಸಾಯಿ, ಸಂತೋಷ …
Read More »ಗೋಕಾಕ ಹೆಸ್ಕಾಂ ಕಚೇರಿ ಮೇಲೆ ಎಸಿಬಿ ದಾಳಿ ಇಬ್ಬರು ಬಲೆ
ಹೊಲಕ್ಕೆ ಹೊಸದಾಗಿ ಟಿಸಿ ಅಳವಡಿಸಲು ರೈತನಿಂದ ರೂ.60 ಸಾವಿರ ಲಂಚ ಪಡೆಯುತ್ತಿದ್ದ ಗೋಕಾಕ ಹೆಸ್ಕಾಂ ಉಪ ವಿಭಾಗದ ಸೆಕ್ಷನ್ ಆಫೀಸರ್ ಹಾಗೂ ಸಿಬ್ಬಂದಿ ಶುಕ್ರವಾರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಬಿದ್ದಿದ್ದಾರೆ. ಲೋಳಸೂರ ಸೆಕ್ಷನ್ ಆಫೀಸರ್ ಪ್ರಕಾಶ ಪರೀಟ, ಹಾಗೂ ಸಿಬ್ಬಂದಿ ಮಲ್ಲಯ್ಯ ಹಿರೇಮಠ ಅರೋಪಿಗಳಾಗಿದ್ದಾರೆ. ಎಸಿಬಿ ಅಧಿಕಾರಿಗಳು ಇಬ್ಬರನ್ನೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಅರಭಾವಿಯ ಆನಂದ ಧರ್ಮಟ್ಟಿ ಅವರು ನೀಡಿದ ದೂರಿನ ಆಧಾರದ ಮೇಲೆ ಎಸಿಬಿ …
Read More »ವಿಕಲಚೇತನರಿಗೆ ತ್ರೀಚಕ್ರ ವಾಹನ(ಬೈಕ್)ಗಳನ್ನು ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ : ವಿಕಲಚೇತನರು ಮುಖ್ಯ ವಾಹಿನಿಗೆ ತರಲು ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಗುರುವಾರ ಸಂಜೆ ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ ವಿಕಲಚೇತನರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಿ ಅವರು ಮಾತನಾಡಿದರು. ವಿಕಲಚೇತನರನ್ನು ಸಮಾಜ ಗೌರವದಿಂದ ನಡೆಸಿಕೊಳ್ಳಬೇಕು. ಅವರ ಬಗ್ಗೆ ಕೀಳುರಿಮೆ ಮಾಡದೇ ಆದರದಿಂದ ನೋಡಿಕೊಳ್ಳಬೇಕು. ವಿಕಲಚೇತನರ ಪ್ರಗತಿಗಾಗಿ …
Read More »ಕೆಎಂಎಫ್‍ಗೆ ಹಾಲು ನೀಡುವ ರೈತರ ಮಕ್ಕಳಿಗೆ ಬೆಳಗಾವಿಯಲ್ಲಿ 3 ಕೋಟಿ ರೂ. ವೆಚ್ಚದ ಹೈಟೆಕ್ ಹಾಸ್ಟೇಲ್ ನಿರ್ಮಾಣ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಗೋಕಾಕ : ಕೆಎಂಎಫ್‍ಗೆ ಹಾಲು ಪೂರೈಸುತ್ತಿರುವ ರೈತರ ಮಕ್ಕಳ ಶೈಕ್ಷಣಿಕ ಅನುಕೂಲಕ್ಕಾಗಿ ಬೆಳಗಾವಿಯಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ವಸತಿ ನಿಲಯವನ್ನು ನಿರ್ಮಿಸಿಕೊಡಲಾಗುವುದು ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟ ಏರ್ಪಡಿಸಿದ್ದ ಕೃತಕ ಗರ್ಭಧಾರಣಾ ಕಾರ್ಯಕರ್ತರಿಗೆ ಇನಾಫ್ ತಂತ್ರಾಂಶವನ್ನು ಒಳಗೊಂಡ ಟ್ಯಾಬ್ ಮತ್ತು ಒಕ್ಕೂಟದ ಕಲ್ಯಾಣ ನಿಧಿಯಿಂದ ಫಲಾನುಭವಿಗಳಿಗೆ ಚೆಕ್‍ಗಳನ್ನು ವಿತರಿಸಿ …
Read More »ಸಚಿವರು ಜವಾಬ್ದಾರಿಯುತ ಹೇಳಿಕೆ ನೀಡಲಿ: ಸತೀಶ ಜಾರಕಿಹೊಳಿ ಟಾಂಗ್
ಗೋಕಾಕ: “ರೈತರ ಪ್ರತಿಭಟನೆಯ ಕುರಿತು ಸಚಿವರು ಹಾದಿ-ಬೀದಿಯಲ್ಲಿ ಹೋಗುವವರ ರೀತಿ ಮಾತನಾಡಬಾರದು. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಜವಾಬ್ದಾರಿಯುತ ಹೇಳಿಕೆ ನೀಡಬೇಕು” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿಕೆಗೆ ಟಾಂಗ್ ನೀಡಿದರು. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬರು ಹಕ್ಕು. ಆದರೆ, ಹಿಂಸಾತ್ಮಕ ಹೋರಾಟ ನಡೆಸುವುದು ತಪ್ಪು. ರೈತರ ಪ್ರತಿಭಟನೆ ಪಕ್ಷಾತೀತವಾಗಿದ್ದು, ಈ ಬಗ್ಗೆ ಯಾರೂ ಕೂಡ ಹಗುರವಾಗಿ ಮಾತನಾಡಬಾರದರು” ಎಂದರು. …
Read More »ವಿಶೇಷಚೇತನರಿಗೆ ತ್ರಿಚಕ್ರ ವಾಹನ ವಿತರಿಸಿದ ಸಚಿವ ರಮೇಶ ಜಾರಕಿಹೊಳಿ
ಗೋಕಾಕ: ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ 2019-20 ನೇ ಸಾಲಿನಲ್ಲಿ ವಿಶೇಷ ಚೇತನರಿಗೆ ಮಂಜೂರಾದ ತ್ರಿಚಕ್ರ ವಾಹನಗಳನ್ನು ಫಲಾನುಭವಿಗಳಿಗೆ ಸಚಿವ ರಮೇಶ ಜಾರಕಿಹೊಳಿ ಹಂಚಿಕೆ ಮಾಡಿದರು. ಇಲ್ಲಿನ ತಮ್ಮ ಗೃಹ ಕಚೇರಿ ಆವರಣದಲ್ಲಿ 15 ವ ವಿಶೇಷಚೇತನ ಫಲಾನುಭವಿಗಳಿಗೆ ವಾಹನ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ಟಿ.ಆರ್ ಕಾಗಲ ಮಡ್ಡಪ್ಪ ತೋಳಿನವರ.ಬಿಜೆಪಿ ಗ್ರಾಮೀಣ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ಸೇರಿದಂತೆ ಇಲಾಖೆ ಅಧಿಕಾರಿಗಳು,ಮುಖಂಡರು ಉಪಸ್ಥಿತರಿದ್ದರು.
Read More »ವಿವಾದಾತ್ಮಕ ಪುಸ್ತಕ ಬಿಡುಗಡೆ; ಮಹಾ ಸರ್ಕಾರದ ವಿರುದ್ಧ ಕರವೇ ಪ್ರತಿಭಟನೆ
ಗೋಕಾಕ- ಕನಾ೯ಟಕ ಸೀಮಾವಾದ ಸಂಘಷ೯ ಸಂಕಲ್ಪ ಎಂಬ ವಿವಾದಾತ್ಮಕ ಪುಸ್ತಕವನ್ನು ಇಂದು ಮಹಾರಾಷ್ಟ್ರ ಸರ್ಕಾರ ಬಿಡುಗಡೆಗೊಳ್ಳಸುತ್ತಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಗೋಕಾಕ ತಾಲೂಕಾ ಘಟಕದ ಕಾರ್ಯಕರ್ತರು ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿ ವಾಲ್ಮೀಕಿ ವೃತ್ತದಲ್ಲಿ ಸೇರಿ ಮಹಾ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪುಸ್ತಕದ ಮುಖ ಪುಟವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಈ ಪ್ರತಿಭಟನೆಯಲ್ಲಿ ಕೃಷ್ಣಾ ಖಾನಪ್ಪನವರ, ದೀಪಕ ಹಂಜಿ, ಮುಗುಟ ಪೈಲ್ವಾನ್, ರಮೇಶ ಕಮತಿ, ಶೆಟ್ಟೆಪ್ಪಾ ಗಾಡಿವಡ್ಡರ, …
Read More »ಗೋಕಾಕ ಬಳಿ ಭಾರಿ ಪ್ರಮಾಣದಲ್ಲಿ ಜಿಲಿಟಿನ್ ಕಡ್ಡಿ ವಶ
ಗೋಕಾಕ ತಾಲೂಕನಲ್ಲಿ ಅಕ್ರಮವಾಗಿ ಸಂಗ್ರಹಿಸಲ್ಪಟ್ಟಿದ್ದ 49 ಜಿಲಿಟಿನ್ ಸ್ಫೋಟಕ ಪದಾರ್ಥಗಳನ್ನು ಆಂತರಿಕ ಭದ್ರತಾ ವಿಭಾಗದ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಗೋಕಾಕ ತಾಲೂಕಿನ ಮಣ್ಣಿಕೇರಿ ರಾಮೇಶ್ವರ ಕೆನಾಲ್ ಹತ್ತಿರ ಈ ಸ್ಫೋಟಕ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ. ರಾಯಬಾಗ ತಾಲೂಕಿನ ನಿಪನಾಳದ ವಿಠ್ಠಲ ಯಮನಪ್ಪ ಹಳಬರ ಟ್ರ್ಯಾಕ್ಟರ್ ನಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದ. 23 ಇಡಿ ಕೇಬಲ್ ಹಾಗೂ ಬ್ಲಾಸ್ಟಿಂಗ್ ಚಾರ್ಜರ್ ಬ್ಯಾಟರಿ ಕೂಡ ಆತನ ಬಳಿ ಇತ್ತು. ಇದರ ಮೌಲ್ಯ 2,03,500 ರೂ. ಕುಲಗೋಡ ಪೊಲೀಸ್ ಠಾಣೆಯಲ್ಲಿ …
Read More »ಗೋಕಾಕ: ನಗರದ ತಾಲೂಕಾ ವಾಲ್ಮೀಕಿ ಕ್ರೀಡಾಂಗಣದಲ್ಲಿ ತಾಲೂಕಾಡಳಿತದ ಆಶ್ರಯದಲ್ಲಿ ಜರುಗಿದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಅವರು ಮಾತನಾಡುತ್ತಿರುವುದು.
ಗೋಕಾಕ: ಗಣರಾಜ್ಯವು ದೇಶದ ನಾಗರೀಕರಿಗೆ ತನ್ನ ರಾಷ್ಟ್ರದ ಜವಾಬ್ದಾರಿಯನ್ನು ನೀಡಿದ ದಿನವಾಗಿದ್ದು, ಗಣತಂತ್ರ ವ್ಯವಸ್ಥೆಯು ಭಾರತೀಯರಿಗೆ ಸಾರ್ವಭೌಮಾಧಿಕಾರವನ್ನು ಕಲ್ಪಿಸಿಕೊಟ್ಟ ಮಹತ್ವದ ದಿನವಾಗಿದೆ ಎಂದು ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಹೇಳಿದರು. ಮಂಗಳವಾರದಂದು ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ತಾಲೂಕಾಡಳಿತ ಹಾಗೂ ನಗರಸಭೆ ಇವುಗಳ ಆಶ್ರಯದಲ್ಲಿ ಜರುಗಿದ 72ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಗಣತಂತ್ರವು ವ್ಯಕ್ತಿ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಗಳನ್ನು ನೀಡುವುದರ ಮೂಲಕ ಮೂಲಭೂತ ಹಕ್ಕುಗಳನ್ನು ನೀಡಿದೆ ಎಂದು ತಿಳಿಸಿದರು. …
Read More »
Laxmi News 24×7