Breaking News

ಬೆಂಗಳೂರು

ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ ಸಿಎಂ ಜೊತೆ ಚರ್ಚೆ: ಚಲುವರಾಯಸ್ವಾಮಿ

ಬೆಂಗಳೂರು: ವಿಧಾನಸೌಧದಲ್ಲಿ  ಮಾಧ್ಯಮಗಳಿಗೆ ನಿರ್ಬಂಧ ಹಾಕಿರೋ ವಿಚಾರವನ್ನು ಸಿಎಂ ಗಮನಕ್ಕೆ ತಂದು ಸರಿ ಮಾಡಿಸುತ್ತೇನೆ ಅಂತ ಸಚಿವ ಚಲುವರಾಯಸ್ವಾಮಿ  ಭರವಸೆ ನೀಡಿದ್ದಾರೆ. ವಿಧಾನಸೌಧಕ್ಕೆ ಮಾಧ್ಯಮಗಳ ನಿರ್ಬಂಧ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮಾಧ್ಯಮಗಳ ನಿಯಂತ್ರಣದ ಬಗ್ಗೆ ನನಗೆ ಗೊತ್ತಿಲ್ಲ. ಯಾರು ಸೂಚನೆ ಕೊಟ್ಟಿದ್ದಾರೆ ಗೊತ್ತಿಲ್ಲ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಕೊಟ್ಟಿದ್ದರೆ ಸಿಎಂ ಗಮನಕ್ಕೆ ಅದನ್ನ ತರುತ್ತೇನೆ ಎಂದರು. ಮಾಧ್ಯಮಗಳು ಮುಖ್ಯ. ಸಿಎಂ ಗಮನಕ್ಕೆ ತಂದು ಮಾಧ್ಯಮಗಳಿಗೆ ಅವಕಾಶ …

Read More »

ಮಾಧ್ಯಮಗಳನ್ನ ಹತ್ತಿಕ್ಕಲು ಹೊರಟ ಸರ್ಕಾರ – ಶಕ್ತಿಸೌಧದಲ್ಲಿ ಭದ್ರತಾ ಲೋಪ ಬಯಲಿಗೆಳೆದಿದ್ದೇ ತಪ್ಪಾ..?

ಬೆಂಗಳೂರು: ವಿಧಾನಸಭೆ ಅಧಿವೇಶನಕ್ಕೆ ಮಾಧ್ಯಮಗಳಿಗೆ ನಿರ್ಬಂಧದ ಬಳಿಕ ಮತ್ತೆ ವಿಧಾನಸೌಧದಲ್ಲಿ ಭದ್ರತೆಯ ನೆಪವೊಡ್ಡಿ ಮಾಧ್ಯಮಗಳಿಗೆ ನಿರ್ಬಂಧ ಹಾಕುವ ಕೆಲಸಕ್ಕೆ ರಾಜ್ಯ ಸರ್ಕಾರ  ಮುಂದಾಗಿದೆ. ಸೂಚಿಸಿದ ಸ್ಥಳದಲ್ಲಿ ಮಾತ್ರ ಜನಪ್ರತಿನಿಧಿಗಳನ್ನ ಮಾತನಾಡಿಸಬೇಕು ಎಂಬ ನಿಯಮ ತಂದು ಮಾಧ್ಯಮಗಳ ಸ್ವಾತಂತ್ರ‍್ಯ (Media Freedom) ಕಸಿಯೋ ಕೆಲಸಕ್ಕೆ ಕೈ ಹಾಕಿದೆ. ಪ್ರಜಾಪ್ರಭುತ್ವದ 4ನೇ ಸ್ತಂಭ ಎಂದೇ ಕರೆಯಲ್ಪಡುವ ಮಾಧ್ಯಮಗಳ ಧ್ವನಿಯನ್ನು ಹತ್ತಿಕ್ಕಲು ರಾಜ್ಯ ಸರ್ಕಾರ ಮುಂದಾಗಿದೆ. ಅಭಿವ್ಯಕ್ತಿ ಸ್ವಾತಂತ್ರ‍್ಯ ಮತ್ತು ಮಾಧ್ಯಮ ಸ್ವಾತಂತ್ರ‍್ಯದ ಬಗ್ಗೆ …

Read More »

ಬೆಂಗಳೂರು ಚಲೋ ನಡೆಯುತ್ತೆ, ಸಾರಿಗೆ ನೌಕರರು ಮುಷ್ಕರದಲ್ಲಿ ಭಾಗಿಯಾಗಿ: ಸಂಘಟನೆ ಮನವಿ

ಬೆಂಗಳೂರು: ಗುರುವಾರ ನಿಗದಿಯಾಗಿರುವಂತೆಯೇ ನಮ್ಮ ಬೆಂಗಳೂರು ಚಲೋ  ಕಾರ್ಯಕ್ರಮ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಕಾರ್ಯರ್ಶಿ ವಿಜಯ್ ಭಾಸ್ಕರ್‌ ಹೇಳಿದ್ದಾರೆ. 38 ತಿಂಗಳ ಹಿಂಬಾಕಿ ಪೈಕಿ 26 ತಿಂಗಳ ಹಿಂಬಾಕಿ ನೀಡುವುದಾಗಿ ಸರ್ಕಾರ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿದೆ. ಡಿಸೆಂಬರ್ 13 ರಿಂದ ಚರ್ಚೆಗೆ ಕರೆಯುತ್ತೇವೆ ಎಂದು ಹೇಳಿದರೂ ಇಲ್ಲಿಯವರೆಗೆ ಕರೆದಿಲ್ಲ ಎಂದು ಸಿಟ್ಟು ಹೊರಹಾಕಿದರು. ನಮ್ಮ ಪ್ರಕಾರ 27 …

Read More »

ಮತದಾರರ ಪಟ್ಟಿ ಪರಿಷ್ಕರಣೆ ಲೋಪ ಸರಿಪಡಿಸಲು ಡಿಕೆಶಿ ಟೀಂ ಮನವಿ

ಬೆಂಗಳೂರು: ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಮಾಡಲಾಗುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿನ ಲೋಪ ಸರಿಪಡಿಸುವಂತೆ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನೇತೃತ್ವದ ನಿಯೋಗ ಮಂಗಳವಾರ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್‌.ಸಂಗ್ರೇಶಿ ಅವರಿಗೆ ಮನವಿ ಸಲ್ಲಿಸಿತು. ರಾಜ್ಯ ಚುನಾವಣಾ ಆಯೋಗದ ಕಚೇರಿಯಲ್ಲಿ ಆಯುಕ್ತರನ್ನು ಭೇಟಿಯಾದ ಮನವಿ ಸಲ್ಲಿಸಲಾಯಿತು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್‌, ರಾಜ್ಯ ಚುನಾವಣಾ ಆಯೋಗವು ಜಿಬಿಎ ಅಡಿಯಲ್ಲಿನ 5 …

Read More »

ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಗೂ ಮೊದಲೇ ಪಲಿತಾಂಶ ಡೇಟ್ ಪ್ರಕಟಿಸಿದ ಶಿಕ್ಷಣ ಇಲಾಖೆ

ಬೆಂಗಳೂರು:2025-26ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ನಡೆಸಲು ಸರ್ಕಾರವು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಇದೇ ಮೊದಲ ಬಾರಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ದಾಖಲೆಯ 9.02 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ  ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಶಾಲಾ ಶಿಕ್ಷಣ ಇಲಾಖೆಯ ರಾಜ್ಯ ಯೋಜನಾ ನಿರ್ದೇಶಕರ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಫೆ.28ರಿಂದ ಮಾ.17ರವರೆಗೆ ದ್ವಿತೀಯ …

Read More »

ಲೋಪದೋಷ ಸರಿಪಡಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಡಿಕೆಶಿ ನೇತೃತ್ವದ ನಿಯೋಗ ಮನವಿ

ಬೆಂಗಳೂರು: ರಾಜ್ಯ ಚುನಾವಣಾ ಆಯೋಗಕ್ಕೆ ಡಿಸಿಎಂ ಡಿಕೆಶಿ ನೇತೃತ್ವದ ಕಾಂಗ್ರೆಸ್ ನಿಯೋಗ ಭೇಟಿ ನೀಡಿ, ಮತದಾರರ ಪಟ್ಟಿ ಪರಿಷ್ಕರಣೆ ಲೋಪದೋಷ ಸರಿಪಡಿಸುವಂತೆ ಒತ್ತಾಯಿಸಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ), ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಲೋಪದೋಷಗಳಿದ್ರೆ ಸರಿಪಡಿಸುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದ ನಿಯೋಗ ರಾಜ್ಯ ಚುನಾವಣೆ ಆಯುಕ್ತ ಜಿ ಎಸ್ ಸಂಗ್ರೇಶಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಸಚಿವರಾದ …

Read More »

ಬಜೆಟ್ ಸಮಯದಲ್ಲಿ ಕಾಂಗ್ರೆಸ್ ಬಣ ಬಡಿದಾಟ ಜಾಸ್ತಿ ಆಗಲಿದೆ – ಆರಗ ಜ್ಞಾನೇಂದ್ರ

ಬೆಂಗಳೂರು: ಬಜೆಟ್ ಸಮಯದಲ್ಲಿ ಕಾಂಗ್ರೆಸ್ ಬಣ ಬಡಿದಾಟ ಜಾಸ್ತಿ ಆಗಲಿದೆ ಅಂತ ಮಾಜಿ ಸಚಿವ ಆರಗ ಜ್ಞಾನೇಂದ್ರ ಭವಿಷ್ಯ ನುಡಿದಿದ್ದಾರೆ. ಕಾಂಗ್ರೆಸ್ ನಲ್ಲಿ ಫಾರಿನ್ ಟ್ರಿಪ್ ಪಾಲಿಟಿಕ್ಸ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ  ಸೊನ್ನೆ ಅಭಿವೃದ್ಧಿ, ಈಗ ಕಿತ್ತಾಟ ಶುರುವಾಗಿದೆ. ಅದು ಎಲ್ಲಿಗೆ ಹೋಗಿ ನಿಲ್ಲುತ್ತೋ ಹೇಳೋಕೆ ಸಾಧ್ಯವಿಲ್ಲ. ಹೈಕಮಾಂಡ್ ಹೇಳಿದಂತೆ ಕೇಳ್ತೀವಿ ಅಂತಾರೆ. ಹೈಕಮಾಂಡನ್ನ ಧಿಕ್ಕರಿಸೋ ಕೆಲಸ ನಡೆದಿದೆ. ಸಿಎಂ-ಡಿಸಿಎಂ  ಕುರ್ಚಿ ಹೋರಾಟದಲ್ಲಿ ಸಂಪೂರ್ಣವಾಗಿ ಕರ್ನಾಟಕ …

Read More »

ಮಹಿಳಾ ಮೀಸಲಾತಿ ಬಂದ್ರೆ ಮಗಳನ್ನೇ ಚುನಾವಣೆಗೆ ನಿಲ್ಲಿಸ್ತೀನಿ: ಕೆ.ಎನ್‌ ರಾಜಣ್ಣ

ಬೆಂಗಳೂರು: ಮುಂದಿನ ಸಲ ಮಹಿಳಾ ಮೀಸಲಾತಿ ಬಂದ್ರೆ ಮಗಳನ್ನೇ ಚುನಾವಣೆಗೆ ನಿಲ್ಲಿಸುತ್ತೇನೆ ಎಂದು ಮಾಜಿ ಸಚಿವ ಕೆ.ಎನ್‌ ರಾಜಣ್ಣ  ಹೇಳಿದ್ದಾರೆ. ಬೆಂಗಳೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಣ್ಣ ಮಹಿಳಾ ಮೀಸಲಾತಿ ಬಂದ್ರೆ ಪುತ್ರಿ ರಶ್ಮಿ ರಾಜಣ್ಣ  ರನ್ನ ಚುನಾವಣೆಗೆ ನಿಲ್ಲಿಸುತ್ತೇನೆ ಎಂದು ಹೇಳಿದ್ದಾರೆ. ಇನ್ನೂ ಸಿಎಂ ಬದಲಾವಣೆ ಕುರಿತ ಚರ್ಚೆಗೆ ಪ್ರತಿಕ್ರಿಯಿಸಿ, ಮುಂದೆ ಮಹತ್ವದ ರಾಜಕೀಯ ಬದಲಾವಣೆ ಆಗುತ್ತೆ ಅಂತ ಅಂದುಕೊಂಡ್ರೆ ಸುಳ್ಳು. ಸಿದ್ದರಾಮಯ್ಯ  ಅವರು ಗಟ್ಟಿಯಾಗಿ ವಿಶ್ವಾಸದಲ್ಲಿದ್ದಾರೆ, ಬಜೆಟ್ …

Read More »

ಫೆ.28 ರಿಂದ ದ್ವಿತೀಯ ಪಿಯುಸಿ, ಮಾರ್ಚ್‌ 18 ರಿಂದ SSLC ಪರೀಕ್ಷೆ – ಮಧು ಬಂಗಾರಪ್ಪ

ಬೆಂಗಳೂರು: ಫೆ.28 ರಿಂದ ಮಾರ್ಚ್‌ 17 ರ ವರೆಗೆ ದ್ವಿತೀಯ ಪಿಯುಸಿ ಹಾಗೂ ಮಾರ್ಚ್‌ 18 ರಿಂದ ಏಪ್ರಿಲ್‌ 2 ರ ವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಕಟಿಸಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಫೆ.28 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ, ಮಾ. 18 ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿದೆ. ದ್ವಿತೀಯ ಪಿಯುಸಿ ಪರೀಕ್ಷೆಗಳು ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ …

Read More »

ಮುಖ ತೊಳೆಯುವಾಗ ಕಾಲುಜಾರಿ ಮಗ ನೀರುಪಾಲು – ರಕ್ಷಿಸಲು ಹೋಗಿ ತಂದೆಯೂ ಸಾವು

ಬೀದರ್: ಮುಖ ತೊಳೆಯಲು ಹೋಗಿ ಕಾಲು ಜಾರಿ ನೀರುಪಾಲಾಗಿದ್ದ ಮಗನನ್ನು ರಕ್ಷಿಸಲು ಹೋಗಿ ತಂದೆಯೂ ಜಲಸಮಾಧಿಯಾಗಿರುವ ಘಟನೆ ಬೀದರ್‌ನ  ಹಾಲಳ್ಳಿ ಗ್ರಾಮದ ಕಾರಂಜಾ ನದಿಯ ಹಿನ್ನೀರಿನ ಕಾಲುವೆಯಲ್ಲಿ ನಡೆದಿದೆ. ಮೃತರನ್ನು ಹಳ್ಳೆಖೇಡ್(ಬಿ) ಗ್ರಾಮದ ತಂದೆ ಈಶಪ್ಪ (50) ಮತ್ತು ಮಗ ಅಮರೇಶ (23) ಎಂದು ಗುರುತಿಸಲಾಗಿದೆ. ತಂದೆ-ಮಗ ಬೀದರ್‌ನಲ್ಲಿ ಸಿಮೆಂಟ್ ಖಾಲಿ ಮಾಡಿ, ವಾಪಸ್ ಹಳ್ಳಿಖೇಡ್‌ಗೆ ಹೋಗುತ್ತಿದ್ದರು. ಈ ವೇಳೆ ಕಾರಂಜಾ ನದಿಯ ಹಿನ್ನೀರಿನ ಕಾಲುವೆಯಲ್ಲಿ ಮಗ ಮುಖ ತೊಳೆಯಲು …

Read More »