Breaking News

ಬೆಂಗಳೂರು

ಉದ್ಯಾನವನದಲ್ಲಿದ್ದ ಡಾ.ರಾಜ್ ಕುಮಾರ್ ಕಂಚಿನ ಪ್ರತಿಮೆ ನಾಪತ್ತೆ..!

ಬೆಂಗಳೂರು: ನಗರದ ಲುಂಬಿನಿ ಗಾರ್ಡನ್​​ನಲ್ಲಿದ್ದ ವರನಟ ಡಾ.ರಾಜ್ ಕುಮಾರ್ ಪುತ್ಥಳಿಯನ್ನ ಕಳ್ಳರು ಕದ್ದೊಯ್ದಿದ್ದಾರೆ. ಎರಡು ದಿನಗಳ ಹಿಂದೆ ಕಂಚಿನ ಪ್ರತಿಮೆಯನ್ನ ಕಳ್ಳತನ ಮಾಡಲಾಗಿದೆ. ಈ ಸಂಬಂಧ ಅರಣ್ಯಾಧಿಕಾರಿ ಯೋಗೇಶ್ ಅನ್ನೋರು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಇಬ್ಬರು ಶಂಕಿತ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

Read More »

ಸೋಮಾರಿ ಮಂತ್ರಿಗಳನ್ನ ಕೈಬಿಡಿ -ತಮ್ಮದೇ ಸರ್ಕಾರಕ್ಕೆ ವಿಶ್ವನಾಥ್ ಆಗ್ರಹ

ಬೆಂಗಳೂರು: ಸೋಮಾರಿ ಮಂತ್ರಿಗಳನ್ನ ಕೈಬಿಡಬೇಕು ಎಂದು ಪರಿಷತ್ ಸದಸ್ಯರಾದ ಹೆಚ್​​​.ವಿಶ್ವನಾಥ್ ಒತ್ತಾಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ವಿಶ್ವನಾಥ್​​.. ಕೇವಲ ವಿಧಾನಸಭಾ ಕ್ಷೇತ್ರವನ್ನೇ ರಾಜ್ಯ ಅಂದುಕೊಂಡಿರುವ, ರಾಜ್ಯ ಪರ್ಯಟನೆ ಮಾಡದ ಸಚಿವರನ್ನ ಕೈಬಿಡಬೇಕು. ರಾಜ್ಯದ ಅಭಿವೃದ್ಧಿಗೆ ಬದಲಾವಣೆ ಅಗತ್ಯ ಇದೆ. ಸರಿಯಾದ ರೀತಿಯಲ್ಲಿ ಸಂಪುಟ ಪುನಾರಚಿಸಿ, ಆಡಳಿತಕ್ಕೆ ಚುರುಕು ಮುಟ್ಟಿಸಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ, ಹಿರಿಯ ಸಚಿವರು ಪಕ್ಷದ ಕೆಲಸ ಮಾಡ್ಲಿ, ಯುವ ಶಾಸಕರಿಗೆ ಸಂಪುಟದಲ್ಲಿ ಅವಕಾಶ ನೀಡಲಿ ಎಂದು ಸಲಹೆ ನೀಡಿದ್ದಾರೆ.

Read More »

ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಎರಡೂ ಸ್ಥಾನಗಳು ಮಹಿಳೆಯರ ಪಾಲಾಗಿವೆ

ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಎರಡೂ ಸ್ಥಾನಗಳು ಮಹಿಳೆಯರ ಪಾಲಾಗಿವೆ.ಪಾಲಿಕೆ ಮೇಯರ್ ಸ್ಥಾನ  ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು,ಉಪಮೇಯರ್ ಸ್ಥಾನ ಹಿಂದುಳಿದ ಬ ವರ್ಗ ಮಹಿಳೆಗೆ ಮೀಸಲಿಡಲಾಗಿದೆ. ಅಂತು ಇಂತೂ ಪಾಲಿಕೆಯಲ್ಲಿ ನಗರಸೇವಕರ ಪರ್ವ ಶುರುವಾಗಿದ್ದು ಇಬ್ಬರು ಮಹಿಳೆಯರು ಅಧಿಕಾರ ನಡೆಸಲಿದ್ದು ಶೀಘ್ರದಲ್ಲೇ ಮೇಯರ್ ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ದಿನಾಂಕ ಪ್ರಕಟವಾಗಲಿದೆ. ಒಂದು ವರ್ಷದ ಹಿಂದೆ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಉಪ ಮೇಯರ್ …

Read More »

ಸಿಲಿಕಾನ್ ಸಿಟಿಯ ಖತರ್ನಾಕ್ ರಾಬರಿ ಗ್ಯಾಂಗ್! ವಿಲಿಂಗ್ ವೇಳೆ ಪರಿಚಯ, 23 ಬೈಕ್ ಕಳ್ಳತನ, ಹಣಕ್ಕಾಗಿ ಲೇಟ್ ನೈಟ್ ರಾಬರಿಗಳು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೊಂದು ಖತರ್ನಾಕ್ ರಾಬರಿ ಗ್ಯಾಂಗ್ ಪತ್ತೆಯಾಗಿದೆ. ಈ ಗ್ಯಾಂಗ್ ಲೇಟ್ ನೈಟ್ ಡೆಲವರಿ ಬಾಯ್ಗಳನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡುತ್ತೆ. ಸದ್ಯ ಪೊಲೀಸರು ಈ ಗ್ಯಾಂಗ್ನ 6 ಮಂದಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದು ಅವರೆಲ್ಲ ಮೀಸೆ ಚಿಗುರುವ ವಯಸ್ಸಿಗೆ ಅಡ್ಡದಾರಿ ಹಿಡಿದು ಅಂದರ್ ಆದ ಯುವಕರು. ಇವರ ತನಿಖೆ ವೇಳೆ ಬಯಲಾಯ್ತು ರೋಚಕ ಕಹಾನಿ. ರಾಬರಿ ಗ್ಯಾಂಗ್ ಹಿಂದೆ ಬಿದ್ದ ಪೊಲೀಸರಿಗೆ ಆರು ಮಂದಿ ಆರೋಪಿಗಳು ಸಿಕ್ಕಿ …

Read More »

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್​ನ ಕಟ್ಟಿಹಾಕಿದ ಯು ಮುಂಬಾ..!

ಬೆಂಗಳೂರು ಬುಲ್ಸ್ ವಿರುದ್ಧ ಯು-ಮುಂಬಾ 45-34 ಅಂತರದಲ್ಲಿ ಭರ್ಜರಿ ಜಯ ಸಾಧಿಸಿದೆ. ಭಾರೀ ಪೈಪೋಟಿಗೆ ಕಾರಣವಾಗಿದ್ದ ಈ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡವು ಅಂತಿಮ ಹಂತದಲ್ಲಿ ಸೋಲೊಪ್ಪಿಕೊಂಡಿತು. ಉಭಯ ತಂಡಗಳು ಮೊದಲಾರ್ಧದಲ್ಲಿ ಸಮಬಲದ ಹೋರಾಟ ನಡೆಸಿತ್ತು. ಬೆಂಗಳೂರು ಬುಲ್ಸ್ ಪರ ನಾಯಕ ಪವನ್ ಕುಮಾರ್ ಶೆಹ್ರಾವತ್ ಅತ್ಯುತ್ತಮ ಪ್ರದರ್ಶನ ನೀಡಿದರೆ, ಯು-ಮುಂಬಾದಲ್ಲಿ ಅಭಿಷೇಕ್ ಸಿಂಗ್ ಮಿಂಚಿದರು. ಬೆಂಗಳೂರು ಬುಲ್ಸ್ ಪರ ಪವನ್ ಕುಮಾರ್ ಶೆಹ್ರಾವತ್ 10 ರೈಡಿಂಗ್ ಪಾಯಿಂಟ್ ಕಲೆ …

Read More »

ಕಾಂಗ್ರೆಸ್​ ಹೈಕಮಾಂಡ್​​ನಿಂದ ಬಿಗ್​ ಶಾಕ್; ಸಿಎಂ ಇಬ್ರಾಹಿಂ ನಿರೀಕ್ಷೆ ನೀರುಪಾಲು..!

ಬೆಂಗಳೂರು: ಕಾಂಗ್ರೆಸ್‌ ಹಿರಿಯ ನಾಯಕ ಎಸ್‌.ಆರ್ ಪಾಟೀಲ್‌ ಅವರ ನಿವೃತ್ತಿಯಿಂದ ತೆರವಾದ ಪರಿಷತ್‌ ವಿಪಕ್ಷ ನಾಯಕ ಸ್ಥಾನಕ್ಕೆ, ಬಿ.ಕೆ ಹರಿಪ್ರಸಾದ್‌ ನೇಮಕವಾಗಿದೆ. ಇದರ ಜತೆಗೆ, ಎಂ ನಾರಾಯಣಸ್ವಾಮಿ ಅವರ ನಿವೃತ್ತಿಯಿಂದ ತೆರವಾದ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಸ್ಥಾನಕ್ಕೆ ಪ್ರಕಾಶ್‌ ಸಿಂಗ್‌ ರಾಠೋಡ್‌ ಅವರನ್ನು ಆಯ್ಕೆ ಮಾಡಲಾಗಿದೆ. ಕೆ. ಗೋವಿಂದ ರಾಜ್‌ ಅವರನ್ನು ವಿಧಾನ ಪರಿಷತ್‌ನ ಉಪ ನಾಯಕನಾಗಿ ಆಯ್ಕೆ ಮಾಡಿ ಸೋನಿಯಾ ಗಾಂಧಿ ಆದೇಶ ಹೊರಡಿಸಿದ್ದಾರೆ. ಅಚ್ಚರಿ ಎಂದ್ರೆ, …

Read More »

ಈ ಬಾರಿ ಅಪರ್ಣಾ ಅಲ್ಲ ಡಾ.ಗಿರಿಜಾಗೆ ಗಣರಾಜ್ಯೋತ್ಸವ ನಿರೂಪಣೆಗೆ ಅವಕಾಶ

ಹೋರಾಟ, ಬದಲಾವಣೆಯ ಪರ್ವ: ಇದೇ ವೇಳೆ ಡಾ. ಗಿರಿಜಾ ಅವರಿಗೆ  ಈ ಬಾರಿಯ ಗಣರಾಜ್ಯೋತ್ಸವ ಹೆಚ್ಚು ಸಂಭ್ರಮದಿಂದ ಕೂಡಿದೆ. ಹೋರಾಟ ನಡೆಸಿ, ಸರ್ಕಾರಿ ಕಾರ್ಯಕ್ರಮದ ನಿರೂಪಣೆ ಗಳಿಸಿರುವ ಡಾ. ಗಿರಿಜಾ ಅವರಿಗೆ ಇಂದು ಗಣರಾಜ್ಯೋತ್ಸವ ನಿರೂಪಣೆಗೆ ಅವಕಾಶ ನೀಡಲಾಗಿದೆ. ತಮಗೆ ಅವಕಾಶ ಕಲ್ಪಿಸುತ್ತಿಲ್ಲವೆಂದು ರೊಚ್ಚಿಗೆದ್ದಿದ್ದ ಡಾ. ಗಿರಿಜಾ ಮುಖ್ಯಮಂತ್ರಿಯ  ಮನೆ ಮುಂದೆ ಏಕಾಂಗಿ ಪ್ರತಿಭಟನೆ ಸಹ ನಡೆಸಿದ್ದರು. ಕೇವಲ ಅಪರ್ಣಾ ಹಾಗೂ ಶಂಕರ್ ಪ್ರಕಾಶ್ ಅವರುಗಳಿಗೆ ಮಾತ್ರ ಸರ್ಕಾರಿ ಕಾರ್ಯಕ್ರಮಗಳಲ್ಲಿ …

Read More »

ಸರ್ಕಾರದ ಹಾಗೂ ನಾಡಿನ ಜನರ ಬಗ್ಗೆ ರಾಜ್ಯಪಾಲರು ಮೆಚ್ಚುಗೆಯ ನುಡಿ

ಬೆಂಗಳೂರು : ಕೊರನಾ ನಿಯಂತ್ರಿಸಲು ವೈದ್ಯರು, ನರ್ಸ್‌ಗಳು ಅವಿರತ ಸೇವೆ ಸಲ್ಲಿಸಿದ್ದಾರೆ. ಪೊಲೀಸ್ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು, ಫ್ರಂಟ್ ಲೈನ್ ವಾರಿಯರ್ಸ್‌ಗೆ ಕೃತಜ್ಞತೆ ಸಲ್ಲಿಸುತ್ತೇನೆ. ಉತ್ತರ ಕರ್ನಾಟಕದಲ್ಲಿ ಭಾರಿ ಮಳೆಯಿಂದ ಉಂಟಾದ ಅತಿವೃಷ್ಟಿಯನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸಿದೆ. ದೇಶದ ಪ್ರಗತಿಪರ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಅಮೃತ ಮಹೋತ್ಸವ ಸಂದರ್ಭದಲ್ಲಿ ಹಲವು ಯೋಜನೆ, ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದೆ. ಅಮೃತ ಗ್ರಾಮಪಂಚಾಯತಿಗಳ ಅಮೃತ ರೈತ, ಅಮೃತ ಗ್ರಾಮೀಣ ವಸತಿ ಯೋಜನೆ, ಅಮೃತ ನಿರ್ಮಲ, ಅಮೃತ …

Read More »

ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆಗೆ ರಾಷ್ಟ್ರಪತಿ ಪದಕ

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ರಾಜ್ಯದ ಎಡಿಜಿಪಿಗಳು ಸೇರಿದಂತೆ 21 ಪೊಲೀಸರಿಗೆ 2022ನೇ ಸಾಲಿನ ರಾಷ್ಟ್ರಪತಿ ಪದಕ ಲಭಿಸಿದೆ. ಗಣರಾಜ್ಯೋತ್ಸವ ದಿನಾದಂದು ಪದಕ ಪ್ರದಾನ ಕಾರ್ಯಕ್ರಮ ಜರುಗಲಿದೆ. ಪದಕ ಪಡೆದವರ ವಿವರ ಇಲ್ಲಿದೆ. ಗಣರಾಜ್ಯೋತ್ಸವ ದಿನಾದಂದು ಪದಕ ಪ್ರದಾನ ಕಾರ್ಯಕ್ರಮ ಜರುಗಲಿದೆ. ಪದಕ ಪಡೆದವರ ವಿವರ ಇಲ್ಲಿದೆ. 2022ನೇ ಸಾಲಿನ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ: ಬಿ.ದಯಾನಂದ, ಎಡಿಜಿಪಿ, ರಾಜ್ಯ ಗುಪ್ತದಳ ಆರ್. ಹಿತೇಂದ್ರ, ಎಡಿಜಿಪಿ, ಅಪರಾಧ ಮತ್ತು …

Read More »

ನಾನು ಪ್ರೀತಿ ಇರುವ ಸಭೆಗೆ ಹೋಗುತ್ತೇನೆ -ರಮೇಶ್​​​ ಜಾರಕಿಹೊಳಿ

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಎಂಬ ಮಾತು ಬಿಜೆಪಿ ಪಾಳಯದಲ್ಲಿ ರಿಂಗಣಿಸಿದ್ದೇ ಬಂತು, ಕೇಸರಿ ಪಾಳಯದ ಶಾಸಕರು ಮತ್ತೆ ಸಿಡಿದೆದ್ದಿದ್ದಾರೆ. ಆಗಿದ್ದಾಗ್ಲಿ ಈ ಬಾರಿ ಸಚಿವ ಸ್ಥಾನ ಪಡೆದೇ ತೀರುತ್ತೇವೆ ಅಂತಾ ಜಿದ್ದಿಗೆ ಬಿದ್ದವರಂತೆ ಅಖಾಡಕ್ಕೆ ಇಳಿದು ಅಬ್ಬರಿಸ್ತಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಅವರು, ಪಕ್ಷ ವರಿಷ್ಠರು ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ಬದ್ಧ ಎಂದು ಸ್ಪಷ್ಟಪಡಿಸಿದ್ದಾರೆ. …

Read More »