ಬೆಂಗಳೂರು: ಕೆಜಿಎಫ್-2 ಚಿತ್ರದ ಟೀಸರ್ ಬಿಡುಗಡೆಯಾಗುತ್ತೆ ಎಂಬ ನಿರೀಕ್ಷೆಯಲ್ಲಿ ಇದ್ದ ಯಶ್ ಅಭಿಮಾನಿಗಳಿಗೆ ಕೆಜಿಎಫ್-2 ಚಿತ್ರತಂಡ ನಿರಾಸೆ ಮೂಡಿಸಿದೆ. ಇಡೀ ಭಾರತ ಚಿತ್ರರಂಗವೇ ಕೆಜಿಎಫ್-2 ಚಿತ್ರದ ಬಿಡುಗಡೆಯ ಕಡೆ ನೋಡುತ್ತಿದೆ. ಕೆಜಿಎಫ್-1ರ ಭರ್ಜರಿ ಯಶಸ್ಸಿನ ನಂತರ ಯಶ್ ಕೆಜಿಎಫ್-2 ಚಿತ್ರವನ್ನು ಮಾಡುತ್ತಿದ್ದಾರೆ. ಈಗಾಗಲೇ ಚಿತ್ರತಂಡ ಸಿನಿಮಾದ ಬಿಡುಗಡೆಯ ದಿನಾಂಕವನ್ನು ಘೋಷಣೆ ಮಾಡಿದೆ. ಆದರೆ ಇಲ್ಲಿಯವರೆಗೂ ಚಿತ್ರ ಕೆಲ ಪೋಸ್ಟರ್ ಗಳನ್ನು ಮಾತ್ರ ಬಿಡುಗಡೆ ಮಾಡಿದ್ದು, ಚಿತ್ರದ ಟೀಸರ್ ನೋಡಲು ಯಶ್ …
Read More »ಕೊರೋನಾ ಸೋಂಕಿತರ ಪರೀಕ್ಷೆಗೆ ಕೇರಳ ಮಾದರಿ ಅನುಸರಿಸುವುದು ಸೂಕ್ತ :ಮಾಜಿ ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಕೊರೋನಾ ಸೋಂಕಿತರ ಪರೀಕ್ಷೆಗೆ ಕೇರಳ ಮಾದರಿ ಅನುಸರಿಸುವುದು ಸೂಕ್ತ ಎಂದು ಮಾಜಿ ಮುಖ್ಯಮಂತ್ರಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಕೇರಳದಲ್ಲಿ ಈ ಹಿಂದೆ ವಿದೇಶಗಳಿಂದ ಬಂದವರ ಸಂಖ್ಯೆ ಹೆಚ್ಚಾಗಿತ್ತು. ಆದರೂ ಅಲ್ಲಿ ಸೋಂಕು ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದ್ದರಿಂದ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿದೆ. ಆದರೆ ನಮ್ಮ ಕರ್ನಾಟಕದಲ್ಲಿ ಹೆಚ್ಚಾಗುತ್ತಿದೆ.ಯಾಕೆ ಹೀಗಾಗುತ್ತಿದೆ ಎಂದು ಅಧ್ಯಯನ ನಡೆಸುವುದು ಸೂಕ್ತ ಎಂದು ಹೇಳಿದ್ದಾರೆ ಸೋಂಕು ಕಂಡು ಬಂದ …
Read More »ಅಕ್ರಮ ಬಡಾವಣೆ-ಕಟ್ಟಡಗಳ ಸಕ್ರಮಗೊಳಿಸುವ ಮಹತ್ವದ ತೀರ್ಮಾನ ಕೈಗೊಂಡ ರಾಜ್ಯ ಸರ್ಕಾರ
ಬೆಂಗಳೂರು : ಅಕ್ರಮ ಬಡಾವಣೆ ಹಾಗೂ ಕಟ್ಟಡಗಳನ್ನು ಸಕ್ರಮಗೊಳಿಸುವ ಮಹತ್ವದ ತೀರ್ಮಾನವನ್ನು ರಾಜ್ಯ ಸರ್ಕಾರ ಶುಕ್ರವಾರ ಕೈಗೊಂಡಿದೆ. ಈ ಮೂಲಕ ರಾಜ್ಯದಲ್ಲಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸುವುದಕ್ಕೆ ಸಂಬಂಧಿಸಿದ ಸಮಸ್ಯೆಗೆ ರಾಜ್ಯ ಸರ್ಕಾರ ಕೊನೆಗೂ ಮುಕ್ತಿ ಕಾಣಿಸಿದೆ. ಅನಧಿಕೃತ ಬಡಾವಣೆ ಹಾಗೂ ಕಟ್ಟಡಗಳಿಗೆ ಕುಡಿಯುವ ನೀರು, ವಿದ್ಯುತ್, ರಸ್ತೆ ಮೊದಲಾದ ಮೂಲ ಸೌಕರ್ಯ ಒದಗಿಸಿದೆ. ಆದರೂ ಯಾವುದೇ ತೆರಿಗೆ ರಾಜ್ಯದ ಬೊಕ್ಕಸಕ್ಕೆ ಬರುತ್ತಿಲ್ಲ.ರಾಜ್ಯದ ಆದಾಯ ಹೆಚ್ಚಿಸಲು …
Read More »ಕೊರೋನಾ ಟೆಸ್ಟ್ಗಾಗಿ ರಾಜ್ಯದಲ್ಲಿ 16 ಲ್ಯಾಬ್‌ಗಳಿಗೆ ಅನುಮತಿ ನೀಡಿದ ಐಸಿಎಂಆರ್
ಸರ್ಕಾರಿ ಲ್ಯಾಬ್‌ಗಳ ಎಲ್ಲಾ ಪ್ರೋಟೋಕಾಲ್‌ಗಳನ್ನು ಖಾಸಗಿ ಲ್ಯಾಬ್‌ಗಳು ಕೂಡಾ ಪಾಲಿಸಬೇಕು. ಸರ್ಕಾರದಿಂದ ಯಾವುದೇ ಟೆಸ್ಟಿಂಗ್ ಕಿಟ್‌ಗಳನ್ನು ನೀಡುವುದಿಲ್ಲ ಎಂದು ಖಾಸಗಿ ಲ್ಯಾಬ್‌ಗಳಿಗೆ ನಿರ್ಬಂಧ ವಿಧಿಸಿ ಅನುಮತಿ ನೀಡಿದೆ. ಬೆಂಗಳೂರು(ಏ.18): ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇಂದು ಒಂದೇ ದಿನ ಹೊಸದಾಗಿ 38 ಪ್ರಕರಣಗಳು ಪತ್ತೆಯಾಗಿದೆ. ಇದುವರೆಗೂ ದಾಖಲಾದ ಪ್ರಕರಣಗಳ ಪೈಕಿ ಇದೇ ಹೆಚ್ಚಿನ ಸಂಖ್ಯೆಯಾಗಿದೆ. ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ, ವೈದ್ಯಕೀಯ …
Read More »ದೆಹಲಿ ಧಾರ್ಮಿಕ ಸಭೆಗೆ ತೆರಳಿದ್ದ ರಾಜ್ಯದ 47 ಜನರಿಗೆ ಕೊರೋನಾ; 485 ತಬ್ಲಿಘಿಗಳ ಸುಳಿವು ಇನ್ನೂ ನಿಗೂಢ!
ಬೆಂಗಳೂರು (ಏ. 18): ಮಾರ್ಚ್ ತಿಂಗಳ ಮಧ್ಯಂತರದಲ್ಲಿ ದೆಹಲಿಯ ನಿಜಾಮುದ್ದೀನ್ನಲ್ಲಿ ನಡೆದಿದ್ದ ತಬ್ಲಿಘಿ ಜಮಾತ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರಿಂದಾಗಿ ದೇಶದ ಕೊರೋನಾ ಸೋಂಕಿತರ ಪ್ರಮಾಣ ದ್ವಿಗುಣಗೊಂಡಿದೆ. ಕರ್ನಾಟಕದಿಂದಲೂ ಸಾಕಷ್ಟು ಮಂದಿ ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಆದರೆ, ಅವರಲ್ಲಿ ಇನ್ನೂ 485 ತಬ್ಲಿಘಿಗಳ ಮಾಹಿತಿ ನಿಗೂಢವಾಗಿದೆ. ಮಾರ್ಚ್ ತಿಂಗಳಲ್ಲಿ ದೆಹಲಿಯಲ್ಲಿ ನಡೆದಿದ್ದ ಧಾರ್ಮಿಕ ಸಭೆಯಲ್ಲಿ ವಿದೇಶೀಯರು ಕೂಡ ಪಾಲ್ಗೊಂಡಿದ್ದರು. ಕರ್ನಾಟಕದಲ್ಲೂ ಬೆಳಗಾವಿ, ಬೆಂಗಳೂರು, ಮೈಸೂರು ಸೇರಿದಂತೆ ಅನೇಕ ಜಿಲ್ಲೆಗಳಿಂದ ಆ ಸಭೆಗೆ …
Read More »ಲಾಕ್‍ಡೌನ್‍ನಿಂದಾಗಿ ಗಾರ್ಬೇಜ್ ಸಿಟಿ ಕಂಪ್ಲೀಟ್ ಆಗಿ ಗ್ರೀನ್ ಸಿಟಿಯಾಗಿದೆ…..
ಬೆಂಗಳೂರು: ಸಿಲಿಕಾನ್ ಸಿಟಿ ಅಂದಾಕ್ಷಣ ಇಲ್ಲಿನ ಟ್ರಾಫಿಕ್, ಹೊಗೆ ನೆನಪಾಗುತ್ತದೆ. ಅಲ್ಲದೇ ಲಾಕ್‍ಡೌನ್‍ನಿಂದಾಗಿ ಗಾರ್ಬೇಜ್ ಸಿಟಿ ಕಂಪ್ಲೀಟ್ ಆಗಿ ಗ್ರೀನ್ ಸಿಟಿಯಾಗಿದೆ. ಆದರೆ ಕೊರೊನಾ ಲಾಕ್‍ಡೌನ್‍ನಿಂದಾಗಿ ಬೆಂಗಳೂರು ತನ್ನ ನೈಜ ಸೌಂದರ್ಯವನ್ನು ಮರಳಿ ಪಡೆಯುತ್ತಿದೆ. ಹೌದು..ಕೊರೊನಾ ಲಾಕ್‍ಡೌನ್‍ನಿಂದಾಗಿ ಬೆಂಗಳೂರು ತನ್ನ ನೈಜ ಸೌಂದರ್ಯವನ್ನು ಮರಳಿ ಪಡೆಯುತ್ತಿದೆ. ಈಗ ವಸಂತ ಕಾಲ ಆರಂಭವಾಗುತ್ತಿದ್ದು, ನಗರದಾದ್ಯಂತ ಹಚ್ಚ ಹಸಿರು, ಬಣ್ಣ ಬಣ್ಣದ ಹೂವುಗಳು ಅರಳಿನಿಂತಿವೆ. ನಗರದ ಎಂಜಿ ರೋಡ್, ಬ್ರಿಗೇಡ್ ರೋಡ್, ಮಹಲ್ …
Read More »ಆಸ್ಪತ್ರೆಯಿಂದ ಚೇತರಿಸಿಕೊಳ್ಳುತ್ತಿರುವ ಕೋರೋನಾ ಸೋಂಕಿತ ರೋಗಿಗಳು ನೀಡಿದ ಮಾಹಿತಿ .
ಆಸ್ಪತ್ರೆಯಿಂದ ಚೇತರಿಸಿಕೊಳ್ಳುತ್ತಿರುವ ಕೋರೋನಾ ಸೋಂಕಿತ ರೋಗಿಗಳು ನೀಡಿದ ಮಾಹಿತಿ … ನಾವು ಪ್ರತಿದಿನ ನಾವು ಹೀಗೆ ಮಾಡಿದ್ದೇವೆ : 1. ವಿಟ್ ಸಿ -1000 ಮಿಗ್ರಾಂ ತಿನ್ನಿರಿ 2. ವಿಟಮಿನ್ ಇ 3. 10:00 – 11:00 ಸೂರ್ಯನ ಮಾನ್ಯತೆ 30 ನಿಮಿಷಗಳು. 4. ದಿನಕ್ಕೆ ಒಂದು ಮೊಟ್ಟೆ ತಿನ್ನಿರಿ. 5. 8 ಗಂಟೆಗಳ ಕಾಲ ನಿದ್ರೆ ಮಾಡಿ. 6. ಪ್ರತಿದಿನ 7 ಲೀಟರ್ ನೀರು ಕುಡಿಯಿರಿ. 8. ಯಾವುದೇ …
Read More »ರಾಜ್ಯದಲ್ಲಿ ಕೊರೊನಾ ಕರಾಳತೆ – ನಿಯಂತ್ರಿತ ವಲಯದಲ್ಲಿ ಒಂದೇ ಪ್ರವೇಶ ದ್ವಾರ, ಒಂದು ಎಕ್ಸಿಟ್
ಲಾಕ್‍ಡೌನ್ ನಿಯಮಾವಳಿ ಕಂಪ್ಲೀಟ್ ಬದಲು.! – ನಿಯಂತ್ರಿತ ವಲಯದಲ್ಲಿ ಸೀಲ್‍ಡೌನ್ ರೂಲ್ಸ್ ನಿಯಂತ್ರಿತ ವಲಯದಲ್ಲಿ ಒಂದೇ ಪ್ರವೇಶ ದ್ವಾರ, ಒಂದು ಎಕ್ಸಿಟ್ ಅಷ್ಟೇ ಬೆಂಗಳೂರು: ರಾಜ್ಯದಲ್ಲಿ ಹೆಮ್ಮಾರಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಮತ್ತಷ್ಟು ಆತಂಕ ಹೆಚ್ಚಿಸಿದೆ. ಈ ಹಿನ್ನೆಯಲ್ಲಿ ಲಾಕ್‍ಡೌನ್ ನಿಯಮಾವಳಿ ಕಂಪ್ಲೀಟ್ ಬದಲು ಮಾಡಿ ರಾಜ್ಯ ಸರ್ಕಾರ ನಿಯಮಗಳ ಆದೇಶ ಹೊರಡಿಸಿದೆ. ಕೊರೊನಾ ಹಾಟ್‍ಸ್ಪಾಟ್‍ನಲ್ಲಿ ಲಾಕ್‍ಡೌನ್ ಟಫ್ ರೂಲ್ಸ್ ಜಾರಿಗೆ ಬರಲಿದೆ. ರಾಜ್ಯ ಸರ್ಕಾರವು …
Read More »ಬೆಂಗ್ಳೂರಿನಲ್ಲಿ ಕಂಟ್ರೋಲ್‍ಗೆ ಬಾರದ ಡೆಡ್ಲಿ ವೈರಸ್………
ಬೆಂಗಳೂರು: ರೆಡ್ ಝೋನ್‍ನಲ್ಲಿರೋ ಬೆಂಗಳೂರಿನಲ್ಲಿ 86 ಜನ ಸೋಂಕಿತರಿದ್ದಾರೆ. ಈ ಪೈಕಿ ಬೆಂಗಳೂರು ದಕ್ಷಿಣ 18, ಪೂರ್ವ 16, ಮಹದೇವಪುರ 10, ಬೊಮ್ಮನಹಳ್ಳಿ 4, ಆರ್ ಆರ್. ನಗರ 3 ಮತ್ತು ಯಲಹಂಕ 2 ಜನರಿಗೆ ಕೊರೊನಾ ಸೋಂಕು ತಗುಲಿದೆ. ಪಶ್ಚಿಮ ವಿಭಾಗದಲ್ಲಿ ಬರೋಬ್ಬರಿ 22 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಪಶ್ಚಿಮ ವಿಭಾಗದ 10 ಕಿಲೋ ಮೀಟರ್ ಸುತ್ತಮುತ್ತಲೇ ಕೊರೊನಾ ಡೇಂಜರ್ ಹಾಟ್‍ಸ್ಪಾಟ್ ಆಗಿದೆ. ಟಿಪ್ಪುನಗರದ ಮೃತ ವೃದ್ಧನಿಂದ …
Read More »ರೇಷನ್ ಕಾರ್ಡ್’ಗೆ ಅರ್ಜಿ ಹಾಕಿದವರಿಗೂ ನಾಳೆಯಿಂದ ಪಡಿತರ ವಿತರಣೆ
ಬೆಂಗಳೂರು,ಏ.17- ಎಪಿಎಲ್ ಕಾರ್ಡ್ ಹೊಂದಿರುವವರು ಮತ್ತು ಕಾರ್ಡ್‍ಗೆ ಅರ್ಜಿ ಸಲ್ಲಿಸಿರುವವರಿಗೆ ನಾಳೆಯಿಂದಲೇ 10ಕೆಜಿ ಪಡಿತರ ವಿತರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಗೋಪಾಲಯ್ಯ ಇಂದಿಲ್ಲಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪಿಎಲ್ ಕಾರ್ಡ್‍ಗಾಗಿ ಅರ್ಜಿ ಸಲ್ಲಿಸಿರುವ ಸುಮಾರು 1,19,000 ಅರ್ಜಿದಾರರಿಗೂ ಒಂದು ಕೆಜಿಗೆ 15 ರೂ.ಗಳಂತೆ 10 ಕೆಜಿ ಅಕ್ಕಿ ನಾಳೆಯಿಂದಲೇ ವಿತರಣೆ ಮಾಡಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ ಇದಕ್ಕಾಗಿ ಜನರು ಸಲ್ಲಿಸಿರುವ ಸ್ವೀಕೃತಿ ಅರ್ಜಿ ರಶೀದಿಯನ್ನು ತೋರಿಸಬೇಕು. …
Read More »