Breaking News

ಬೆಂಗಳೂರು

ಲಾಕ್‍ಡೌನ್ ಹಿನ್ನೆಲೆಯಲ್ಲಿ ಏ.20ರಿಂದ ಓಡಾಟಕ್ಕೆ ಪಾಸ್ ಅವಶ್ಯಕತೆ ಇಲ್ಲ.: ಅಶ್ವತ್ಥನಾರಾಯಣ್

ಬೆಂಗಳೂರು, ಏ.17- ಲಾಕ್‍ಡೌನ್ ಹಿನ್ನೆಲೆಯಲ್ಲಿ ಏ.20ರಿಂದ ಓಡಾಟಕ್ಕೆ ಪಾಸ್ ಅವಶ್ಯಕತೆ ಇರುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ತಿಳಿಸಿದ್ದಾರೆ. ಐಟಿ, ಬಿಟಿ ಉದ್ದಿಮೆಗಳ ಮುಖ್ಯಸ್ಥರೊಂದಿಗೆ ವಿಡಿಯೋ ಸಂವಾದ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್ ಯಥಾ ಪ್ರಕಾರ ಇರುತ್ತದೆ. ಇದು ಎಷ್ಟು ದಿನ ಅನ್ನೋದು ಗೊತ್ತಿಲ್ಲ. ಹೀಗಾಗಿ ನಮ್ಮ ಎಚ್ಚರಿಕೆಯಲ್ಲಿ ನಾವು ಕೆಲಸ ಕಾರ್ಯ ಆರಂಭಿಸಬೇಕಿದೆ ಎಂದು ಹೇಳಿದ್ದಾರೆ. ಐಟಿ ನೌಕರರ ಓಡಾಟಕ್ಕೆ ಪಾಸ್ ಅಗತ್ಯ ಉದ್ಭವ …

Read More »

ಬೆಂಗಳೂರಿಗರೇ ಹುಷಾರ್, ಹೊಸಬರಿಗೆ ಮನೆ ಬಾಡಿಗೆ ಕೊಡಬೇಡಿ..!

ಬೆಂಗಳೂರು,ಏ.17-ನಗರದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ಪ್ರಕರಣಗಳನ್ನು ತಡೆಗಟ್ಟಲು ಮುಂದಾಗಿರುವ ಬಿಬಿಎಂಪಿ ಅಕ್ಕಪಕ್ಕದ ಮನೆಗಳಿಗೆ ಹೊಸಬರು ಬಂದರೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದೆ. ಕೊರೊನಾ ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿರುವ ಕೆಲವು ವ್ಯಕ್ತಿಗಳು ಮನೆ ಖಾಲಿ ಮಾಡಿಕೊಂಡು ಬೇರೆ ವಾರ್ಡ್‍ಗಳಿಗೆ ತೆರಳುತ್ತಿರುವುದು ಸಾಬೀತಾದ ನಂತರ ಬಿಬಿಎಂಪಿ ಈ ಮಹತ್ವದ ತೀರ್ಮಾನ ಕೈಗೊಂಡಿದೆ. ಹೊಸಬರು ಮನೆ ಕೇಳಿಕೊಂಡು ಬಂದರೆ ಬಾಡಿಗೆ ನೀಡಬೇಡಿ. ಒಂದು ವೇಳೆ ನಿಮ್ಮ ಅಕ್ಕಪಕ್ಕದ ಮನೆಗಳಿಗೆ ಹೊಸಬರು ಬಂದರೆ …

Read More »

ಸಮಾಜ ಕಲ್ಯಾಣ ಇಲಾಖೆಯ 44 ವಸತಿ ನಿಲಯ ಹಾಗೂ 54 ಮುರಾರ್ಜಿ ದೇಸಾಯಿ ವಸತಿ ಶಾಲೆ ಸೇರಿದಂತೆ ಒಟ್ಟು 98 ವಸತಿ ಶಾಲೆ ಹಾಗೂ ವಸತಿ ನಿಲಯಗಳಲ್ಲಿ 784 ಜನರನ್ನು ಕ್ವಾರಂಟೈನ್‍ನಲ್ಲಿಡಲಾಗಿದೆ

ಬೆಂಗಳೂರು: ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಸಮಾಜ ಕಲ್ಯಾಣ ಇಲಾಖೆಯು ಅನೇಕ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸುತ್ತಿದ್ದು, ಸಮಾಜ ಕಲ್ಯಾಣ ಇಲಾಖೆಯ 44 ವಸತಿ ನಿಲಯ ಹಾಗೂ 54 ಮುರಾರ್ಜಿ ದೇಸಾಯಿ ವಸತಿ ಶಾಲೆ ಸೇರಿದಂತೆ ಒಟ್ಟು 98 ವಸತಿ ಶಾಲೆ ಹಾಗೂ ವಸತಿ ನಿಲಯಗಳಲ್ಲಿ 784 ಜನರನ್ನು ಕ್ವಾರಂಟೈನ್‍ನಲ್ಲಿಡಲಾಗಿದೆ ಎಂದು ಶ್ರೀ ಗೋವಿಂದ ಎಂ ಕಾರಜೋಳ ಅವರು ತಿಳಿಸಿದರು. ಬೆಂಗಳೂರಿನ ಎಂ ಜಿ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ಆಶ್ರಯದಲ್ಲಿರುವವರನ್ನು …

Read More »

ರಂಜಾನ್ ಆಚರಣೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ವಕ್ಫ್ ಮಂಡಳಿ

ಬೆಂಗಳೂರು : ರಂಜಾನ್ ತಿಂಗಳ ಈ ಸಂದರ್ಭದಲ್ಲಿ ಕೊರೊನಾ ಸೋಂಕು ಹರಡುವ ಭೀತಿಯಿಂದಾಗಿ, ರಾಜ್ಯ ಅಲ್ಪಸಂಖ್ಯಾತ ಮತ್ತು ವಕ್ಫ್ ಮಂಡಳಿ ಹೊಸ ಮಾರ್ಗ ಸೂಚಿಯನ್ನು ಬಿಡುಗಡೆ ಮಾಡಿದೆ. ಈ 6 ಮಾರ್ಗ ಸೂಚಿಯನ್ನು ಕಡ್ಡಾಯವಾಗಿ ರಂಜಾನ್ ದಿನವಾದ ಏಪ್ರಿಲ್ 24ರಿಂದ 25, 2020ರ ವರಗೆ ಎಲ್ಲಾ ಮುಸ್ಲೀಂ ಬಾಂಧವರು ಪಾಲಿಸುವಂತೆ ಸೂಚಿಸಿದೆ. ಅಲ್ಲದೇ ಈ ಮಾರ್ಗ ಸೂಚಿಯ ಅನುಸಾರವೇ ನಡೆದುಕೊಳ್ಳುವಂತೆ ತಿಳಿಸಿದೆ. ಈ ಕುರಿತಂತೆ ಮಾರ್ಗ ಸೂಚಿ ಬಿಡುಗಡೆ ಮಾಡಿರುವ …

Read More »

ಎಸ್.ಎಸ್.ಎಲ್.ಸಿ ವೇಳಾಪಟ್ಟಿ ಪ್ರಕಟಿಸಿಲ್ಲ : ಸಚಿವ ಸುರೇಶ್‌ಕುಮಾರ್ ಸ್ಪಷ್ಟನೆ

ಬೆಂಗಳೂರು : ಶಿಕ್ಷಣ ಇಲಾಖೆ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ವೇಳಾಪಟ್ಟಿ ಪ್ರಕಟಿಸಿಲ್ಲ ಈ ಕುರಿತ ವರದಿಗಳು ಸುಳ್ಳು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಎಸ್.ಸುರೇಶ್‌ಕುಮಾರ್ ಹೇಳಿದ್ದಾರೆ. ಈ ಕುರಿತು ಫೇಸ್‌ಬುಕ್ ಲೈವ್‌ನಲ್ಲಿ ಸ್ಪಷ್ಟಪಡಿಸಿದ ಸಚಿವರು, ಎಸ್.ಎಸ್.ಎಲ್.ಸಿ ಪರೀಕ್ಷೆಗೆ ವೇಳಾಪಟ್ಟಿ ಪ್ರಕಟಿಸಲಾಗಿದೆ ಎಂಬ ವದಂತಿಗಳ ಸತ್ಯಕ್ಕೆ ದೂರವಾದದ್ದು. ಈ ಸಂಬಂಧ ಇದುವರೆಗೆ ಶಿಕ್ಷಣ ಇಲಾಖೆ ಇದುವರೆಗೆ ಯಾವುದೇ ಪ್ರಕಟಣೆಗಳನ್ನು ಹೊರಡಿಸಿಲ್ಲ. ಈ ಬಗ್ಗೆ ವಿದ್ಯಾರ್ಥಿಗಳು, ಪೋಷಕರು ಗೊಂದಲಕ್ಕೆ ಒಳಗಾಗುವುದು …

Read More »

ಮುಂದಿನ 30 ವರ್ಷಗಳ ನೀರಾವರಿ ‌ಯೋಜನೆಗಳ ಅನುಷ್ಠಾನಕ್ಕಾಗಿ ನೀರಾವರಿ ಆಯೋಗ ಸ್ಥಾಪನೆ

ಬೆಂಗಳೂರು : ಮುಂದಿನ 30 ವರ್ಷಗಳ ನೀರಾವರಿ ‌ಯೋಜನೆಗಳ ಅನುಷ್ಠಾನದ ಉದ್ದೇಶದಿಂದ ಕರ್ನಾಟಕ ರಾಜ್ಯ ನೀರಾವರಿ ಆಯೋಗ ಸ್ಥಾಪನೆ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡುವುದಾಗಿ ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ‌ ತಿಳಿಸಿದ್ದಾರೆ. ರಾಜ್ಯ ಸರ್ಕಾರದ ನಿವೃತ್ತ ಕಾರ್ಯದರ್ಶಿ ಕ್ಯಾ ರಾಜಾರಾವ್ ಅವರೊಂದಿಗೆ ಕರ್ನಾಟಕ ರಾಜ್ಯದ ನೀರಾವರಿ ಯೋಜನೆಗಳ ಕುರಿತು ಚರ್ಚಿಸಿದ ನಂತರ‌ ಮಾತನಾಡಿದ ಸಚಿವರು, ಕುಡಿಯುವ ನೀರು, ಅಂತರ್ಜಲ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ನೀರಿನ ಬಳಕೆ ಕುರಿತಂತೆ ದೂರದೃಷ್ಟಿಯ ನೀಲನಕ್ಷೆ …

Read More »

ರಾಜ್ಯದಲ್ಲಿ ಕೊರೊನಾ ಸೋಂಕಿತರು, ಏರಿಕೆ ಕಂಡಿದ್ದು ಹೇಗೆ?

ಬೆಂಗಳೂರು: ಲಾಕ್‍ಡೌನ್ ಹೊರತಾಗಿಯೂ ಕರ್ನಾಟಕದಲ್ಲಿ ಕೊರೊನಾ ಮಹಾಮಾರಿ ಅಬ್ಬರ ತೀವ್ರಗೊಂಡಿದೆ. ಇವತ್ತು ಕೊರೊನಾಗೆ ಮತ್ತೊಬ್ಬರು ಬಲಿ ಆಗಿದ್ದು, ಮೃತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಮತ್ತಷ್ಟು ಆತಂಕ ಮೂಡಿಸುವ ಅಂಶ ಅಂದ್ರೆ ಒಂದೇ ದಿನ ಅತೀ ಹೆಚ್ಚು 36 ಹೊಸ ಕೊರೊನಾ ಪ್ರಕರಣಗಳು ವರದಿ ಆಗಿವೆ. ಈ ಪೈಕಿ 17 ಪ್ರಕರಣಗಳು ಬೆಳಗಾವಿಗೆ ಸಂಬಂಧಿಸಿದ್ದಾಗಿದೆ. ವಿಜಯಪುರದಲ್ಲಿ 7 ಮಂದಿ, ಕಲಬುರಗಿ, ಮೈಸೂರಿನಲ್ಲಿ ತಲಾ ಮೂವರು, ಬೆಂಗಳೂರಿನ ಐವರು, ಗದಗದ ಒಬ್ಬರಲ್ಲಿ ಸೋಂಕು …

Read More »

ಕಲಬುರಗಿ ಯುವಕನಿಂದ ಏಕಕಾಲಕ್ಕೆ ಇಬ್ಬರಿಗೆ ಆಮ್ಲಜನಕ ಒದಗಿಸುವ ವೆಂಟಿಲೇಟರ್‌ ವಿನ್ಯಾಸ

ಕೊರೊನಾ ಸೋಂಕು ಜಗತ್ತಿನಾದ್ಯಂತ ಹಬ್ಬಿದೆ. ಒಂದು ಲಕ್ಷಕ್ಕೂ ಅಧಿಕ ಜನರನ್ನು ಬಲಿ ತೆಗೆದುಕೊಂಡಿದೆ. ಶ್ವಾಸಕೋಶ ದುರ್ಬಲವಾಗಿರುವವರ ಪಾಲಿಗೆ ಈ ಸೋಂಕು ಮಾರಣಾಂತಿಕವಾಗಿರುತ್ತದೆ. ಇದರಿಂದ ಪರಾಗಲು ಕೃತಕ ಉಸಿರಾಟ ವ್ಯವಸ್ಥೆ ಕಲ್ಪಿಸಬೇಕು. ಈಗ ಹಾಲಿ ಇರುವ ವೆಂಟಿಲೇಟರ್‌ ಏಕಕಾಲದಲ್ಲಿ ಒಬ್ಬರಿಗೆ ಮಾತ್ರ ಬಳಸಬಹುದು. ಕಲಬುರಗಿ ಮೂಲದ ಯುವ ಎಂಜಿನಿಯರೊಬ್ಬರು ಏಕಕಾಲದಲ್ಲಿ ಆಮ್ಲಜನಕ ಪೂರೈಸುವ ಟು-ವೇ-ವೆಂಟಿಲೇಟರ್‌ ವಿನ್ಯಾಸಗೊಳಿಸಿದ್ದಾರೆ. ಇದೊಂದು ವಿನೂತನ ಪ್ರಯತ್ನವಾಗಿದೆ. ಇದನ್ನು ಕಲಬುರಗಿ ಮೂಲದ ಕೌಶಿಕ್‌ ಮುದ್ದಾ ರೂಪಿಸಿದ್ದಾರೆ. ಏಕಕಾಲದಲ್ಲಿಇದು 3-ಡಿ …

Read More »

ಬಾರ್ ಅಂಗಡಿಗೆ ಕನ್ನ ಹಾಕಲು ಬಂದ ಪೆಗ್ ಹಾಕಿ, ನಿದ್ರೆಗೆ ಜಾರುವ  ಮೂಲಕ ಪೊಲೀಸರ ಅತಿಥಿ

ಬೆಂಗಳೂರು: ಬಾರ್ ಅಂಗಡಿಗೆ ಕನ್ನ ಹಾಕಲು ಬಂದ ರೌಡಿ ಶೀಟರ್ ನೊಬ್ಬ ಮನಸ್ಸು ತಡೆಯಲಾರದೆ ಪೆಗ್ ಮೇಲೆ ಪೆಗ್ ಹಾಕಿ, ನಿದ್ರೆಗೆ ಜಾರುವ  ಮೂಲಕ ಪೊಲೀಸರ ಅತಿಥಿಯಾಗಿದ್ದಾನೆ. ಹಾಸನದ  ಸಂತೆಪೇಟೆಯಲ್ಲಿರುವ ಪ್ರಿಯದರ್ಶಿನಿ ಬಾರ್ ಗೆ ಕನ್ನ ಹಾಕಲು ಬಂದ ಇಲ್ಲಿನ ವಲ್ಲಭಾಯಿ ರಸ್ತೆಯ ರೌಡಿ ಶೀಟರ್ ರೋಹಿತ್ ಅಲಿಯಾಸ್ ಕೋಕಿ ಎರಡು ಬಾಕ್ಸ್ ಎಣ್ಣೆ ಪ್ಯಾಕ್ ಮಾಡಿದ್ದಾನೆ. ಬಳಿಕ ಮನಸ್ಸು ತಡೆಯಲಾರದೆ ಬಾರ್ ನಲ್ಲಿಯೇ ಕುಳಿತು ಕುಡಿಯಲು ಆರಂಭಿಸಿದ್ದಾನೆ. ಪೆಗ್ …

Read More »

ಮಾತ್ರೆಗಳೂ ಸಿಗದೇ ಕಷ್ಟ; ಬೆಂಗಳೂರಿಗೆ ಭಾರತಿ ವಿಷ್ಣುವರ್ಧನ್ ಕರೆತರಲು​​ ಸಚಿವರ ಸಹಾಯ.!

ಬೆಂಗಳೂರು: ಕೊರೊನಾ ಲಾಕ್‌ಡೌನ್‌ನಿಂದ ಔಷಧಿ ಸಿಗದೇ ತೊಂದರೆ‌ಗೆ ಒಳಗಾಗಿದ್ದ ಹಿರಿಯ ನಟಿ ಭಾರತಿ ವಿಷ್ಣುವರ್ಧನ್‌, ಸಚಿವ ಎಸ್​.ಟಿ ಸೋಮಶೇಖರ್​​ ಸಹಾಯದಿಂದ ಮೈಸೂರಿಂದ ಬೆಂಗಳೂರಿಗೆ ಬಂದಿದ್ದಾರೆ. ಔಷಧಿ ಸಿಗದೇ ತೊಂದರೆಗೆ ಒಳಗಾಗಿದ್ದ ಭಾರತಿ ಭಾರತಿ ವಿಷ್ಣುವರ್ಧನ್‌ ಕಳೆದ ಹಲವು ದಿನಗಳಿಂದ ಮೈಸೂರಿನಲ್ಲೇ ಇದ್ದರು. ಅಷ್ಟರಲ್ಲೇ ಕೊರೊನಾ ಲಾಕ್‌ಡೌನ್ ಘೋಷಣೆಯಾಗಿದ್ದರಿಂದ ಭಾರತಿ ವಿಷ್ಣುವರ್ಧನ್, ಮೈಸೂರಿನಲ್ಲೇ ಉಳಿಯುವಂತಾಗಿತ್ತು. 21 ದಿನ ಲಾಕ್‌ಡೌನ್‌ನ ಹೇಗೋ ಕಳೆದ ಅವ್ರು, ಮತ್ತೆ ವಿಸ್ತರಣೆ ಆಗಿದ್ದರಿಂದ ಅವರಿಗೆ ತೊಂದರೆಯಾಗಿದೆ. ಅಲ್ಲದೇ …

Read More »