ಬೆಂಗಳೂರು: 2013ರಲ್ಲಿ ನಡೆದ ಪಿಎಸ್ಐ ಮತ್ತು ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು, ಇದರ ಬಗ್ಗೆ ಮಾಹಿತಿ ಕಲೆಹಾಕಿದ್ದು, ಅವುಗಳ ತನಿಖೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯ ವಕ್ತಾರ ಹಾಗೂ ಶಾಸಕ ಪಿ.ರಾಜೀವ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2013 ರಲ್ಲಿ ಶಿಕ್ಷಕರ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ಪರೀಕ್ಷೆಯನ್ನೇ ಬರೆಯದ ಹಲವರಿಗೆ ನೇಮಕಾತಿ ಆದೇಶ ನೀಡಲಾಗಿದೆ. ಅಂಥವರು ಕರ್ತವ್ಯಕ್ಕೂ ಹಾಜರಾಗಿದ್ದಾರೆ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಇದರ ಸುಳಿವು ಪಡೆದು ವರದಿ …
Read More »ನನ್ನ ಮದುವೆಯನ್ನು ತಡೆಯಲು ಅವರ್ಯಾರು ? ಬಜರಂಗ ದಳದ ವಿರುದ್ದ ಯುವತಿ ಆಕ್ರೋಶ
ಅವರಿಬ್ಬರು ಕಳೆದ ಮೂರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರಂತೆ. ಇನ್ನೇನು ತಾವಿಬ್ಬರು ಮದುವೆಯಾಗಬೇಕು ಎಂದುಕೊಂಡವರಿಗೆ ಅಡ್ಡಲಾಗಿದ್ದು ಬಜರಂಗದಳವರು. ಹೌದು, ಜಾಫರ್, ಚೈತ್ರಾ ಸೆ.14 ರಂದು ಚಿಕ್ಕಮಗಳೂರಿನ ರತ್ನಗಿರಿ ರಸ್ತೆಯಲ್ಲಿರುವ ಸಬ್ ರಿಜಿಸ್ಟ್ರಾರ್ ಕಚೇರಿಗೆ ವಿವಾಹವಾಗಲು ಹೋಗಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆಯೇ ಹಿಂದೂ ಸಂಘಟನೆ ಕಾರ್ಯಕರ್ತರು ಸ್ಥಳಕ್ಕೆ ಬಂದಿದ್ದಾರೆ. ಬಂದವರೇ ಮದುವೆಯನ್ನು ತಡೆಹಿಡಿದಿದ್ದರು. ಅಷ್ಟೆ ಅಲ್ಲ ಮುಸ್ಲಿಂ ಯುವಕನ ವಿರುದ್ಧ ಲವ್ ಜಿಹಾದ್ ಆರೋಪ ಹೊರೆಸಿ, ಇಬ್ಬರನ್ನು ಪೊಲೀಸ್ ಠಾಣೆಗೆ ಕಳುಹಿಸಿದ್ದಾರೆ. ಬಳಿಕ …
Read More »ಗಟ್ಟಿಗಿತ್ತಿ ಅಜ್ಜಿ ಕೈಗೆ ಸಿಕ್ಕಿಬಿದ್ದ ಸರಗಳ್ಳಿ; ರಾಜಮ್ಮನ ಎದೆಗಾರಿಕೆ-ಸಮಯಪ್ರಜ್ಞೆಗೆ ಪೊಲೀಸರ ಸೆಲ್ಯೂಟ್
ಬೆಂಗಳೂರು ಗ್ರಾಮಾಂತರ: ಬಸ್ಗಾಗಿ ಕಾಯುತ್ತ ನಿಂತಿದ್ದ ಅಜ್ಜಿಯೊಬ್ಬರ ಕೊರಳಿಗೆ ಕೈಹಾಕಿ ಮಾಂಗಲ್ಯ ಸರ ಕಿತ್ತುಕೊಳ್ಳಲು ಹೋದ ಸರಗಳ್ಳಿಯೊಬ್ಬಳು ಗಟ್ಟಿಗಿತ್ತಿ ಅಜ್ಜಿಯ ಬಿಗಿಪಟ್ಟಿಗೆ ಸಿಕ್ಕಿಬಿದ್ದು ಜೈಲುಪಾಲಾಗಿದ್ದಾಳೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಧುರೆ ಹೋಬಳಿ ಕನಸವಾಡಿಯಲ್ಲಿ ಗುರುವಾರ ಈ ಪ್ರಕರಣ ನಡೆದಿದ್ದು, ಸರಗಳ್ಳಿ ಈಗ ದೊಡ್ಡಬೆಳವಂಗಲ ಠಾಣೆ ಪೊಲೀಸರ ಅತಿಥಿಯಾಗಿದ್ದಾಳೆ. ಸರ ನಾಲ್ಕೈದು ತುಂಡಾದರೂ ಒಂದೂ ತುಂಡು ಕೂಡ ಕಳ್ಳಿಯ ಪಾಲಾಗದಂತೆ ನೋಡಿಕೊಂಡ ಅಜ್ಜಿ ಎದೆಗಾರಿಕೆಗೆ ಹಾಗೂ ಸಮಯಪ್ರಜ್ಞೆಗೆ ಪೊಲೀಸರು ಸೆಲ್ಯೂಟ್ ಹೊಡೆದಿದ್ದಾರೆ. ಏನಿದು …
Read More »ಶಿಕ್ಷಕರನ್ನು ನೇಮಿಸದಿದ್ದರೆ ಪರೀಕ್ಷೆ ಇಲ್ಲದೆ ಮಕ್ಕಳನ್ನು ಪಾಸ್ ಮಾಡಿ: BJP ಶಾಸಕ ರಾಜುಗೌಡ ಆಗ್ರಹ
ಬೆಂಗಳೂರು, ಸೆ. 15: ‘ಕಲ್ಯಾಣ ಕರ್ನಾಟಕ(ಹೈ.ಕ) ಭಾಗದಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಕೂಡಲೇ ನೇಮಕ ಮಾಡಬೇಕು. ಇಲ್ಲವಾದರೆ ಪರೀಕ್ಷೆ ಇಲ್ಲದೆ ಮಕ್ಕಳನ್ನು ಪಾಸ್ ಮಾಡುವ ವ್ಯವಸ್ಥೆಯನ್ನಾದರೂ ತರಬೇಕು’ ಎಂದು ಸರಕಾರದ ವಿರುದ್ಧ ಆಡಳಿತ ಪಕ್ಷದ ಸದಸ್ಯ ನರಸಿಂಹ ನಾಯಕ್(ರಾಜುಗೌಡ) ಆಗ್ರಹಿಸಿದ ಪ್ರಸಂಗ ನಡೆಯಿತು. ಗುರುವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಶಿಕ್ಷಕರ ಕೊರತೆ ವಿಷಯ ಪ್ರಸ್ತಾಪಿಸಿದ ಅವರು, ‘ರಾಜ್ಯದ ಇತರೆ ಕಡೆಗಳಲ್ಲಿ 16 ಮಕ್ಕಳಿಗೆ ಒಬ್ಬರು ಶಿಕ್ಷಕರಿದ್ದರೆ, ಹೈಕ …
Read More »ದೇಶದ ಆಂತರಿಕ ಭದ್ರತೆಗೆ ಧಕ್ಕೆ ತರುವ ಕೃತ್ಯ: ಐವರು ಆರೋಪಿಗಳ ಬಂಧನ
ಬೆಂಗಳೂರು: ಅಂತರರಾಷ್ಟ್ರೀಯ ಮೊಬೈಲ್ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಿ ವಂಚಿಸುತ್ತಿದ್ದ ಕೇರಳದ ಐವರು ಆರೋಪಿಗಳನ್ನು ನಗರದ ಸಿಸಿಬಿ ಹಾಗೂ ಆರ್ಥಿಕ ಅಪರಾಧ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಬುಧವಾರ ಬಂಧಿಸಿದ್ದಾರೆ. ಕೇರಳದ ದಿನೇಶ್ ಪಾವೂರ್, ಕೆ.ಪಿ.ವಿಪಿನ್, ಸುಭಾಷ್, ಬೆಜಿನ್ ಜೋಸೆಫ್, ಷಮದ್ ಷಹಜನ್ ಬಂಧಿತರು. ಕೇಂದ್ರ ಸರ್ಕಾರದ ದೂರ ಸಂಪರ್ಕ ಇಲಾಖೆಯ ಮಾಹಿತಿ ಆಧರಿಸಿ ನಗರದ ಕೋರಮಂಗಲ, ಮೈಕೋ ಲೇಔಟ್ ಹಾಗೂ ರಾಜಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ …
Read More »ಕೇಂದ್ರೀಯ ಸಂಸದೀಯ ಸದಸ್ಯ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ಕೊಡಬೇಕು: ಯತ್ನಾಳ
ಬೆಂಗಳೂರು: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಕುಟುಂಬದ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ʻಕೇಂದ್ರೀಯ ಸಂಸದೀಯ ಸದಸ್ಯ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಬೇಕುʼ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ. ಇಂದು ವಿಧಾನಸೌಧದಲ್ಲಿ ಮಾತನಾಡಿದ ಅವರು, ‘ಮಾಜಿ ಸಿಎಂ ಬಿಎಸ್ ವೈ ವಿರುದ್ಧ ಎಫ್ಐಆರ್ ಗೆ ಕೋರ್ಟ್ ಆದೇಶ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಎಲ್ ಕೆ ಆಡ್ವಾಣಿ, ವಾಜಪೇಯಿಗಿಂತ ಡೊಡ್ಡವ್ರಾ ಅವರು? ಎಲ್ ಕೆ …
Read More »ಇದೇ ಅಧಿವೇಶನದಲ್ಲೇ ದಾಖಲೆ ಬಹಿರಂಗ : ‘ಒತ್ತುವರಿ ಬಾಂಬ್’ ಸಿಡಿಸಿದ ಸಚಿವ ಅಶೋಕ್
ಬೆಂಗಳೂರು,ಸೆ.15-ರಾಜಧಾನಿ ಬೆಂಗಳೂರಿನಲ್ಲಿ ಕಾನೂನು ಬಾಹಿರವಾಗಿ ಯಾರ್ಯಾರು ಕೆರೆಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬುದರ ಬಗ್ಗೆ ಇದೇ ಅಧಿವೇಶನದಲ್ಲೇ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಕಂದಾಯ ಸಚಿವ ಆರ್.ಅಶೋಕ್ ಬಾಂಬ್ ಸಿಡಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಪ್ಪು ಮಾಡಿದ್ದಾರೆಯೇ , ಇಲ್ಲ ನಾನು ತಪ್ಪು ಮಾಡಿದ್ದೇನೆಯೇ ಅಥವಾ ನಮ್ಮ ಸಂಪುಟ ಸಹೋದ್ಯೋಗಿಗಳು ಮಾಡಿದ್ದಾರೆಯೇ ಎಂಬುದರ ಕುರಿತು ಯಾರ್ಯಾರು ಕೆರೆಗಳನ್ನು ನುಂಗಿ ನೀರು ಕುಡಿದಿದ್ದಾರೋ ಅವರೆಲ್ಲರ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದರು. ಸುದ್ದಿಗಾರರೊಂದಿಗೆ …
Read More »ವಿಮಾ ಕಂಪನಿಗಳನ್ನೂ ಹೈರಾಣಗೊಳಿಸಿದೆ. ಮಳೆ
ಬೆಂಗಳೂರು, ಸೆ. 15: ನಗರದಲ್ಲಿ ಕೆಲ ದಿನಗಳ ಹಿಂದೆ ಸುರಿದ ಮಹಾಮಳೆ ಮತ್ತು ಪ್ರವಾಹ ಕೆಲ ಪ್ರದೇಶಗಳಲ್ಲಿ ಜನಜೀವನವನ್ನು ಅಲುಗಾಡಿಸಿದೆ. ದೊಡ್ಡ ದೊಡ್ಡ ಲೇಔಟ್ಗಳಲ್ಲಿ ಐಷಾರಾಮಿ ಬಂಗಲೆಯಲ್ಲಿ ವಾಸಿಸುತ್ತಿದ್ದ ಶ್ರೀಮಂತರೂ ನಲುಗಿ ಹೋಗಿದ್ದರು. ಎತ್ತರದ ಕಟ್ಟಡದಿಂದ ನಿಂತು ನೋಡಿದರೆ ಇಡೀ ಪ್ರದೇಶವೇ ಕೆರೆ ಎಂಬಂತೆ ಭಾಸವಾಗುತ್ತಿತ್ತು ಆವತ್ತಿನ ದಿನಗಳ ದೃಶ್ಯ. ವಿಲ್ಲಾಗಳ ಒಳಗೆ ನೀರು ನುಗ್ಗಿದ್ದು, ಐಷಾರಾಮಿ ಕಾರುಗಳು ನೀರಿನಲ್ಲಿ ಮುಳುಗಿಹೋಗಿದ್ದು, ಇವೆಲ್ಲವೂ ರಾಷ್ಟ್ರಾದ್ಯಂತ ಗಮನ ಸೆಳೆಯಿತು. ಐಟಿ …
Read More »ಬಿಎಸ್ವೈ ವಿರುದ್ಧ ಎಫ್ಐಆರ್ ದಾಖಲಿಸಲು ಆದೇಶ
ಬೆಂಗಳೂರು: ‘ಬಿಡಿಎ ವಸತಿ ಯೋಜನೆ ಅನುಷ್ಠಾನದಲ್ಲಿ ಲಂಚ ಪಡೆದಿದ್ದಾರೆ’ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಈ ಸಂಬಂಧ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಸಲ್ಲಿಸಿರುವ ಖಾಸಗಿ ದೂರನ್ನು, ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಶೇಷ ನ್ಯಾಯಾಲಯ’ದ ನ್ಯಾಯಾಧೀಶ ಬಿ.ಜಯಂತ ಕುಮಾರ್ ಬುಧವಾರ ವಿಚಾರಣೆ ನಡೆಸಿ, ‘ಆರೋಪಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಬೇಕು’ ಎಂದು ಆದೇಶಿಸಿ ವಿಚಾರಣೆ ಮುಂದೂಡಿದರು. ಪ್ರಕರಣವೇನು?: ಬಿಡಿಎ ಗುತ್ತಿಗೆದಾರ ಸೇರಿದಂತೆ …
Read More »ಬಲವಂತದ ಹಿಂದಿ ದಿವಸ್ ಆಚರಣೆ ವಿರೋಧಿಸಿ ಇಂದು ಜೆಡಿಎಸ್ ಪ್ರತಿಭಟನೆ
ಹಿಂದಿ ದಿವಸ್ (Hindi Divas) ವಿರೋಧಿಸಿ ಇಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ (JDS State President CM Ibrahim) ಅವರ ನೇತೃತ್ವದಲ್ಲಿ ಪ್ರತಿಭಟನೆ (Protest) ನಡೆಯಲಿದೆ. ಬಲವಂತದ ಹಿಂದಿ ದಿವಸ್ ಆಚರಣೆ ವಿರೋಧಿಸಿ ಇಂದು ಜೆಡಿಎಸ್ ಪ್ರತಿಭಟನೆ (JDS Protest) ಮಾಡಲಿದ್ದು, ರಾಜ್ಯ ಜೆಡಿಎಸ್ ಕಚೇರಿಯ ಆವರಣದಲ್ಲಿ ಹಿಂದಿ ದಿವಸ್ ಆಚರಣೆ ವಿರೋಧಿಸಿ ಪ್ರತಿಭಟನೆ ಮಾಡಲಿದೆ. ಜೆಪಿ ಭವನದ ಮುಂಭಾಗದಲ್ಲಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ (State And …
Read More »