ಪದವಿಗೆ ದಾಖಲಾಗಲು ವಿದ್ಯಾರ್ಥಿಗಳು ಅಡ್ಡ ದಾರಿ ಹಿಡಿದಿದ್ದಾರೆ. ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಮೂಲ ಅಂಕಪಟ್ಟಿ ಪರಿಶೀಲನೆ ವೇಳೆ ನಕಲಿ ಅಂಕ ಪಟ್ಟಿ ನೀಡಿರುವುದು ಬಯಲಾಗಿದೆ. ಕೋಲಾರ: ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯದಲ್ಲಿ ನಕಲಿ ವಿದ್ಯಾರ್ಥಿಗಳ ಕಾರುಬಾರು ಹೆಚ್ಚಾಗಿದೆ. ಆ ಮೂಲಕ ನಕಲಿ ಜಾಲವೊಂದು ಉತ್ತರ ವಿಶ್ವವಿದ್ಯಾಲಯದಲ್ಲಿ ಬೇರೂರಿದೆಯಾ ಅನ್ನೋ ಅನುಮಾನ ಇದೀಗ ಮೂಡಿದೆ. ನಕಲಿ ಅಂಕಪಟ್ಟಿಗಳನ್ನ ನೀಡಿ ಮೊದಲ ವರ್ಷದ ಪದವಿ ತರಗತಿಗಳಿಗೆ ದಾಖಲಾತಿ ಪಡೆದಿರುವ ವಿದ್ಯಾರ್ಥಿಗಳ ನಕಲಿ ಆಟ …
Read More »BREAKING NEWS: ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಗೆ ಕೊಲೆ ಬೆದರಿಕೆ
ಬೆಂಗಳೂರು: ಶ್ರೀರಾಮಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ( Sri Ram Sene founder president Pramod Muthalik ) ಅವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಬಂದಿರುವುದಾಗಿ ತಿಳಿದು ಬಂದಿದೆ. ನಮ್ಮ ಪಕ್ಷದ ಕಾರ್ಯಕರ್ತರಿಂದ ಹಣ ಸಂಗ್ರಹಿಸಿದರೆ ಬಿಜೆಪಿಯವರಿಗೇನು ನೋವು – ಡಿ.ಕೆ. ಶಿವಕುಮಾರ್ ಪ್ರಶ್ನೆ ಈ ಕುರಿತಂತೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಿನ್ನೆ ರಾತ್ರಿ ನಾಲ್ಕು ನಂಬರ್ ಗಳಿಂದ ನನಗೆ ಜೀವ ಬೆದರಿಕೆ ಕರೆಗಳು ಬಂದಿವೆ. ಬೆಳಗಾವಿ …
Read More »ಎಂಎಲ್ಸಿ ಚುನಾವಣೆ: ನಾಮನಿರ್ದೇಶಿತ ಸದಸ್ಯರಿಗೆ ಮತದಾನ ಹಕ್ಕಿಲ್ಲ: ಹೈಕೋರ್ಟ್
ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ವಿಧಾನಪರಿಷತ್ತಿಗೆ ನಡೆಯವ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳ ನಾಮ ನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ಇಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಎಂ.ಕೆ. ಪ್ರಾಣೇಶ್ ವಿರುದ್ಧ ಕೇವಲ 6 ಮತಗಳ ಅಂತರದಿಂದ ಸೋತಿದ್ದ ಕಾಂಗ್ರೆಸ್ನ ಗಾಯತ್ರಿ ಶಾಂತೇಗೌಡ ಸಲ್ಲಿಸಿದ್ದ ಚುನಾವಣ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರ ಏಕಸದಸ್ಯ ನ್ಯಾಯಪೀಠ ಈ ಆದೇಶ …
Read More »ನಟ ಪುನೀತ್ ರಾಜ್ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರದಾನ
ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ಮತ್ತು ಸಹಸ್ರಾರು ಅಭಿಮಾನಿಗಳ ಹರ್ಷೋದ್ಗಾರಗಳ ಮಧ್ಯೆಯೇ, ನಾಡಿನ ಜನರ ಮನಗೆದ್ದ ನಟ ಪುನೀತ್ ರಾಜ್ಕುಮಾರ್ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಮಂಗಳವಾರ ಸಂಜೆ ನಡೆದ ಸಮಾರಂಭದಲ್ಲಿ, ಪುನೀತ್ ಅವರನ್ನು ಕಳೆದುಕೊಂಡು ಆಗಸವೇ ಅಳುತ್ತಿದೆ ಯೇನೋ ಎಂಬಂತೆ ಭೋರ್ಗರೆದು ಸುರಿಯುತ್ತಿದ್ದ ವರ್ಷಧಾರೆಯ ನಡುವೆಯೇ ಛತ್ರಿಯ ಆಸರೆಯಲ್ಲಿ ಸಮಾರಂಭ ನಡೆಯಿತು. ತಂದೆ ಡಾ. ರಾಜ್ಕುಮಾರ್ ಅವರಿಗೆ 30 ವರ್ಷಗಳ ಹಿಂದೆ …
Read More »ಜನಸಾಮಾನ್ಯರಿಗೆ ಮತ್ತೊಂದು ಶಾಕಿಂಗ್!: ಶೀಘ್ರವೇ ನಂದಿನ ಹಾಲಿನ ದರ 3 ರೂ. ಹೆಚ್ಚಳ
ಬೆಳಗಾವಿ: ಶೀಘ್ರವೇ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ಗೆ 3 ರೂ. ಹೆಚ್ಚಿಸುತ್ತೇವೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಇದರಿಂದ ಹಣದುಬ್ಬರ ಮತ್ತು ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ರಾಜ್ಯದಲ್ಲಿ ಪ್ರತಿ ಲೀಟರ್ ನಂದಿನಿ ಹಾಲಿಗೆ 3 ರೂ. ಹೆಚ್ಚಳಕ್ಕೆ ನಿರ್ಧರಿಸಲಾಗಿದೆ. ದರ ಪರಿಷ್ಕರಣೆಯ ಸಂಪೂರ್ಣ ಹಣವು ರೈತರಿಗೆ ಸಿಗಲಿದೆ ಎಂದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ಬಾಲಚಂದ್ರ …
Read More »ಅಪ್ಪು ಪ್ರೇರಣೆಯಿಂದ ಅಂಗಾಂಗ ದಾನ ಹೆಚ್ಚಳ
ಬೆಂಗಳೂರು: ಖ್ಯಾತ ನಟ ಪುನೀತ್ ರಾಜ್ಕುಮಾರ್ (ಅಪ್ಪು) ಅವರು ನಮ್ಮನ್ನೆಲ್ಲ ಅಗಲಿ ಒಂದು ವರ್ಷವೇ ಕಳೆಯಿತು. ಆದರೆ, ಅವರ ನೆನಪುಗಳು ಮಾತ್ರ ಇನ್ನೂ ಸದಾ ಹಸಿಯಾಗಿವೆ. ಪುನೀತ್ ನಟನೆಗೆ ಮಾತ್ರ ಸೀಮಿತವಾಗದೇ, ಪರೋಕ್ಷವಾಗಿ ವಿವಿಧ ರೀತಿಯ ಸಮಾಜ ಸೇವೆಯಲ್ಲಿ ತೊಡಗಿದ್ದರು. ಸಾವಿನ ನಂತರ ಕಣ್ಣುಗಳನ್ನು ದಾನ ಮಾಡಿ, ನಾಲ್ಕು ಜನರಿಗೆ ಬೆಳಕಾಗಿರುವುದು ನಮಗೆಲ್ಲಾ ಗೊತ್ತೇ ಇದೆ. ಅವರ ಸ್ಫೂರ್ತಿ, ಪ್ರೇರಣೆಯಿಂದ ಪುನೀತ್ ಅವರ ಅಭಿಮಾನಿಗಳು ಸೇರಿದಂತೆ ನಾಡಿನಾದ್ಯಂತ ಸಹಸ್ರಾರು ಮಂದಿ ನೇತ್ರದಾನ …
Read More »ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೊನೆಗೂ ಚಾಲನೆ : ಸಿದ್ಧತಾ ಸಭೆ ನಡೆಸಿದ ಸರ್ಕಾರ
ಬೆಂಗಳೂರು: ಹಾವೇರಿ ಜಿಲ್ಲೆಯಲ್ಲಿ ಜನವರಿ ತಿಂಗಳಲ್ಲಿ ನಡೆಯಲಿರುವ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ಈಗ ಅಧಿಕೃತ ಚಾಲನೆ ಲಭಿಸಿದ್ದು ಹಾವೇರಿ ಜಿಲ್ಲೆ ಉಸ್ತುವಾರಿ ಸಚಿವ ಶಿವರಾಂ ಹೆಬ್ಬಾರ್, ಕನ್ನಡ ಮತ್ತು ಸಂಸ್ಕ್ರತಿ ಸಚಿವ ವಿ.ಸುನಿಲ್ ಕುಮಾರ್ ಶನಿವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಸಮ್ಮೇಳನ ನಡೆಯುವ ಸ್ಥಳ ಪರಿಶೀಲನರ ಹಾಗೂ ಪೂರ್ವಭಾವಿ ಸಭೆ ನಡೆಸಿದ ಉಭಯ ಸಚಿವರು, ಹಿಂದಿನ ಎಲ್ಲ ಸಮ್ಮೇಳನಕ್ಕಿಂತಲೂ ಯಶಸ್ವಿಯಾಗಿ …
Read More »S.S.C.: ಮತ್ತೆ ಕನ್ನಡ ಕಡೆಗಣನೆ, ಇಂಗ್ಲಿಷ್, ಹಿಂದಿಯಲ್ಲಿ ಮಾತ್ರ ಪರೀಕ್ಷೆ
ಬೆಂಗಳೂರು: ಕಾನ್ಸ್ಟೆಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿರುವ ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್ಎಸ್ಸಿ) ಮತ್ತೊಮ್ಮೆ ಪ್ರಾದೇಶಿಕ ಭಾಷೆಗಳ ವಿರೋಧಿ ನೀತಿ ಅನುಸರಿಸಿದೆ. ಎಸ್ಎಸ್ಸಿ ನಡೆಸುವ ಪರೀಕ್ಷೆಯಲ್ಲಿ ಹಿಂದಿ ಮತ್ತು ಇಂಗ್ಲಿಷ್ ಮಾತ್ರ ಕಡ್ಡಾಯಗೊಳಿಸಿರುವುದಕ್ಕೆ ಕನ್ನಡ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಎಸ್ಎಸ್ಸಿ ಧೋರಣೆಯಿಂದ ಕನ್ನಡಿಗರಿಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ ಎಂದು ಸಂಘಟನೆ ಗಳ ಕಾರ್ಯಕರ್ತರು ಕಿಡಿಕಾರಿದ್ದಾರೆ. ಗಡಿ ಭದ್ರತಾ ಪಡೆ(ಬಿಎಸ್ಎಫ್), ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್), ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್), …
Read More »ಅಪ್ಪು ಹೆಸರಿನಲ್ಲಿ ನಿರೂಪಕಿ ಅನುಶ್ರೀ ಓವರ್ ಆಕ್ಟಿಂಗ್ : ಸಾಮಾಜಿಕ ಜಾಲತಾಣದಲ್ಲಿ ಟೀಕೆ
ಬೆಂಗಳೂರು: ನಿರೂಪಕಿ ಅನುಶ್ರೀ ಅವರ ನಿರೂಪಣೆ ಬಗ್ಗೆ ಸದಾ ಒಂದಲ್ಲ ಒಂದು ವಿವಾದ ಇದ್ದೇ ಇರುತ್ತದೆ. ನಿರೂಪಣೆ ಮಾಡೋದು ಬಿಟ್ಟು ಬಾಕಿ ಎಲ್ಲ ಮಾಡ್ತಾರೆ ಅನ್ನೋದು ಅನೇಕರ ಅಭಿಪ್ರಾಯ ಕೂಡ. ಟಿವಿ ಟಿಆರ್ಪಿಗಾಗಿ, ದುಡ್ಡಿಗಾಗಿ ಅನುಶ್ರೀ ನಡೆದುಕೊಳ್ಳುತ್ತಿದ್ದಾರೆ ಅಂತ ಅವರ ನಿರೂಪಣೆ ರೀತಿಯನ್ನು ಟೀಕೆ ಮಾಡುವವರು ಕೂಡ ಇದ್ದಾರೆ. ಈ ನಡುವೆ ಅಪ್ಪು ಹೆಸರಿನಲ್ಲಿ ನಿರೂಪಕಿ ಅನುಶ್ರೀ ಓವರ್ ಆಕ್ಟಿಂಗ್ ಮಾಡುತ್ತಿದ್ದಾರೆ ಅಂತ ಅನೇಕ ಮಂದಿ ಅನುಶ್ರೀಯವರ ನಡೆಯನ್ನು ಕಿಡಿಕಾರುತ್ತಿದ್ದಾರೆ. …
Read More »ನ.1ರಂದು ಪುನೀತ್ ಗೆ ಕರ್ನಾಟಕರತ್ನ ಪ್ರಶಸ್ತಿ; ರಜಿನಿಕಾಂತ್, ಜೂ.ಎನ್ಟಿಆರ್ ಭಾಗಿ: CMಘೋಷಣೆ
ಬೆಂಗಳೂರು: ಈ ಬಾರಿ ನವೆಂಬರ್ ಒಂದನೇ ತಾರೀಕು ದಿವಂಗತ ನಟ ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುತ್ತೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕೋಟಿ ಕಂಠ ಗಾಯನ ಕಾರ್ಯಕ್ರಮದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ನವೆಂಬರ್ ಒಂದರಂದು ಸಂಭ್ರಮದಿಂದ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತೇವೆ. ವಿಧಾನಸೌಧದಲ್ಲಿ ಸಂಜೆ 4 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಪುನೀತ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ …
Read More »