ಬೆಂಗಳೂರು: ಅಟ್ಟಿಕಾ ಗೋಲ್ಡ್ ಕಂಪನಿ ಮಾಲೀಕ ಬಾಬು ಅವರನ್ನು ಆಂಧ್ರ ಪ್ರದೇಶ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಕಳ್ಳರು ಕದ್ದ ಬಂಗಾರವನ್ನು ಖರೀದಿ ಮಾಡುತ್ತಿರುವ ಆರೋಪಕ್ಕೆ ಸಂಬಂಧಿಸಿದಂತೆ ಅಟ್ಟಿಕಾ ಬಾಬು ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಹೈಗ್ರೌಂಡ್ ಠಾಣಾ ವ್ಯಾಪಿಯಲ್ಲಿರುವ ಅಟ್ಟಿಕಾ ಗೋಲ್ಡ್ ಬಾಬು ನಿವಾಸದಲ್ಲಿ ಸಿಸಿಬಿ ಪೊಲೀಸರ ಸಹಾಯದೊಂದಿಗೆ ಆಂಧ್ರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ವಿಚಾರಣೆಗಾಗಿ ಬಂಧಿಸಿ ಆಂಧ್ರಪ್ರದೇಶಕ್ಕೆ ಕರೆದೊಯ್ದಿದ್ದಾರೆ ಎಂದು ತಿಳಿದುಬಂದಿದೆ.
Read More »ಆಕ್ಟರ್ ಆಗ್ಬೇಕು ಅಂತ ಭಾಳ ಹುಚೈತ್ರಿ.: ಶಿವಪುತ್ರಪ್ಪ, ಮಲ್ಲು
ಬೆಂಗಳೂರು : ಟ್ಯಾಲೆಂಟ್ ಯಾರಪ್ಪನ ಮನೆಯ ಆಸ್ತಿ ಅಲ್ಲ ಎನ್ನುವ ಮಾತು ಎಷ್ಟು ನಿಜ ಅಲ್ವಾ. ನಿಮ್ಮ ಹತ್ರ ಪ್ರತಿಭೆ ಇತ್ತು ಅಂದ್ರೆ ಸಾಧನೆ ಮಾಡುವುದರಿಂದ ನಿಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಸಾಧನೆ ಮಾಡಲು ಬಡತನ, ಶ್ರೀಮಂತಿಕೆ ಅಂತ ಭೇದ ಭಾವ ಇಲ್ಲ. ಆತ್ಮ ವಿಶ್ವಾಸ ಬಹಳ ಮುಖ್ಯ ಅಷ್ಟೆ. ಅದೇ ರೀತಿ ಉತ್ತರ ಕರ್ನಾಟಕ ಪ್ರತಿಭೆ ಶಿವಪುತ್ರಪ್ಪ, ಮಲ್ಲು ಜಮಖಂಡಿ ಕೂಡ. ತಮ್ಮದೆ ಶೈಲಿಯಲ್ಲಿ ವಿಡಿಯೋ ಮಾಡಿ ಇಂದು ಖ್ಯಾತಿ …
Read More »ಬೇಕರಿ ಸಿಬಂದಿಗೆ ಮನಸೋ ಇಚ್ಛೆ ಹಲ್ಲೆ ಮೂವರ ಬಂಧನ
ಬೆಂಗಳೂರು: ಚಹಾ ಹಾಗೂ ಸಿಗರೇಟ್ ಕೊಡುವ ವಿಚಾರದಲ್ಲಿ ಕುಂದಲಹಳ್ಳಿ ಗೇಟ್ ಬಳಿಯ ಬೇಕರಿ ಸಿಬಂದಿಗೆ ಮನಸೋ ಇಚ್ಛೆ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಪಕ್ಕದ ಅಂಗಡಿಯ ಮಾಲಕನೇ ತನ್ನ ಸಹಚರರ ಮೂಲಕ ಕೃತ್ಯ ಎಸಗಿರುವುದು ತನಿಖೆಯಲ್ಲಿ ತಿಳಿದು ಬಂದಿದೆ. ಪ್ರಕರಣದ ಸಂಬಂಧ ನಾಲ್ವರನ್ನು ಎಚ್‌ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೃತ್ಯ ನಡೆದ ಬೇಕರಿಯ ಪಕ್ಕದ ಅಂಗಡಿಯ ಮಾಲಕ ಮಂಜುನಾಥ್, ಡೆಲಿವರಿ ಬಾಯ್ ಅಶ್ವತ್ಥ ನಗರದ ಕಾರ್ತಿಕ್, ಅಲ್ಯೂಮಿನಿಯಂ ಕೆಲಸ …
Read More »ಕನ್ನಡದ ಮಕ್ಕಳು ಉದ್ಯಮಿಗಳಾಗಬೇಕು: C.M. ಬೊಮ್ಮಾಯಿ
ಬೆಂಗಳೂರು, ಡಿಸೆಂಬರ್ 10 : ರುಡ್ ಸೆಟ್ ನಂತಹ ಉತ್ತಮ ತರಬೇತಿ ಕೇಂದ್ರದಿಂದ ಕರ್ನಾಟಕದ ಮಕ್ಕಳು ಲಾಭವನ್ನು ಪಡೆದು, ಉದ್ಯಮಿಗಳಾಗಿ, ಇತರರಿಗೆ ಉದ್ಯೋಗ ನೀಡುವಂತಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಶನಿವಾರ ರುಡ್‍ಸೆಟ್ ರಾಷ್ಟ್ರೀಯ ಅಕಾಡೆಮಿ ಹಾಗೂ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಪ್ರಯೋಜಕತ್ವದಲ್ಲಿ ಆಯೋಜಿಸಿರುವ “ರುಡ್‍ಸೆಟ್ ರಾಷ್ಟ್ರೀಯ ಅಕಾಡೆಮಿಯ ನೂತನ ಕಟ್ಟಡ”ದ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಪ್ರಧಾನ ಮಂತ್ರಿಗಳು ಕೌಶಲ್ಯ ಭಾರತದಡಿ ಶೇ 44 ರಷ್ಟಿರುವ ಯುವಕರಿಗೆ ಕೌಶಲ್ಯ …
Read More »ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಚುನಾವಣೆ; ಮುಹೂರ್ತ ಫಿಕ್ಸ್
ಬೆಂಗಳೂರು: ವಿಧಾನಮಂದಲ ಚಳಿಗಾಲದ ಅಧಿವೇಶನದ ನಡುವೆಯೇ ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಡಿಸೆಂಬರ್ 21ರಂದು ಪರಿಷತ್ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿಯೇ ಚುನಾವಣೆ ನಡೆಯಲಿದೆ. ಹಾಲಿ ಹಂಗಾಮಿ ಸಭಾಪತಿಯಾಗಿ ರಘುನಾಥ್ ರಾವ್ ಮಲ್ಕಾಪುರೆ ಕಾರ್ಯನಿರ್ವಹಿಸುತ್ತಿದ್ದು, ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಬಿಜೆಪಿ ಅಭ್ಯರ್ಥಿಯಾಗುವ ಸಾಧ್ಯತೆ ದಟ್ಟವಾಗಿದೆ. ಈ ಬಾರಿ ವಿಧಾನ ಮಂಡಲ ಚಳಿಗಾಲದ ಅಧಿವೇಶನ ಗಡಿ ಜಿಲ್ಲೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ …
Read More »ಕರವೇ ಕಾರ್ಯಕರ್ತರು ಪೊಲೀಸರ ವಶಕ್ಕೆ.
ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನ ಪೊಲೀಸರು ಬಂಧಿಸಿದ ಹಿನ್ನೆಲೆ ಪೊಲೀಸರ ವಿರುದ್ಧ ಕರವೇ ಶಿವರಾಮೇ ಗೌಡ ಕೆಂಡಾಮಂಡಲವಾಗಿದ್ದಾರೆ. ಎಂಇಎಸ್ ಪುಂಡರನ್ನ,ಮರಾಠಿ ಪುಂಡರನ್ನ ಮೊದಲು ಬಂಧಿಸಿ, ಕರ್ನಾಟಕದ ಬಸ್ಸುಗಳಿಗೆ ಬೆಂಕಿ ಹಚ್ಚಿದವರನ್ನ ಬಂಧಿಸಿ, ನಮ್ಮನ್ನ ಬಂಧಿಸಿ ಹೋರಾಟವನ್ನ ಹತ್ತಿಕ್ಕಲಾಗ್ತಿದೆ. ರಾಜ್ಯ ಸರ್ಕಾರ ಕನ್ನಡಪರ ಹೋರಾಟವನ್ನ ಹತ್ತಿಕ್ಕುತ್ತಿದೆ, ಎಂಇಎಸ್ ಹಾಗೂ ಶಿವಸೇನೆ ವಿರುದ್ಧ ಕರವೇ ಪ್ರತಿಭಟನೆ ನಡೆಸುತ್ತಿದೆ. ಪ್ರತಿಭಟನೆ ಆರಂಭಕ್ಕೂ ಮುನ್ನವೇ ರಾಜ್ಯ ಸರ್ಕಾರ ಹತ್ತಿಕ್ಕುತ್ತಿದೆ, ಹೋರಾಟಕ್ಕೂ ಮೊದಲೇ ನಮ್ಮನ್ನ ಬಂಧಿಸಲಾಗುತ್ತಿದೆ. ಎಂದು …
Read More »ಪೊಲೀಸ್ ಅಧಿಕಾರಿಗಳೊಂದಿಗೆ ಗೃಹ ಸಚಿವರ ಮಹತ್ವದ ಸಭೆ
ಬೆಂಗಳೂರು, ಡಿ.6- ಬೆಳಗಾವಿಯ ಚಳಿಗಾಲದ ಅವೇಶನ, ಇತ್ತೀಚೆಗೆ ನಡೆದ ಭಯೋತ್ಪದನೆ ಘಟನೆ, ಗಡಿ ಬಿಕ್ಕಟ್ಟು, ರಾಜ್ಯದ ಸಾಮಾನ್ಯ ಕಾನೂನು ಸುವ್ಯವಸ್ಥೆ ಕುರಿತಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು. ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಗೃಹ ಸಚಿವರು ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲï, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಎಡಿಜಿಪಿ ಅಧಿಕಾರಿಗಳಾದ ಅಲೋಕ್ ಕುಮಾರ್, ದಯಾನಂದ, …
Read More »ಅತ್ಯಾಧುನಿಕ ಅಗ್ನಿಶಾಮಕ ಠಾಣೆ ಉದ್ಘಾಟನೆ ಮಾಡಿದ ಸಿಎಂ.
ಬೆಂಗಳೂರು (ಡಿ.6) : ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ದಿ ನಿಗಮದಿಂದ ಸುಮಾರು .18 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ರಾಜ್ಯ ಆಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ದಕ್ಷಿಣ ಅಗ್ನಿ ಶಾಮಕ ಠಾಣೆ ನೂತನ ಕಟ್ಟಡ ಮತ್ತು ತುರ್ತು ಸೇವೆಗಳ ನಿರ್ವಹಣಾ ಕೇಂದ್ರವನ್ನು ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಉದ್ಘಾಟಿಸಿದರು. ನಗರದ ರೆಸಿಡೆನ್ಸಿ ರಸ್ತೆಯಲ್ಲಿ ದಕ್ಷಿಣ ಅಗ್ನಿಶಾಮಕ …
Read More »ಸಿಸಿಬಿ ಖಡಕ್ ವಾರ್ನಿಂಗ್‌ಗೆ ಬೆಂಗಳೂರು ಬಿಡ್ತಿದ್ದಾರೆ ರೌಡಿಗಳು
ಬೆಂಗಳೂರು : ರಾಜಕೀಯ ನಾಯಕರ ಜೊತೆ ರೌಡಿ ಶೀಟರ್‌ಗಳು ವೇದಿಕೆ ಹಂಚಿಕೊಳ್ಳುವುದಕ್ಕೆ ಶುರು ಮಾಡಿದ್ರೋ ಆಗಿನಿಂದ ಇದು ಪೊಲೀಸ್ ಇಲಾಖೆಗೆ ದೊಡ್ಡ ತಲೆನೋವಾಗಿದೆ. ಸದ್ಯ ರಾಜಕೀಯದಿಂದ ಮುಜಗರಕ್ಕೆ ಇಡಾಗಿದ್ದ ಸಿಸಿಬಿ ಬೆಂಗಳೂರು ರೌಡಿಗಳ ವಿಷಯದಲ್ಲಿ ಖಡಕ್ ತೀರ್ಮಾನ ತೆಗೆದುಕೊಂಡಿದೆ. ರೌಡಿಗಳಿಗೆ ಊರು ಬಿಡುವಂತೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಸಿಸಿಬಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳೋದಕ್ಕಾಗಿ ರೌಡಿಗಳನ್ನ ಊರು ಬಿಡಿಸಿದ್ದಾರೆ .ಸೈಲೆಂಟ್ ಸುನೀಲ ರಾಜಕೀಯ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು, ಸಿಸಿಬಿಗೆ ದೊಡ್ಡ ಮುಜುಗರ ಊಂಟು …
Read More »ಯಾರಿಗೂ ಅಭ್ಯರ್ಥಿ ಘೋಷಣೆ ಹಕ್ಕಿಲ್ಲ: ಡಿ.ಕೆ.ಶಿವಕುಮಾರ್
ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಗಾಗಿ ಅಭ್ಯರ್ಥಿಗಳನ್ನು ಘೋಷಿಸುವ ಹಕ್ಕು ಕೆಪಿಸಿಸಿ ಅಧ್ಯಕ್ಷನಾದ ನನಗೂ ಇಲ್ಲ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೂ ಇಲ್ಲ ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಭಾನುವಾರವಷ್ಟೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೊಪ್ಪಳ ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಿದ್ದರು. ಇದಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿರುವ ಡಿಕೆಶಿ, ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತ್ರ ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಹಕ್ಕಿದೆ. ಇದು ನಮಗಿಲ್ಲ ಎಂದು ಹೇಳಿದರು. ಯಾವ ವಿಚಾರದಲ್ಲಿ …
Read More »