ಬೆಂಗಳೂರು: ಮರಾಠಾ ಅಭಿವೃದ್ಧಿ ಪ್ರಾಧಿಕಾರ ಹಿಂಪಡೆಯುವ ಹೋರಾಟಕ್ಕೆ ಸಂಬಂಧಪಟ್ಟಂತೆ ಸೋಮವಾರ ವಾಟಾಳ್ ನಾಗರಾಜ್ ಅವರು ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಮುಂದಿನ ಹೋರಾಟದ ಹಾದಿಯ ಬಗ್ಗೆ ಚರ್ಚಿಸಿ ನಿರ್ಧರಿಸೋದಾಗಿ ಕರವೇ ಪ್ರವೀಣ್ ಶೆಟ್ಟಿ ಬಣದ ಅಧ್ಯಕ್ಷ ಪ್ರವೀಣ್ ಶೆಟ್ಟಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇಂದು ಬಂಧಿಸಿರುವ ಹೋರಾಟಗಾರರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಮರಾಠ ಅಭಿವೃದ್ಧಿ ಪ್ರಾಧಿಕಾರ ಹಿಂಪಡೆಯುವಂತೆ ಸರ್ಕಾರವನ್ನ ಒತ್ತಾಯಿಸಿ ಕನ್ನಡ ಪರ ಸಂಘಟನೆಗಳು ಇಂದು …
Read More »ಸಂಬಳ ಸಿಗದೇ ಸುಸೈಡ್ ಮಾಡಿಕೊಂಡ ಶಿಕ್ಷಕ..
ಚಿಕ್ಕಬಳ್ಳಾಪುರ, ಡಿ.5-ಕೊರೊನಾದಿಂದಾಗಿ ವೇತನವಿಲ್ಲದೆ ಜೀವನ ನಿರ್ವಹಣೆಗೆ ಆರ್ಥಿಕ ಸಂಕಷ್ಟಕ್ಕೆ ನಲುಗಿದ ಖಾಸಗಿ ಶಾಲಾ ಶಿಕ್ಷಕರೊಬ್ಬರು ಆತ್ಮಹತ್ಯೆಗೆ ಶರಣಾಗಿರುವುದು ಶಿಕ್ಷಕ ವೃಂದದಲ್ಲಿ ಆಘಾತ ಉಂಟುಮಾಡಿದೆ.ಮಂಚೇನಹಳ್ಳಿಯ ಕನಗಾನಕೊಪ್ಪದ ಕೃಷ್ಣಪ್ಪ ಎಂಬುವವರ ಏಕೈಕ ಪುತ್ರ ಚಂದ್ರಶೇಖರ್ (35) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಎಂಎ ಇಂಗ್ಲಿಷ್ ಪದವಿ ವ್ಯಾಸಂಗ ಮಾಡಿದ್ದ ಚಂದ್ರಶೇಖರ್ ಅವರು ಮಂಚೇನಹಳ್ಳಿಯ ಖಾಸಗಿ ಶಾಲೆಯಲ್ಲಿ ಶಿಕ್ಷಕ ವೃತ್ತಿ ಮಾಡುತ್ತಿದ್ದರು. ಜತೆಗೆ ಟ್ಯುಟೋರಿಯಲ್ ನಡೆಸುತ್ತ ಜೀವನಕ್ಕೆ ಆಸರೆಯಾಗಿ ಮಾಡಿಕೊಂಡು ನೆಮ್ಮದಿ ಬದುಕು ಸಾಗಿಸುತ್ತಿದ್ದರು. ಈ …
Read More »ರೋಷನ್ ಬೇಗ್ ಗೆ ಷರತ್ತು ಬದ್ಧ ಜಾಮೀನು ಮಂಜೂರು
ಬೆಂಗಳೂರು: ಐಎಂಎ ಬಹುಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರೋಷನ್ ಬೇಗ್ ಗೆ ಸಿಬಿಐ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ರೋಷನ್ ಬೇಗ್ ತನಿಖೆಗೆ ಸಹಕರಿಸಿದ್ದಾರೆ. ಅವರ ವಿರುದ್ಧದ ತನಿಖೆಯೂ ಮುಕ್ತಾಯವಾಗಿದೆ. ಹಾಗಾಗಿ ಬೇಗ್ ಗೆ ಜಾಮೀನು ನೀಡುವಂತೆ ಅವರ ಪರ ವಕೀಲರು ವಾದ ಮಂಡಿಸಿದ್ದರು. ಅಂತಿಮವಾಗಿ ಸಿಬಿಐ ವಿಶೇಷ ನ್ಯಾಯಾಲಯ ರೋಷನ್ ಬೇಗ್ ಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
Read More »ಲಿಕ್ಕರ್ ಮಳಿಗೆಗಳು ಮತ್ತು ಬಾರ್‍ಗಳು ಮುಚ್ಚಿದ್ದರಿಂದ ಮದ್ಯ ಮಾರಾಟದಲ್ಲಿ ಭಾರೀ ಇಳಿಕೆ
ಬೆಂಗಳೂರು, – ರಾಜ್ಯದಲ್ಲಿ ಕೋವಿಡ್-19 ಲಾಕ್‍ಡೌನ್ ಸಂದರ್ಭ ದಲ್ಲಿ ಎಲ್ಲ ಲಿಕ್ಕರ್ ಮಳಿಗೆಗಳು ಮತ್ತು ಬಾರ್‍ಗಳು ಮುಚ್ಚಿದ್ದರಿಂದ ಮದ್ಯ ಮಾರಾಟದಲ್ಲಿ ಭಾರೀ ಇಳಿಕೆಯಾಗಿತ್ತು. ಆದರೆ, ಲಾಕ್‍ಡೌನ್ ತೆರವುಗೊಂಡ ಬಳಿಕ ಅಬಕಾರಿ ಇಲಾಖೆ ತನ್ನ ಆದಾಯ ಹೆಚ್ಚಿಸಿಕೊಂಡಿದೆ. ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಅತ್ಯಲ್ಪ ಆದಾಯ ಕುಸಿತ ಅನುಭವಿಸಿದೆ. 2019ರ ಏಪ್ರಿಲ್-ನವೆಂಬರ್ ಅವಧಿಯಲ್ಲಿ ರಾಜ್ಯ ಅಬಕಾರಿ ಇಲಾಖೆಯು 14,390.39 ಕೋಟಿ ರೂ. ಆದಾಯ ಪಡೆದಿದ್ದರೆ, ಈ ವರ್ಷ 13,778.30 ಕೋಟಿ ರೂ. …
Read More »ಕಬ್ಬಿನ ಗದ್ದೆಯಲ್ಲಿ ಕೊಲೆಯಾಗಿದ್ದ ಅಪ್ರಾಪ್ತ ಬಾಲಕಿಯ ಸಾವಿಗೆ ನ್ಯಾಯ ಸಿಗಬೇಕೆಂದ ಕಿಚ್ಚ ಸುದೀಪ್
ಬೆಂಗಳೂರು: ಮಂಡ್ಯದ ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಕಬ್ಬಿನ ಗದ್ದೆಯಲ್ಲಿ ಕೊಲೆಯಾಗಿದ್ದ ಅಪ್ರಾಪ್ತ ಬಾಲಕಿಯ ಸಾವಿಗೆ ನ್ಯಾಯ ಸಿಗಬೇಕೆಂದು ಆಗ್ರಹಿಸಿ ಕಿಚ್ಚ ಸುದೀಪ್ ಅವರು ಟ್ವೀಟ್ ಮಾಡಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಕಿಚ್ಚ, ಈ ಪ್ರಕರಣದಲ್ಲಿ ಬಾಲಕಿಗೆ ನ್ಯಾಯ ಸಿಗುತ್ತದೆ ಮತ್ತು ತಪಿಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಮುಂದೆ ಈ ರೀತಿ ಮಾಡುವವರಿಗೆ ತೀವ್ರ ತರಹದ ಸಂದೇಶ ರವಾನೆಯಾಗಲಿದೆ ಎಂದು ಭಾವಿಸಿದ್ದೇನೆ. ಈ ಮೂಲಕ ಮುಂದೆ ಈ …
Read More »ಕರ್ನಾಟಕ ಬಂದ್ ಬಿಸಿಯೇ ಇಲ್ಲ- ಮಾರುಕಟ್ಟೆಯಲ್ಲಿ ಜನವೋ ಜನ
ಬೆಂಗಳೂರು: ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ನಿರ್ಧಾರದಿಂದ ಹಿಂದೆ ಸರಿಯದ ಕರ್ನಾಟಕ ಸರ್ಕಾರದ ವಿರುದ್ಧ ಕನ್ನಡ ಪರ ಸಂಘಟನೆಗಳು ಕರೆ ನೀಡಿದ ಕರ್ನಾಟಕ ಬಂದ್‌ಗೆ ರಾಜಧಾನಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.ರಸ್ತೆಯಲ್ಲಿ ಎಂದಿನಂತೆ ಜನರು ಸಂಚರಿಸುತ್ತಿದ್ದು, ಬಿಎಂಟಿಸಿ ಬಸ್ಸುಗಳು ರಸ್ತೆಗೆ ಇಳಿದಿದೆ. ಕೆ.ಆರ್. ಮಾರುಕಟ್ಟೆಗೆ ಜನರು ಆಗಮಿಸಿ ಖರೀದಿಯಲ್ಲಿ ತೊಡಗಿದ್ದಾರೆ. ಅಂಗಡಿ, ಹೋಟೆಲ್‌ಗಳು ತೆರೆದಿದ್ದು ಗ್ರಾಹಕರು ಆಗಮಿಸುತ್ತಿದ್ದಾರೆ. ಕರ್ನಾಟಕ ಬಂದ್‌ಗೆ ಯಾವುದೇ ಅನುಮತಿ ಪಡೆದಿಲ್ಲ. ಹೀಗಾಗಿ ಯಾರೇ ಚೇಷ್ಟೆ ಮಾಡಿದರೂ ಕ್ರಮ …
Read More »ಕರ್ನಾಟಕ ಬಂದ್‍ಗೆ ಯಾರು ಪರ್ಮಿಷನ್ ಕೊಟ್ಟಿಲ್ಲ: ಕಮಲ್ ಪಂಥ್
ಬೆಂಗಳೂರು: ನಾಳೆ ಕರ್ನಾಟಕ ಬಂದ್‍ಗೆ ಯಾರು ಪರ್ಮಿಷನ್ ಕೊಟ್ಟಿಲ್ಲ. ಈ ಹಿನ್ನೆಲೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯಬಾರದು ಎಂಬುದನ್ನು ಗಮನದಲ್ಲಿಟ್ಟುಕೊಂಡು ಸಾಕಷ್ಟು ಭದ್ರತೆಯ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಹೇಳಿದ್ದಾರೆ.ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ಬಂದ್ ಹಿನ್ನೆಲೆ ನಾಳೆ ಬೆಳಗ್ಗೆಯಿಂದ ಪೊಲೀಸ್ ಇಲಾಖೆ ಭದ್ರತೆಗಾಗಿ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. 15 ಸಾವಿರಕ್ಕಿಂತ ಹೆಚ್ಚು ಪೊಲೀಸರು ನಾಳೆ ಕಾರ್ಯ ನಿರ್ವಹಿಸಲಿದ್ದಾರೆ. 5 …
Read More »ಡಿಸೆಂಬರ್ 5ರಂದು ಬಂದ್.. ಬಂದ್.. ಬಂದ್.. ಕರ್ನಾಟಕದ, ಕನ್ನಡದ, ಕನ್ನಡಿಗರ ಹಿತರಕ್ಷಣೆಗೆ ನಾವು ಬದ್ಧ.
ಬೆಂಗಳೂರು: ಡಿಸೆಂಬರ್ 5ರಂದು ಬಂದ್.. ಬಂದ್.. ಬಂದ್.. ಕರ್ನಾಟಕದ, ಕನ್ನಡದ, ಕನ್ನಡಿಗರ ಹಿತರಕ್ಷಣೆಗೆ ನಾವು ಬದ್ಧ. ಸರ್ಕಾರದ ಯಾವುದೇ ಬೆದರಿಕೆಗೆ ನಾವು ಬಗ್ಗಲ್ಲ. ಸರ್ಕಾರ ನಮ್ಮ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿದ್ರೂ ನಾವು ಸುಮ್ಮನಿರಲ್ಲ. ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಗೆ ನಮ್ಮ ವಿರೋಧವಿದೆ. ಹೀಗಾಗಿ ನಾವು ಬಂದ್ ಮಾಡೇ ಮಾಡ್ತೀವಿ ಅಂತಾ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಗುಡುಗಿದ್ದು, ನಾಳೆ ಕರ್ನಾಟಕ ಕಂಪ್ಲೀಟ್ ಬಂದ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇದಕ್ಕೆ …
Read More »ಬಿ.ಸಿ. ಪಾಟೀಲ್‍ರಿಂದ ರೈತ ಸಮುದಾಯಕ್ಕೆ ಅವಮಾನ: ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ
ಬೆಂಗಳೂರು: ರೈತರ ಕುರಿತಾಗಿ ಸಚಿವ ಬಿ.ಸಿ. ಪಾಟೀಲ್ ನೀಡಿರುವ ಹೇಳಿಕೆ ರೈತ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತ ಹುಟ್ಟು ಸ್ವಾಭಿಮಾನಿ ಹಾಗೂ ಮರ್ಯಾದಸ್ತ. ಸಾಲ ಕೊಟ್ಟವರು ಬಂದು ಕಿಬ್ಬದಿಯ ಕೀಲು ಮುರಿದಂತೆ ಪೀಡಿಸುವಾಗ ಮರ್ಯಾದೆಗೆ ಅಂಜಿ ದಿಕ್ಕುತೋಚದಂತಾಗದೆ ಆತ್ಮಹತ್ಯೆಗೆ ಶರಣಾಗುತ್ತಾನೆ. ಕೃಷಿ ಸಚಿವರು ಹೇಳಿದಂತೆ ರೈತರು ಹೇಡಿಯಲ್ಲ ಎಂದು ತಿಳಿಸಿದ್ದಾರೆ. ರೈತ ನೆಲವನ್ನೆ ನಂಬಿ ಬದುಕುವ ಕಷ್ಟಜೀವಿ. ಅಂತಹ ರೈತ …
Read More »ನೌಕರರಿದ್ದರೂ, ವಿಧಾನಸೌಧ ಸ್ವಚ್ಛ ಮಾಡಲು 59 ಲಕ್ಷ
ಬೆಂಗಳೂರು: ರಾಜ್ಯದ ಶಕ್ತಿಸೌಧ ವಿಧಾನಸೌಧವನ್ನು ಸ್ವಚ್ಛ ಮಾಡಲು ಪಿಡಬ್ಲ್ಯುಡಿ ಇಲಾಖೆ 59 ಲಕ್ಷ ವೆಚ್ಚದಲ್ಲಿ ಟೆಂಡರ್ ಕರೆದು ದುಂದು ವೆಚ್ಚಕ್ಕೆ ಮುಂದಾಗಿದೆ.ವಿಧಾನಸೌಧವನ್ನು ಸ್ವಚ್ಛವಾಗಿ ಇಡಲು ಸ್ವಚ್ಛತಾ ಸಿಬ್ಬಂದಿ, ಪ್ರತಿ ವಿಭಾಗದಲ್ಲಿ ಡಿ ಗ್ರೂಪ್ ನೌಕರರು ಇದ್ದಾರೆ. ಈಗಾಗಲೇ ಪ್ರತಿದಿನ ವಿಧಾನಸೌಧದ ಪ್ರತಿ ಕಚೇರಿ ಹಾಗೂ ಕಾರಿಡಾರ್ ಗಳನ್ನು ಸ್ವಚ್ಛಗೊಳಿಸಲಾಗುತ್ತೆ. ಇವೆಲ್ಲ ಇದ್ದರೂ ವಿಧಾನಸೌಧ ಕ್ಲೀನ್ ಮಾಡಲು ಹೊಸ ಟೆಂಡರ್ ಕರೆಯಲಾಗಿದೆ. ವಿಧಾನಸೌಧದಲ್ಲಿರುವ ಕಚೇರಿಗಳನ್ನು ಆಯಾ ಇಲಾಖೆಯಲ್ಲಿನ ಡಿ ಗ್ರೂಪ್ ನೌಕರರು …
Read More »
Laxmi News 24×7