Breaking News

ಬೆಂಗಳೂರು

ಸಾರಿಗೆ ನೌಕರರ ಸಂದಾನ ಯಶಸ್ಸು: ರಾತ್ರಿಯಿಂದಲೆ ರೋಡಿಗೆ ಬಸ್ಸುಗಳು

  ಬೆಂಗಳೂರು : ಮೂರು ದಿನಗಳಿಂದ ಸಾರಿಗೆ ನೌಕರರ ಮುಷ್ಕರಕ್ಕೆ ಮುಕ್ತಾಯವಾಗಿದೆ, ಕೊನೆಗೂ ಸಾರಿಗೆ ನೌಕರ ವಿವಿದ ಬೇಡಿಕೆಗಳಲ್ಲಿ ಹಕವು ಬೇಡಿಕೆಗಳನ್ನು ಈಡೆರಿಸಲು ಸರಕಾರ ಮುಂದಾಗಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ,ನೌಕರರ ಕರ್ತವ್ಯ ನೌಕರರು ಇಟ್ಟ 10,12 ಬೇಡಿಕೆಗಳಲ್ಲಿ ಬಹುತೇಕ 8 ಬೇಡಿಕೆಗಳಿಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ, 1) NINC ರದ್ದು ಪಡಿಸಲಾಗಿದೆ, 2)ನಿಗಮದ ನೌಕರರಿಗೆ ಆರೋಗ್ಯ ವಿಮೆ ಯೋಜನೆ ನಿಡುವುದು, 3)ತರಬೇತಿ 2 ವರ್ಷದಿಂದ 1 …

Read More »

ವಿಕಾಸಸೌಧದಲ್ಲಿ ನಡೆದ ಸಭೆ ಯಶಸ್ವಿ ಮುಷ್ಕರ್ ವಾಪಸ್ ನಾಳೆಯಿಂದ ಬಸ್ ಗಳು ರಸ್ತೆಗೆ ಇಳಿಯಲಿವೆ

ಬೆಂಗಳೂರು : ಸಾರಿಗೆ ಸಚಿವ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಇಂದು ವಿಕಾಸಸೌಧದಲ್ಲಿ ನಡೆದ ಸಭೆ ಯಶಸ್ವಿಯಾಗಿದ್ದು, ಯೂನಿಯನ್ ಮುಖಂಡರು ಮುಷ್ಕರ್ ವಾಪಸ್ ಪಡೆಯುವುದಾಗಿ ಘೋಷಣೆ ಮಾಡಿದ್ದಾರೆ. ಸರ್ಕಾರ ಸಾರಿಗೆ ನೌಕರರ ಬಹುತೇಕ ಬೇಡಿಕೆಗಳಿಗೆ ಒಪ್ಪಿರುವ ಹಿನ್ನೆಲೆಯಲ್ಲಿ ಸಭೆಯಲ್ಲಿದ್ದ ಯೂನಿಯನ್ ಮುಖಂಡರು ಮುಷ್ಕರ್ ವಾಪಸ್ ಪಡೆಯುವುದಾಗಿ ತಿಳಿಸಿದ್ದಾರೆ. ರಾಜ್ಯದಲ್ಲಿ 3 ದಿನಗಳಿಂದ ಸಾರಿಗೆ ನೌಕರರ ಪ್ರತಿಭಟನೆ ಸುಖ್ಯಾಂತಗೊಂಡಿದೆ. ಸಭೆಯ ಬಳಿಕ ಯೂನಿಯನ್ ಮುಖಂಡರು ಸುದ್ದಿಗೋಷ್ಠಿ ಮಾತನಾಡಿ, ನಾಳೆಯಿಂದ ಬಸ್ ಗಳು ರಸ್ತೆಗೆ …

Read More »

ಸಾರಿಗೆ ನೌಕರರ ಪ್ರತಿಭಟನೆ ಸರ್ಕಾರಕ್ಕೆ ತಲೆನೋವಾಗಿರುವ ಸಂದರ್ಭದಲ್ಲೇಮೂರು ಸಾವಿರಕ್ಕೂ ಹೆಚ್ಚು ಶಿಕ್ಷಕರು ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ

ಬೆಂಗಳೂರು, ಡಿ.13- ಸಾರಿಗೆ ನೌಕರರ ಪ್ರತಿಭಟನೆ ಸರ್ಕಾರಕ್ಕೆ ತಲೆನೋವಾಗಿರುವ ಸಂದರ್ಭದಲ್ಲೇ ಬುಧವಾರದಿಂದ ಮತ್ತೊಂದು ಪ್ರತಿಭಟನೆಗೆ ಕರುನಾಡು ಸಾಕ್ಷಿಯಾಗಲಿದೆ.ಕೊರೊನಾದಿಂದ ಕಂಗೆಟ್ಟಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು, ಡಿ.16ರಂದು ಸಾವಿರಾರು ಖಾಸಗಿ ಶಿಕ್ಷಕರು ಹಾಗೂ ಖಾಸಗಿ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿಗಳು ಬೀದಿಗೆ ಇಳಿಯಲು ಸಜ್ಜಾಗಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಕರು ಹೋರಾಟ ನಡೆಸಲಿದ್ದಾರೆ. ರಾಜ್ಯಾದ್ಯಂತ ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರು ಮತ್ತು …

Read More »

ಮುಷ್ಕರ ನಿರತ ಸಾರಿಗೆ ನೌಕರರಿಗೆ ಬಿಎಂಟಿಸಿಯಿಂದ ಬಿಗ್ ಶಾಕ್..!

ಬೆಂಗಳೂರು, ಡಿ.13- ಮುಷ್ಕರ ನಿರತ ಸಾರಿಗೆ ನೌಕರರಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಶಾಕ್ ನೀಡಿದ್ದು, ಕೆಲಸಕ್ಕೆ ಗೈರಾಗಿರುವ ನೌಕರರಿಗೆ ವೇತನ ಕಡಿತಗೊಳಿಸಿದೆ. ಜೊತೆಗೆ ಅಗತ್ಯ ಸೇವೆ ಮತ್ತು ಸಾರ್ವಜನಿಕ ಉಪಯುಕ್ತ ಸೇವಾ ಸಂಸ್ಥೆ ಆದೇಶದ ಅನ್ವಯ ಶಿಸ್ತು ಕ್ರಮಕ್ಕೆ ಆದೇಶ ಹೊರಡಿಸಿದೆ. ಬಿಎಂಟಿಸಿ ಸುತ್ತೋಲೆಯಲ್ಲಿ ಹಲವು ಅಂಶಗಳನ್ನು ಉಲ್ಲೇಖಿಸಿದ್ದು, ಗೈರಾಗುವ ನೌಕರರಿಗೆ ವೇತನ ಕಡಿತ ಹಾಗೂ ಹೊಸದಾಗಿ ಯಾವುದೇ ರಜೆ ಮಂಜೂರು ಮಾಡಬಾರದು.ಮುಷ್ಕರಕ್ಕೆ ಮುನ್ನ ರಜೆ ತೆಗೆದುಕೊಂಡವರಿಗೆ …

Read More »

ಸಾರಿಗೆ ನೌಕರರ ಧಿಡೀರ್ ಪ್ರತಿಭಟನೆಯಿಂದ ಜನರಿಗೆ ತೊಂದರೆ:ಲಕ್ಷ್ಮಣ ಸವದಿ

ಬೆಂಗಳೂರು : ಸಾರಿಗೆ ನೌಕರರ ದಿಢೀರ್​ ಪ್ರತಿಭಟನೆ ಹಿನ್ನಲೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಕುರಿತು ಮಾತುಕತೆಗೆ ಆಹ್ವಾನಿಸಿದರೂ ಚರ್ಚೆ ಮಾಡಲು ನೌಕರರು ಸಿದ್ಧರಿಲ್ಲ. ಈ ಹಿನ್ನಲೆ ನಾಳೆಯಿಂದ ಸರ್ಕಾರಿ ದರದಲ್ಲಿಯೇ ಖಾಸಗಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಈ ಕುರಿತು ಮುಖ್ಯಮಂತ್ರಿಗಳು ಕೂಡ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಅಲ್ಲದೇ ಅಧಿಕಾರಿಗಳ ಜೊತೆ ಕೂಡ ಮಾತುಕತೆ ನಡೆಸಿದ್ದೇವೆ. ನಾಳೆಯಿಂದ ಖಾಸಗಿ ವಾಹನ ಓಡಿಸುವುದಕ್ಕೆ ಸಿದ್ಧತೆ ನಡೆಸಿದ್ದೇವೆ ಎಂದು ಸಾರಿಗೆ ಸಚಿವ ಲಕ್ಷ್ಮಣ …

Read More »

ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ 3ನೇ ದಿನಕ್ಕೆ ಕಾಲಿಟ್ಟಿದೆ

  ಬೆಂಗಳೂರು (ಡಿ. 13): ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ 3ನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದ ಕೆಎಸ್​ಆರ್​ಟಿಸಿ, ಬಿಎಂಟಿಸಿ, ವಾಯುವ್ಯ ಸಾರಿಗೆ, ಈಶಾನ್ಯ ಸಾರಿಗೆ ನೌಕರರು ಶುಕ್ರವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಇಂದು ಸಹ ರಸ್ತೆಗೆ ಇಳಿಯದ ಬಿಎಂಟಿಸಿ, ಕೆಎಸ್ಆರ್​ಟಿಸಿ ಬಸ್​ಗಳಿಂದ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಪರದಾಡುವಂತಾಗಿದೆ. ಇಂದು ಸಾರಿಗೆ ನೌಕರರ ಜೊತೆಗೆ ಮಾತುಕತೆಗೆ ಮುಂದಾಗುತ್ತಾರಾ ಡಿಸಿಎಂ ಹಾಗೂ …

Read More »

ಮುಷ್ಕರ ಹಿಂಪಡೆಯದಿದ್ದರೆ ಸರಕಾರಿ ದರದಲ್ಲಿಖಾಸಗಿ ಬಸ್ಸು ಪ್ರಾರಂಭ : ಲಕ್ಷ್ಮಣ ಸವದಿ

ಬೆಂಗಳೂರು : ಮುಷ್ಕರ ನಿರತ ಸಾರಿಗೆ ಸಿಬ್ಬಂದಿ ಮಿತ್ರರು ಮಾತುಕತೆಗೆ ಮುಕ್ತ ಆಹ್ವಾನ ನೀಡಿದ್ದರು ಸಹ ಮಾತುಕತೆಗೆ ಬಾರದೇ ಇದ್ದರೆ ರಾಜ್ಯದಲ್ಲಿ ಪ್ರಯಾಣಿಕರಿಗೆ ತೊಂದರೆ ಆಗದಂತೆ ಖಾಸಗಿ ಬಸ್ಸುಗಳನ್ನು ಸರ್ಕಾರಿ ಬಸ್ ದರದಲ್ಲಿ ಓಡಿಸುವ ವ್ಯವಸ್ಥೆ ಆರಂಭಿಸಲಾಗುತ್ತದೆ. ಎಂದು ಚರ್ಚೆ ನಡೆಸಿ ಆರಂಭಿಸಲಾಗುತ್ತದೆ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ. ಸಾರಿಗೆ ಸಂಸ್ಥೆಗಳ ಸುಮಾರು 1.30 ಲಕ್ಷ ನೌಕರರ ಹಿತಾಸಕ್ತಿ ರಕ್ಷಿಸಲು ನಮ್ಮ ಸರ್ಕಾರ ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಸಾರಿಗೆ …

Read More »

ಸವದಿ ವಿರುದ್ಧ ಸಿಎಂ ಗರಂ

ಬೆಂಗಳೂರು,ಡಿ.12- ಸಾರಿಗೆ ನೌಕರರ ಬಿಕ್ಕಟ್ಟನ್ನು ಪರಿಹರಿಸಲು ವಿಫಲರಾಗಿರುವ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಕಾರ್ಯ ವೈಖರಿ ವಿರುದ್ದ ಮುಖ್ಯಮಂತ್ರಿ ಯಡಿಯೂರಪ್ಪ ಕೆಂಡ ಕಾರಿದ್ದಾರೆ. ಕಳೆದ ಮೂರು ದಿನಗಳಿಂದ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗದೆ ಬಸ್‍ಗಳ ಸಂಚಾರಕ್ಕೆ ಅವಕಾಶವನ್ನೂ ನೀಡದೇ ಬೀದಿಯಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಾರಂಭದಲ್ಲೇ ಈ ಬಿಕ್ಕಟ್ಟನ್ನು ಪರಿಹರಿಸಿದ್ದರೆ ಇಂದು ಸಮಸ್ಯೆ ಉದ್ಭವವಾಗುತ್ತಿತ್ತೇ ಎಂದು ಸವದಿ ಅವರನ್ನು ಪ್ರಶ್ನಿಸಿದ್ದಾರೆ. ನೌಕರರು ಬೀದಿಗೆ ಬರುವ ಮೊದಲು ಅವರ …

Read More »

ಯೋಗೀಶ್ ಗೌಡ ಹತ್ಯೆ ಮಾಡಲು ಭೀಮಾತೀರದ ಹಂತಕ ಧರ್ಮರಾಜ್ ಚಡಚಣಗೆ ಮಾಜಿ ಸಚಿವ ವಿನಯ್ ಕುಲಕರ್ಣಿ ಸುಫಾರಿ ಕೊಟ್ಟಿದ್ದರು?

ಬೆಂಗಳೂರು : ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಹತ್ಯೆ ಮಾಡಲು ಭೀಮಾತೀರದ ಹಂತಕ ಧರ್ಮರಾಜ್ ಚಡಚಣಗೆ ಮಾಜಿ ಸಚಿವ ವಿನಯ್ ಕುಲಕರ್ಣಿ ಸುಫಾರಿ ಕೊಟ್ಟಿದ್ದರು ಎಂಬ ವಿಷಯ ಸಿಬಿಐ ತನಿಖೆಯಿಂದ ತಿಳಿದು ಬಂದಿದೆ. ಈಗಾಗಲೇ ಯೋಗೀಶ್ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕಲಕರ್ಣಿ ಬೆಳಗಾವಿ ಹಿಂಡಲಗಾ ಜೈಲು ಸೇರಿದ್ದಾರೆ. ಸಿಬಿಐ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು, ಇಡೀ ರಾಜ್ಯವೇ ಬೆಚ್ಚಿ ಬೀಳುವಂತ ಮಾಹಿತಿಯನ್ನು  ಹೊರ ಹಾಕಿದ್ದಾರೆ.  ಯೋಗೀಶ್ ಹತ್ಯೆಗೆ …

Read More »

ಪ್ರತಿಭಟನೆ ಕೈ ಬಿಡದಿದ್ದರೆ ಎಸ್ಮಾ ಜಾರಿ, ಸಾರಿಗೆ ನೌಕರರಿಗೆ ಸರ್ಕಾರ ಎಚ್ಚರಿಕೆ

ಬೆಂಗಳೂರು,ಡಿ.12-ಸಾರಿಗೆ ನೌಕರರು ತಮ್ಮ ಪ್ರತಿಭಟನೆಯನ್ನು ನಾಳೆ ಸಂಜೆಯೊಳಗೆ ಹಿಂಪಡೆಯದಿದ್ದರೆ ಅಗತ್ಯ ಸೇವಾ ನಿರ್ವಹಣಾ ಕಾಯೆ (ಎಸ್ಮಾ) ಜಾರಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಪ್ರತಿಭಟನೆಯನ್ನು ಕೈಬಿಟ್ಟು ಎಲ್ಲಾ ನೌಕರರು ಕೂಡಲೇ ಕರ್ತವ್ಯಕ್ಕೆ ಹಾಜರಾಗಬೇಕು. ಮಾತುಕತೆಗೆ ಬಂದು ಬಿಕ್ಕಟ್ಟನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಲು ಮುಂದಾಗದಿದ್ದರೆ ಎಸ್ಮಾ ಜಾರಿಯಾಗುವುದು ಖಚಿತ. ನಾಳೆ ಸಂಜೆಯವರೆಗೂ ಕಾದು ನೋಡಿ. ನೌಕರ ಸಂಘಟನೆಯ ಮುಖಂಡರು ಮಾತುಕತೆಗೆ ಬಾರದೆ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದರೆ ಅವರ ವಿರುದ್ಧ ಎಸ್ಮಾ ಜಾರಿ ಮಾಡಲು …

Read More »