ಬೆಂಗಳೂರು: ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ರವರನ್ನು ಇಂದು ಮಾನ್ಯ ಆಹಾರ ಸಚಿವರಾದ ಕೆಹೆಚ್. ಮುನಿಯಪ್ಪ ಹಾಗೂ ಅಬಕಾರಿ ಸಚಿವರಾದ ಆರ್.ಬಿ.ತಿಮ್ಮಾಪುರ ರವರ ನೇತೃತ್ವದಲ್ಲಿ ಸಮುದಾಯದ ಶಾಸಕರು ಮಾಜಿ ಸಚಿವರು ಹಾಗೂ ಮಾಜಿ ಸಂಸದರು ಭೇಟಿ ಮಾಡಿ, ನೇಮಕಾತಿಯಲ್ಲಿ ಒಳ ಮೀಸಲಾತಿ ಅನುಷ್ಠಾನ ಮಾಡುವ ಕುರಿತು ಚರ್ಚಿಸಿದರು. ಒಮ್ಮತದ ಅಭಿಪ್ರಾಯದ ಮೂಲಕ (Amikebal setelment) ಮೀಸಲಾತಿ ಹಂಚಿಕೆ ಮಾಡಿಕೊಳ್ಳಲು ಅಧ್ಯಕ್ಷರು ಸಚಿವರಿಗೆ ತಿಳಿಸಿದರು ಪರಿಶಿಷ್ಟ ಜಾತಿಯ ನೂರೊಂದು ಸಮುಯದಾಯಗಳಿಗೂ ನ್ಯಾಯಯುತವಾಗಿ …
Read More »ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್ : ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ
ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಸಮರ ಮುಂದುವರಿದಿದೆ. ಇಂದು ಮುಂಜಾನೆಯೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸುವ ಮೂಲಕ ಭ್ರಷ್ಟರಿಗೆ ಬಿಸಿ ಮುಟ್ಟಿಸಿದ್ದಾರೆ. ಬೆಂಗಳೂರು: ನಗರದ ವಿವಿಧ ಬಡಾವಣೆಗಳಲ್ಲಿರುವ ಅಧಿಕಾರಿಗಳ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ. ಮೈಸೂರು: ಸಾಂಸ್ಕೃತಿಕ ನಗರಿಯಲ್ಲೂ ಲೋಕಾಯುಕ್ತ ಬಲೆ ಬೀಸಿದ್ದು, ಮಹತ್ವದ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಬಾಗಲಕೋಟೆ: ಉತ್ತರ ಕರ್ನಾಟಕದ ಬಾಗಲಕೋಟೆಯಲ್ಲೂ ಅಧಿಕಾರಿಗಳ ತಂಡ ಬೀಡುಬಿಟ್ಟಿದೆ. ಇದರ ಜೊತೆಗೆ ರಾಜ್ಯದ ಇತರೆ …
Read More »ಊಹಾಪೋಹ ಸುದ್ದಿಗಳಿಗೆ ಉತ್ತರಿಸಲ್ಲ: ಸಚಿವ ದಿನೇಶ್
ಬೆಳ್ತಂಗಡಿ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಉತ್ತಮವಾಗಿ ಕೆಲಸ ಮಾಡಿ ಅವರ ನೇತೃತ್ವದಲ್ಲಿ ನಾವು ಚುನಾವಣೆ ಗೆದ್ದಿದ್ದೇವೆ. ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಟ್ಟು ಕೊಡುವ ವಿಚಾರಕ್ಕೆ ಸಂಬಂಧಿಸಿ ಊಹಾಪೋಹಗಳಿಗೆ ಉತ್ತರ ನೀಡುವುದಿಲ್ಲ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
Read More »ಅಂಕಿ ಅಂಶ ಸರ್ಕಾರದ ಅಂದಾಜಿಗಿಂತ ಭಿನ್ನ: ರಾಜ್ಯದ ಒಟ್ಟು ಸಾಲ 8.14 ಲಕ್ಷ ಕೋಟಿ ರೂ.ಗೆ ಏರಿಕೆ ಬಗ್ಗೆ ಸಿಎಂ ಸಿದ್ಧರಾಮಯ್ಯ ಸ್ಪಷ್ಟನೆ
ಭಾರತೀಯ ರಿಸರ್ವ್ ಬ್ಯಾಂಕ್ (RBI) ವರದಿಯನ್ನು ಉಲ್ಲೇಖಿಸಿ, ಕರ್ನಾಟಕದ ಒಟ್ಟು ಸಾಲಗಳು 2025-26ರಲ್ಲಿ ₹8.14 ಲಕ್ಷ ಕೋಟಿ ತಲುಪುತ್ತವೆ ಎಂದು ಪತ್ರಿಕೆಯ ವರದಿಯೊಂದು ಹೇಳಿದೆ. ಆದಾಗ್ಯೂ, ಈ ಅಂಕಿ ಅಂಶವು ರಾಜ್ಯ ಸರ್ಕಾರದ ಅಧಿಕೃತ ಅಂದಾಜಿಗಿಂತ ಭಿನ್ನವಾಗಿದೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ. 2025-26ರ ಬಜೆಟ್ ಅಂದಾಜಿನ ಪ್ರಕಾರ, ಮಾರ್ಚ್ 2026 ರ ವೇಳೆಗೆ ಕರ್ನಾಟಕದ ಒಟ್ಟು ಸಾಲಗಳು ₹7,64,655 ಕೋಟಿಗಳಷ್ಟಿವೆ ಎಂದು ಅಂದಾಜಿಸಲಾಗಿದೆ, ಇದು GSDP ಯ 24.91% …
Read More »ನಾಳೆ ಸಿದ್ದರಾಮಯ್ಯ ಬಜೆಟ್ : ವಲಯವಾರು ನಿರೀಕ್ಷೆಗಳೇನು?
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ದಾಖಲೆಯ 17ನೇ ಬಜೆಟ್ ಮಂಡಿಸಲಿದ್ದು, ಶಿಕ್ಷಣ, ಆರೋಗ್ಯ, ಕೃಷಿ, ಕೈಗಾರಿಕೆ, ಸಾರಿಗೆ ಸೇರಿ ವಿವಿಧ ವಲಯಗಳ ಸಮುದಾಯದಿಂದ ಭಾರೀ ನಿರೀಕ್ಷೆಗಳಿವೆ. ಬಜೆಟ್ ಪೂರ್ವಭಾವಿ ಸಭೆಯಲ್ಲಿ ಈಗಾಗಲೇ ಆಯಾ ವಲಯದ ಸಂಘ-ಸಂಸ್ಥೆಗಳು, ಕೈಗಾರಿಕೆಗಳು, ತಜ್ಞರು, ಭಾಗೀದಾರರು ಮುಖ್ಯಮಂತ್ರಿ ಅವರಿಗೆ ತಮ್ಮ ಬೇಡಿಕೆಗಳೇನು? ನಿರೀಕ್ಷೆಗಳೇನು ಎನ್ನುವ ಪಟ್ಟಿ ಸಲ್ಲಿಸಿದ್ದಾರೆ. ಇವುಗಳಲ್ಲಿ ಮುಖ್ಯಮಂತ್ರಿ ಯಾವ ವಲಯಕ್ಕೆ ಹೆಚ್ಚು ಒತ್ತು ನೀಡುತ್ತಾರೆ, ಯಾವ ಬೇಡಿಕೆಗಳನ್ನು ಪರಿಗಣಿಸಿ ಬಜೆಟ್‌ನಲ್ಲಿ …
Read More »ಆಸ್ಟ್ರೇಲಿಯಾ ಪ್ರವಾಸದಿಂದ ಕಾಂಗ್ರೆಸ್ ಶಾಸಕರು ವಾಪಸ್
ಬೆಂಗಳೂರು: ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಪ್ರವಾಸಕ್ಕೆ ತೆರಳಿದ್ದ ಕಾಂಗ್ರೆಸ್ ಶಾಸಕರು ಇಂದು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ವಿದೇಶ ಪ್ರವಾಸದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಿರಗುಪ್ಪ ಶಾಸಕ ಬಿಎಂ ನಾಗರಾಜ್, ಆಸ್ಟ್ರೇಲಿಯಾ ನ್ಯೂಜಿಲೆಂಡ್ ಹೋಗಿ ಬಂದೆವು. ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ. ನಾವು ಯಾವುದೇ ಅಧ್ಯಯನ ಮಾಡಿಲ್ಲ. ಫ್ಯಾಮಿಲಿ ಟ್ರಿಪ್ ಹೋಗಿದ್ದೆವು. ನಮ್ಮ ಯಾವ ರಾಜಕೀಯ ನಾಯಕರೂ ಕರೆ ಮಾಡಿಲ್ಲ. ಅಲ್ಲಿನ ಕೆಲ ತೋಟಗಳಿಗೆ ಹೋಗಿದ್ದೆವು. ಕೆಲವು ಕಡೆ ನಮಗೆ ಹೋಗೋದಕ್ಕೆ ಅವಕಾಶ …
Read More »ಶೇ.15ರ ಮೀಸಲಾತಿಯನ್ನು ಸಚಿವ ಸಂಪುಟ ಸಭೆಯಲ್ಲಿ cm ಚರ್ಚಿಸಿ ನಿರ್ಧರಿಸಲಿಸ್ದಾರೆ: ಕೆಹೆಚ್. ಮುನಿಯಪ್ಪ
ಬೆಂಗಳೂರು: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ಶ್ರೀ ಕೆ.ಹೆಚ್. ಮುನಿಯಪ್ಪ ಹಾಗೂ ಅಬಕಾರಿ ಸಚಿವರಾದ ಆರ್.ಬಿ. ತಿಮ್ಮಾಪೂರ್ ರವರ ನೇತೃತ್ವದಲ್ಲಿ ನಗರದ ರಾಡಿಸನ್ ಬ್ಲೂ (ಏಟ್ರಿಯಾ) ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು. ನಂತರ ಮಾತನಾಡಿದ ಸಚಿವರು ಒಳಮೀಸಲಾತಿ ಕಲ್ಪಿಸುವಲ್ಲಿ ನಮ್ಮ ಸರ್ಕಾರ ಕಂಕಣ ಬದ್ಧವಾಗಿದೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾನ್ಯ ಉಪ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ರವರ ನೇತೃತ್ವದಲ್ಲಿ ಒಳಮೀಸಲಾತಿ ಅನುಷ್ಠಾನದ ಜೊತೆಗೆ …
Read More »ಚಿನ್ನಸ್ವಾಮಿ ಸ್ಟೇಡಿಯಂ ಹೊರಗಡೆ ನಡೆದ ಘಟನೆಗೆ ನಾವು ಹೊಣೆಯಲ್ಲ – ಆರ್‌ಸಿಬಿ
ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಹೊರಗಡೆ ನಡೆದ ಘಟನೆಗೆ ನಾವು ಹೊಣೆಯಲ್ಲ ಎಂದು ಆರ್‌ಸಿಬಿ (RCB) ಪರ ವಕೀಲರು ವಾದಿಸಿದ್ದಾರೆ. ಚಿನ್ನಸ್ವಾಮಿ ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ರದ್ದು ಕೋರಿ ಆರ್‌ಸಿಬಿ, ಕೆಎಸ್‌ಸಿಎ, ಡಿಎನ್‌ಎ ಹೈಕೋರ್ಟ್‌ನಲ್ಲಿಂದು ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ಆರ್‌ಸಿಬಿ, ಕೆಎಸ್‌ಸಿಎ, ಡಿಎನ್‌ಎ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಅನುಮತಿ ಕೋರಿ ಸರ್ಕಾರ ಮಧ್ಯಂತರ ಅರ್ಜಿ ಸಲ್ಲಿಸಿದೆ. ಸರ್ಕಾರ ಪರ ವಕೀಲರಾದ ಎಸ್‌ಪಿಪಿ ಬಿ.ಟಿ.ವೆಂಕಟೇಶ್ ಅವರು ಪ್ರಕರಣದ …
Read More »ದುಬೈನಲ್ಲಿ ಸಿಲುಕಿರುವ ಕನ್ನಡಿಗರ ಜೊತೆ ವಿಜಯೇಂದ್ರ ವಿಡಿಯೋ ಕಾಲ್
ಬೆಂಗಳೂರು: ಅಮೆರಿಕ, ಇಸ್ರೇಲ್ – ಇರಾನ್ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ ದುಬೈಯಲ್ಲಿ ಸಿಲುಕಿ ಆತಂಕದಲ್ಲಿರುವ ಕನ್ನಡಿಗರ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ ಅವರಿಗೆ ಧೈರ್ಯ ತುಂಬಿದರು. ಸಂಕಷ್ಟದಲ್ಲಿ ಸಿಲುಕಿದ ಕನ್ನಡಿಗರನ್ನು ( ತಕ್ಷಣ ಕರ್ನಾಟಕಕ್ಕೆ ಕರೆದುಕೊಂಡು ಬರಲು ಕೇಂದ್ರ ಸರ್ಕಾರದ ಜೊತೆ ಮಾತನಾಡುತ್ತೇನೆಂದು ಅವರು ಭರವಸೆ ನೀಡಿದರು. ಪ್ರಶಸ್ತಿ ಪಡೆಯಲೆಂದು ಒಟ್ಟು 61 ಜನರ ತಂಡವು ತೆರಳಿದ್ದು, ದುಬೈಯಲ್ಲಿ ವಾಸ್ತವ್ಯ ಇರುವುದಾಗಿ ತಂಡದವರು ನುಡಿದರು. ಅರಸೀಕೆರೆಯ 5 ಜನರೂ …
Read More »ಹೆಚ್‌ಡಿಕೆಗೆ ಗೂಢಚರ್ಯೆಯ ಪಾಠ ಅವರ ತಂದೆಯೇ ಹೇಳಿಕೊಟ್ಟಿರಬಹುದು: ಸಿಎಂ ಕಿಡಿ
ಬೆಂಗಳೂರು: ಕುಮಾರಸ್ವಾಮಿಯವರಿಗೆ ಗೂಢಚರ್ಯೆಯ ಪಾಠವನ್ನು ಅವರ ಪೂಜ್ಯ ತಂದೆಯವರೇ ಹೇಳಿಕೊಟ್ಟಿರಬಹುದು ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಫೋನ್ ಕದ್ದಾಲಿಕೆ ಆರೋಪ ಮಾಡಿದ್ದ ಹೆಚ್‌ಡಿಕೆಗೆ ಮಾಧ್ಯಮ ಹೇಳಿಕೆ ಮೂಲಕ ಅವರು ಟಾಂಗ್ ಕೊಟ್ಟಿದ್ದಾರೆ. ತನ್ನನ್ನು ಪ್ರಧಾನಿ ಮಾಡಿದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಸೀತಾರಾಂ ಕೇಸರಿಯವರ ವಿರುದ್ಧವೇ ಅವರು ಗೂಢಚರ್ಯೆ ಮಾಡಿದ್ದರು. ಆ ಕಾರಣಕ್ಕೆ ಕಾಂಗ್ರೆಸ್ ಪಕ್ಷ ತನ್ನ ಬೆಂಬಲವನ್ನು ಹಿಂದೆಗೆದುಕೊಂಡಿರುವುದು ಇತಿಹಾಸದ ಪುಟಗಳಲ್ಲಿದೆ. ಈ ಅಪನಂಬಿಕೆ ಮತ್ತು ಸಣ್ಣತನಗಳಿಂದಾಗಿ ಕನ್ನಡಿಗರೊಬ್ಬರು ಇನ್ನಷ್ಟು …
Read More »
Laxmi News 24×7