ಬೆಂಗಳೂರು, ಮಾ.24- ತೀವ್ರ ಹಣಾಹಣಿಗೆ ಸಾಕ್ಷಿಯಾಗಲಿರುವ ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ಇಂದು ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ. ಮಸ್ಕಿಯಿಂದ ಮಾಜಿ ಶಾಸಕ ಪ್ರತಾಪ್‍ಗೌಡ ಪಾಟೀಲ್, ಬಸವ ಕಲ್ಯಾಣದಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ, ಮಾಜಿ ಶಾಸಕ ಖೂಬಾ, ಸೂರ್ಯವಂಶಿ ನಾಗಮಾರಪಲ್ಲಿ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸಚಿವ ಜಗದೀಶ್ ಶೆಟ್ಟರ್, ಮಾಜಿ ಸಚಿವ ದಿ.ಸುರೇಶ್ ಅಂಗಡಿ ಪುತ್ರಿ ಶ್ರದ್ಧಾ ಶೆಟ್ಟರ್ ಇಲ್ಲವೆ ಅವರ ಪತ್ನಿ ಹೆಸರನ್ನು …
Read More »ಎಫ್‌ಡಿಐ ಆಕರ್ಷಣೆ: ಮೂರನೇ ಸ್ಥಾನದಲ್ಲಿ ರಾಜ್ಯ
ಬೆಂಗಳೂರು: ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಆಕರ್ಷಣೆಯಲ್ಲಿ ಕರ್ನಾಟಕವು ದೇಶದಲ್ಲಿ ಮೂರನೇ ಸ್ಥಾನವನ್ನು ಉಳಿಸಿಕೊಂಡಿದೆ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಅವರು ಮಂಗಳವಾರ ವಿಧಾನ ಪರಿಷತ್‌ನಲ್ಲಿ ತಿಳಿಸಿದರು. ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎFdಸ್‌ನ ಕೆ.ಎ. ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘2017-18ರಲ್ಲಿ ರಾಜ್ಯಕ್ಕೆ ₹55,334 ಕೋಟಿ ಎಫ್‌ಡಿಐ ಬಂದಿದ್ದು, ದೇಶದಲ್ಲಿ ಮೂರನೇ ಸ್ಥಾನದಲ್ಲಿತ್ತು. 2018-19ರಲ್ಲಿ ₹46,963 ಕೋಟಿ ಹೂಡಿಕೆ ಮತ್ತು 2019-20ರಲ್ಲಿ ₹ 63,177 ಕೋಟಿ ಹೂಡಿಕೆಯೊಂದಿಗೆ ಎರಡನೇ …
Read More »ಮಹಾರಾಷ್ಟ್ರದಲ್ಲಿ ‘ಸಾರ್ಸ್-ಕೋವ್-2′(SARS-CoV-2) ಕೊರೊನಾ ವೈರಸ್‌ನ ರೂಪಾಂತರ ತಳಿಗಳು ಪತ್ತೆ
ಬೆಂಗಳೂರು: ಮಹಾರಾಷ್ಟ್ರದಲ್ಲಿ ‘ಸಾರ್ಸ್-ಕೋವ್-2′(SARS-CoV-2) ಕೊರೊನಾ ವೈರಸ್‌ನ ರೂಪಾಂತರ ತಳಿಗಳು ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ‘ಮಹಾರಾಷ್ಟ್ರದಿಂದ ಕಳುಹಿಸಲಾದ ಕೋವಿಡ್-19 ದೃಢಪಟ್ಟ ಮಾದರಿಗಳ ವಂಶವಾಹಿ ರಚನೆಗಳ ವಿಶ್ಲೇಷಣೆ ನಡೆಸಲಾಗಿದ್ದು, 2020ರ ಡಿಸೆಂಬರ್‌ನಲ್ಲಿ ವೈರಸ್ ರಚನೆಗಳಿಗೂ ಈಗಿನ ಮಾದರಿಗಳಲ್ಲಿನ ರಚನೆಗಳಿಗೂ ಹೋಲಿಕೆ ಮಾಡಲಾಗಿದೆ. ಕೊರೊನಾ ವೈರಸ್‌ನ ಇ484ಕ್ಯು ಮತ್ತು ಎಲ್452ಆರ್ ರೂಪಾಂತರಗಳು ಹೆಚ್ಚಿರುವುದು ಪತ್ತೆಯಾಗಿದೆ. ವಿಶ್ಲೇಷಣೆಗೆ ಒಳಪಡಿಸಲಾದ ಮಾದರಿಗಳ ಪೈಕಿ ಶೇ 15ರಿಂದ 20ರಷ್ಟು ಮಾದರಿಗಳಲ್ಲಿ ಈ ಹೊಸ ರೂಪಾಂತರಿ ವೈರಸ್‌ಗಳು ಪತ್ತೆಯಾಗಿವೆ. ಈ …
Read More »ಎಲ್ಲರ ಮೇಲೆ ಆರೋಪ ಮಾಡೋದು ಸರಿಯಲ್ಲ; ಡಾ. ಸುಧಾಕರ್ ಹೇಳಿಕೆಗೆ ಸಚಿವೆ ಶಶಿಕಲಾ ಜೊಲ್ಲೆ ಕಿಡಿ
ಬೆಂಗಳೂರು (ಮಾ. 24): ಯಾವೆಲ್ಲ ಸಚಿವರು, ಶಾಸಕರು ಏಕಪತ್ನಿವ್ರತಸ್ಥರು ಎಂಬುದು ಗೊತ್ತಾಗಲಿ, ಎಲ್ಲ 224 ಶಾಸಕರದ್ದೂ ತನಿಖೆಯಾಗಲಿ ಎಂಬ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ. ಯಾರಿಗೆಲ್ಲ ಅನೈತಿಕ ಸಂಬಂಧವಿದೆ, ಯಾವ ಮುಖ್ಯಮಂತ್ರಿಗಳು ತಮ್ಮ ಅಧಿಕಾರಾವಧಿಯಲ್ಲಿ ಏನೆಲ್ಲ ಮಾಡಿದ್ದರು ಎಂಬುದು ತನಿಖೆಯಾಗಲಿ ಎಂದು ಡಾ. ಸುಧಾಕರ್ ಹೇಳಿದ್ದರು. ಇದಕ್ಕೆ ಈಗಾಗಲೇ ಡಿ.ಕೆ. ಶಿವಕುಮಾರ್, ಸೌಮ್ಯಾ ರೆಡ್ಡಿ, ಹೆಚ್.ಡಿ. ರೇವಣ್ಣ ಸೇರಿದಂತೆ ವಿಪಕ್ಷಗಳ ಅನೇಕ …
Read More »ಸುಧಾಕರ್ ಹೇಳಿದಂತೆ ಎಲ್ಲಾ 225 ಶಾಸಕರ ತನಿಖೆ ಮಾಡಲಿ : ಸತೀಶ್ ಜಾರಕಿಹೊಳಿ
ಬೆಂಗಳೂರು : ಅನೈತಿಕ ಸಂಬಂಧ ವಿಚಾರವಾಗಿ ಎಲ್ಲಾ ಶಾಸಕರ ತನಿಖೆ ಆಗಲಿ ಎಂದು ಸಚಿವ ಸುಧಾಕರ್ ಸವಾಲು ವಿಚಾರಕ್ಕೆ ಕಾಂಗ್ರೆಸ್ ಶಾಸಕ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸುಧಾಕರ್ ಬೇಡಿಕೆಯಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ತನಿಖೆ ಮಾಡಲಿ, ಎಲ್ಲಾ 225 ಶಾಸಕರ ಮೇಲೂ ತನಿಖೆ ನಡೆಯಲಿ ಎಂದು ಹೇಳಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿ ಇದ್ದವರು ಹೇಳಿದ್ದಾರೆ. ಹಾಗಾದರೆ ಎಲ್ಲರ ಮೇಲೂ ತನಿಖೆ ನಡೆಯಲಿ, ಸತ್ಯ ಶೋಧನ ಕಮಿಟಿ …
Read More »ಬಾರ್ಬಿಕ್ಯೂ ನೇಷನ್ ಐಪಿಒ ಇಂದಿನಿಂದ ಶುರು: ಬೆಲೆ 498-500 ರೂಪಾಯಿ
ದೇಶಾದ್ಯಂತ ಅನೇಕ ರೆಸ್ಟೋರೆಂಟ್‌ಗಳನ್ನು ಹೊಂದಿರುವ ಬಾರ್ಬಿಕ್ಯೂ ನೇಷನ್ ಹಾಸ್ಪಿಟಲಿಟಿ ಐಪಿಒ ಬುಧವಾರದಿಂದ ಆರಂಭವಾಗಿದ್ದು, ಆರಂಭಿಕ ಪ್ರೈಸ್ ಬ್ಯಾಂಡ್ ಅನ್ನು 498-500 ರೂಪಾಯಿ ನಿಗದಿಪಡಿಸಲಾಗಿದೆ. ಮಾರ್ಚ್ 24ರಿಂದ ಆರಂಭಗೊಂಡಿರುವ ಐಪಿಒ, ಮಾರ್ಚ್ 26ರಂದು ಮುಕ್ತಾಯವಾಗಲಿದೆ. 15 ಪ್ರಮುಖ ಹೂಡಿಕೆದಾರರನ್ನು ಒಳಗೊಂಡಿರುವ ಬಾರ್ಬಿಕ್ಯೂ ನೇಷನ್ 202 ಕೋಟಿ ರೂಪಾಯಿ ಸಂಗ್ರಹಿಸಲು 40,57,861 ಷೇರುಗಳನ್ನು ಮಾರಾಟ ಮಾಡಲಿದೆ. ನವೆಂಬರ್ 30, 2019 ರ ಹೊತ್ತಿಗೆ ಬಾರ್ಬಿಕ್ಯೂ ನೇಷನ್ ಭಾರತದ 73 ನಗರಗಳಲ್ಲಿ ಮತ್ತು ವಿದೇಶದಲ್ಲಿ …
Read More »ಹಣ-ಆಭರಣ ಸುಲಿಗೆ ಮೂವರ ಬಂಧನ
ಬೆಂಗಳೂರು, ಮಾ.23- ಸ್ಕೂಟರ್‍ನಲ್ಲಿ ಬಂದು ಬೆದರಿಸಿ ಹಣ-ಆಭರಣ ಸುಲಿಗೆ ಮಾಡಿದ್ದ ಮೂವರನ್ನು ಚಂದ್ರಾ ಲೇಔಟ್ ಪೊಲೀಸರು ಬಂಧಿಸಿ 3 ಲಕ್ಷ ರೂ. ಬೆಲೆಬಾಳುವ 102 ಗ್ರಾಂ ಚಿನ್ನದ ಆಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಸ್ಕೂಟರ್ ವಶಪಡಿಸಿಕೊಂಡಿದ್ದಾರೆ. ಕೆಜಿ ಹಳ್ಳಿ, ಪಿಳ್ಳಣ್ಣ ಗಾರ್ಡನ್ ನಿವಾಸಿ ಜಾಕೀರ್ ಹುಸೇನ್ (30), ವೆಂಕಟೇಶಪುರಂನ ಶಾಬಾಜ್‍ಖಾನ್ (25), ಫಾಜಿಲ್ (23) ಬಂಧಿತರು. ಭೈರವೇಶ್ವರನಗರ 9ನೆ ಕ್ರಾಸ್‍ನಲ್ಲಿ ಸಾರ್ವಜನಿಕರೊಬ್ಬರು ಮಾ.13ರಂದು ಹೋಗುತ್ತಿದ್ದಾಗ ಮೂವರು ಸುಲಿಗೆಕೋರರು ಸ್ಕೂಟರ್‍ನಲ್ಲಿ ಬಂದು …
Read More »ರಾಜ್ಯ ಸರ್ಕಾರದಿಂದ ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್
ಬೆಂಗಳೂರು : ಉದ್ಯೋಗಾಕಾಂಕ್ಷಿಗಳಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದ್ದು, ಪೌರಾಡಳಿತ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದ್ದು, 530 ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗದಿಂದ ನೇಮಕಾತಿ ಪ್ರಕ್ರಿಯೆ ಮಾಡಲಾಗುತ್ತಿದೆ ಎಂದು ಪೌರಾಡಳಿತ ಮತ್ತು ಸಕ್ಕರೆ ಸಚಿವ ಎಂ.ಟಿ.ಬಿ. ನಾಗರಾಜು ತಿಳಿಸಿದ್ದಾರೆ. ಪೌರಾಡಳಿತ ಇಲಾಖೆಯಲ್ಲಿ 9972 ಹುದ್ದೆಗಳು ಖಾಲಿ ಇವೆ. ಗ್ರೂಪ್ ಸಿ ವೃಂದದ ಖಾಲಿ ಹುದ್ದೆಗಳನ್ನು ಸರ್ಕಾರದ ಹಂತದಲ್ಲಿ ಹಾಗೂ ಗ್ರೂಪ್ …
Read More »ಪೊಲೀಸರಿಗೆ ಭರ್ಜರಿ ಸಿಹಿಸುದ್ದಿ : ಕಡ್ಡಾಯ ವಾರದ ರಜೆಗೆ ಮತ್ತೊಮ್ಮೆ ಆದೇಶ
ಬೆಂಗಳೂರು : ಪೊಲೀಸರಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಗೆ ಕಡ್ಡಾಯ ವಾರದ ರಜೆ ನೀಡುವಂತೆ ಎಲ್ಲ ಠಾಣಾಧಿಕಾರಿಗಳಿಗೆ ನಗರ ಪೊಲೀಸ್ ಆಯುಕ್ತ ಕಚೇರಿ ಆಡಳಿತ ವಿಭಾಗ ಡಿಸಿಪಿ ನಿಶಾ ಜೇಮ್ಸ್ ಆದೇಶ ಹೊರಡಿಸಿದ್ದಾರೆ. ಡಿಸಿಪಿ ನಿಶಾ ಜೇಮ್ಸ್ ಹೊರಡಿಸಿರುವ ಆದೇಶದ ಪ್ರಕಾರ, ವಿಪತ್ತು, ಚುನಾವಣೆ ಮತ್ತು ಬಂದೋಬಸ್ತ್ ಕರ್ತವ್ಯ ಹೊರತು ಪಡಿಸಿ ಉಳಿದ ಎಲ್ಲ ಸಮಯದಲ್ಲಿ ಸಿಬ್ಬಂದಿಗೆ ಕಡ್ಡಾಯವಾಗಿ ರಜೆ ನೀಡಬೇಕು. ಇದಕ್ಕಾಗಿ ಆಯಾ ಠಾಣಾಧಿಕಾರಿಗಳು ಸಿಬ್ಬಂದಿಯ …
Read More »BPL’ ಕಾರ್ಡ್ : ಟ್ಯಾಕ್ಸಿ, ಟ್ರ್ಯಾಕ್ಟರ್ ಹೊಂದಿದವರಿಗೆ ರಾಜ್ಯ ಸರ್ಕಾರದಿಂದ ಶುಭಸುದ್ದಿ
ಬೆಂಗಳೂರು : ಜೀವನೋಪಾಯಕ್ಕಾಗಿ ಟ್ಯಾಕ್ಸಿ, ಟ್ರಾಕ್ಟರ್ ಹೊಂದಿರುವವರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿಯೊಂದನ್ನು ನೀಡಿದ್ದು, ಟ್ಯಾಕ್ಸಿ, ಟ್ರಾಕ್ಟರ್ ಹೊಂದಿರುವವರಿಗೆ ಬಿಪಿಎಲ್ ಕಾರ್ಡ್ ವಿತರಿಸುವಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸುವುದಾಗಿ ತಿಳಿಸಿದೆ. ವಿಧಾನಪರಿಷತ್ ನಲ್ಲಿ ಈ ಬಗ್ಗೆ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಶಾಂತರಾಮ ಸಿದ್ದಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಜೀವನೋಪಾಯಕ್ಕಾಗಿ ಟ್ಯಾಕ್ಸಿ, ಟ್ರಾಕ್ಟರ್ ಇರುವ ಕುಟುಂಬಸ್ಥರಿಗೆ ಬಿಪಿಎಲ್ ಕಾರ್ಡ್ ನೀಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದಾಗಿ ಈ ಕುಟುಂಬಗಳು ಸಂಕಷ್ಟದಲ್ಲಿ …
Read More »