Breaking News

ಬೆಂಗಳೂರು

ರಾಜ್ಯದಲ್ಲಿ 4,553 ಹೊಸ ಸೋಂಕು ಪ್ರಕರಣ ದಾಖಲು

ಬೆಂಗಳೂರು: ಬೆಂಗಳೂರು: ರಾಜ್ಯದಲ್ಲಿ ಸತತ ಐದನೇ ದಿನ ಕೂಡ ನಾಲ್ಕು ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದು, 24 ಗಂಟೆಗಳ ಅವಧಿಯಲ್ಲಿ 4,553 ಮಂದಿ ಕೋವಿಡ್ ಪೀಡಿತರಾಗಿರುವುದು ದೃಢಪಟ್ಟಿದೆ. ಇದರಿಂದಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ 39,092ಕ್ಕೆ ತಲುಪಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹೊಸದಾಗಿ ಪ್ರಕರಣಗಳು ವರದಿಯಾಗಿದ್ದು, 7 ಜಿಲ್ಲೆಗಳಲ್ಲಿ ಮೂರಂಕಿ ತಲುಪಿದೆ. ಬೆಂಗಳೂರಿನಲ್ಲಿ ಮತ್ತೆ 2,787 ಮಂದಿ ಸೋಂಕಿತರಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 4.47 ಲಕ್ಷ ದಾಟಿದೆ. ಮೈಸೂರು (260), ಕಲಬುರ್ಗಿ …

Read More »

ಸಿಡಿ ಪ್ರಕರಣ : ಕಾಂಗ್ರೆಸ್‍ನ ಮಾಜಿ ಶಾಸಕರಿಬ್ಬರಿಗೆ ಎಸ್‍ಐಟಿ ನೋಟೀಸ್..!

ಬೆಂಗಳೂರು,ಏ.4-ದಿನಕ್ಕೊಂದು ವಿಚಿತ್ರ ತಿರುವು ಪಡೆಯುತ್ತಿರುವ ಸಿ.ಡಿ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಕಾಂಗ್ರೆಸ್‍ನ ಇಬ್ಬರು ಮಾಜಿ ಶಾಸಕರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ಎಸ್‍ಐಟಿ ನಿರ್ಧರಿಸಿದೆ. ಸಿ.ಡಿ ಬಹಿರಂಗವಾದ ಬಳಿಕ ಚಿತ್ರ,ವಿಚಿತ್ರ ತಿರುವುಗಳು ಪಡೆಯುತ್ತಿದ್ದು, ಒಂದಷ್ಟು ದಿನ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರ ಸುತ್ತಲೇ ಆರೋಪ-ಪ್ರತ್ಯಾರೋಪಗಳು ಕೇಳಿ ಬಂದಿದ್ದವು. ಈ ಹೊಸದಾಗಿ ಕಾಂಗ್ರೆಸ್‍ನ ಇಬ್ಬರು ಮಾಜಿ ಶಾಸಕರ ಹೆಸರುಗಳು ತಳುಕು ಹಾಕಿಕೊಂಡಿವೆ. ಹೀಗಾಗಿ ಸಿ.ಡಿ ಪ್ರಕರಣ ಮತ್ತೊಂದು ರೀತಿಯ ತಿರುವು ಪಡೆಯುತ್ತಿದೆ. …

Read More »

ಸಪ್ಲಾಯರ್ ಕೆಲಸ ಮಾಡಿಲ್ಲ. ಹೀಗಾಗಿ ಸಪ್ಲೈಯರ್ ಗಳಿಂದ ನಾನು ಏನನ್ನೂ ಕಲಿಯಬೇಕಿಲ್ಲ ಎಂದು ಕಿಡಿ‌ ಕಾರಿದ ಯತ್ನಾಳ

ವಿಜಯಪುರ: ಮಂತ್ರಿಯಾಗಲು, ಎಂಎಲ್ ಸಿ ಆಗಲು ಅಶ್ಲೀಲ ಸಿಡಿ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುವವರಿಂದ ನಾನು ಕಲಿಯಬೇಕಾದುದು ಏನೂ ಇಲ್ಲ ಎಂದು ಬಸನಗೌಡ ಪಾಟೀಲ ಯತ್ನಾಳ ಮತ್ತೆ ಹರಿ ಹಾಯ್ದಿದ್ದಾರೆ. ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜಕೀಯ ಸ್ವಾರ್ಥಕ್ಕಾಗಿ ಬಾಗಲಕೋಟೆ ಜಿಲ್ಲೆಯ ಮಾಜಿ ಶಾಸಕ, ಸಚಿವರ ಅಶ್ಲೀಲ ಸಿಡಿ ಮಾಡಿದವರು ನಾಲಾಯಕರು ಎಂದು ಪರೋಕ್ಷವಾಗಿ ಸಚಿವ ಮುರುಗೇಶ ನಿರಾಣಿ ವಿರುದ್ಧ ವಾಗ್ದಾಳಿ ನಡೆಸಿದರು.   ಮಂತ್ರಿ ಆಗಲು ನಾನು ಯಾರಿಗೂ …

Read More »

ಖಾತೆ ಬದಲಾಯಿಸಿ ಎಂದು ಹೇಳಿದ ನಿರ್ಮಾಪಕ ಕೆ. ಮಂಜುಗೆ ಸಚಿವ ಸುಧಾಕರ್ ತಿರುಗೇಟು

ಆರೋಗ್ಯ ಖಾತೆಯಿಂದ ಸಚಿವ ಸುಧಾಕರ್ ಅವರನ್ನು ಬದಲಾಯಿಸಿ ಎಂದು ನಿರ್ಮಾಪಕ ಕೆ. ಮಂಜು ನೀಡಿದ ಹೇಳಿಕೆಗೆ ಸಚಿವ ಸುಧಾಕರ್ ತಿರುಗೇಟು ನೀಡಿದ್ದಾರೆ. ಕೆ. ಮಂಜು ಅಂದ್ರೆ ಯಾರು ಎಂಬುದೇ ನನಗೆ ಗೊತ್ತಿಲ್ಲ. ನಾನು ಯಾರ ಟೀಕೆಗಳಿಗೂ ತಲೆಕೆಡಿಸಿಕೊಳ್ಳುವುದಿಲ್ಲ. ಆರೋಗ್ಯ ಸಚಿವನಾಗಿ ಕೊರೋನಾ ನಿಯಂತ್ರಣಕ್ಕೆ ಏನು ಮಾಡಬೇಕೋ ಅದನ್ನು ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ನಮಗೆ ಜನರ ಆರೋಗ್ಯ ರಕ್ಷಣೆ ಮುಖ್ಯವಾಗಿದ್ದು ಟೀಕೆಗಳಿಗೆ ತಲೆಕೆಡಿಸಿಕೊಳ್ಳದೆ ಕೆಲಸ ಮಾಡುತ್ತೇನೆ. ಮುಖ್ಯಮಂತ್ರಿಗಳು ಚಿತ್ರರಂಗದ ಮನವಿಗೆ ಸ್ಪಂದಿಸಿದ್ದು …

Read More »

ಕೆಪಿಎಸ್‌ಸಿ ನೂತನ ಅಧ್ಯಕ್ಷರಾಗಿ ಶಿವಶಂಕರಪ್ಪ ಸಾಹುಕಾರ್‌ ನೇಮಕ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರನ್ನಾಗಿ ಶಿವಶಂಕರಪ್ಪ ಎಸ್‌. ಸಾಹು ಕಾರ್‌ ಅವರನ್ನು ನೇಮಕ ಮಾಡಲಾಗಿದೆ. ಆಯೋಗದ ಸದಸ್ಯರಾಗಿದ್ದ ಶಿವಶಂಕರಪ್ಪ ಎಸ್‌. ಸಾಹುಕಾರ್‌ ಅವರನ್ನು ಅಧ್ಯಕ್ಷರನ್ನಾಗಿ ರಾಜ್ಯಪಾಲ ವಜುಭಾಯಿ ವಾಲಾ ನೇಮಕ ಮಾಡಿದ್ದಾರೆ. ರಾಜ್ಯಪಾಲರ ಆದೇಶವನ್ನು ಪ್ರಕಟಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಎ. 3ರಂದು ಅಧಿಸೂಚನೆ ಹೊರಡಿಸಿದೆ. ನೂತನ ಅಧ್ಯಕ್ಷರು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನವರು. ರಾಯಚೂರಿನ ಕೃಷಿ ವಿವಿಯಲ್ಲಿ ಕೃಷಿ ಎಂಜಿನಿಯರಿಂಗ್‌ ಪದವಿ ಪಡೆದ ಬಳಿಕ …

Read More »

ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳದ ಬಿಎಸ್‌ವೈ ಕೈಲಾಗದ ಸಿಎಂ: ಕಾಂಗ್ರೆಸ್ ಟೀಕೆ

ಬೆಂಗಳೂರು: ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ವಿರುದ್ಧ ಕ್ರಮ ಕೈಗೊಳ್ಳದ ಯಡಿಯೂರಪ್ಪ ಅವರು ಕೈಲಾಗದ ಸಿಎಂ ಎನಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಬಿಜೆಪಿ ವಿರುದ್ಧ ಟ್ವೀಟ್‌ ಸಮರ ಮುಂದುವರಿಸಿರುವ ಕಾಂಗ್ರೆಸ್‌, ‘ಕೆ.ಎಸ್‌.ಈಶ್ವರಪ್ಪ ಅವರೇ ಗುಲಾಮರಂತೆ ಸಚಿವರಾಗಿರುವುದಕ್ಕಿಂತ, ರಾಜೀನಾಮೆ ಕೊಟ್ಟು ಸ್ವಾಭಿಮಾನ ಪ್ರದರ್ಶಿಸಿ’ ಎಂದು ಸವಾಲು ಹಾಕಿದೆ. ‘ಸಿಎಂ ಯಡಿಯೂರಪ್ಪ ಅವರೇ, ಯತ್ನಾಳ್‌ ವಿರುದ್ಧ ಕ್ರಮ ಕೈಗೊಳ್ಳದೆ ಕೈಲಾಗದ ಸಿಎಂ ಎನಿಸಿಕೊಂಡಿದ್ದೀರಿ, ಈಶ್ವರಪ್ಪನವರನ್ನಾದರೂ ಸಂಪುಟದಿಂದ ಹೊರದಬ್ಬಿ ನಿಮ್ಮ ತಾಕತ್ತು ಪ್ರದರ್ಶಿಸಿ. …

Read More »

LSD ಡ್ರಗ್ಸ್ ಡೀಲ್ ಮಾಡುತ್ತಿದ್ದ ಇಬ್ಬರು ಪೆಡ್ಲರ್ ಸಿಸಿಬಿ ಬಲೆಗೆ

ಬೆಂಗಳೂರು, ಏಪ್ರಿಲ್ 03: ವಿದೇಶದಿಂದ ಡ್ರಗ್ ತರಿಸಿ ಡೀಲಿಂಗ್ ಮಾಡುತ್ತಿದ್ದ ಇಬ್ಬರು ಡ್ರಗ್ ಡೀಲರ್ ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬನಶಂಕರಿ ಮತ್ತು ಜಯನಗರ ಸುತ್ತಮುತ್ತ ಡ್ರಗ್ ವಹಿವಾಟು ನಡೆಸುತ್ತಿದ್ದ ಇಬ್ಬರು ಆರೋಪಿಗಳು ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಹತ್ತು ಲಕ್ಷ ರೂ. ಮೌಲ್ಯದ ಎಕ್ಸ್ ಟಸಿ ಪಿಲ್ಸ್ ಮತ್ತು ಎಲ್‌ಎಸ್ ಡಿ ಸ್ಟ್ರಿಪ್ಸ್ ವಶಪಡಿಸಿಕೊಂಡಿದ್ದಾರೆ. ಜಯನಗರದ ನಿವಾಸಿ ಜೇಡನ್ ಸೌದ್ ಮತ್ತು ಬನಶಂಕರಿ ನಿವಾಸಿ ನಾಗರಾಜ್ ರಾವ್ ಬಂಧಿತ ಅರೋಪಿಗಳು. …

Read More »

ಕೊರೋನಾ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಇಲ್ಲ : ಸಚಿವ ಸುಧಾಕರ್

ಬೆಂಗಳೂರು, ಏ.3- ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳನ್ನು ತಡೆಗಟ್ಟಬೇಕಾದ ಅಗತ್ಯವಿರುವ ಕಾರಣ ಸರ್ಕಾರದ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಂತ್ರಿಕ ಸಲಹಾ ಸಮಿತಿಯವರ ಶಿಫಾರಸಿನ ಮೇಲೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ಮಾಡಿ ಮಾರ್ಗಸೂಚಿಯನ್ನು ಜಾರಿ ಮಾಡಲಾಗಿದೆ. ಇದು ಏಕಾಏಕಿ ತೆಗೆದುಕೊಂಡ ನಿರ್ಧಾರವಲ್ಲ ಎಂದು ಹೇಳಿದರು. ವೈಜ್ಞಾನಿಕ ವರದಿ ಆಧಾರದ ಮೇಲೆ ಕ್ರಮ ಕೈಗೊಂಡಿದ್ದೇವೆ. ಏಕಾಏಕಿ ಈ …

Read More »

ವೇತನ ಹೆಚ್ಚಳ ಬಗ್ಗೆ ಸಿಹಿ ಸುದ್ದಿ ನೀಡಿದ ಡಿಸಿಎಂ ಸವದಿ

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ವೇತನವನ್ನು ಸೋಮವಾರ ಹೆಚ್ಚಳಮಾಡುವ ಬಗ್ಗೆ ನಿರ್ಧಾರ ಪ್ರಕಟಿಸಲಾಗುವುದು ಎಂದು ಸಾರಿಗೆ ಸಚಿವರಾದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಕೆಎಸ್‌ಆರ್ಟಿಸಿ ನೌಕರರ ತರಬೇತಿ ಕೇಂದ್ರ ಆವರಣದಲ್ಲಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸಾರಿಗೆ ನೌಕರರ ಸಂಘಟನೆಗಳ ಪ್ರಮುಖರ ಜೊತೆ ಚರ್ಚೆ ನಡೆಸಿದ್ದು, ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಸೋಮವಾರ ಹಣಕಾಸು ಇಲಾಖೆ ಹಾಗೂ ಸಿಎಂ …

Read More »

6 -9 ನೇ ತರಗತಿ ಸ್ಥಗಿತ, ಸಿನಿಮಾ ಶೇ. 50 ರಷ್ಟು ಸೀಟ್ ಭರ್ತಿ; ಮತ್ತೆ ಕಠಿಣ ನಿಯಮ ಜಾರಿ -ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಆತಂಕವನ್ನುಂಟು ಮಾಡಿದ ಹಿನ್ನೆಲೆಯಲ್ಲಿ ಸೋಂಕು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಕಠಿಣ ನಿಯಮ ಜಾರಿಗೆ ತರಲಾಗಿದೆ. ವಿದ್ಯಾಗಮವೂ ಸೇರಿದಂತೆ 6 ರಿಂದ 9 ನೇ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ. 10, 11, 12 ನೇ ತರಗತಿಗಳು ಪ್ರಸ್ತುತವಿರುವಂತೆಯೇ ಮುಂದುವರೆಯುತ್ತದೆ. ಆದರೆ ತರಗತಿಗಳಿಗೆ ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯವಾಗಿರುವುದಿಲ್ಲ. ವಸತಿ ಶಾಲೆಗಳು ಬೋರ್ಡಿಂಗ್ ಶಾಲೆಗಳಲ್ಲಿ 10, 11 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆ ಬರೆಯುವ …

Read More »