ಬೆಂಗಳೂರು: ಹೋಂ ಐಸೋಲೇಟ್ ಆಗುವ ವ್ಯಕ್ತಿಗಳಿಗೆ ತಿಳಿಯದಂತೆ ಅವರ ಹೆಸರಿನಲ್ಲಿ ಬೆಡ್ ಮೀಸಲಿರಿಸುವ ಮಹಾದಂಧೆ ಬಯಲಾಗಿದೆ. ಸಂಸದ ತೇಜಸ್ವಿ ಸೂರ್ಯ ಬಿಬಿಎಂಪಿಯ ಕಳ್ಳಾಟವನ್ನ ಬಯಲು ಮಾಡಿದ್ದು, ಸೋಂಕಿತರ ಜೊತೆ ಮಾತನಾಡಿ ಸೀಟ್ ಸಿಕ್ಕಿದೆಯಾ ಅಥವಾ ಇಲ್ಲವಾ ಅನ್ನೋದನ್ನ ಖಚಿತಪಡಿಸಿಕೊಂಡಿದ್ದಾರೆ. ಸೋಂಕಿತರ ಕುಟುಂಬಸ್ಥರ ಜೊತೆ ತೇಜಸ್ವಿ ಸೂರ್ಯ ಮಾತನಾಡಿರುವ ಆಡಿಯೋಗಳು ಲಭ್ಯವಾಗಿದೆ. ಬೆಂಗಳೂರು ದಕ್ಷಿಣ ಭಾಗದಲ್ಲಿ ಬಿಬಿಎಂಪಿಯ ವಾರ್ ರೂಂ ಅಧಿಕಾರಿಗಳೇ ಕೃತಕ ಬೆಡ್ ಅಭಾವ ಸೃಷ್ಟಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. …
Read More »ಸಿಲಿಕಾನ್ ಸಿಟಿಯಲ್ಲಿ ನಡೆಯುತ್ತಿದ್ದ ಬೆಡ್ ದಂಧೆಯನ್ನ ಸಂಸದ ತೇಜಸ್ವಿ ಸೂರ್ಯ ಬಯಲು
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಡೆಯುತ್ತಿದ್ದ ಬೆಡ್ ದಂಧೆಯನ್ನ ಸಂಸದ ತೇಜಸ್ವಿ ಸೂರ್ಯ ಬಯಲು ಮಾಡಿದ್ದು, ವಾರ್ ರೂಮಿನಲ್ಲಿದ್ದ ದಂಧೆಕೋರರ ಬೆವರಿಳಿಸಿದ್ದಾರೆ. ಕಳೆದ ಐದಾರು ದಿನಗಳಿಂದ ಬೆಡ್ ಹಂಚಿಕೆ ಕುರಿತು ತನಿಖೆ ನಡೆಸಿರುವ ತೇಜಸ್ವಿ ಸೂರ್ಯ, ಬೆಡ್ ಅಭಾವದ ಕಾರಣ ಪತ್ತೆ ಮಾಡಿದ್ದಾರೆ. ಬೆಂಗಳೂರಿನ ಸೌಥ್ ವಾರ್ ರೂಮಿಗೆ ಭೇಟಿ ನೀಡಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಬೆಡ್ ದಂಧೆಯ ಮಾಹಿತಿ ಬಿಚ್ಚಿಟ್ಟರು. ಬೆಂಗಳೂರಿನ ನಿವಾಸಿಗೆ ಪಾಸಿಟಿವ್ ವರದಿ ಬರುತ್ತಿದ್ದಂತೆ, ಆಯಾ ಭಾಗದ …
Read More »ರೆಮಿಡಿಸಿವಿರ್ ಅಕ್ರಮ ಮಾರಾಟ: ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಸಿಎಂ ಬಿಎಸ್ ವೈ
ಬೆಂಗಳೂರು: ಕೋವಿಡ್ ಸೋಂಕಿತರಿಗೆ ಕೊಡಲಾಗುವ ರೆಮಿಡಿಸಿವಿರ್ ಔಷಧಿ ಕಾಳ ಸಂತೆಯಲ್ಲಿ ಮಾರಾಟವಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವಂತೆ ಇಂದು ಸಿಎಂ ಯಡಿಯೂರಪ್ಪ ಅಧಿಕಾರಿಗಳ ಸಭೆ ನಡೆಸಿದರು. ರೆಮ್ ಡಿಸಿವಿರ್ ಕೊರತೆ ಬಗ್ಗೆ ತಮ್ಮ ನಿವಾಸದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು, ಅಕ್ರಮವಾಗಿ ಮಾರಾಟ ಮಾಡುತ್ತಿರುವ ಬಗ್ಗೆ ಸಂಪೂರ್ಣ ಮಾಹಿತಿ ಇದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಇಂದು ಸಂಜೆ 4 ಗಂಟೆಗೆ ಸಚಿವ ಸಂಪುಟ ಸಭೆ ನಡೆಯಲಿದೆ. …
Read More »ಕೊರೊನಾ ಪರಿಣಾಮ: ಭಾರತದ ನಿರುದ್ಯೋಗ ದರ 4 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ
ಭಾರತದ ನಿರುದ್ಯೋಗ ದರವು ಏಪ್ರಿಲ್‌ನಲ್ಲಿ ನಾಲ್ಕು ತಿಂಗಳ ಗರಿಷ್ಠ ಶೇಕಡಾ 8ಕ್ಕೆ ಏರಿಕೆಗೊಂಡಿದೆ. ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದಾಗಿ ಅನೇಕ ರಾಜ್ಯಗಳು ನಿರ್ಬಂದಕ್ಕೊಳಗಾಗಿದ್ದು, ವೈರಸ್ ಪ್ರಕರಣಗಳಲ್ಲಿ ದಾಖಲೆಯ ಏರಿಕೆ ಕಂಡಿದೆ. ಖಾಸಗಿ ಸಂಶೋಧನಾ ಸಂಸ್ಥೆಯಾದ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಪ್ರೈ.ಲಿ.ನ ಅಂಕಿ ಅಂಶಗಳ ಪ್ರಕಾರ, ಮಾರ್ಚ್‌ನಲ್ಲಿ ಶೇಕಡಾ 6.5 ರಷ್ಟಿದ್ದ ನಿರುದ್ಯೋಗ ದರವು ಏಪ್ರಿಲ್‌ನಲ್ಲಿ ಶೇಕಡಾ 7.97ಕ್ಕೆ ಏರಿಕೆಗೊಂಡಿದೆ. ಭಾರತದಲ್ಲಿ ಭಾನುವಾರ 3,689ರಷ್ಟು ಸೋಂಕಿತರು ಕೋವಿಡ್-19ಗೆ ಬಲಿಯಾಗಿದ್ದು ದಾಖಲೆಯಾಗಿದೆ. …
Read More »1912 ಹೆಲ್ಪ್‌ಲೈನ್ ಸರಿಯಾಗಲು 2 ದಿನ ಗಡುವು ನೀಡಿದ ಡಿಸಿಎಂ
ಬೆಂಗಳೂರು: ಎರಡು ದಿನಗಳ ಒಳಗಾಗಿ ಬೆಂಗಳೂರು ಮಹಾನಗರದಲ್ಲಿ ಕೋವಿಡ್‌ಗೆ ಸಂಬಂಧಿತ ಎಲ್ಲ ಸೇವೆಗಳನ್ನು 1912 ಹೆಲ್ಪ್‌ಲೈನ್‌ಗೆ ಜೋಡಿಸಬೇಕು; ಬೆಡ್ ಹಂಚಿಕೆ ಪಾರದರ್ಶಕಗೊಳಿಸಬೇಕು ಎಂದು \ ಡಾ.ಸಿ.ಎನ್.ಅಶ್ವತ್ಥನಾರಾಯಣ ಅಧಿಕಾರಿಗಳಿಗೆ ಡೆಡ್‌ಲೈನ್ ವಿಧಿಸಿದರು. ಬೆಂಗಳೂರಿನಲ್ಲಿ ದಿನವಿಡೀ ಕೋವಿಡ್ ಸಂಬಂಧಿತ ಸಭೆಗಳಲ್ಲಿ ಪಾಲ್ಗೊಂಡ ಅವರು, ಮಾಹಿತಿ ಮತ್ತು ಸೌಲಭ್ಯಗಳ ಕೊಂಡಿಯಾಗಿರುವ ಹೆಲ್ಪ್‌ಲೈನ್ ವ್ಯವಸ್ಥೆಯನ್ನು ಸರಿ ಮಾಡುವ ಉದ್ದೇಶದಿಂದ ಸೋಮವಾರ ಸಂಜೆ ಉನ್ನತಮಟ್ಟದ ಅಧಿಕಾರಿಗಳ ಸಭೆ ನಡೆಸಿದರು. ಬೆಂಗಳೂರು ನಗರದಲ್ಲಿರುವ ಕೋವಿಡ್ ಬೆಡ್‌ಗಳ ಪ್ರಮಾಣ, ಹಂಚಿಕೆ …
Read More »ಮುಖ್ಯಮಂತ್ರಿ B.S.Y.ರಾಜೀನಾಮೆ ನೀಡಲಿ- ಸಿದ್ದರಾಮಯ್ಯ
ಬೆಂಗಳೂರು: ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಸಿಗದೆ 24 ಜನ ರೋಗಿಗಳು ಸಾವಿಗೀಡಾಗಿರುವ ಘಟನೆ ತಿಳಿದು ಸಂಕಟವಾಯಿತು. ಮೃತರ ಶೋಕತಪ್ತ ಕುಟುಂಬಗಳಿಗೆ ನನ್ನ ಸಂತಾಪಗಳು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ಅಲ್ಲದೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಕಳೆದ ಹಲವು ದಿನಗಳಿಂದ ರಾಜ್ಯದಲ್ಲಿ ಆಕ್ಸಿಜನ್ ಸಿಗದೆ ಉಂಟಾಗಿರುವ ಸರಣಿ ಸಾವುಗಳ ಮುಂದುವರೆದ ಭಾಗವಿದು. ಈ ಸಾವಿಗೆ …
Read More »ನನ್ನ ತಾಯಿಗೇ ಬೆಡ್ ಕೊಡ್ತಿಲ್ಲ ಎಂದು ಸಿದ್ದರಾಮಯ್ಯ ಬಳಿ ಕಣ್ಣೀರಿಟ್ಟ ಶಾಸಕಿ ಕುಸುಮಾ ಶಿವಳ್ಳಿ!
ಬೆಂಗಳೂರು: ಕರ್ನಾಟಕದ ಪಾಲಿಗೆ ಇಂದು ಕರಾಳ ದಿನ. ಚಾಮರಾಜನಗರದ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಉಂಟಾಗಿ 24 ಮಂದಿ ರೋಗಿಗಳು ನರಳಾಡಿ ಪ್ರಾಣ ಬಿಟ್ಟಿದ್ದಾರೆ. ಇನ್ನು ಸೋಂಕಿತರಿಗೆ ಬೆಡ್ ಸಿಗದೇ ಪರದಾಡುತ್ತಿರುವುದು ಸಾಮಾನ್ಯವೇನೋ ಎನ್ನುವಂತಾಗಿದೆ. ಸಚಿವರು, ಶಾಸಕರು, ಸೆಲೆಬ್ರೆಟಿಗಳು ಕೂಡ ತಮ್ಮವರಿಗಾಗಿ ಬೆಡ್ ಹೊಂದಿಸಲಾಗದೇ ದಿಕ್ಕೆಟ್ಟಿದ್ದಾರೆ. ತಮ್ಮೆಲ್ಲಾ ಪ್ರಭಾವನ್ನು ಬಳಸಿದರೂ ಆಸ್ಪತ್ರೆಗಳಲ್ಲಿ ಒಂದು ಬೆಡ್ ಸಿಗುತ್ತಿಲ್ಲ. ಇದಕ್ಕೆ ಕುಂದಗೋಳ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಕುಸುಮಾ ಶಿವಳ್ಳಿಯೂ ಹೊರತಾಗಿಲ್ಲ. ತಮ್ಮ ಸೋಂಕಿತ ತಾಯಿಗೆ …
Read More »ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ದುರಂತ ಸುರೇಶ್ ಕುಮಾರ್ ವಿರುದ್ಧ ಸಿಎಂ ಗರಂ
ಬೆಂಗಳೂರು: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ದುರಂತ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತುರ್ತು ಸಚಿವ ಸಂಪುಟ ಸಭೆ ಕರೆದಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಕಳೆದ 24 ಗಂಟೆಯಲ್ಲಿ 24 ರೋಗಿಗಳು ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿರುವ ಘಟನೆ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ನಾಳೆ ಸಂಜೆ 4 ಗಂಟೆಗೆ ತುರ್ತು ಸಚಿವ ಸಂಪುಟ ಸಭೆ ಕರೆದಿದ್ದು, ಜಿಲ್ಲಾಸ್ಪತ್ರೆಗಳ ಸ್ಥಿತಿಗತಿ, ಆಕ್ಸಿಜನ್ ವ್ಯವಸ್ಥೆ, ಬೆಡ್, ಚಿಕಿತ್ಸೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ತಮ್ಮದೇ ಉಸ್ತುವಾರಿ ಜಿಲ್ಲೆಯಲ್ಲಿ …
Read More »ಕರ್ನಾಟಕದಲ್ಲೂ SSLC ಮತ್ತು PUC ಪರೀಕ್ಷೆ ರದ್ದು ಆಗಲಿದೆಯೇ ?
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಿಗದಿಯಂತೆ ಎಸ್‌ಎಸ್‌ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ನಡೆಸುವ ಕುರಿತಾಗಿ ಇಂದಿನ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ. ಇಂದು ಪಿಯುಸಿ ಮತ್ತು ಎಸ್‌ಎಸ್‌ಎಲ್ಸಿ ಪರೀಕ್ಷೆಯ ಭವಿಷ್ಯ ನಿರ್ಧಾರವಾಗಲಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಬೆಳಗ್ಗೆ 10 ಗಂಟೆಗೆ ಅಧಿಕಾರಿಗಳ ಸಭೆ ಕರೆದಿದ್ದಾರೆ. ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಳವಾಗ್ತಿದೆ. ಹೀಗಾಗಿ ನಿಗದಿಯಾದ ದಿನಾಂಕದಲ್ಲಿ ಪರೀಕ್ಷೆ ನಡೆಸುವ ಕುರಿತು …
Read More »ಫೇಸ್ಬುಕ್ನಲ್ಲಿ ಪರಿಚಯ ಮಾಡ್ಕೊಂಡು ವಿಡಿಯೋ ಕಾಲ್ನಲ್ಲಿ ನೀಚ ಕೃತ್ಯ :ಈ ಕಿಲಾಡಿ ಲೇಡಿ ಇಂದ ಹುಷಾರಾಗಿರಿ….
ನಲ್ಗೊಂಡ: ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಮಾಡಿಕೊಂಡು, ನಂಬಿಸಿ ಹಣ ಪಡೆದುಕೊಂಡು ವಂಚಿಸುತ್ತಿದ್ದ ಕಿಲಾಡಿ ಲೇಡಿಯನ್ನು ನಲ್ಗೊಂಡ ಪೊಲೀಸರು ಬಂಧಿಸಿ, ಕಂಬಿ ಹಿಂದೆ ತಳ್ಳಿದ್ದಾರೆ. ಆರೋಪಿಯನ್ನು ತೆಲಂಗಾಣದ ಖಮ್ಮಮ್ ಜಿಲ್ಲೆಯ ಸತ್ತುಪಲ್ಲಿ ನಿವಾಸಿ ಪಂತಂಗಿ ಮಹೇಶ್ವರಿ ಅಲಿಯಾಸ್ ಧರಣಿ ರೆಡ್ಡಿ ಎಂದು ಗುರುತಿಸಲಾಗಿದೆ. ಅನೇಕ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯಳಾಗಿರುವ ಮಹೇಶ್ವರಿ, ಅನೇಕ ಯುವಕರಿಗೆ ಮದುವೆ ಹೆಸರಿನಲ್ಲಿ ನಂಬಿಸಿ ಹಣ ಪಡೆದುಕೊಂಡು ವಂಚನೆ ಮಾಡಿದ್ದಾಳೆ. ಇತ್ತೀಗೆಚೆ ಈಕೆ ಹೈದರಾಬಾದ್ನ ಕೊಂಪಲ್ಲಿ ಮೂಲದ …
Read More »
Laxmi News 24×7