ಬೆಂಗಳೂರು: ಕೊರೊನಾ ಸೋಂಕು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಮಣ್ಣ (61) ಎಂಬುವರು ಆಸ್ಪತ್ರೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ‘ಅಂಜನಾನಗರದ ರಾಮಣ್ಣ, ವಿಜಯನಗರದ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದರು. ಶುಕ್ರವಾರ ತಡರಾತ್ರಿ ಆಸ್ಪತ್ರೆಯ ಫ್ಯಾನ್ಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಪಾಟೀಲ ತಿಳಿಸಿದರು. ‘ಘಟನೆ ಸಂಬಂಧ ಮಗನಿಂದ ದೂರು ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ’ ಎಂದೂ ಹೇಳಿದರು.
Read More »ರಾಜ್ಯದಲ್ಲಿ ದಿನಕ್ಕೆ 25 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣ ಸೋಮವಾರದಿಂದ ಇನ್ನಷ್ಟು ಕಠಿಣ ನಿರ್ಧಾರ?
ಬೆಂಗಳೂರು – ರಾಜ್ಯದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಕ್ಷಣ ಕ್ಷಣಕ್ಕೂ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ತುರ್ತು ಸಚಿವಸಂಪುಟ ಸಭೆ ಕರೆಯಲಾಗಿದೆ. ರಾಜ್ಯದಲ್ಲಿ ದಿನಕ್ಕೆ 25 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ದೃಢಪಡುತ್ತಿದ್ದು, ನೂರಾರು ಮಂದಿ ಸಾವಿಗೀಡಾಗುತ್ತಿದ್ದಾರೆ. ಹಾಗಾಗಿ ತುರ್ತಾಗಿ ನಿಯಂತ್ರಣಕ್ಕೆ ತರಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಸಧ್ಯಕ್ಕೆ ಜನರಿಗೆ ತೊಂದರೆಯಾದರೂ ಜನರ ಜೀವ ಉಳಿಯುವುದು ಮುಖ್ಯ ಹಾಗೂ ಟಫ್ ರೂಲ್ಸ್ ಜಾರಿಗೊಳಿಸಿ. ರೂಲ್ಸ್ ಮುರಿಯುವವರ ವಿರುದ್ಧ …
Read More »ಕೊರೋನ 2ನೆ ಅಲೆಯನ್ನು ಬಿಜೆಪಿ ಅಲೆ ಎನ್ನಬೇಕೋ, ಮೋದಿ ಅಲೆ ಎನ್ನಬೇಕೊ ಗೊತ್ತಾಗುತ್ತಿಲ್ಲ: ಡಿಕೆಶಿ
ಬೆಂಗಳೂರು, ಎ.23: ಕೊರೋನ ಎರಡನೆ ಅಲೆಯನ್ನು ಬಿಜೆಪಿ ಅಲೆ ಎನ್ನಬೇಕೋ, ಮೋದಿ ಅಲೆ ಎನ್ನಬೇಕೊ ಗೊತ್ತಾಗುತ್ತಿಲ್ಲ. ಒಟ್ಟಿನಲ್ಲಿ ಕಳೆದ ಒಂದು ವರ್ಷದ ಸರಕಾರದ ವೈಫಲ್ಯದಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಗಾರಿದರು. ಶುಕ್ರವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರಕಾರವು ಗುರುವಾರ ಮಧ್ಯಾಹ್ನದಿಂದ ಪೊಲೀಸರನ್ನು ಬಳಸಿಕೊಂಡು ವರ್ತಕರು, ವ್ಯಾಪಾರಿಗಳಿಗೆ ಮಾಹಿತಿ ನೀಡದೆ ಅವರ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದೆ ಎಂದು …
Read More »ಸರ್ಕಾರದಿಂದ ಜನರ ಕೊಲೆ: ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ
ಬೆಂಗಳೂರು: ತಜ್ಞರ ವರದಿಯನ್ನು ರಾಜ್ಯದ ಬಿಜೆಪಿ ಸರ್ಕಾರ ನಿರ್ಲಕ್ಷಿಸಿದ ಪರಿಣಾಮವಾಗಿ ಜನರು ಕೋವಿಡ್ನಿಂದ ಬೀದಿಯ ಮೇಲೆ ಸಾಯುತ್ತಿದ್ದಾರೆ. ಈ ಸಾವುಗಳು ಕೋವಿಡ್ನಿಂದ ಆಗುತ್ತಿವೆ ಎನ್ನುವುದಕ್ಕಿಂತ ಬಿಜೆಪಿ ಸರ್ಕಾರದ ಅದಕ್ಷತೆ ಮತ್ತು ಉಡಾಫೆಯಿಂದ ಆದ ಕೊಲೆಗಳು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಕೋವಿಡ್ ಎರಡನೇ ಅಲೆ ಸ್ಫೋಟಗೊಂಡಿರುವ ಸಂದರ್ಭದಲ್ಲಿ ಸೋಂಕಿತರ ಚಿಕಿತ್ಸೆಗೆ ನೆರವಾಗುವಂತೆ ಕಾಂಗ್ರೆಸ್ನ ಎಲ್ಲ ಶಾಸಕರಿಗೂ ಶುಕ್ರವಾರ ಬರೆದಿರುವ ಪತ್ರದಲ್ಲಿ ಈ ವಿಷಯ ಪ್ರಸ್ತಾಪಿಸಿರುವ ಅವರು, …
Read More »ಶಾಶ್ವತವಾಗಿ ಬಾಗಿಲು ಹಾಕಿದ ಮೈಸೂರಿನ ಹಳೆಯ ಚಿತ್ರಮಂದಿರ
ಮಲ್ಟಿಫ್ಲೆಕ್ಸ್ಗಳ ವಿರುದ್ಧ ಹಾಗೋ ಹೀಗೋ ಹೋರಾಡಿ ಜೀವ ಹಿಡಿದುಕೊಂಡಿದ್ದ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಕೊರೊನಾ ಹೊಡೆತಕ್ಕೆ ಸಂಪೂರ್ಣ ತಲೆಕೆಳಗಾಗಿವೆ. ರಾಜ್ಯದಲ್ಲಿ ಹಲವು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಕಳೆದ ಒಂದು ವರ್ಷದಲ್ಲಿ ಬಾಗಿಲು ಮುಚ್ಚಿವೆ. ಇದೀಗ ಮೈಸೂರಿನಲ್ಲಿ ಮತ್ತೊಂದು ಚಿತ್ರಮಂದಿರ ಶಾಶ್ವತವಾಗಿ ಬಾಗಿಲು ಹಾಕಿದೆ. ಮೈಸೂರಿನ ಮಂಡಿ ಮೊಹಲ್ಲದಲ್ಲಿದ್ದ ‘ಶ್ರೀ ಟಾಕೀಸ್’ ಶಾಶ್ವತವಾಗಿ ಬಾಗಿಲು ಹಾಕಿದೆ. ಐದು ದಶಕಕ್ಕೂ ಹಳೆಯದಾದ ಈ ಚಿತ್ರಮಂದಿರ ಕೊರೊನಾ ಸಮಯದಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತಾದ್ದರಿಂದ ಟಾಕೀಸ್ …
Read More »ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ದಿನಾಂಕ ನಿಗದಿ, ಮಾರ್ಗಸೂಚಿ ಪ್ರಕಟ
ಬೆಂಗಳೂರು, ಏಪ್ರಿಲ್ 24: ಕೊರೊನಾ ಸೋಂಕಿನ ಬೆನ್ನಲ್ಲೇ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ನಡೆಸಲು ಪದವಿಪೂರ್ವ ಶಿಕ್ಷಣ ಇಲಾಖೆ ಮುಂದಾಗಿದೆ. ಪ್ರಾಯೋಗಿಕ ಪರೀಕ್ಷೆಗಳನ್ನು ಆಯಾ ಕಾಲೇಜಿನ ಹಂತದಲ್ಲಿಯೇ ನಡೆಸುವುದು.ಈ ಬಗ್ಗೆ ಪ್ರಾಂಶುಪಾಲರಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಪ್ರತಿ ದಿನ ಪರೀಕ್ಷೆ ಮುಗಿದ ನಂತರ ತಮಗೆ ನಿಯೋಜಿಸಿದ ಪರೀಕ್ಷಾ ಕೇಂದ್ರದಲ್ಲಿ ಅಂಕಗಳನ್ನು ಆನ್ಲೈನ್ ಮೂಲಕ ನಮೂದಿಸಲು ಆಯಾ ಕಾಲೇಜಿನ ಸೂಕ್ತ ಮಾರ್ಗದರ್ಶನ ನೀಡುವುದು. ಏಪ್ರಿಲ್ 28 ರಿಂದ ಮೇ 18 ರವೆರೆಗೆ …
Read More »ರೈಲು ಪ್ರಯಾಣಿಕರೇ ಗಮನಿಸಿ : ‘ವೇಟಿಂಗ್ ಲಿಸ್ಟ್’ ಪ್ರಯಾಣಿಕರಿಗೆ ಅವಕಾಶವಿಲ್ಲ
ಬೆಂಗಳೂರು : ದೇಶಾದ್ಯಂತ ಕೊರೋನಾ ಸೋಂಕಿನ 2ನೇ ಅಲೆಯ ಅರ್ಭಟ ಜೋರಾಗಿದೆ. ಈ ಸಂದರ್ಭದಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಹಲವು ಕ್ರಮಗಳನ್ನು ಕೈಗೊಂಡಿವೆ. ರಾಜ್ಯದಲ್ಲೂ ಕೊರೋನಾ ನಿಯಂತ್ರಣಕ್ಕಾಗಿ ನೈಟ್ ಅಂಡ್ ವೀಕ್ ಎಂಡ್ ಕರ್ಪ್ಯೂ ಜಾರಿಗೊಳಿಸಲಾಗಿದೆ. ಇಂತಹ ಸಂದರ್ಭದಲ್ಲಿ ರೈಲ್ವೆ ಇಲಾಖೆ ಕೂಡ ಕೊರೋನಾ ನಿಯಂತ್ರಣಕ್ಕೆ ಶಿಸ್ತು ಕ್ರಮ ಕೈಗೊಂಡಿದ್ದು, ಅಂತರ್ ರಾಜ್ಯ ರೈಲುಗಳ ವೇಟಿಂಗ್ ಲೀಸ್ಟ್ ಟಿಕೇಟ್ ಹೊಂದಿರುವ ಪ್ರಯಾಣಿಕರಿಗೆ ರೈಲು ಹತ್ತೋದಕ್ಕೆ ನಿರ್ಬಂಧ ವಿಧಿಸಲಾಗಿದೆ. …
Read More »ಪರದೆಯಲ್ಲಿ ಮತ್ತೆಮತ್ತೆ ಮುಖ ತೋರಿಸಿದರೆ ಕೊರೊನಾ ವೈರಸ್ ಓಡಿಹೋಗುವುದಿಲ್ಲಮುಖ್ಯಮಂತ್ರಿಗಳಿಗೆ ಪಾಠಮಾಡಲು ನೀವು ಹೆಡ್ಮಾಸ್ಟರ್ ಅಲ್ಲ.
ಪ್ರಧಾನಿ ನರೇಂದ್ರ ಮೋದಿ ಅವರೇ, ಪರದೆಯಲ್ಲಿ ಮತ್ತೆಮತ್ತೆ ಮುಖ ತೋರಿಸಿದರೆ ಕೊರೊನಾ ವೈರಸ್ ಓಡಿಹೋಗುವುದಿಲ್ಲ, ಆಗಾಗ ಮುಖ್ಯಮಂತ್ರಿಗಳಿಗೆ ಪಾಠಮಾಡಲು ನೀವು ಹೆಡ್ಮಾಸ್ಟರ್ ಕೂಡಾ ಅಲ್ಲ. ಮೊದಲು ರಾಜ್ಯಗಳ ಬೇಡಿಕೆಗಳನ್ನು ಈಡೇರಿಸಿ ಕೊರೊನಾ ವೈರಸ್ ನಿಯಂತ್ರಿಸಿ. ಪ್ರತಿಯೊಂದು ರಾಜ್ಯದಲ್ಲಿ ಕೊರೊನಾ ಸೋಂಕಿತರು ಆಮ್ಲಜನಕ ಇಲ್ಲದೆ ಸಾಯುತ್ತಿದ್ದಾರೆ. ಆಮ್ಲಜನಕ ಪೂರೈಕೆ ಮಾಡಿ ಎಂದರೆ ಅಕ್ರಮ ದಾಸ್ತಾನು ಮಾಡಿದವರ ಮೇಲೆ ಕ್ರಮಕೈಗೊಳ್ಳಿ ಎಂದು ಕರೆ ನೀಡುತ್ತೀರಿ. ನೀವೇನು ರಾಜ್ಯಗಳ ಅನುಮತಿ ಪಡೆದು ಆಮ್ಲಜನಕ ರಪ್ತು …
Read More »ಕುಂಟು ನೆಪ ಒಡ್ಡಿ ಮನೆಯಿಂದ ಹೊರಬಂದರೆ ಬಂಧಿಸುತ್ತೇವೆ; ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್
ಬೆಂಗಳೂರು: ಇಂದು ರಾತ್ರಿಯಿಂದ ಕರ್ಫ್ಯೂ ಇರುವ ಕಾರಣ ಕುಂಟು ನೆಪ ಹೇಳಿಕೊಂಡು ಹೊರಬಂದರೆ ಬಂಧಿಸುತ್ತೇವೆ. ಅನಗತ್ಯವಾಗಿ ವಾಹನ ರಸ್ತೆಗಿಳಿಸಿದರೆ ಪ್ರಕರಣ ದಾಖಲಿಸುತ್ತೇವೆ. ವಾರಾಂತ್ಯದ ಕರ್ಫ್ಯೂಗೆ ಬೆಂಗಳೂರಿನ ಜನತೆ ಸಹಕರಿಸಬೇಕು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಮನವಿಪೂರ್ವಕ ಎಚ್ಚರಿಕೆ ನೀಡಿದ್ದಾರೆ. ರಾತ್ರಿ 9ರಿಂದ ಯಾರೂ ಮನೆಯಿಂದ ಹೊರಗೆ ಬರುವಂತಿಲ್ಲ. ಸ್ವಿಗ್ಗಿ, ಜೊಮ್ಯಾಟೊ ಟಿ ಶರ್ಟ್ಗಳು ದುರ್ಬಳಕೆಯಾಗುತ್ತಿವೆ. ಸ್ವಿಗ್ಗಿ, ಜೊಮ್ಯಾಟೊಗೆ ಸಂಬಂಧಿಸದವರು ಟಿ ಶರ್ಟ್ ಬಳಸಿ ಹೊರಗೆ ಬಂದರೆ ಕೂಡಲೇ …
Read More »ಲಾಠಿ ಪ್ರಹಾರದಿಂದ ಕೋವಿಡ್ ಹೋಗಲ್ಲ, ಬೆಡ್, ಆಕ್ಸಿಜನ್ ನೀಡಿ : ಸಿಎಂ ವಿರುದ್ಧ ಶರವಣ ಕಿಡಿ
ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ನೈಟ್ ಕರ್ಫ್ಯೂ ಜೊತೆ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ. ಅಲ್ಲದೆ ಅಗತ್ಯ ಸೇವೆಗಳನ್ನು ಹೊರತು ಪಡಿಸಿ ರಾಜ್ಯದಲ್ಲಿ ಎಲ್ಲವನ್ನೂ ಬಂದ್ ಮಾಡಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಫೇಸ್ ಬುಕ್ ನಲ್ಲಿ ಸಿಎಂ ವಿರುದ್ಧ ಹರಿ ಹಾಯ್ದಿದ್ದಾರೆ. ಮಾನ್ಯ ಯಡಿಯೂರಪ್ಪ ನವರೇ ಕೊರೋನಾ ಹತೋಟಿಗೆ ತರಲು ಸರ್ಕಾರ ವಿಫಲವಾದ ನಂತರ ಜನರ ಮೇಲೆ ಲಾಠಿ ಪ್ರಹಾರ …
Read More »