Breaking News

ಬೆಂಗಳೂರು

ಸದ್ದಿಲ್ಲದ ಹಸೆಮಣೆ ಏರಿದ ಜನಪ್ರಿಯ ನಟಿ ಪ್ರಣಿತಾ ಸುಭಾಷ್

ಬೆಂಗಳೂರು :ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಪ್ರಣಿತಾ ಸುಭಾಷ್ ಲಾಕ್ ಡೌನ್ ಸಮಯದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಲಾಕ್‌ಡೌನ್‌ನಲ್ಲಿ ಅವರು ಸದ್ದಿಲ್ಲದೆ ಮದುವೆ ಆಗಿದ್ದಾರೆ ಎಂಬ ಸುದ್ದಿ ಕೆಲವು ದಿನಗಳಿಂದಲೇ ಹರಿದಾಡುತ್ತಿತ್ತು . ಆದರೆ ಆ ಬಗ್ಗೆ ಪ್ರಣಿತಾ ಅವರು ಬಹಿರಂಗವಾಗಿ ಎಲ್ಲಿಯೂ ಹೇಳಿಕೊಂಡಿರಲಿಲ್ಲ . ಈಗ ಪ್ರಣಿತಾ ಮದುವೆಯ ಫೋಟೋಗಳ ಬಹಿರಂಗ ಆಗಿವೆ . ಆ ಮೂಲಕ ಅವರು ಸಪ್ತಪದಿ ತುಳಿದಿರುವುದಕ್ಕೆ ಸೂಕ್ತ ಸಾಕ್ಷಿ ಸಿಕ್ಕಂತಾಗಿದೆ . ಮೊನ್ನೆಯಷ್ಟೇ …

Read More »

ಸರ್ಕಾರಿ ಶಿಕ್ಷಕರ ವೇತನ ಕಡಿತಗೊಳಿಸಿ ಖಾಸಗಿ ಶಿಕ್ಷಕರಿಗೆ ಪ್ಯಾಕೇಜ್

ಬೆಂಗಳೂರು: ರಾಜ್ಯದ ಅನುದಾನರಹಿತ ಶಾಲಾ- ಕಾಲೇಜು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ವಿಶೇಷ ಪ್ಯಾಕೇಜ್ ಘೋಷಿಸಲು ರಾಜ್ಯ ಸರ್ಕಾರ ಚಿಂತಿಸಿದ್ದು, ಈ ನಿಟ್ಟಿನಲ್ಲಿ ಸರ್ಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಮತ್ತು ಪಿಯು ಉಪನ್ಯಾಸಕರ ಕೆಲವು ದಿನಗಳ ವೇತನ ಕಡಿತಗೊಳಿಸಿ ಆ ಹಣದಿಂದ ಪ್ಯಾಕೇಜ್ ನೀಡುವ ಬಗ್ಗೆ ಸಚಿವ ಎಸ್.ಸುರೇಶ್ ಕುಮಾರ್‌ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪತ್ರ ಬರೆದಿರುವ ಅವರು, ಶಿಕ್ಷಣ ಇಲಾಖೆ ವತಿಯಿಂದ ನಡೆಸಲಾಗುವ ವಿವಿಧ …

Read More »

ವರ್ಷದ ಹಿಂದೆ ಮಗು ಕದ್ದಿದ್ದ ಮನೋವೈದ್ಯೆಯ ಬಂಧನ

ಬೆಂಗಳೂರು: ಚಾಮರಾಜಪೇಟೆ ಬಿಬಿಎಂಪಿ ಹೆರಿಗೆ ಆಸ್ಪತ್ರೆಯಿಂದ ಮಗು ಕಳ್ಳತನವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ನಿರಂತರ ಒಂದು ವರ್ಷದ ಕಾರ್ಯಾಚರಣೆ ಬಳಿಕ ತಲಘಟ್ಟಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬರೋಬ್ಬರಿ 1 ವರ್ಷಕ್ಕೆ ಪೊಲೀಸರು ಪ್ರಕರಣವನ್ನು ಬೇಧಿಸಿದ್ದಾರೆ. ಆರೋಪಿಯ ರೇಖಾ ಚಿತ್ರ ರಚಿಸಿ ತಲಘಟ್ಟಪುರ ಪಿಎಸ್‌ಐ ಶ್ರೀನಿವಾಸ್ ಮತ್ತು ತಂಡ ಕಾರ್ಯಾಚರಣೆಗೆ ಇಳಿದಿದ್ರು. ಸದ್ಯ ಒಂದು ವರ್ಷದ ಬಳಿಕ ಆರೋಪಿ ಸಿಕ್ಕಿದ್ದು ಮಗುವನ್ನು ಕಳ್ಳತನ ಮಾಡಿದ್ದು ಓರ್ವ ಮನೋವೈದ್ಯೆ ಎಂಬುವುದು ತಿಳಿದು ಬಂದಿದೆ. ಉತ್ತರ …

Read More »

ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಇಂದು ಕ್ಲೀನ್ ಚಿಟ್ ಸಿಗುವ ಸಾಧ್ಯತೆಗಳಿವೆ.

ಬೆಂಗಳೂರು: ಅತ್ಯಾಚಾರ ಕೇಸಿನಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಇಂದು ಕ್ಲೀನ್ ಚಿಟ್ ಸಿಗುವ ಸಾಧ್ಯತೆಗಳಿವೆ. ಹೌದು. ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿಗೆ ಇಂದು ಬಿಗ್ ಡೇ ಆಗಿದೆ. ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತನಿಖಾ ಪ್ರಗತಿ ವರದಿ ಕೇಳಿದೆ. ಹೀಗಾಗಿ ಎಸ್‍ಐಟಿ ಇಂದು ತನಿಖಾ ಪ್ರಗತಿ ವರದಿ ಸಲ್ಲಿಸಲಿದೆ. ಈ ವರದಿ ನೋಡಿ ಹೈಕೋರ್ಟ್ ಎಸ್ ಐಟಿಯೇ ತನಿಖಾ ಮುಂದುವರಿಸಬೇಕಾ..? ಅಥವಾ ಬೇರೆ ತನಿಖಾ ಸಂಸ್ಥೆಗೆ ವರ್ಗಾವಣೆ …

Read More »

ನಂದಿನಿ ಹಾಲು ಗ್ರಾಹಕರಿಗೆ ಬಂಪರ್ ಕೊಡುಗೆ: ಅದೇ ಬೆಲೆಗೆ ಹೆಚ್ಚುವರಿ ಹಾಲು

ಬೆಂಗಳೂರು: ವಿಶ್ವ ಹಾಲು ದಿನಾಚರಣೆ ಅಂಗವಾಗಿ ಕೆಎಂಎಫ್ ನಂದಿನಿ ಹಾಲು ಗ್ರಾಹಕರಿಗೆ ಒಂದು ತಿಂಗಳು ಹೆಚ್ಚುವರಿ ಹಾಲು ನೀಡಲಾಗುತ್ತದೆ. ಒಂದು ಲೀಟರ್ಗೆ 40 ಮಿ.ಲೀ. ಮತ್ತು ಅರ್ಧ ಲೀಟರಿಗೆ 20 ಎಂ.ಲೀ. ಹಾಲನ್ನು ಹೆಚ್ಚುವರಿಯಾಗಿ ನೀಡಲಾಗುವುದು. ಎಲ್ಲ ಶ್ರೇಣಿಯ ನಂದಿನಿ ಹಾಲಿನ ಗ್ರಾಹಕರಿಗೆ ಹೆಚ್ಚುವರಿ ಹಾಲು ಒಂದು ತಿಂಗಳ ಕಾಲ ಪೂರೈಕೆಯಾಗಲಿದೆ. ಕೊರೋನಾ ಲಾಕ್ ಡೌನ್ ಕಾರಣದಿಂದ ಹೆಚ್ಚುವರಿ ಹಾಲು ಸಂಗ್ರಹವಾಗುತ್ತಿದೆ. ಇದರಿಂದಾಗಿ ಕೆಎಂಎಫ್ ವ್ಯಾಪ್ತಿಯ 14 ಹಾಲು ಒಕ್ಕೂಟ …

Read More »

ಸೋಂಕಿತ ಮಕ್ಕಳಿಗೂ ಕೊರೋನಾ ಲಸಿಕೆ : ಸಚಿವ ಸುಧಾಕರ್

ಬೆಂಗಳೂರು : ಒಂದು ವೇಳೆ ಮಕ್ಕಳಿಗೆ ಸೋಂಕು ಬಂದರೆ ಅವರಿಗೂ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು.ಈಗ ಮಕ್ಕಳ ಮೇಲೆ ಪ್ರಯೋಗ ಮಾಡಲಾಗುತ್ತಿದೆ.ಅನೇಕ ಲಸಿಕಾ ಕಂಪನಿಗಳು ಕೆಲವೆಡೆ ಟ್ರಯಲ್ ರನ್ ಮಾಡುತ್ತಿವೆ ಎಂದು ತಿಳಿಸಿದರು. ಎಲ್ಲವನ್ನೂ ನೋಡುಕೊಂಡು ನಮ್ಮ ಮಕ್ಕಳಿಗೂ ಲಸಿಕೆ ಹಾಕಿಸಲಾಗುವುದು.ಹಿರಿಯರಿಗೆ ಮೊದಲು, ನಂತರ ಜನರನ್ನ ಸಂಪರ್ಕಿಸುವ ವೃತ್ತಿಯವರಿಗೆ.ಜೊತೆ ಜೊತೆಯಲ್ಲಿ ಎಲ್ಲರಿಗೂ ಎಲ್ಲಿಯವರೆಗೂ ತಲುಪಲು ಸಾಧ್ಯವೋ …

Read More »

ಬೆಂಗಳೂರು; ಬಾಕಿ ಹಣಕ್ಕಾಗಿ ಸಂಬಂಧಿಕರನ್ನು ಕೂಡಿಹಾಕಿದ ಆಸ್ಪತ್ರೆ!

ಬೆಂಗಳೂರು, ಮೇ 30; ಬೆಂಗಳೂರು ನಗರದ ಖಾಸಗಿ ಆಸ್ಪತ್ರೆಗಳ ಧನ ದಾಹಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ. ಕೋವಿಡ್‌ನಿಂದ ವ್ಯಕ್ತಿ ಮೃತಪಟ್ಟರೂ ಶವವನ್ನು ಕೊಡದೇ ಜೊತೆಗಿದ್ದ ಸಂಬಂಧಿಕರನ್ನು ಕೂಡಿಹಾಕಿದ ಘಟನೆ ನಡೆದಿದೆ. 42 ವರ್ಷದ ಲಕ್ಷ್ಮೀ ನಾರಾಯಣ ಚನ್ನಸಂದ್ರದ ಖಾಸಗಿ ಆಸ್ಪತ್ರೆಗೆ ಮೇ 17ರಂದು ದಾಖಲಾಗಿದ್ದರು. ಕೋವಿಡ್ ಸೋಂಕು ತಗುಲಿದ್ದ ಅವರು ಮೇ 27ರಂದು ಮೃತಪಟ್ಟಿದ್ದರು. ಒಟ್ಟು 8.17 ಲಕ್ಷ ರೂ. ಬಿಲ್ ಆಗಿತ್ತು. ಕುಟುಂಬದವರು 4.5 ಲಕ್ಷ ರೂ. ಪಾವತಿ …

Read More »

ಕಮಿಷನ್‌ ಪಡೆದ ಆರೋಪ ; ಶಾಸಕ ರವಿ ಸುಬ್ರಮಣ್ಯ ವಿರುದ್ದ ಪೋಲೀಸ್‌ ದೂರು

ಬೆಂಗಳೂರು: ‘ಉಚಿತವಾಗಿ ನೀಡಬೇಕಾದ ಕೋವಿಡ್‌ ಲಸಿಕೆಯನ್ನು ಖಾಸಗಿ ಆಸ್ಪತ್ರೆಯಲ್ಲಿ ಜನರಿಗೆ ಮಾರಾಟ ಮಾಡಲಾಗುತ್ತಿದೆ. ಬಸವನಗುಡಿ ಕ್ಷೇತ್ರದ ಬಿಜೆಪಿ ಶಾಸಕ ರವಿ ಸುಬ್ರಹ್ಮಣ್ಯ ಹಣ ಪಡೆಯುತ್ತಿದ್ದಾರೆ’ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಎಚ್‌.ಎಂ.ವೆಂಕಟೇಶ್‌ ನಗರ ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್‌ ಅವರಿಗೆ ಶನಿವಾರ ದೂರು ನೀಡಿದ್ದಾರೆ. ‘ಲಸಿಕೆ’ ಪಡೆಯುವ ಬಗ್ಗೆ ವಿಚಾರಿಸಲು ಹೊಸಕೆರೆಹಳ್ಳಿಯ ಎ.ವಿ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಕರೆ ಮಾಡಿರುವ ವೆಂಕಟೇಶ್‌, ಅಲ್ಲಿನ ಸಿಬ್ಬಂದಿಜೊತೆ ಮಾತನಾಡಿದ ಆಡಿಯೊ ತುಣುಕನ್ನೂ ದೂರಿನ ಜೊತೆ …

Read More »

ಉಚಿತ ವ್ಯಾಕ್ಸಿನ್ ನನ್ನು ಖಾಸಗಿ ಆಸ್ಪತ್ರೆಗಳಿಗೆ ಮಾರಾಟ ಮಾಡಿ, ಶಾಸಕರೇ ಕಮಿಷನ್ ಪಡೆಯುವ ದಂಧೆಗೆ ಇಳಿದಿದ್ದಾರೆ ಎಂಬ ಆರೋಪ.?

ಬೆಂಗಳೂರು: ಸರ್ಕಾರದಿಂದ ಕೊಡಲಾಗುತ್ತಿರುವ ಉಚಿತ ವ್ಯಾಕ್ಸಿನ್ ನನ್ನು ಖಾಸಗಿ ಆಸ್ಪತ್ರೆಗಳಿಗೆ ಮಾರಾಟ ಮಾಡಿ, ಶಾಸಕರೇ ಕಮಿಷನ್ ಪಡೆಯುವ ದಂಧೆಗೆ ಇಳಿದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬೆಂಗಳೂರಿನ ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ವಿರುದ್ಧ ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಇಂತದ್ದೊಂದು ಆರೋಪ ಮಾಡಿದ್ದು, ಸರ್ಕಾರ ನೀಡುತ್ತಿರುವ ಉಚಿತ ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂದಿದ್ದಾರೆ. ಶಾಸಕರು ವ್ಯಾಕ್ಸಿನ್ ಪಡೆದು ಅನುಗ್ರಹ ವಿಠಲ ಎಂಬ ಖಾಸಗಿ ಆಸ್ಪತ್ರೆಗೆ ಮಾರಾಟ ಮಾಡುತ್ತಿದ್ದು, ಪ್ರತಿ …

Read More »

ಸರ್ಕಾರದ ಆರ್ಥಿಕ ಪ್ಯಾಕೇಜ್’ನ್ನು ‘ಬೋಗಸ್’ ಎಂದ ಕಾಂಗ್ರೆಸ್ ನಾಯಕರು

ಬೆಂಗಳೂರು: ರಾಜ್ಯದ ಆಡಳಿತಾರೂಢ ಬಿಜೆಪಿ ಸರ್ಕಾರದ ಕೋವಿಡ್-19 ಆರ್ಥಿಕ ಪ್ಯಾಕೇಜ್’ನ್ನು ರಾಜ್ಯ ಕಾಂಗ್ರೆಸ್ ನಾಯಕರು ಕಣ್ಣೊರೆಸುವ ಪ್ಯಾಕೇಜ್ ಎಂದು ಟೀಕಿಸಿದ್ದಾರೆ. ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿಂದು ಜಂಟಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವರುಗಳು, ಶಾಸಕರಾದ ಕೃಷ್ಣ ಭೈರೇಗೌಡ, ಪ್ರಿಯಾಂಕ ಖರ್ಗೆ ಹಾಗೂ ರಿಜ್ವಾನ್ ಅರ್ಷದ್ ಅವರು, ಸರ್ಕಾರ ಘೋಷಿಸಿರುವ ಆರ್ಥಿಕ ಪ್ಯಾಕೇಜ್‌ ನ್ನು ಬೋಗಸ್ ಎಂದು ಕರೆದಿದ್ದಾರೆ. ಅಲ್ಲದೆ, ಲಾಕ್‌ಡೌನ್ ಬಾಧಿತರಿಗೆ ಕನಿಷ್ಟ ೧೦ ಸಾವಿರ ನೆರವು ಘೋಷಿಸುವಂತೆ ಸರ್ಕಾರವನ್ನು …

Read More »