Breaking News

ಬೆಂಗಳೂರು

ಶಶಿಧರ ಕುರೇರ್ ಸೇರಿದಂತೆ 8 ಕೆಎಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು – ಬೆಳಗಾವಿ ಸ್ಮಾರ್ಟ್ ಸಿಟಿ ಎಂಡಿ ಶಶಿಧರ ಕುರೇರ್ ಸೇರಿದಂತೆ 8 ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಕುರೇರ್ ಅವರನ್ನು ಬಾಗಲಕೋಟೆಯ ಕೃಷ್ಣಾ ಮೇಲ್ದಂಡೆ ಪ್ರಧಾನ ವ್ಯವಸ್ಥಾಪಕರನ್ನಾಗಿ  ವರ್ಗಾಯಿಸಲಾಗಿದ್ದು, ಬೆಳಗಾವಿ ಸ್ಮಾರ್ಟ್ ಸಿಟಿ ಎಂಡಿಯಾಗಿ ಪ್ರವೀಣ ಬಾಗೇವಾಡಿ ಅವರನ್ನು ನೇಮಿಸಲಾಗಿದೆ. ಬೆಳಗಾವಿ ಸ್ಮಾರ್ಟ್ ಸಿಟಿ ಜಂಟಿ ನಿರ್ದೇಶಕರಾಗಿದ್ದ ಮಹೇಶ ಕುಮಾರ ಮಾಲಗತ್ತಿ ಅವರನ್ನು ದೇವರಹಿಪ್ಪರಗಿ ಕಾರ್ಯನಿರ್ವಹಣಾಧಿಕಾರಿಯಾಗಿ ವರ್ಗಾಯಿಸಲಾಗಿದೆ. ಸಂಪೂರ್ಣ ವಿವರ ಇಲ್ಲಿದೆ –  New doc 03-Jul-2021 6.53 pm

Read More »

UNLOCK 3.0 : ಪಬ್‌ ಇಲ್ಲ, ಬಾರ್‌ನಲ್ಲಿ ಕೌಂಟರ್‌ ಜತೆ ಕೂತ್ಕೊಂಡು ಕುಡಿಯಲು ಅನುಮತಿ.. ಸಿಎಂ ಬಿಎಸ್​ವೈ

  ಬೆಂಗಳೂರು : ಅನ್​ಲಾಕ್​ 3.0 ಕುರಿತು ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸಿದರು. ರಾಜ್ಯದಲ್ಲಿ ಸೋಮವಾರದಿಂದಲೇ 3.0 ಅನ್‌ಲಾಕ್‌ ಪ್ರಕ್ರಿಯೆ ಸಂಪೂರ್ಣ ಜಾರಿಯಾಗಲಿದೆ ಅಂತ ಮುಖ್ಯಮಂತ್ರಿ ಬಿಎಸ್‌ವೈ ಹೇಳಿದಾರೆ. ಮಾಲ್​ಗಳನ್ನು ಓಪನ್​ ಮಾಡಲು, ಬಾರ್​ ತೆರೆಯಲು ಅನುಮತಿ ನೀಡಲಾಗಿದೆ. ವೀಕೆಂಡ್​ ಕರ್ಫ್ಯೂ ಅನ್ನು ರದ್ದುಪಡಿಸಲಾಗಿದ್ದು, ನೈಟ್​ ಕರ್ಫ್ಯೂ ಮುಂದುವರೆಯಲಿದೆ ಎಂದು ಸಿಎಂ ಹೇಳಿದ್ದಾರೆ.

Read More »

ಕರ್ನಾಟಕ ಪೊಲೀಸರಿಗೆ ತಲೆನೋವಾಯ್ತು ಆಂಧ್ರ-ತೆಲಂಗಾಣ ರೈತರ ಜಗಳ

ರಾಯಚೂರು: ಸುಮಾರು ವರ್ಷಗಳಿಂದ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ರಾಜೋಳಿ ಬಂಡಾ ಜಲಾಶಯದ ನೀರು ಹಂಚಿಕೆ ವಿಚಾರವಾಗಿ ಆಂಧ್ರ – ತೆಲಂಗಾಣ ನಡುವೆ ಗಲಾಟೆ ನಡೆಯುತ್ತಲೇ ಇದೆ. ಇಷ್ಟು ದಿನ ರಾಜೋಳಿ ಬಂಡಾ ಜಲಾಶಯದ ನೀರನ್ನು ಕೇವಲ ತೆಲಂಗಾಣಕ್ಕೆ ಮಾತ್ರ ಬಿಡಲಾಗುತ್ತಿತ್ತು. ಈಗ ಆಂಧ್ರದ ರಾಯಲಸೀಮ ಪ್ರದೇಶಕ್ಕೂ ಈ ಜಲಾಶಯದ ನೀರು ಬೇಕು ಎಂಬ ಕೂಗು ಕೇಳಿ ಬಂದಿದೆ. ರಾಜೋಳಿ ಬಂಡಾ ಜಲಾಶಯದ ನೀರನ್ನು ನಮಗೂ ಬಿಡಿ ಎಂದು ಆಂಧ್ರದ …

Read More »

2011ರ ಕೆಪಿಎಸ್ಸಿ ನೇಮಕಾತಿ ರದ್ದು: ಹಿಂಪಡೆಯಲು ಆಗ್ರಹ

ಬೆಂಗಳೂರು: 2011ರ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನೇ ರದ್ದುಗೊಳಿಸಿ 2014ರ ಆಗಸ್ಟ್ 14ರಂದು ಹೊರಡಿಸಿದ್ದ ಆದೇಶವನ್ನು ಹಿಂಪಡೆದು, ಆಯ್ಕೆಯಾದ ಎಲ್ಲ ಅಭ್ಯರ್ಥಿಗಳಿಗೂ ನೇಮಕಾತಿ ಆದೇಶ ವಿತರಿಸುವಂತೆ ವಿಧಾನಸಭೆ ಮತ್ತು ವಿಧಾನ ಪರಿಷತ್‌ನ ಹಲವು ಸದಸ್ಯರು ರಾಷ್ಟ್ರಪತಿ ರಮಾನಾಥ ಕೋವಿಂದ್‌ ಅವರಿಗೆ ಪತ್ರ ಬರೆದಿದ್ದಾರೆ. ವಿಧಾನ ಪರಿಷತ್‌ ಸದಸ್ಯರಾದ ಪಿ.ಆರ್‌. ರಮೇಶ್‌, ಆಯನೂರು ಮಂಜುನಾಥ, ವಿಧಾನ ಮಂಡಲದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ ಎಂ.ಪಿ. …

Read More »

ಭ್ರಷ್ಟಾಚಾರ ಆರೋಪಿಗಳಿಗೆ ರಾಜ್ಯಪಾಲರ ರಕ್ಷಣೆ: ವಿ.ಎಸ್‌. ಉಗ್ರಪ್ಪ

ಬೆಂಗಳೂರು: ‘ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ವಿಚಾರಣೆಗೆ ಅನುಮತಿ ನಿರಾಕರಿಸುವ ಮೂಲಕ ರಾಜ್ಯಪಾಲ ವಜುಭಾಯಿ ವಾಲಾ ಅವರು ಭ್ರಷ್ಟಾಚಾರಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ’ ಎಂದು ಕಾಂಗ್ರೆಸ್‌ ಮುಖಂಡ ವಿ.ಎಸ್‌. ಉಗ್ರಪ್ಪ ಆರೋಪಿಸಿದರು. ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಬಹುಮಹಡಿ ಅಪಾರ್ಟ್‌ಮೆಂಟ್‌ ಸಮುಚ್ಚಯ ನಿರ್ಮಾಣ ಕಾಮಗಾರಿ ಗುತ್ತಿಗೆ ಪಡೆದಿರುವ ಗುತ್ತಿಗೆದಾರನಿಂದ ಯಡಿಯೂರಪ್ಪ ಅವರ ಮಗ ಮತ್ತು ಮೊಮ್ಮಗ …

Read More »

ಬಾಂಬೆ ಟೀಂಗೆ ಆಹ್ವಾನ; ಕಾಂಗ್ರೆಸ್ – ಬಿಜೆಪಿಯಲ್ಲಿ ಭಾರಿ ಸಂಚಲನ ತಂದ ಡಿಕೆಶಿ ಹೇಳಿಕೆ

ಬೆಂಗಳೂರು: ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ ಶಾಸಕರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪರೋಕ್ಷ ಸಂದೇಶ ರವಾನಿಸಿ ಪಕ್ಷಕ್ಕೆ ಸೇರಲು ಆಹ್ವಾನಿಸಿದ್ದಾರೆ. ವಲಸಿಗರು ಕೂಡ ಅರ್ಜಿ ಹಾಕಬಹುದು ಎಂದು ಅವರು ಹೇಳಿದ್ದಾರೆ. ಡಿ.ಕೆ. ಶಿವಕುಮಾರ್ ನೀಡಿದ ಹೇಳಿಕೆ ಕಾಂಗ್ರೆಸ್ ಮತ್ತು ಬಿಜೆಪಿ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಬೀಳಿಸಿ ಬಿಜೆಪಿ ಸರ್ಕಾರ ರಚನೆಗೆ ಕಾರಣರಾಗಿದ್ದ ಮುಂಬೈ ಟೀಮ್ ಗೆ ಡಿ.ಕೆ. ಶಿವಕುಮಾರ್ ಪರೋಕ್ಷವಾಗಿ ಆಹ್ವಾನ ನೀಡಿದ್ದಾರೆ. …

Read More »

ಚಿತ್ರಮಂದಿರ, ಮಾಲ್ ಓಪನ್ ಗೆ ಸಿಎಂ ನೇತೃತ್ವದಲ್ಲಿ ಅನ್ಲಾಕ್ 3.0 ಬಗ್ಗೆ ಮಹತ್ವದ ಸಭೆ

ಬೆಂಗಳೂರು: ರಾಜ್ಯದಲ್ಲಿ ಮತ್ತಷ್ಟು ಅನ್ಲಾಕ್ ಮಾಡುವ ಕುರಿತಂತೆ ಕೋವಿಡ್ ಉಸ್ತುವಾರಿ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಸಭೆ ನಡೆಸಲಿದ್ದಾರೆ. ಸಂಜೆ 5.30 ಕ್ಕೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ನಡೆಯಲಿರುವ ಸಭೆಯಲ್ಲಿ ಮೂರನೇ ಹಂತದ ಪ್ರಕ್ರಿಯೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಅನ್ಲಾಕ್ ಬಳಿಕ ರಾಜ್ಯದಲ್ಲಿ ವಿವಿಧ ಚಟುವಟಿಕೆಗಳು ಆರಂಭವಾಗಿದೆ‌. ಇದರ ಮುಂದುವರೆದ ಭಾಗವಾಗಿ ಮತ್ತಷ್ಟು ಚಟುವಟಿಕೆಗಳಿಗೆ ಅವಕಾಶ ನೀಡಲಾಗುವುದು. ಬಾರ್ ಅಂಡ್ ರೆಸ್ಟೋರೆಂಟ್, ಸ್ವಿಮ್ಮಿಂಗ್ ಪೂಲ್, …

Read More »

ಮಾನಕ್ಕೆ ಹಾನಿ ವರದಿ ಪ್ರಕಟಿಸದಂತೆ ಕೇಂದ್ರ ಸಚಿವ ಡಿವಿಎಸ್‌ ತಡೆಯಾಜ್ಞೆ

ಬೆಂಗಳೂರು: ತಮ್ಮ ಮಾನಕ್ಕೆ ಹಾನಿ ತರುವ ಯಾವುದೇ ಸುದ್ದಿಯನ್ನು ಪ್ರಕಟಿಸಬಾರದು ಎಂದು ಮಾಧ್ಯಮಗಳ ವಿರುದ್ಧ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಬೆಂಗಳೂರು ಸಿಟಿ ಸಿವಿಲ್‌ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಇದು ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಹಿಂದೆ ಬಿಜೆಪಿಯ ರಮೇಶ ಜಾರಕಿಹೊಳಿ ವಿರುದ್ಧ ಸಿ.ಡಿ ಬಿಡುಗಡೆ ಮಾಡಿದ್ದರಿಂದ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಅದರ ಬೆನ್ನಲ್ಲೇ ಹಲವು ಸಚಿವರು ತಮ್ಮ ವಿರುದ್ಧ ಸಿ.ಡಿ ಬಿಡುಗಡೆ …

Read More »

ಶ್ರೀರಾಮುಲು ಪಿಎ ಬಗ್ಗೆ, ವಿಜಯೇಂದ್ರ ಬಗ್ಗೆ ಮಾತಾಡೋದು ನನ್ನ ಲೆವೆಲ್ ಅಲ್ಲ: ಡಿಕೆ ಶಿವಕುಮಾರ್

ಬೆಂಗಳೂರು: ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಹೆಸರು ಬಳಸಿ ಹಲವರಿಗೆ ವಂಚನೆ ಎಸಗಿದ್ದ ಆರೋಪದ ಮೇಲೆ ಸಚಿವ ಶ್ರೀರಾಮುಲು ಪಿಎ ರಾಜಣ್ಣರನ್ನು ಸಿಸಿಬಿ ಪೊಲೀಸರು ರಾತ್ರಿಯಿಡೀ ವಿಚಾರಣೆ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಅವರು ಶ್ರೀರಾಮುಲು, ವಿಜಯೇಂದ್ರ ವಿಚಾರವಾಗಿ ನಾನು ಮಾತಾಡೋದು ನನ್ನ ಲೆವೆಲ್​ ಅಲ್ಲ. ಪಿಎಗಳ ವ್ಯವಹಾರಕ್ಕೆ ನಾನು ಮಧ್ಯ ಪ್ರವೇಶ ಮಾಡೊಲ್ಲ. ಅದರ ಬಗ್ಗೆ ನಾನು ಕಾಮೆಂಟ್ ಕೂಡಾ ಮಾಡೊಲ್ಲ. …

Read More »

ಫೋನ್‌ ಕದ್ದಾಲಿಕೆ: ಪೊಲೀಸರಿಗೆ ಅರ್ಚಕರ ನಂಬರ್‌ ನೀಡಿದ್ದ ಅರವಿಂದ್‌ ಬೆಲ್ಲದ್‌?

ಬೆಂಗಳೂರು: ಫೋನ್‌ ಕದ್ದಾಲಿಕೆ ಪ್ರಕರಣ ಸಂಬಂಧ ಬಿಜೆಪಿ ಶಾಸಕ ಅರವಿಂದ್‌ ಬೆಲ್ಲದ್‌ ಅವರು ಈ ಹಿಂದೆ ಪೊಲೀಸರಿಗೆ ನೀಡಿದ ನಂಬರ್‌ ಹೈದಾರಾಬಾದ್‌ ಮೂಲದ ಅರ್ಚಕರದ್ದು ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಬುಧವಾರ ಶೇಷಾದ್ರಿಪುರಂ ಎಸಿಪಿ ಕಚೇರಿಗೆ ಆಗಮಿಸಿದ ಶಾಸಕರನ್ನು ಎಸಿಪಿ ಪೃಥ್ವಿ ಅವರು ಸುಮಾರು ಒಂದು ಗಂಟೆ ವಿಚಾರಣೆ ನಡೆಸಿದ್ದು, ಕೆಲವೊಂದು ಮಾಹಿತಿ ಪಡೆದು ಕೊಂಡಿದ್ದಾರೆ. ವಿಚಾರಣೆ ಸಂದರ್ಭದಲ್ಲಿ “ಕೆಲ ದಿನಗಳಹಿಂದೆ ಯುವರಾಜ ಸ್ವಾಮಿ ಎಂಬ …

Read More »