ಬನಹಟ್ಟಿ : ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ತೇರದಾಳ ಪೊಲೀಸ್ ಠಾಣೆ ವ್ಯಾಪ್ತಿಯ ತೇರದಾಳ ಗ್ರಾಮದ ಜಮೀನಿನಲ್ಲಿ ಬೆಳೆದಿದ್ದ 13 ಗಾಂಜಾ ಗಿಡಗಳನ್ನು ಜಪ್ತಿ ಮಾಡಿಕೊಂಡಿರುವ ತೇರದಾಳ ಪೊಲೀಸರು ಓರ್ವ ಜಮೀನು ಸಾಗುವಳಿದಾರನನ್ನು ಬಂಧಿಸಿರುವ ಘಟನೆ ತೇರದಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ. ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜುಗಲಾಸಾರ, ಜಮಖಂಡಿ ಡಿವಾಯ್ ಎಸ್ ಪಿ ಎಂ. ಪಾಂಡುರಂಗಯ್ಯ ಅವರ ಮಾರ್ಗದರ್ಶನದಲ್ಲಿ ರಬಕವಿ-ಬನಹಟ್ಟಿ ತಹಶಿಲ್ದಾರರ ಸಂಜಯ ಇಂಗಳೆ …
Read More »ಭಾರೀ ಮಳೆ- ನವಿಲು ತೀರ್ಥ ಡ್ಯಾಂನಿಂದ ಮಲಪ್ರಭಾ ನದಿಗೆ ನೀರು
ಬಾಗಲಕೋಟೆ: ಭಾರೀ ಮಳೆ ಹಿನ್ನೆಲೆಯಲ್ಲಿ ನವಿಲು ತೀರ್ಥ ಡ್ಯಾಂನಿಂದ ಮಲಪ್ರಭಾ ನದಿಗೆ ನೀರು ಬಿಟ್ಟಿರುವುದರಿಂದ ಜಿಲ್ಲೆಯ ಮಲಪ್ರಭಾ ನದಿ ತೀರದ ಗ್ರಾಮಸ್ಥರಲ್ಲಿ ಮತ್ತೆ ಪ್ರವಾಹ ಆತಂಕ ಶುರುವಾಗಿದೆ. ಜಿಲ್ಲೆಯ ಬಾದಾಮಿ ತಾಲೂಕಿನ ಗೋವನಕೊಪ್ಪ ಗ್ರಾಮದ ಕೆಳ ಸೇತುವೆ ಮುಳುಗಡೆ ಆಗಿದ್ದು, ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಪಕ್ಕದ ಗದಗ ಜಿಲ್ಲೆಯ ಕೊಣ್ಣೂರ ಹಾಗೂ ಬಾಗಲಕೋಟೆ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಕೆಳ ಸೇತುವೆ ಮುಳುಗಡೆಯಾಗಿದೆ. ಹುಬ್ಬಳ್ಳಿ-ಸೊಲ್ಲಾಪುರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಹೊಸ …
Read More »ರಾಜಕಾರಣಿಗಳ ಹುಟ್ಟುಹಬ್ಬಕ್ಕಿಲ್ವಾ ಕೊರೊನಾ ನಿಯಮ? ಎಂಎಲ್ಸಿ ಹುಟ್ಟುಹಬ್ಬಕ್ಕೆ ಸಂಗೀತ ಸಂಜೆ
ಬಾಗಲಕೋಟೆ: ವಿಧಾನಪರಿಷತ್ ಸದಸ್ಯ ಹನಮಂತ ನಿರಾಣಿ ಅವರ 54ನೇ ಹುಟ್ಟು ಹಬ್ಬ ಹಿನ್ನೆಲೆ, ಕೋವಿಡ್ ನಿಯಮ ಗಾಳಿಗೆ ತೂರಿ ಹುಟ್ಟುಹಬ್ಬದಾಚರಣೆ ಮಾಡಲಾಗಿದೆ. ಸಚಿವ ಮುರುಗೇಶ್ ನಿರಾಣಿ ಸಹೋದರ ಹನಮಂತ ನಿರಾಣಿ ಅವರ 54ನೇ ಹುಟ್ಟು ಹಬ್ಬದ ಹಿನ್ನೆಲೆ, ಬೀಳಗಿಯಲ್ಲಿ ಸಂಗೀತ ಸಂಜೆ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ನೂರಾರು ಜನ ಸಾಮಾಜಿಕ ಅಂತರ, ಮಾಸ್ಕ್ ಧರಿಸದೆ ಭಾಗಿಯಾಗಿದ್ದು ಕಂಡುಬಂತು. ಇನ್ನು ಗಣೇಶ್ ಉತ್ಸವ ಆಚರಣೆಗೆ ಕಠಿಣ ರೂಲ್ಸ್ ಜಾರಿ ಮಾಡಿ ಸರ್ಕಾರ ಆದೇಶವನ್ನ …
Read More »ಕೃಷ್ಣಾ ಮೇಲ್ದಂಡೆ ಯೋಜನೆ 3 ಹಂತ ಅನುಷ್ಠಾನಗೊಳಿಸಲು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಪ್ರತಿಭಟನೆ
ಬಾಗಲಕೋಟೆ : ಕೃಷ್ಣಾ ಮೇಲ್ದಂಡೆ ಯೋಜನೆ 3 ಹಂತ ಅನುಷ್ಠಾನಗೊಳಿಸಬೇಕು, ಪ್ರವಾಹ ಸಂತ್ರಸ್ತರಿಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಿಲ್ಲಾಡಳಿತ ಭವನ ತಲುಪಿತು. ನಂತರ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
Read More »ಜಿ.ಪಂ, ತಾ.ಪಂ ಕ್ಷೇತ್ರಗಳ ಮೀಸಲಾತಿಗಾಗಿ ಪ್ರತ್ಯೇಕ ಆಯೋಗ ರಚನೆ ಸಂವಿಧಾನ ಬಾಹೀರ : ಮಾಜಿ ಸಂಸದ ನಾರಾಯಣಸ್ವಾಮಿ
ಬಾಗಲಕೋಟೆ: ರಾಜ್ಯ ಸರ್ಕಾರ ಜಿ.ಪಂ, ತಾ.ಪಂ ಕ್ಷೇತ್ರಗಳ ಮೀಸಲಾತಿಗಾಗಿ ಪ್ರತ್ಯೇಕ ಆಯೋಗ ರಚನೆ ಮಾಡಲು ಮುಂದಾಗಿರುವುದು ಸಂವಿಧಾನ ಬಾಹೀರವಾಗಿದೆ. ಚುನಾವಣೆ ಆಯೋಗದ ಅಧಿಕಾರದ ವ್ಯಾಪ್ತಿ ಮೊಟಕುಗೊಳಿಸುವ ಉದ್ದೇಶದಿಂದ ಈ ಪ್ರಯತ್ನಕ್ಕೆ ಮುಂದಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ದೊಡ್ಡ ಆಘಾತ ಎಂದು ಕಾಂಗ್ರೆಸ್ ಪಕ್ಷದ ರಾಜೀವಗಾಂಧಿ ಗ್ರಾಮೀಣ ಅಭಿವೃಧಿ ಹಾಗೂ ಪಂಚಾಯತ್ ರಾಜ್ ಸಂಘಟನೆಯ ರಾಜ್ಯಾಧ್ಯಕ್ಷ, ಮಾಜಿ ಸಂಸದ ನಾರಾಯಣಸ್ವಾಮಿ ಆರೋಪಿಸಿದರು. ಈ ವರೆಗೆ ಚುನಾವಣೆ ಆಯೋಗವು ಕ್ಷೇತ್ರಗಳ ಪುನರ್ ವಿಂಗಡಣೆ, …
Read More »ಪ್ರವಾಸಕ್ಕೆ ತೆರಳಿದ್ದ ಒಂದೇ ಕುಟುಂಬದ ಮೂವರು ನೀರಿನಲ್ಲಿ ಕೊಚ್ಚಿ ಹೋಗಿ ಸಾವು
ಬಾಗಲಕೋಟೆ : ಜಿಲ್ಲೆಯ ಬಾದಾಮಿಯ ಶಿವಯೋಗಮಂದಿರ ಕ್ಷೇತ್ರದ ಬಳಿಕ, ಒಂದೇ ಕುಟುಂಬದ ಮೂವರು ಪಿಕ್ ನಿಕ್ ತೆರಳಿದ್ದರು. ಊಟ ಮುಗಿಸಿ, ನದಿಯಲ್ಲಿ ಕೈ ತೊಳೆಯುತ್ತಿದ್ದಂತ ಸಂದರ್ಭದಲ್ಲಿ ಬಿದ್ದಂತ ಕುಟುಂಬದ ಒಬ್ಬರನ್ನು ರಕ್ಷಿಸಲು ಹೋಗಿ, ಮೂವರು ನೀರು ಪಾಲಾಗಿರೋ ಘಟನೆ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಶಿವಯೋಗಮಂದಿರದ ಕ್ಷೇತ್ರದ ಬಳಿಯ ನದಿ ಹತ್ತಿರ ಒಂದೇ ಕುಟುಂಬದ ವಿಶ್ವನಾಥ ಮಾವಿನಪರದ, ಶ್ರೀದೇವಿ ಹಾಗೂ ನಂದಿನಿ ಮಾವಿನಮರದ ತೆರಳಿದ್ದರು. ಹೀಗೆ …
Read More »ಮದ್ವೆಯಾದ 23 ದಿನಕ್ಕೇ ನವದಂಪತಿ ದುರಂತ ಸಾವು! ಅತ್ತಿಗೆಯ ಪ್ರಾಣವೂ ಹೋಯ್ತು.
ಬಾಗಲಕೋಟೆ: ಮದುವೆ ಸಂಭ್ರಮದಲ್ಲಿದ್ದ ಕುಟುಂಬದ ಮೇಲೆ ಜವರಾಯ ಅಟ್ಟಹಾಸ ಮೆರೆದಿದ್ದು, ನವ ದಂಪತಿ ಮತ್ತು ಅತ್ತಿಗೆ ಮೂವರೂ ದುರಂತ ಅಂತ್ಯ ಕಂಡಿದ್ದಾರೆ. ಮದುವೆ ಮನೆಯಲ್ಲೀಗ ಸೂತಕ ಆವರಿಸಿದ್ದು, ಮೂವರ ಸಾವಿನ ಸುದ್ದಿ ಕೇಳಿದ ಸಂಬಂಧಿಕರು, ಗ್ರಾಮಸ್ಥರು, ‘ಅಯ್ಯೋ ದೇವರೇ, ನೀನೆಂಥಾ ಕ್ರೂರಿ?’ ಎಂದು ಹಿಡಿಶಾಪ ಹಾಕುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಮುಗಳಖೋಡ ಗ್ರಾಮದ ಸದ್ದಾಂ ರಾಜೇಸಾಬ ಸೊನ್ನದ ಜಾತಗಾರ(27) ಮತ್ತು ಇವರ ಪತ್ನಿ ಸಲೀಮಾ ಸದ್ದಾಂ(25) ಹಾಗೂ ಸದ್ದಾಂ …
Read More »ವಿಷಾಹಾರ ಸೇವನೆ; ಒಂದೇ ಕುಟುಂಬದ 7 ಜನರ ಸ್ಥಿತಿ ಗಂಭೀರ
ಬಾಗಲಕೋಟೆ; ವಿಷಾಹಾರ ಸೇವಿಸಿದ ಪರಿಣಾಮ ನಾಲ್ಕು ಮಕ್ಕಳು ಸೇರಿದಂತೆ ಕುಟುಂಬದ 7 ಸದಸ್ಯರು ಅಸ್ವಸ್ಥರಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ. ಮನೆಯಲ್ಲಿಯೇ ತಯಾರಿಸಿದ ಗೋಧಿ ಚಪಾತಿ ಸೇವಿಸಿದ ಬಳಿಕ ಕುಟುಂಬ ಸದಸ್ಯರಲ್ಲಿ ಅನಾರೋಗ್ಯ ಕಾಣಿಸಿಕೊಂಡಿದ್ದು, ವಾಂತಿ-ಭೇದಿ ಶುರುವಾಗಿದೆ. ತಾಯಿ, ಮಗ, ಸೊಸೆ, ಮೊಮ್ಮಕ್ಕಳು ಎಲ್ಲರೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ದುಂಡವ್ವ ಮಹಾರುದ್ರಪ್ಪ (60), ಮಗ ಲಕ್ಷ್ಮಣ (38), ಸೊಸೆ ಶಾಂತಾ (28) ಮೊಮ್ಮಕ್ಕಳಾದ ತೇಜಸ್ವಿನಿ (12), ಪಲ್ಲವಿ (10), ಪ್ರಥಮ್ …
Read More »ಕೃಷ್ಣಾ ಹಾಗೂ ಘಟಪ್ರಭಾ ನದಿಯಲ್ಲಿ ತಗ್ಗಿದ ಪ್ರವಾಹ : ಮುಕ್ತವಾದ ಸೇತುವೆ ಹಾಗೂ ರಸ್ತೆಗಳು
ಬನಹಟ್ಟಿ : ಮಹಾರಾಷ್ಟ್ರ ರಾಜ್ಯದಲ್ಲಿನ ಹಾಗೂ ಪಶ್ಚಿಮ ಘಟ್ಟಗಳಲ್ಲಿನ ಮಹಾಮಳೆಯ ಪರಿಣಾಮ ಉಂಟಾದ ಪ್ರವಾಹದಿಂದಾಗಿ ಕಳೆದ 13 ದಿನಗಳಿಂದ ಕೃಷ್ಣಾನದಿ ಹಾಗೂ ಘಟಪ್ರಭಾ ನದಿಯು ಉಕ್ಕಿ ಹರಿದ ಪರಿಣಾಮ ರಬಕವಿ-ಬನಹಟ್ಟಿ ತಾಲೂಕಿನ ನದಿಪಾತ್ರದ ಗ್ರಾಮಗಳು ಜಲಾವೃತವಾಗಿ ಸಾಕಷ್ಟು ಆವಾಂತರಗಳನ್ನು ಸೃಷ್ಠಿಸಿತ್ತು. ಕಳೆದ 3-4 ದಿನಗಳಿಂದ ಕೃಷ್ಣಾ ಹಾಗೂ ಘಟಪ್ರಭಾ ಎರಡು ನದಿಗಳ ನೀರಿನ ಪ್ರಮಾಣ ನದಿಯ ನೀರಿನ ಹರಿವು ಕಡಿಮೆಯಾಗುತ್ತಿದೆ. ಮುಚ್ಚಿಕೊಂಡ ಬಹುತೇಕ ಸೇತುವೆ ಹಾಗೂ ರಸ್ತೆಗಳು ಸಂಚಾರಕ್ಕೆ ಮುಕ್ತವಾಗಿವೆ. …
Read More »ಗರ್ಭಿಣಿ ನಿಧನದ ನೋವಲ್ಲೇ ಅಂತ್ಯ ಸಂಸ್ಕಾರ ಮುಗಿಸಿ ಬಂದವರಿಗೆ ಪ್ರವಾಹಕ್ಕೆ ಬಲಿಯಾಗಿತ್ತು ಮನೆ..!
ಬಾಗಲಕೋಟೆ: ಇಷ್ಟು ದಿನ ಕೊರೊನಾ ತನ್ನ ಅಟ್ಟಹಾಸ ಮೆರೆದಿತ್ತು. ಸಾಕಷ್ಟು ಸಾವು ಸಂಭವಿಸಿ ಅದೆಷ್ಟೋ ಜನರ ಬದುಕಲ್ಲಿ ನೋವನ್ನೇ ಉಳಿಸಿ ಹೋಗಿದೆ. ಇದೀಗ ಆರಂಭದ ಮಳೆಯೇ ಪ್ರವಾಹ ಸೃಷ್ಟಿಸಿ ಮತ್ತೆ ಸಾವನ್ನ ಹೆಚ್ಚು ಮಾಡಿದೆ. ಹೌದು ಜಿಲ್ಲೆಯ ಘಟಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮಿರ್ಜಿ ಗ್ರಾಮದ ಲಕ್ಷ್ಮೀ ಎಂಬಾಕೆ ಹೆರಿಗೆ ಸಮಯದಲ್ಲಿ ಸಾವನ್ನಪ್ಪಿದ್ದಾರೆ. ಜೋರು ಮಳೆಯ ನಡುವೆಯೇ ಹೇಗೋ ಕಷ್ಟಪಟ್ಟು ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಆ ಬಳಿಕ …
Read More »