ಚಿಕ್ಕಮಗಳೂರು: ವಧುವನ್ನು ನೋಡಲು ಹೋದ 8 ಮಂದಿಗೆ ಕೊರೊನಾ ಪಾಸಿಟಿವ್ ಬಂದಿರುವಂತಹ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ತರೀಕೆರೆ ತಾಲೂಕಿನ ಗಡಿ ಗಿರಿಯಾಪುರ ಹಾಗೂ ದಂದೂರು ಸೇರಿದಂತೆ ಒಂದೇ ವಂಶದ ಮೂರು ಹಳ್ಳಿಯ ಸುಮಾರು 20 ಮಂದಿ ಭದ್ರಾವತಿ ಮೂಲದ ವ್ಯಕ್ತಿ ಜೊತೆ ತುಮಕೂರಿಗೆ ವಧುವನ್ನು ನೋಡಲು ಹೋಗಿದ್ದರು. ವಧುವನ್ನು ನೋಡಿ ಹಿಂದಿರುಗುವಾಗ ಹೆಮ್ಮಾರಿ ಕೊರೊನಾ ಜೊತೆ ವಾಪಾಸ್ ಆಗಿದ್ದಾರೆ. ವಧು ನೋಡಲು ತೆರಳಿದ್ದ ಸುಮಾರು 20 ಮಂದಿಯಲ್ಲಿ 8 …
Read More »ಕಾಂಗ್ರೆಸ್ ಮುಖಂಡನಿಗೂ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಕಾಂಗ್ರೆಸ್ ವಲಯದಲ್ಲೂ ಆತಂಕ ಹೆಚ್ಚಾಗಿದೆ.
ಚಿಕ್ಕಮಗಳೂರು: ಕಾಫಿನಾಡಲ್ಲಿ ಕಾಂಗ್ರೆಸ್ ಮುಖಂಡನಿಗೂ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಕಾಂಗ್ರೆಸ್ ವಲಯದಲ್ಲೂ ಆತಂಕ ಹೆಚ್ಚಾಗಿದೆ. ಕಲ್ಯಾಣ ನಗರದಲ್ಲಿ ವಾಸವಿರುವ 37 ವರ್ಷದ ಕಾಂಗ್ರೆಸ್ ಮುಖಂಡನಿಗೂ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇವರು ಬೆಂಗಳೂರಿಗೆ ಹೋಗಿ ಬಂದಿದ್ದರು ಎಂದು ಹೇಳಲಾಗುತ್ತಿದೆ. ಜಿಲ್ಲಾಡಳಿತ ಈಗಾಗಲೇ ಕಾಂಗ್ರೆಸ್ ಮುಖಂಡನನ್ನ ಚಿಕ್ಕಮಗಳೂರು ಕೋವಿಡ್ ಆಸ್ಪತ್ರೆಗೆ ದಾಖಲಿಸಿದೆ. ಕಾಂಗ್ರೆಸ್ ಮುಖಂಡ ಬೆಂಗಳೂರಿಗೆ ಪ್ರಯಾಣ ಮಾಡಿದ್ದರು ಎಂದು ತಿಳಿದುಬಂದಿದ್ದು, ಜಿಲ್ಲಾಡಳಿತ ಇವರ ಟ್ರಾವೆಲ್ ಹಿಸ್ಟರಿ ಪ್ ತ್ತೆ ಹಚ್ಚಲು ಮುಂದಾಗಿದೆ. …
Read More »ಕಾಡಿನ ಮಧ್ಯೆ ನಿಗೂಢ ಕ್ಯಾಮೆರಾ ಪತ್ತೆ.,ಮಾಧ್ಯಮಗಳಿಗೆ ತಿಳಿಯುತ್ತಿದ್ದಂತೆ ಸ್ಥಳದಿಂದ ಕ್ಯಾಮೆರಾ ನಾಪತ್ತೆ
ಚಿಕ್ಕಮಗಳೂರು: ಮೀಸಲು ಅರಣ್ಯದಲ್ಲಿ ಎನ್‍ಜಿಓ ಹೆಸರಲ್ಲಿ ಖಾಸಗಿ ವ್ಯಕ್ತಿಗಳು ಅರಣ್ಯ ಇಲಾಖೆಯ ಅನುಮತಿ ಪಡೆಯದೇ ಕಾಡಿನ ಮಧ್ಯೆ ಟ್ರ್ಯಾಪಿಂಗ್ ಕ್ಯಾಮೆರಾ ಅಳವಡಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ವ್ಯಾಪ್ತಿಯ ಚುರ್ಚೆಗುಡ್ಡ ಮೀಸಲು ಅರಣ್ಯದಲ್ಲಿ ಈ ಕ್ಯಾಮರಾಗಳು ಪತ್ತೆಯಾಗಿದ್ದು, ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕಳೆದೊಂದು ವಾರದಿಂದ ಚುರ್ಚೆಗುಡ್ಡದ ಶ್ರೀಗಂಧದ ರಸ್ತೆ ಮಾರ್ಗದ ಒಂದೆರಡು ಕಿ.ಮೀ. ದೂರದಲ್ಲಿ ಕಾಡು ಪ್ರಾಣಿಗಳು ಬಾಯಾರಿಕೆ ನೀಗಿಸಿಕೊಳ್ಳಲು ಬರುವ ನೀರುಗುಂಡಿಯ ಬಳಿಯ ಮರಕ್ಕೆ ಕ್ಯಾಮರಾಗಳನ್ನು …
Read More »ಕೊರೊನಾ ರೂಲ್ಸ್ ಬ್ರೇಕ್, ಐವರ ವಿರುದ್ಧ ಕೇಸ್………….
ಚಿಕ್ಕಮಗಳೂರು: ರಾಜ್ಯಾದ್ಯಂತ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಆದರೆ ಜನ ಮಾತ್ರ ನಿರ್ಲಕ್ಷ್ಯ ವಹಿಸುತ್ತಲೇ ಇದ್ದಾರೆ. ಸರ್ಕಾರದ ಆದೇಶಕ್ಕೂ ಕಿಮ್ಮತ್ತು ನೀಡದೆ, ಸಂಬಂಧವೇ ಇಲ್ಲ ಎಂಬಂತೆ ಬೇಕಾಬಿಟ್ಟಿ ಓಡಾಡುತ್ತಿದ್ದಾರೆ. ಹೀಗೆ ಮನಸೋ ಇಚ್ಛೆ ಓಡಾಡುತ್ತಿದ್ದ ಐವರ ವಿರುದ್ಧ ಜಿಲ್ಲೆಯ ಎರಡು ಪ್ರತ್ಯೇಕ ಠಾಣೆಯಲ್ಲಿ ದೂರು ದಾಖಲಾಗಿದೆ. ಚಿಕ್ಕಮಗಳೂರು ನಗರದಲ್ಲಿ ಹೊರ ಜಿಲ್ಲೆಯಿಂದ ಬಂದವರಿಗೆ ಜಿಲ್ಲಾಡಳಿತ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಿತ್ತು. ಆದರೆ ಸರ್ಕಾರದ ಆದೇಶವನ್ನು ಮೀರಿ ನಾಲ್ವರು …
Read More »ನಾಲ್ವರಿಂದ ನಲವತ್ತಕ್ಕೂ ಹೆಚ್ಚು ಪೊಲೀಸರಿಗೆ ಕೊರೊನಾ ಆತಂಕ………….
ಚಿಕ್ಕಮಗಳೂರು: ಜಿಲ್ಲೆಯಲ್ಲಿ ನಾಲ್ಕು ಪೊಲೀಸರಿಗೆ ಕೊರೊನಾ ಸೋಂಕು ತಗುಲಿರೋದು ಧೃಡವಾಗಿದೆ. ಪರಿಣಾಮ ನಲವತ್ತಕ್ಕೂ ಹೆಚ್ಚು ಪೊಲೀಸರಿಗೆ ಕೊರೊನಾ ಆತಂಕ ಹೆಚ್ಚಾಗಿದೆ. ಈಗಾಗಲೇ ಕಾಫಿನಾಡಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಆರು ತಿಂಗಳಿಂದ ಜೈಲಿನಲ್ಲಿದ್ದ ಕೈದಿಗೂ ಕೊರೊನಾ ತಗುಲಿದ್ದು, ಆತನಿಗೆ ಸೋಂಕು ಹೇಗೆ ಬಂತು ಎಂದು ಹುಡುಕಾಡುವಷ್ಟರಲ್ಲಿಯೇ ಜಿಲ್ಲೆಯ ನಾಲ್ವರು ಪೊಲೀಸರಿಗೆ ಕೋವಿಡ್-19 ತಗುಲಿದೆ. ಇದೀಗ ಜಿಲ್ಲಾಡಳಿತತ ಜೊತೆಗೆ ಇತರೆ ಪೊಲೀಸರಿಗೆ ಕೊರೊನಾ ಢವ ಢವ ಶುರುವಾಗಿದೆ. …
Read More »ಮಲೆನಾಡಲ್ಲಿ ಮುಗಿಯದ ಕಾಡಾನೆ ಕಾಟ………
ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಕಾಟ ಹಾಗೂ ಹಾವಳಿ ಹತೋಟಿಗೆ ಬರುವ ಲಕ್ಷಣಗಳೇ ಇಲ್ಲದಂತಾಗಿದೆ. ಆಗಾಗ್ಗೆ ಹೊಲಗದ್ದೆ-ತೋಟಗಳಿಗೆ ಲಗ್ಗೆ ಇಡುವ ಕಾಡಾನೆಗಳು ಈಗೀಗ ಮಲೆನಾಡಿಗರಿಗೆ ರಸ್ತೆ ಮಧ್ಯೆ ಸ್ನೇಹಿತರು, ನೆಂಟರಂತೆ ಸಿಗುತ್ತಿದ್ದು, ಮಲೆನಾಡಿಗರು ಭಯಭೀತರಾಗಿದ್ದಾರೆ. ಮೂಡಿಗೆರೆ ತಾಲೂಕಿನ ಪ್ರವಾಸಿತಾಣ ದೇವರ ಮನೆ ಬಳಿ ಒಂಟಿ ಸಲಗ ಕಾಣಿಸಿಕೊಂಡಿದ್ದು, ಕಾರಲ್ಲಿ ಸಂಚರಿಸುತ್ತಿದ್ದವರ ಆತಂಕಕ್ಕೆ ಕಾರಣವಾಗಿದೆ. ಒಂಟಿ ಸಲಗದ ಭಯದ ಮಧ್ಯೆಯೂ ಸವಾರರು ಕಾಡಾನೆ ಫೋಟೋವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಪ್ರಮೋದ್ …
Read More »ಸಿಗರೇಟ್ ಜೊತೆ ಮೊಬೈಲ್ ಎಗರಿಸಿದ ಕಳ್ಳ……………
ಚಿಕ್ಕಮಗಳೂರು: 10 ರೂ.ಯ ಸಿಗರೇಟ್ ಜೊತೆ ಅಂಗಡಿಯಲ್ಲಿದ್ದ ಮೊಬೈಲ್ ಕದ್ದು ಕಳ್ಳನೊಬ್ಬ ಎಸ್ಪೇಕ್ ಅಗಿರೋ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ-ಬಣಕಲ್ ಸಮೀಪದ ಸಬ್ಬೇನಹಳ್ಳಿಯಲ್ಲಿ ನಡೆದಿದೆ. ಅಂಗಡಿಗೆ ಬಂದ ವ್ಯಕ್ತಿ 20 ರೂಪಾಯಿ ನೀಡಿ ಸಿಗರೇಟ್ ಕೇಳಿದ್ದಾನೆ. ಅಂಗಡಿಯಲ್ಲಿದ್ದ ವ್ಯಕ್ತಿ ಸಿಗರೇಟ್ ನೀಡಿ ಚಿಲ್ಲರೆ 10 ರೂಪಾಯಿ ವಾಪಸ್ ನೀಡಿ ತನ್ನ ಕೆಲಸದಲ್ಲಿ ತೊಡಗಿಕೊಂಡಿದ್ದಾನೆ. ಸಿಗರೇಟ್ ಪಡೆದ ವ್ಯಕ್ತಿ ಅಲ್ಲಿಯೇ ಅದಕ್ಕೆ ಬೆಂಕಿ ಹಚ್ಚಿ ಒಂದು ಧಮ್ ಎಳೆದಿದ್ದಾನೆ. ಅಂಗಡಿಯಾತ …
Read More »ಚಿಕ್ಕಮಗಳೂರಿಗೆ ಬರುತ್ತಿದೆ ಪ್ರವಾಸಿಗರ ದಂಡು- ಜಿಲ್ಲೆಯ ಜನರಲ್ಲಿ ಆತಂಕ………..
ಚಿಕ್ಕಮಗಳೂರು: ಕೊರೊನಾ ಲೆಕ್ಕಿಸದೆ ಜನ ಮೋಜು ಮಸ್ತಿ ಮಾಡಲು ಮುಂದಾಗಿದ್ದು, ಜಿಲ್ಲೆಯ ಪ್ರವಾಸಿ ತಾಣಗಳು ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಅಪಾರ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇದರಿಂದಾಗಿ ಜಿಲ್ಲೆಯ ಜನರಿಗೆ ಆತಂಕ ಎದುರಾಗಿದೆ. ನೂರಾರು ಕೊರೊನಾ ಪ್ರಕರಣಗಳಿರುವ ಜಿಲ್ಲೆಗಳಿಂದ ಎಗ್ಗಿಲ್ಲದೆ ಪ್ರವಾಸಿಗರು ಕಾಫಿನಾಡಿನತ್ತ ಧಾವಿಸುತ್ತಿದ್ದು, ಜಿಲ್ಲೆಯ ಜನರಲ್ಲಿ ಭಯ ಶುರುವಾಗಿದೆ. ಉಡುಪಿ, ಮಂಗಳೂರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳ ಜೊತೆ, ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, …
Read More »ಸರ್ಕಾರ ಅನುಮತಿ ನೀಡಿದ್ರೂ ಸದ್ಯಕ್ಕಿಲ್ಲ ಅನ್ನಪೂರ್ಣೇಶ್ವರಿ ದರ್ಶನ
ಚಿಕ್ಕಮಗಳೂರು: ಸರ್ಕಾರ ಜೂನ್ 8ರಿಂದ ರಾಜ್ಯಾದ್ಯಂತ ಎಲ್ಲಾ ದೇವಾಲಯಗಳಲ್ಲೂ ಭಕ್ತರ ಪ್ರವೇಶಕ್ಕೆ ಅನುವು ಮಾಡಿಕೊಟ್ಟರೂ ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊರನಾಡು ಅನ್ನಪೂರ್ಣೇಶ್ವರಿ ದರ್ಶನ ಸದ್ಯಕ್ಕಿಲ್ಲ. ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ ಭಕ್ತರ ದರ್ಶನಕ್ಕೆ ಬ್ರೇಕ್ ಹಾಕಿದೆ. ಭಕ್ತರ ಹಿತದೃಷ್ಟಿ ಹಾಗೂ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಈ ಕ್ರಮ ಕೈಗೊಂಡಿದೆ. ಹೊರನಾಡು ಸುಪ್ರಸಿದ್ಧ ಅನ್ನಪೂರ್ಣೇಶ್ವರಿ ದೇವರ ದರ್ಶನಕ್ಕೆ ಸದ್ಯಕ್ಕೆ ಬ್ರೇಕ್ ಹಾಕಿರುವ ಆಡಳಿತ ಮಂಡಳಿ ಭಕ್ತರು ಸಹಕರಿಸುವಂತೆ ಮನವಿ ಮಾಡಿದೆ. …
Read More »ರಂಭಾಪುರಿ ಮಠಕ್ಕೆ ನಟ ಜಗ್ಗೇಶ್, ಕೋಮಲ್ ಭೇಟಿ…………..
ಚಿಕ್ಕಮಗಳೂರು: ಸ್ಯಾಂಡಲ್‍ವುಡ್ ನಟರು ಹಾಗೂ ಸಹೋದರರು ಅದ ನಟ ಜಗ್ಗೇಶ್ ಹಾಗೂ ಕೋಮಲ್ ರಂಭಾಪುರಿ ಪೀಠಕ್ಕೆ ಭೇಟಿ ನೀಡಿ ರಂಭಾಪುರಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಗೌರಿಗದ್ದೆ ಗ್ರಾಮದ ವಿನಯ್ ಗುರೂಜಿಯ ಭೇಟಿಗೆ ಬಂದು ಸ್ಯಾಂಡಲ್‍ವುಡ್ ಸಹೋದರರು ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ಪಂಚಪೀಠಗಳಲ್ಲೇ ಮೊದಲನೇ ಪೀಠ ರಂಭಾಪುರಿ ಭೇಟಿ ನೀಡಿ ರಂಭಾಪುರಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.ಮಠದ ಆವರಣದಲ್ಲಿ ಸ್ವಲ್ಪ ಹೊತ್ತು ಕಾಲಕಳೆದ ಚಂದನವನದ ಸಹೋದರರು …
Read More »
Laxmi News 24×7