Breaking News

ಚಿಕ್ಕ ಬಳ್ಳಾಪುರ

ಸ್ಕೂಟಿಗೆ ಟಿಪ್ಪರ್ ಲಾರಿ ಡಿಕ್ಕಿ – ತೋಟದಿಂದ ಮನೆಗೆ ಹೋಗ್ತಿದ್ದ ಯುವತಿ ಸಾವು

ಚಿಕ್ಕಬಳ್ಳಾಪುರ: ಸ್ಕೂಟಿಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಯುವತಿ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ತಾಲೂಕು ಬಂಡಹಳ್ಳಿ ಗ್ರಾಮದ ಬಳಿ ನಡೆದಿದೆ. ಗ್ರಾಮದ ಶಿವರಾಜ್ ಕುಮಾರ್ ಎಂಬವರ ಮಗಳಾದ ವರ್ಷಾ (19) ಮೃತ ಯುವತಿ. ಅಂದಹಾಗೆ ತೋಟದ ಕಡೆಯಿಂದ ಮನೆಗೆ ವಾಪಸ್ ಬರುತ್ತಿದ್ದಾಗ ವರ್ಷಾಳ ಸ್ಕೂಟಿಗೆ ಟಿಪ್ಪರ್ ಡಿಕ್ಕಿ ಹೊಡೆದಿದೆ. ಪರಿಣಾಮ ವರ್ಷಾ ಸ್ಥಳದಲ್ಲಿ ಸಾವನ್ನಪ್ಪಿದ್ದಾಳೆ. ಘಟನೆ ನಂತರ ಟಿಪ್ಪರ್ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಮಾಹಿತಿ …

Read More »

ಮಗಳ ಪ್ರಿಯಕರನನ್ನ 17 ಬಾರಿ ಇರಿದು ಕೊಲೆ ಮಾಡಿದ್ದ ತಂದೆ.

ಚಿಕ್ಕಬಳ್ಳಾಪುರ: ಮಗಳ ಪ್ರಿಯಕರನನ್ನ 17 ಬಾರಿ ಇರಿದು ಕೊಲೆ ಮಾಡಿದ್ದ ತಂದೆ. ರೊಚ್ಚಿಗೆದ್ದ ಮೃತ ಯುವಕನ ಸಂಬಂಧಿಕರು ಆರೋಪಿಯ ಮನೆಯನ್ನ ಧ್ವಂಸ ಮಾಡಿ, ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಯಗವಮದ್ದಲಖಾನೆ ಗ್ರಾಮದಲ್ಲಿ ನಡೆದಿದೆ. ಹರೀಶ್ (25) ಕೊಲೆಯಾದ ಯುವಕ. ಈತನ ಪ್ರೇಯಸಿಯ ತಂದೆ ವೆಂಕಟೇಶ್ ಹಾಗೂ ಚಿಕ್ಕಪ್ಪ ಸೇರಿಕೊಂಡು ಶುಕ್ರವಾರ ತಡರಾತ್ರಿ 17 ಬಾರಿ ಇರಿದು ಕೊಲೆ ಮಾಡಿದ್ದರು. ಈಗಾಗಲೇ ಆರೋಪಿಗಳನ್ನು ಬಾಗೇಪಲ್ಲಿ ಪೊಲೀಸರು …

Read More »

ಬೋರ್‌ವೆಲ್ ಲಾರಿ ಪಲ್ಟಿ- ಮೂವರು ದಾರುಣ ಸಾವು,,,,,,,,,,

ಚಿಕ್ಕಬಳ್ಳಾಪುರ: ಬೋರ್‌ವೆಲ್ ಲಾರಿ ಪಲ್ಟಿಯಾಗಿ ಮೂವರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಹೊಸಹುಡ್ಯ ಗ್ರಾಮದ ಬಳಿ ನಡೆದಿದೆ. ಮಧ್ಯಪ್ರದೇಶ ಮೂಲದ ಮೂವರು ಕಾರ್ಮಿಕರಾದ ಅನದೇಶ್(25), ಜಗದೇವ್(21) ಹಾಗೂ ರಾಜಾರಾಮ್(26) ಮೃತ ದುರ್ದೈವಿಗಳು. ಲಾರಿ ತಮಿಳುನಾಡಿಗೆ ಸೇರಿದ್ದು, ಘಟನೆಯಲ್ಲಿ ಮತ್ತಿಬ್ಬರಿಗೆ ಗಾಯಗೊಂಡಿದ್ದಾರೆ. ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಚೇಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ …

Read More »

ಸಾಯಿಬಾಬಾ ಮಂದಿರ ಆಶ್ರಮದ ಸೂಪರ್ ವೈಸರ್‌ಗೆ ಕೊರೊನಾ

ಚಿಕ್ಕಬಳ್ಳಾಪುರ: ನಗರ ಹೊರವಲಯದ ಹಾರೋಬಂಡೆ ಬಳಿಯ ಸಾಯಿಬಾಬಾ ಮಂದಿರ ಆಶ್ರಮದಲ್ಲಿನ 68 ವರ್ಷದ ಸೂಪರ್ ವೈಸರ್ ಗೂ ರೋಗಿ 2,653 ಕೊರೊನಾ ದೃಢವಾಗಿದೆ. ಆಶ್ರಮದಲ್ಲಿ ಸೂಪರ್ ವೈಸರ್ ಆಗಿದ್ದ ಇವರು ಇತ್ತೀಚೆಗೆ ಬೆಂಗಳೂರಿನ ಎಸ್.ಪಿ.ರೋಡ್‍ಗೆ ಹೋಗಿ ಬಂದಿದ್ದರು ಎನ್ನಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇವರಿಗೆ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಹೀಗಾಗಿ ಗುರುವಾರ ಇವರ ಗಂಟಲು ದ್ರವ ಮಾದರಿಯನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಪರೀಕ್ಷೆ ಮಾಡಿದಾಗ 50-50 …

Read More »

ಕಾರ್ಮಿಕರು ಆತುರಪಡ್ಬೇಡಿ, ನಿಮ್ಮನ್ನ ಕಳಿಸಿಕೊಡೋದು ನಮ್ಮ ಜವಾಬ್ದಾರಿ: ಸುಧಾಕರ್

ಚಿಕ್ಕಬಳ್ಳಾಪುರ: ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್-19 ಕೊರೊನಾ ವೈರಸ್ ಪತ್ತೆ ಹಚ್ಚುವ ಪರೀಕ್ಷಾ ಕೇಂದ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಉದ್ಘಾಟನೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ಪರೀಕ್ಷಾ ಕೇಂದ್ರದಲ್ಲಿ ಎರಡು ಯಂತ್ರಗಳಿದ್ದು, ದಿನದ 24 ಗಂಟೆಯೂ ಈ ಕೇಂದ್ರ ಕಾರ್ಯನಿರ್ವಹಿಸಲಿದ್ದು, ಪ್ರತಿದಿನ 80 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸುಹುದಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಾದರಿಗಳ ಪರೀಕ್ಷೆ ನಡೆಸಲು ಅಗತ್ಯವಾದ ಕ್ರಮಗಳನ್ನ ಕೈಗೊಳ್ಳುವುದಾಗಿ …

Read More »

ಮದ್ಯ ಖರೀದಿ ಫುಲ್ ಡಲ್ – ಮದ್ಯದಂಗಡಿಗಳತ್ತ ಮುಖ ಮಾಡದ ಮದ್ಯಪ್ರಿಯರು

ಚಿಕ್ಕಬಳ್ಳಾಪುರ: ಲಾಕ್‍ಡೌನ್ ನಡುವೆ ಮದ್ಯ ಮಾರಾಟಕ್ಕೆ ಅವಕಾಶ ಕೊಟ್ಟಿದ್ದೆ ತಡ ಮದ್ಯಪ್ರಿಯರು ಸರದಿ ಸಾಲಿನಲ್ಲಿ ನಿಂತು ಮದ್ಯ ಖರೀದಿಗೆ ಮುಗಿಬಿದ್ದಿದ್ದರು. ಆದರೆ ಇದೀಗ ಮದ್ಯಪ್ರಿಯರು ಎಣ್ಣೆ ಅಂಗಡಿಯತ್ತ ಮುಖ ಮಾಡುತ್ತಿಲ್ಲ. ಇಷ್ಟು ದಿನ ಕೇವಲ ಎಂಎಸ್‍ಐಎಲ್‍ನಲ್ಲಿ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಇಂದಿನಿಂದ ಬಾರ್ ಮತ್ತು ರೆಸ್ಟೋರೆಂಟ್‍ಗಳಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ನೀಡಿದೆ. ಆದರೆ ಇಷ್ಟು ದಿನ ಚಿಕ್ಕಬಳ್ಳಾಪುರದ ಮದ್ಯದಂಗಡಿಗಳ ಮುಂದೆ ಮದ್ಯಪ್ರಿಯರು ಕ್ಯೂ ಇರುತ್ತಿದ್ದರು. ಆದರೆ ಇಂದು …

Read More »

ಪತಿಯ ಚಿಕಿತ್ಸೆಗಾಗಿ ಪತ್ನಿ ತನ್ನ ತಾಳಿಯನ್ನೇ ಮಾರಿರುವ ಮನಕಲಕುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೆ.ಕುರಪ್ಪಲ್ಲಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಚಿಕ್ಕಬಳ್ಳಾಪುರ: ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಪತಿಯ ಚಿಕಿತ್ಸೆಗಾಗಿ ಪತ್ನಿ ತನ್ನ ತಾಳಿಯನ್ನೇ ಮಾರಿರುವ ಮನಕಲಕುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೆ.ಕುರಪ್ಪಲ್ಲಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಗ್ರಾಮದ ಬೀರಮ್ಮ ಹಾಗೂ ಬೆಂಗಳೂರು ಮೂಲದ ಲಿಂಗಪ್ಪ ವಿವಾಹವಾಗಿ ಇಬ್ಬರು ಮಕ್ಕಳಿದ್ದಾರೆ. ಇಷ್ಟು ದಿನ ಬೆಂಗಳೂರಿನಲ್ಲಿ ಗಾರೆಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಆದರೆ ಲಾಕ್‍ಡೌನ್‍ಗೂ ಮುನ್ನ ಬೀರಮ್ಮಳ ಸ್ವಗ್ರಾಮ ಕೆ.ಕುರಪ್ಪಲ್ಲಿಗೆ ಬಂದು ಬಾಡಿಗೆ ಮನೆ ಮಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ಲಿಂಗಪ್ಪನಿಗೆ ಹೃದಯಾಘಾತವಾಗಿದ್ದು, …

Read More »

ಮದ್ಯದ ಅಮಲಿನಲ್ಲಿ ತಮ್ಮನ ಕೈ ಕಟ್ ಮಾಡಿದ ಅಣ್ಣ….

ಚಿಕ್ಕಬಳ್ಳಾಪುರ: ಮದ್ಯದ ಅಮಲಿನಲ್ಲಿ ಸಹೋದರರ ನಡುವೆ ಜಗಳ ನಡೆದಿದ್ದು, ಕೋಪದ ಕೈಗೆ ಬುದ್ಧಿ ಕೊಟ್ಟ ಅಣ್ಣ, ತಮ್ಮನ ಕೈಯನ್ನೇ ತುಂಡರಿಸಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ರಮಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿಗಳಾದ 38 ವರ್ಷದ ಕೃಷ್ಣಪ್ಪ ಹಾಗೂ ತಮ್ಮ 33 ವರ್ಷದ ಹನುಮಂತರಾಯಪ್ಪ ಇಬ್ಬರು ಸಹೋದರರು. ಇಂದು ಮದ್ಯ ಸೇವಿಸಿ ಬಳಿಕ ಇಬ್ಬರು ಮನೆಯಲ್ಲಿ ಊಟ ಮಾಡಿದ್ದಾರೆ. ಈ ವೇಳೆ ಇಬ್ಬರ ನಡುವೆ ತಟ್ಟೆ ತೊಳೆಯುವ ವಿಚಾರಕ್ಕೆ ಜಗಳ …

Read More »

ಕಾಂಪೌಂಡ್‍ಗೆ ಕಾರು ಡಿಕ್ಕಿಯಾಗಿ ಚಾಲಕ ಸಾವು – ನಜ್ಜುಗುಜ್ಜಾದ ಕಾರ್……..

ಚಿಕ್ಕಬಳ್ಳಾಪುರ: ಕಾಂಪೌಂಡ್‍ಗೆ ಕಾರು ಡಿಕ್ಕಿಯಾದ ಪರಿಣಾಮ ಕಾರು ಚಾಲಕ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನಲ್ಲಿ ನಡೆದಿದೆ. ಸೋಮವಾರ ರಾತ್ರಿ ಗೌರಿಬಿದನೂರು ತಾಲೂಕಿನ ಇಡಗೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ 32 ವರ್ಷದ ವಿನೋದ್ ಮೃತ ವ್ಯಕ್ತಿ. ಮೃತ ವಿನೋದ್ ಬೆಂಗಳೂರಿನಲ್ಲಿ ಪೈಂಟ್ಸ್ ಡಿಸ್ಟ್ರಿಬ್ಯೂಟರ್ ಆಗಿ ಕೆಲಸ ಮಾಡುತ್ತಿದ್ದನು. ಆದರೆ ಕೊರೊನಾ ಲಾಕ್‍ಡೌನ್‍ನಿಂದ ವಿನೋದ್ ಬೆಂಗಳೂರಿನಿಂದ ವಾಪಸ್ ಬಂದು ತನ್ನ ಸ್ವಗ್ರಾಮದಲ್ಲಿದ್ದನು. ಸೋಮವಾರ ರಾತ್ರಿ ಗ್ರಾಮದಲ್ಲೇ ಕಾಂಪೌಂಡ್‍ಗೆ …

Read More »

ಮದ್ಯದಂಗಡಿ ಕಳವು ಪ್ರಕರಣದಲ್ಲಿ ಮಾಲೀಕನೇ ಕಳ್ಳ!

ಚಿಕ್ಕಬಳ್ಳಾಪುರ: ನಗರ ಹೊರವಲಯದ ಗೋಲ್ಡನ್ ಬಾರಿನಲ್ಲಿ ನಡೆದಿದ್ದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಾರ್ ಮಾಲೀಕ ಹಾಗೂ ಅತನ ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ. ಏಪ್ರಿಲ್ 30ರ ರಾತ್ರಿ ನಗರ ಹೊರವಲಯದ ಗೋಲ್ಡನ್ ಬಾರಿನ ಸಿಸಿಟಿವಿ ಒಡೆದು ಹಾಕಿ, ಬಾರಿನ ಹಿಂಭಾಗದ ಗೋಡೆಗೆ ಕಿಂಡಿ ಕೊರೆದು ಮದ್ಯ ಕಳವು ಮಾಡಲಾಗಿತ್ತು. ಈ ಸಂಬಂಧ ಮೇ 1ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಬಾರ್ ಮಾಲೀಕ, ನಗರಸಭೆ ಸದಸ್ಯ ದೀಪಕ್ ಹಾಗೂ ಆತನ …

Read More »