ಹೊಸದಿಲ್ಲಿ: ರೈತರು ಬೀದಿಗಿಳಿದು ಪ್ರತಿಭಟಿಸುತ್ತಿದ್ದರೆ ಸುಳ್ಳುಗಾರನು ಟಿವಿ ಚಾನೆಲ್‍ಗಳಲ್ಲಿ ಭಾಷಣ ಬಿಗಿಯುವುದರಲ್ಲಿ ನಿರತನಾಗಿದ್ದಾನೆ. ದುರಹಂಕಾರ ಬದಿಗಿಟ್ಟು ರೈತರ ಹಕ್ಕುಗಳನ್ನು ಅವರಿಗೆ ನೀಡುವತ್ತ ಗಮನ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಹೆಸರೆತ್ತದೆ ವಾಗ್ದಾಳಿ ನಡೆಸಿದ್ದಾರೆ. ಶ್ರಮಜೀವಿಗಳಾದ ರೈತರಿಗೆ ನಾವು ಋಣಿಯಾಗಿರಬೇಕು. ಅವರ ಹಕ್ಕುಗಳನ್ನು ನೀಡುವ ಮೂಲಕ, ಅವರಿಗೆ ನ್ಯಾಯ ಒದಗಿಸುವ ಮೂಲಕ ಋಣ ಸಂದಾಯ ಮಾಡಬೇಕು. ಲಾಠಿ ಬೀಸುವುದು, ಅಶ್ರುವಾಯು ಪ್ರಯೋಗಿಸುವ ಮೂಲಕವಲ್ಲ ಎಂದು …
Read More »ಬೆಳಗಾವಿಯಲ್ಲಿ ಎಲ್ಲರ ಗಮನ ಸೆಳೆದ ಪೊಲೀಸರ ಸೈಕಲ್ ಜಾಥಾ
ಬೆಳಗಾವಿ: ಕೆಎಸ್‍ಆರ್ ಪಿ ಉತ್ಸವದ ಅಂಗವಾಗಿ ಇಂದು ಬೆಳಗಾವಿಯಲ್ಲಿ ಸೈಕಲ್ ಜಾಥಾ ನಡೆಯಿತು. ಹಿರಿಯ ಅಧಿಕಾರಿ ಎಡಿಜಿಪಿ ಅಲೋಕ್ ಕುಮಾರ್ ಸೈಕಲ್ ಓಡಿಸಿ ಎಲ್ಲರ ಗಮನ ಸೆಳೆದರು. ಅನೇಕ ಪೊಲೀಸ್ ಅಧಿಕಾರಿಗಳು ಸೈಕಲ್ ಓಡಿಸಿ ಅಲೋಕ್ ಕುಮಾರ್ ಅವರಿಗೆ ಸಾಥ್ ನೀಡಿದರು. ಇಂದು ಬೆಳಗ್ಗೆ ಬೆಳಗಾವಿಯ ಸುವರ್ಣ ಸೌಧದಿಂದ ಪ್ರಾರಂಭವಾದ ಸೈಕಲ್ ಜಾಥಾ ಬೆಳಗಾವಿಯ ಚೆನ್ನಮ್ಮ ವೃತ್ತಕ್ಕೆ ಆಗಮಿಸಿ ಎಲ್ಲರ ಗಮನ ಸೆಳೆಯಿತು. ಸೈಕಲ್ ಜಾಥಾದಲ್ಲಿ ಬೆಳಗಾವಿ ಪೊಲೀಸ್ …
Read More »ರಾಜಕಾರಣದಲ್ಲಿ ಯಾವ ಶಾಪವೂ ತಟ್ಟುವುದಿಲ್ಲ: ಸಾರಾ ಮಹೇಶ್ ಗೆ ಸಚಿವ ರಮೇಶ್ ತಿರುಗೇಟು
ಬೆಳಗಾವಿ : ಎಚ್.ವಿಶ್ವನಾಥ್ ಅವರಿಗೆ ಚಾಮುಂಡೇಶ್ವರಿ ಶಾಪ ತಟ್ಟಿದೆ ಎಂದು ಸಾ.ರಾ ಮಹೇಶ್ ಹೇಳಿಕೆಗೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಮಂಗಳವಾರ ತಿರುಗೇಟು ನೀಡಿದ್ದಾರೆ. ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮದವರಿಗೆ ಮಾತನಾಡಿದ ಅವರು, ರಾಜಕಾರಣದಲ್ಲಿ ಯಾವುದೇ ಶಾಪ ತಟ್ಟುವುದಿಲ್ಲ. ಎಚ್.ವಿಶ್ವನಾಥ್ ಅವರ ಹೈಕೋರ್ಟ್ ಆದೇಶದ ಕುರಿತು ಸುಪ್ರೀಂ ಕೋರ್ಟ್ ಅಪೀಲು ಸಲ್ಲಿಸುತ್ತೇವೆ ಎಂದಿದ್ದಾರೆ. ವಿಶ್ವನಾಥ್ ಅವರ ಜೊತೆಗೆ ನೂರಕ್ಕೆ ನೂರರಷ್ಟು 17 ಜನರು ಜೊತೆಗಿದ್ದೇವೆ. ಸುಪ್ರೀಂ ಕೋರ್ಟ್ ಬಾಗಿಲು ತಟ್ಟುತ್ತೇವೆ ಎನ್ನುವ …
Read More »ಭೀಕರ ಅಪಘಾತ : ಸ್ಥಳದಲ್ಲೇ ಬೈಕ್ ಸವಾರಿಬ್ಬರು ಸಾವು
ದಕ್ಷಿಣ ಕನ್ನಡ : ಪಿಕಪ್ ವಾಹನವೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಉಪ್ಪಿನಂಗಡಿಯಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಕೃಷ್ಣ ಪ್ರಸಾದ್ ಶೆಟ್ಟಿ, ಜಯರಾಮ್ ಗೌಡ ಮೃತ ದುರ್ದೈವಿಗಳು. ದ್ವಿಚಕ್ರ ವಾಹನದ ಮೇಲೆ ಇಬ್ಬರು ಮನೆಗೆ ತೆರಳುತ್ತಿದ್ದರು. ಹಿಂದಿನಿಂದ ಬಂದ ಪಿಕಪ್ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದ್ದರು, ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದರು. ಸ್ಥಳೀಯರು ಮಾಹಿತಿ ನೀಡಿದ ಆದಾರದ ಮೇಲೆ ಕಾರ್ಯಾಚರಣೆ ನಡೆಸಿ ಪೊಲೀಸರು …
Read More »ಗ್ರಾಮ ಪಂಚಾಯಿತಿ ಚುನಾವಣೆ ದಿನಾಂಕ ಘೋಷಣೆಗೆ ಕ್ಷಣಗಣನೆ
ಬೆಂಗಳೂರು: ರಾಜ್ಯ ಚುನಾವಣಾ ಆಯೋಗ ಮಧ್ಯಾಹ್ನ 11.30ಕ್ಕೆ ಗ್ರಾಮ ಪಂಚಾಯಿತಿ ಚುನಾವಣಾ ದಿನಾಂಕ ಪ್ರಕಟಿಸಲಿದೆ. ಬಿಜೆಪಿ , ಕಾಂಗ್ರೆಸ್ ಮತ್ತು ಜೆಡಿಎಸ್ ಗ್ರಾಮ ಪಂಚಾಯಿತಿ ಚುನಾವಣೆಗೆ ತಯಾರಿ ನಡೆಸಿವೆ. ಗ್ರಾಮ ಪಂಚಾಯಿತಿ ಗೆಲುವಿಗೆ ತಂತ್ರ ಪ್ರತಿತಂತ್ರಗಳನ್ನು ರೂಪಿಸುವ ಮೂಲಕ ಮತ್ತೊಂದು ಮತ ಸಮರಕ್ಕೆ ಇಳಿಯಲಿವೆ. ಬಿಜೆಪಿ ಈಗಾಗಲೇ ಗ್ರಾಮ ಸ್ವರಾಜ್ ಸಮಾವೇಶದ ಮೂಲಕ ಚುನಾವಣಾ ರಣಕಹಳೆ ಮೊಳಗಿಸಿದೆ. ಜೆಡಿಎಸ್ ಕೂಡ ಪ್ರಮುಖರ ಸಭೆ ನಡೆಸಿ ತೊಡೆ ತಟ್ಟಲು ರೆಡಿಯಾಗಿದೆ. …
Read More »ಅರಬಿ ಸಮುದ್ರದಲ್ಲಿ ಪತನಗೊಂಡ ಮಿಗ್ ಅವಶೇಷ ಪತ್ತೆ : ಪೈಲಟ್ ಸುಳಿವು ಇನ್ನೂ ಸಿಕ್ಕಿಲ್ಲ
ಹೊಸದಿಲ್ಲಿ: ಅರಬಿ ಸಮುದ್ರದಲ್ಲಿ ಗುರುವಾರ ಪತನಗೊಂಡಿದ್ದ ಭಾರತೀಯ ವಾಯುಸೇನೆಯ ಮಿಗ್-29 ಕೆ ಯುದ್ಧವಿಮಾನದ ಕೆಲವು ಭಾಗಗಳು ಪತ್ತೆಯಾಗಿವೆ. ಆದರೆ ನಾಪತ್ತೆಯಾಗಿರುವ ಪೈಲಟ್‌ನ ಸುಳಿವು ಸಿಕ್ಕಿಲ್ಲ. ಗುರುವಾರ ಸಂಜೆ ಐಎನ್‌ಎಸ್ ವಿಕ್ರಮಾದಿತ್ಯ ಸಮರ ನೌಕೆಯಿಂದ ಹಾರಾಟ ನಡೆಸುವ ವೇಳೆ ಈ ಮಿಗ್ ವಿಮಾನ ಪತನಗೊಂಡಿತ್ತು. ರವಿವಾರ ಅದರ ಟರ್ಬೋ ಚಾರ್ಜರ್, ಇಂಧನ ಟ್ಯಾಂಕ್ ಮತ್ತು ಕೆಲವು ಭಾಗಗಳನ್ನು ನೌಕಾಪಡೆಯ ಶೋಧ ತಂಡ ಪತ್ತೆ ಹಚ್ಚಿದೆ. ಇಬ್ಬರು ಪೈಲಟ್‌ಗಳ ಪೈಕಿ ಓರ್ವರನ್ನು ಗುರುವಾರವೇ …
Read More »ಸರ್ಕಾರದಿಂದ ರೈತರ ಮಕ್ಕಳಿಗೆ ಭರ್ಜರಿ ಸಿಹಿಸುದ್ದಿ
ತುಮಕೂರು : ರಾಜ್ಯ ಸರ್ಕಾರವು ರೈತರ ಮಕ್ಕಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಕೃಷಿ ವಿವಿಗಳಲ್ಲಿ ಪದವಿ ವ್ಯಾಸಾಂಗ ಮಾಡುವ ರೈತರ ಮಕ್ಕಳಿಗೆ ಮೀಸಲಾತಿಯನ್ನು ಶೇ. 50 ಕ್ಕೆ ಹೆಚ್ಚಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ. ರಾಜ್ಯ ಸರ್ಕಾರವು ಕೃಷಿ, ತೋಟಗಾರಿಕೆ, ಪಶುಪಾಲನಾ ಪದವಿಯಲ್ಲಿ ಮೀಸಲಾತಿ ಹೆಚ್ಚಳವಾಗಲಿದ್ದು, ಇದರಲ್ಲಿ ದೊಡ್ಡ ಮತ್ತು ಸಣ್ಣ ರೈತರ ಮಕ್ಕಳು ಎಂಬ ಬೇಧ ಮಾಡದೇ ಎಲ್ಲರಿಗೂ ಸೌಲಭ್ಯ ಕಲ್ಪಿಸಲು …
Read More »ರಾಜ್ಯ ಸರ್ಕಾರದಿಂದ ಗ್ರಾಮೀಣಾ ಜನತೆಗೆ ಭರ್ಜರಿ ಸಿಹಿಸುದ್ದಿ
ಚಿಕ್ಕಬಳ್ಳಾಪುರ : ರಾಜ್ಯ ಸರ್ಕಾರವು ಗ್ರಾಮೀಣಾ ಜನತೆಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಮುಂದಿನ ಆರ್ಥಿಕ ವರ್ಷದಲ್ಲಿ ಗ್ರಾಮಗಳ ಸಶಕ್ತಿಕರಣಕ್ಕೆ ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿಗೂ 1.5 ಕೋಟಿ ರೂ. ಹಣ ನೀಡಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ. ರಾಜ್ಯದ ಪ್ರತಿ ಗ್ರಾಮಪಂಚಾಯಿತಿಗೂ 1.5 ಕೋಟಿ ಹಣ ನೀಡಲು ಯೋಜನೆ ಹಾಕಿಕೊಳ್ಳಲಾಗಿದ್ದು, ಅದರ ಜೊತೆಗೆ ಗ್ರಾಮಪಂಚಾಯಿತಳ ಅಭಿವೃದ್ಧಿಗೆ 31 ಸಾವಿರ ಕೋಟಿ ರೂ. ಹಣ …
Read More »ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಡಿ.1 ರಂದು ಶಿವಸೇನೆಗೆ ಸೇರ್ಪಡೆ
ಮುಂಬಯಿ: ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಡಿಸಂಬರ್ 1 ರಂದು ಶಿವಸೇನೆಗೆ ಸೇರಲಿದ್ದಾರೆ. ನಟಿ ಊರ್ಮಿಳಾ ಮಂಗಳವಾರ ಶಿವಸೇನೆ ಪಕ್ಷ ಸೇರಲಿದ್ದಾರೆ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಆಪ್ತ ಹರ್ಷಲ್ ಪ್ರಧಾನ್ ತಿಳಿಸಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನಿಂದ ಮುಂಬಯಿ ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಊರ್ಮಿಳಾ ಸೋತಿದ್ದರು. ನಂತರ ಕಾಂಗ್ರೆಸ್ ಪಕ್ಷದ ಆಂತರಿಕ ಭಿನ್ನಾಭಿಪ್ರಾಯದಿಂದ ಬೇಸತ್ತಿದ್ದ ಊರ್ಮಿಳಾ ಪಕ್ಷ ತೊರೆದಿದ್ದರು. ಊರ್ಮಿಳಾ ಹೆಸರನ್ನು …
Read More »ರೈತರಿಂದ ದೆಹಲಿಯ 5 ಪ್ರವೇಶ ದ್ವಾರ ಬಂದ್ ಎಚ್ಚರಿಕೆ
ನವದೆಹಲಿ, : ಕೊರೆಯುವ ಚಳಿಯ ನಡುವೆಯೇ ಕೇಂದ್ರ ಸರ್ಕಾರದ ವಿರುದ್ಧ ನಡೆಸುತ್ತಿರುವ ಹೋರಾಟವನ್ನು ರೈತರು ಮುಂದುವರೆಸಿದ್ದಾರೆ. ದೆಹಲಿ-ಹರ್ಯಾಣದ ಸಿಂಘು ಗಡಿಯಲ್ಲಿ ಪೊಲೀಸರು ರೈತರನ್ನು ತಡೆದಿದ್ದಾರೆ. ರೈತರು ದೆಹಲಿಯ ಬುರಾಡಿ ಮೈದಾನಕ್ಕೆ ಬಂದರೆ ಅವರ ಜೊತೆ ಮಾತುಕತೆ ನಡೆಸಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಆದರೆ, ಪ್ರತಿಭಟನೆ ನಡೆಸುತ್ತಿರುವ ರೈತರು ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ. ಬೆಳಗ್ಗೆ 11ಗಂಟೆಗೆ ಮುಂದಿನ ಹೋರಾಟದ ಬಗ್ಗೆ ರೈತರು ಸಭೆ ನಡೆಸಲಿದ್ದಾರೆ. ದೆಹಲಿ …
Read More »
Laxmi News 24×7