Breaking News

ಅರವಿಂದ್ ಪಾಟೀಲ ಬಿಜೆಪಿಗೆ,ಸಿಎಂ ಸಹಮತ- ಡಿಸಿಎಂ ಸವದಿ

Spread the love

ಬೆಳಗಾವಿ-ಡಿಸಿಸಿ ಬ್ಯಾಂಕ್ ಚುನಾವಣೆ ಇಂದು ನಡೆಯುತ್ತಿದೆ. 16 ನಿರ್ದೇಶಕ ಸ್ಥಾನದ ಪೈಕಿ ಈಗಾಗಲೇ 13ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದಾರೆ.
ಮೂರು ಕ್ಷೇತ್ರದಲ್ಲಿ ಮಾತ್ರ ಚುನಾವಣೆ ನಡೆಯುತ್ತಿದೆ.
ಖಾನಾಪುರ ಕ್ಷೇತ್ರದಲ್ಲಿ ಎನೂ ಕುತೂಹಲ ಇಲ್ಲ ಮತದಾರರು ಜಾನರಿದ್ದಾರೆ. ಎಂದು ಬೆಳಗಾವಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

ಡಿಸಿಸಿ ಬ್ಯಾಂಕ್ ಚುನಾವಣೆಯ ಪರಿಸ್ಥಿತಿಯನ್ನು ಅವಲೋಕಿಸಿದ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಖಾನಾಪುರ ತಾಲೂಕಿನಲ್ಲಿ ಕಾಂಗ್ರೆಸ್ ಶಾಸಕರು ಸ್ಪರ್ಧೆ, ಮಾಜಿ ಶಾಸಕ ಅರವಿಂದ್ ಪಾಟೀಲ್ ಕೂಡ ಸ್ಪರ್ಧೆ ಮಾಡಿದ್ದಾರೆ.
ಡಿಸಿಸಿ ಬ್ಯಾಂಕ್ ರಾಜಕೀಯಕ್ಕೆ ಶಕ್ತಿ ತುಂಬುವ ಬ್ಯಾಂಕ್.
ನಾನು ಮೂವತ್ತು ವರ್ಷದಿಂದ ನಿರಂತರವಾಗಿ ನಿರ್ದೇಶಕನಾಗಿದ್ದೇನೆ ಎಂಇಎಸ್ ನ ಅರವಿಂದ್ ಪಾಟೀಲ್ ಗೆ ಬಿಜೆಪಿ ಬೆಂಬಲ ವಿಚಾರ.
ಅರವಿಂದ್ ಪಾಟೀಲ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ.ಕೆಲವೇ ದಿನಗಳಲ್ಲಿ ಅರವಿಂದ್ ಪಾಟೀಲ್ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂದು ಡಿಸಿಎಂ ಸವದಿ ಹೇಳಿದರು.

ಈಗಾಗಲೇ ಒಂದು ಬಾರಿ ಅರವಿಂದ್ ಪಾಟೀಲ್ ಯಡಿಯೂರಪ್ಪ ಅವರನ್ನ ಭೇಟಿಯಾಗಿದ್ದಾರೆ.
ಸಿಎಂ ಯಡಿಯೂರಪ್ಪ ಕೂಡ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.ಎಂದರು ಲಕ್ಷ್ಮಣ ಸವದಿ.

 

ಅಜ್ಜನ ಕಡೆ ಮಾಸ್ಕ್ ಯಾವ ತರಾ ಇದೆ ಈ ವಿಡಿಯೋ ಕೊನೇವರಿಗೆ ನೀವು ನೋಡ್ಲೆ ಬೇಕು…….

*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??

ಸುದ್ದಿ ಮತ್ತು ಜಾಹೀರಾತುಗಳಿಗೆ ಸಂಪರ್ಕಿಸಿರಿ: 8123967576
Laxmi News

 


Spread the love

About Laxminews 24x7

Check Also

ನೂರಾರು ನವಜಾತ ಶಿಶುಗಳ ಜೀವ ಉಳಿಸಿದ ಲೇಡಿಗೋಷನ್ ಆಸ್ಪತ್ರೆ

Spread the loveಮಂಗಳೂರು: ಮಂಗಳೂರಿನ ಲೇಡಿಗೋಷನ್ ಸರ್ಕಾರಿ ಆಸ್ಪತ್ರೆಯಲ್ಲಿ, ತಾಯಿಯ ಮಮತೆಯಷ್ಟೇ ಪವಿತ್ರವಾದೊಂದು ಕ್ರಾಂತಿಕಾರಿ ಯೋಜನೆ ನಿಶ್ಯಬ್ದವಾಗಿ ನಡೆಯುತ್ತಿದೆ. ‘ಅಮೃತ ಘಟಕ’ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ