ಬೆಳಗಾವಿ- ಕನ್ನಡಿಗರು ಹಬ್ಬದ ದಿನ ರಾಜ್ಯೋತ್ಸವದ ದಿನ ಮಹಾರಾಷ್ಟ್ರ ಸರ್ಕಾರವೇ ಕಪ್ಪು ದಿನ ಆಚರಿಸುವ ಮೂಲಕ ಎಂಈಎಸ್ ಗೆ ಬೆಂಬಲ ನೀಡಲು ನಿರ್ಧರಿಸಿ ಭಾರತದ ಒಕ್ಕೂಟದ ವ್ಯೆವಸ್ಥೆಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿರುವಾಗ ಅದಕ್ಕೆ ತಕ್ಕ ಉತ್ತರ ಕೊಡಬೇಕಾದ ನಮ್ಮ ಸರ್ಕಾರ ಮಲಗಿದೆಯಾ ? ಎನ್ನುವ ಪ್ರಶ್ನೆ ಈಗ ಎದುರಾಗಿದೆ.
ಕಪ್ಪು ಪಟ್ಟಿ ಧರಿಸಿ,ಕಪ್ಪು ದಿನ ಆಚರಣೆಗೆ ಬೆಂಬಲ ನೀಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿ ಈ ಕುರಿತು ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಏಕನಾಥ ಶಿಂಧೆ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ಮಹಾರಾಷ್ಟ್ರ ಸರ್ಕಾರ ಕರ್ನಾಟಕ ರಾಜ್ಯೋತ್ಸವದ ಆಚರಣೆಯ ದಿನ ಕಪ್ಪು ದಿನ ಆಚರಿಸಲು ನಿರ್ಧರಿಸುವ ಮೂಲಕ ನೇರವಾಗಿ ಹಸ್ತಕ್ಷೇಪ ಮಾಡುವ ಮೂಲಕ ,ಭಾರತದ ಒಕ್ಕೂಟ ವ್ಯೆವಸ್ಥೆಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದ್ದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇದಕ್ಕೆ ತಕ್ಷಣ ತಕ್ಕ ಉತ್ತರ ಕೊಡಬೇಕಾಗಿದೆ.
ಈ ಬಾರಿ ಬೆಳಗಾವಿಯಲ್ಲಿ ಕಪ್ಪು ದಿನ ಆಚರಣೆಗೆ ಬೆಳಗಾವಿ ಜಿಲ್ಲಾಡಳಿತ ಅನುಮತಿ ನೀಡಲು ಸ್ಪಷ್ಟವಾಗಿ ನಿರಾಕರಿಸಿದ್ದರಿಂದ,ಎಂಈಎಸ್ ನಾಯಕರು ಈಗ ಮಹಾರಾಷ್ಟ್ರಕ್ಕೆ ಪಲಾಯನ ಮಾಡಿದ್ದಾರೆ,ಕಪ್ಪು ದಿನಾಚರಣೆಗೆ ಕರ್ನಾಟಕ ಸರ್ಕಾರ ನಮಗೆ ಅನುಮತಿ ನೀಡುತ್ತಿಲ್ಲ, ನಮ್ಮ ಪರವಾಗಿ ನೀವು ಕಪ್ಪು ದಿನ ಆಚರಿಸಿ ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ,ಮಹಾರಾಷ್ಟ್ರ ಮಂತ್ರಿ ಮಂಡಳ ರಾಜ್ಯೋತ್ಸವದ ದಿನ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಲು ಮುಂದಾಗಿದೆ.
ಮಹಾರಾಷ್ಟ್ರ ಮಂತ್ರಿಯ ಹೇಳಿಕೆ ಇಲ್ಲಿದೆ ನೋಡಿ