ಬೆಳಗಾವಿ- ಖಾನಾಪೂರ ಶಾಸಕಿ ಡಾ ಅಂಜಲಿ ಹೇಮಂತ್ ನಿಂಬಾಳ್ಕರ್ ಅವರು ಜಗನ್ಮಾತೆ ದುರ್ಗಾ ದೇವಿಗೆ ಹರಕೆ ಹೊತ್ತಿದ್ದಾರೆ.
ಕ್ಷೇತ್ರದ ಜನತೆಯ ಸಕಲ ಶ್ರೇಯಸ್ಸಿಗೆ ವಿಶೇಷವಾದ,ವಿಶಿಷ್ಟವಾದ ,ಕಠಿಣ ಆಚರಣೆಯ ಹರಕೆ ಹೊತ್ತಿರುವ ಅವರು ನವರಾತ್ರಿಯ 9 ದಿನಗಳ ಕಾಲ ಬರಿಗಾಲಿನಲ್ಲಿದ್ದು 9 ದಿನಗಳ ಕಾಲ ಊಟ ಮಾಡದೇ ಕೇವಲ ಹಣ್ಣು ಹಂಪಲಗಳನ್ನ ಮಾತ್ರ ಸೇವಿಸುವ ಹರಕೆ ಹೊತ್ತ ಸೇವಾ ಶಾರದೆಯ ಜನಪರ ಕಾಳಜಿ ಪ್ರಶಂಸಾರ್ಹ.
ಈ ಹಿಂದೆಯೂ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಕ್ಷೇತ್ರದ ಒಳಿತಿಗಾಗಿ,ಕ್ಷೇತ್ರದ ಅಭಿವೃದ್ಧಿಗಾಗಿ,ಹರಕೆ ಹೊತ್ತು ,ಬೆಂಗಳೂರಿನಿಂದ ತಿರುಪತಿಯ ವರೆಗೆ ಪಾದಯಾತ್ರೆ ನಡೆಸಿ ತಿರುಪತಿ ತಿಮ್ಮಪ್ಪನ ಕೃಪೆಗೆ ಪಾತ್ರರಾಗಿದ್ದರು.
ಈಗ ನವರಾತ್ರಿಯ ನಿಮಿತ್ಯ ಹರಕೆ ಹೊತ್ತ ಅವರು ಬರಿಗಾಲಲ್ಲಿ ಕ್ಷೇತ್ರ ಸಂಚಾರ ಮಾಡಿ,ಜನಸೇವೆ ಮಾಡುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದ ವಕ್ತಾರ ಆಗಿರುವ ಅಂಜಲಿ ನಿಂಬಾಳ್ಕರ್ ಬೆಳಗಾವಿ ಕಾಂಗ್ರೆಸ್ ಕಚೇರಿ ಕ್ಯಾಂಟೀನ್ ಉದ್ಘಾಟನೆ ಕಾರ್ಯಕ್ರಮಕ್ಕೆ ಬರಿಗಾಲಲ್ಲಿ ಭಾಗವಹಿಸಿದಾಗ ಕ್ಷೇತ್ರದ ಜನರ ಒಳಿತಿಗಾಗಿ ಅವರು ಹರಕೆ ಹೊತ್ತ ವಿಷಯ ಎಲ್ಲರಿಗೂ ತಿಳಿದಿತ್ತು.
ಖಾನಾಪೂರ ಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಳೆ ಹರಿಸುತ್ತಿರುವ ಅಂಜಲಿ ನಿಂಬಾಳ್ಕರ್ ಅವರು ಕ್ಷೇತ್ರದ ಒಳಿತಿಗಾಗಿ ವಿಶೇಷ ವ್ರತ ಆಚರಿಸುತ್ತಿರುವದು ಪ್ರಶಂಸನೀಯ ಸಂಗತಿ
ಅದಕ್ಕಾಗಿಯೇ ಅವರನ್ನು ಕ್ಷೇತ್ರದ ಜನ ಅಂಜಲಿ “ತಾಯಿ’ ಅಂತಾ ಕರೀತಾರೆ….