ಅಫ್ಘಾನಿಸ್ತಾನವನ್ನ ಇದೀಗ ತಾಲಿಬಾನಿಗಳು ವಶಪಡಿಸಿಕೊಂಡು ತಮ್ಮದೇ ಸರ್ಕಾರ ರಚಿಸಲು ಬೇಕಾದ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಮಾನವ ಹಕ್ಕುಗಳಿಗೆ ಮಾರಕವಾದ ಸಿದ್ಧಾಂತಗಳನ್ನ ನಂಬಿರುವ ತಾಲಿಬಾನಿಗಳು ಅಫ್ಘಾನಿಸ್ತಾನದ ಜನರನ್ನ ಹಿಂಸಿಸಲು ಮುಂದಾಗಬಹುದು ಎಂಬ ಆತಂಕ ಜಗತ್ತಿನಾದ್ಯಂತ ಮನೆಮಾಡಿದೆ. ಈ ಮಧ್ಯೆ ಅಫ್ಘಾನಿಸ್ತಾನದ ಮೊದಲ ಮಹಿಳಾ ಮೇಯರ್ ಒಬ್ಬರ ಮಾತುಗಳು ಎಂಥವರ ಹೃದಯವನ್ನೂ ಹಿಂಡುವಂತಿದೆ.
: ಸರ್ಕಾರಿ ಅಧಿಕಾರಿಗಳಿಗೆ ‘ಸಾರ್ವತ್ರಿಕ ಕ್ಷಮಾದಾನ’ ಕೋರಿದ ತಾಲಿಬಾನಿಗಳು
ತಾಲಿಬಾನಿಗಳು ನನ್ನನ್ನು ಕೊಲ್ತಾರೆ, ನಮ್ಮ ಕುಟುಂಬವನ್ನು ಕೊಲ್ತಾರೆ.. ಅವರು ಬಂದು ನಮ್ಮನ್ನು ಕೊಲ್ಲುವುದನ್ನೇ ನಾವು ಬೇರೆ ದಾರಿ ಕಾಣದೆ ಎದುರು ನೋಡುತ್ತಿದ್ದೇವೆ ಎಂದು ಅಫ್ಘಾನಿಸ್ತಾನದ ಮೊದಲ ಮಹಿಳಾ ಮೇಯರ್ ಜರೀಫಾ ಘಫಾರಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
: ಆಫ್ಘಾನ್ನಿಂದ ತಾಯ್ನಾಡಿಗೆ 120 ಮಂದಿ ಭಾರತೀಯರು- ರಣಾಂಗಣದಂತಾದ ಅಫ್ಘಾನಿಸ್ತಾನದಿಂದ ರಕ್ಷಣೆಯೇ ರೋಚಕ
ಅಫ್ಘಾನಿಸ್ತಾನವನ್ನ ತಾಲಿಬಾನಿಗಳು ವಶಪಡಿಸಿಕೊಂಡ ಬೆನ್ನಲ್ಲೇ ಇಂಥ ದಾರುಣ ಕಥೆಗಳು ಒಂದೊಂದಾಗಿ ಹೊರಬರುತ್ತಿವೆ. 27 ವರ್ಷದ ಜರೀಫಾ ಘಫಾರಿ ಅಫ್ಘಾನಿಸ್ತಾನ ಮೊದಲ ಯುವ ಮಹಿಳಾ ಮೇಯರ್ ಆಗಿದ್ದಾರೆ. ನನ್ನ ಅಥವಾ ನನ್ನ ಕುಟುಂಬವನ್ನು ಕಾಯಲು ಇಲ್ಲಿ ಯಾರೂ ಇಲ್ಲ. ನಾನಿಲ್ಲಿ ನನ್ನ ಪತಿ ಹಾಗೂ ಪರಿವಾರದ ಜೊತೆಗಿದ್ದೇನೆ. ಅವರು ನಮ್ಮಂಥವರಿಗಾಗಿ ಬರ್ತಾರೆ.. ಬಂದು ನಮ್ಮನ್ನು ಕೊಂದು ಹಾಕ್ತಾರೆ. ಈಗ ದೇಶ ತಾಲಿಬಾನಿಗಳ ಕೈ ಸೇರಿದೆ ಎಂದು ಜರೀಫಾ ಘಫಾರಿ ಅಳಲು ತೋಡಿಕೊಂಡಿದ್ದಾರೆ.
: ಅಫ್ಘಾನಿಸ್ತಾನ ಅಂತರಿಕ ವಿಚಾರಕ್ಕೂ ನಮ್ಗೂ ಸಂಬಂಧವಿಲ್ಲ -ಅಫ್ಘನ್ ಸೇನೆ ವಿರುದ್ಧವೇ ಜೋ ಬೈಡೆನ್ ಕಿಡಿ
ಇನ್ನು 2018ರಲ್ಲಿ ಮಹಿಳಾ ಮೇಯರ್ ಆಗಿ ಜರೀಫಾ ಘಫಾರಿ ಆಯ್ಕೆಯಾಗಿದ್ದರು. ಕಳೆದ ವರ್ಷ ಜರೀಫಾ ಘಫಾರಿ ಅವರ ತಂದೆ ಜನರಲ್ ಅಬ್ದುಲ್ ವಸೀ ಗಫಾರಿಯನ್ನ ತಾಲಿಬಾನ್ ಕೊಂದುಹಾಕಿತ್ತು. ಜರೀಫಾ ನಿರಂತರವಾಗಿ ಆಫ್ಘನ್ ಸೈನಿಕರಿಗೆ ಹಾಗೂ ಸ್ಥಳೀಯ ಜನರಿಗೆ ಸಹಾಯ ಮಾಡುವುದರಲ್ಲಿ ನಿರತರಾಗಿದ್ದಾರೆ. ಅವರು ಇಲ್ಲಿನ ಯುವಕರು ದೇಶದ ಭವಿಷ್ಯವನ್ನು ಉತ್ತಮಗೊಳಿಸುತ್ತಾರೆಂಬ ಕನಸು ಕಂಡಿದ್ದವರು. ಅಫ್ಘಾನಿಸ್ತಾನದ ಭವಿಷ್ಯ ಮುಂದೊಂದು ದಿನ ಸರಿಯಾಗಬಹುದು ಎಂದುಕೊಂಡಿದ್ದೆ, ಆದರೆ ಭಾನುವಾರ ನನ್ನ ಕನಸು ನುಚ್ಚುನೂರಾಯ್ತು ಎಂದು ಜರೀಫಾ ತಮ್ಮ ಅಸಹಾಯಕತೆ ಹೊರಹಾಕಿದ್ದಾರೆ.