Breaking News

ಬೆಳಗಾವಿಯಲ್ಲಿ ಗಣೇಶ ವಿಸರ್ಜನೆ ವೇಳೆ ಗಲಾಟೆ; ಯುವಕನಿಗೆ ಚಾಕು ಇರಿತ

Spread the love

ಬೆಳಗಾವಿ: ಗಣೇಶ ವಿಸರ್ಜನೆಯ ಮೆರವಣಿಗೆ ನೋಡಲು ಬಂದ ಮಹಾರಾಷ್ಟ್ರದ ಮೂಲದ ಯುವಕನಿಗೆ ಕಿಡಿಗೇಡಿಗಳು ಚಾಕು ಇರಿದ ಘಟನೆ ಜಿಲ್ಲೆಯ ಸದಲಗಾ ಪಟ್ಟಣದಲ್ಲಿ ನಡದಿದೆ.

ಕೊಲ್ಹಾಪುರ ಮೂಲದ ವಿಶಾಲ್ ಶಿವಡೆ (27) ಚಾಕು ಇರಿತಕ್ಕೊಳಗಾದ ಯುವಕ. ಅಪರಿಚಿತ ಯುವಕರ ಗ್ಯಾಂಗ್ ನಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದ್ದು, ಚಾಕು ಇರಿತದಿಂದ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ.

ಗಣೇಶ ವಿಸರ್ಜನೆ ಮೆರವಣಿಗೆ ವೀಕ್ಷಣೆಗೆ ಯುವಕ ಆತನ ಸ್ನೇಹಿತರು ಪಟ್ಟಣಕ್ಕೆ ಬಂದಿದ್ದು ಈ ವೇಳೆ ವೈಯಕ್ತಿಕ ದ್ವೇಷ ಹಿನ್ನೆಲೆ ಚಾಕು ಇರಿದು ಕಿಡಗೇಡಿಗಳು ಪರಾರಿಯಾಗಿದ್ದಾರೆ. ಸದ್ಯ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಸ್ಥಳಕ್ಕೆ ಸದಲಗಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Spread the love

About Laxminews 24x7

Check Also

ಇವತ್ತು ನೀರು ಕಡಿಮೆಯಾಗುತ್ತೆ:ಉಪವಿಭಾಗಧಿಕಾರಿ ಸುಭಾಷ ಸಂಪಗಾವಿ ನದಿತೀರದ ಜನರಲ್ಲಿ ಅಭಯ

Spread the love ಇವತ್ತು ನೀರು ಕಡಿಮೆಯಾಗುತ್ತೆ:ಉಪವಿಭಾಗಧಿಕಾರಿ ಸುಭಾಷ ಸಂಪಗಾವಿ ನದಿತೀರದ ಜನರಲ್ಲಿ ಅಭಯ ಚಿಕ್ಕೋಡಿ: ಕೃಷ್ಣಾ ಸೇರಿದಂತೆ ದೂಧಗಂಗಾ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ