Breaking News

ಮಾಂಸದೂಟ ಸೇವಿಸಿ ಅಸ್ವಸ್ಥವಾಗಿದ್ದ 6ವರ್ಷದ ಮಗು ಸಾವು

Spread the love

ರಾಮನಗರ: ಬುಧವಾರದಂದು ಚನ್ನಪಟ್ಟಣ ತಾಲ್ಲೂಕಿನ ಮೊಳೆದೊಡ್ಡಿ ಗ್ರಾಮದಲ್ಲಿ ಬೀಗರ ಔತಣ ಕೂಟದಲ್ಲಿ ಮಾಂಸದೂಟ ಸೇವಿಸಿ ಜನರು ಅಸ್ವಸ್ಥತಗೊಂಡ ಘಟನೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೈಸೂರಿನ ಖಾಸಗಿ ಅಸ್ಪತ್ರೆಯಲ್ಲಿ 6 ವರ್ಷದ ಹೆಣ್ಣುಮಗು ಮೃತಪಟ್ಟಿದೆ.

ಬೀಗರ ಔತಣದಲ್ಲಿ ಊಟ ಮಾಡಿದ್ದ 6 ವರ್ಷದ ಹೆಣ್ಣು ಮಗು ಚೈತನ್ಯ ಚಿಕಿತ್ಸೆ ಫಲಿಸದೇ ಗುರುವಾರ ಮೃತಪಟ್ಟಿದ್ದು, ಗ್ರಾಮದ ವೆಂಕಟಭೈರ-ಸೌಮ್ಯ ದಂಪತಿಯ ಮಗು ಚೈತನ್ಯ ಬೀಗರೂಟದಲ್ಲಿ ಫುಡ್ ಪಾಯ್ಸನ್ ನಿಂದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ.

ಚನ್ನಪಟ್ಟಣ ತಾಲ್ಲೂಕಿನ ಮೊಳೆದೊಡ್ಡಿ ಗ್ರಾಮದಲ್ಲಿ ಭಾನುವಾರ ನಡೆದಿದ್ದ ಮದುವೆಯ ಹಿನ್ನಲೆಯಲ್ಲಿ ಮಂಗಳವಾರ ಯುವತಿ ಮನೆಯವರಿಂದ ಬೀಗರ ಔತಣ ಕೂಡ ಆಯೋಜನೆ ಮಾಡಲಾಗಿತ್ತು. ಔತಣಕೂಟದಲ್ಲಿ ಊಟ ಸೇವಿಸಿದ ಸುಮಾರು 700 ರಿಂದ 800 ಜನರಲ್ಲಿ 250 ರಿಂದ 300 ಜನ ಅಸ್ವಸ್ಥರಾಗಿದ್ದರು.


Spread the love

About Laxminews 24x7

Check Also

ಇನ್ಮುಂದೆ 5 ಕೆ.ಜಿ ಅಕ್ಕಿ ಬದಲು ಇಂದಿರಾ ಆಹಾರ ಕಿಟ್ ವಿತರಣೆ

Spread the love ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ರಾಜ್ಯದ ಎಎವೈ ಮತ್ತು ಪಿಹೆಚ್‌ಹೆಚ್ ಪಡಿತರಕ್ಕೆ ಪರ್ಯಾಯವಾಗಿ ಫಲಾನುಭವಿಗಳಿಗೆ ಇಂದಿರಾ ಆಹಾರ ಕಿಟ್‌ಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ