ಬೆಂಗಳೂರು : ಮಾದಕ ವಸ್ತು ಮಾರಾಟಕ್ಕೆ ಯತ್ನಿಸಿದ್ದ ಮೂವರು ವಿದೇಶಿ ಪ್ರಜೆಗಳನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ನೈಜೀರಿಯಾ ಪ್ರಜೆ ಕಿಜ್ ಪ್ರಿನ್ಸ್ (23), ಎನ್. ಝಿಗ್ವೆ ಎಝಿಕೆ (39) ಮತ್ತು ಐವೋರಿ ಕೋಸ್ಟ್ ದೇಶದ ನಿವಾಸಿ ದೊಸ್ಸಾ ಖಲೀಫಾ (26) ಬಂಧಿತರು.
ಆರೋಪಿಗಳಿಂದ 13.760 ಗ್ರಾಂ ಕೋಕೇನ್, 2.850 ಗ್ರಾಂ ಎಂಡಿಎಂಎ ಮಾತ್ರೆ ಹಾಗೂ ಗ್ರಾಹಕರನ್ನು ಸಂಪರ್ಕಿಸಲು ಬಳಸುತ್ತಿದ್ದ ಐದು ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಎಂ ಭೇಟಿ ಬಳಿಕ ರಹಸ್ಯ ಸ್ಥಳಕ್ಕೆ ಗೃಹ ಸಚಿವ: ಕುತೂಹಲ ಮೂಡಿಸಿದ ಬೆಳವಣಿಗೆ
ಆರೋಪಿಗಳು ಪ್ರವಾಸಿ ವೀಸಾದಡಿ ಬಂದು ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದರು. ಕಿಜ್ ಪ್ರಿನ್ಸ್ ಎಂಬುವನಿಗೆ ಮುಂಬೈ ನಂಟು ಇದೆ.
ಅಲ್ಲಿಂದ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ. ತನ್ನ ಇನ್ನಿಬ್ಬರು ಸ್ನೇಹಿತರ ಜತೆ ಸೇರಿ ನಗರದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಪೂರೈಸುತ್ತಿದ್ದ. ವೀಸಾ ಜಪ್ತಿ ಮಾಡಲಾಗಿದ್ದು, ಅವಧಿ ಮುಗಿದಿರುವುದು ಕಂಡು ಬಂದಿದೆ. ವೀಸಾ ನಿಯಮ ಉಲ್ಲಂಘಿಸಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವುದು ತನಿಖೆಯಲ್ಲಿ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.