Breaking News

ಮನೆಯಲ್ಲೇ ಪೂಜೆ ಮಾಡಿ, ಬೀದಿಗೆ ಬರಬೇಡಿ..!!

Spread the love

ಬೆಂಗಳೂರು : ಗಣೇಶ ಚತುರ್ಥಿಗೆ ಕೆಲವೇ ಗಂಟೆಗಳು ಬಾಕಿ ಇರುವಂತೆ ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ಮನವಿ ಮಾಡಿದೆ. ಯಾವುದೇ ಕಾರಣಕ್ಕೂ ಜನತೆ ಬಹಿರಂಗವಾಗಿ ಬೀದಿಗಳಲ್ಲಿ ಗಣಪತಿಯನ್ನು ಕೂರಿಸಿ ಹಬ್ಬ ಆಚರಿಸಬಾರದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮನವಿ ಮಾಡಿದ್ದಾರೆ.  ಈ ಕುರಿತು ಜನತೆಗೆ ಕಳಕಳಿಯ ವಿನಂತಿ ಮಾಡಿರುವ ಅವರು, ಕೊರೊನಾ ಸಾಂಕ್ರಾಮಿಕ ಕಾಯಿಲೆ ಹಿನ್ನೆಲೆಯಲ್ಲಿ ಯಾವುದೇ ಬಹಿರಂಗ ಕಾರ್ಯಕ್ರಮ ಆಯೋಜಿಸಬೇಡಿ. ನಿಮ್ಮ ನಿಮ್ಮ ಮನೆಗಳಲ್ಲಿ ಗಣಪನನ್ನು ಆರಾಧಿಸಿ ಎಂದು ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ.

 

ಕೊರೊನಾ ಹಿನ್ನೆಲೆಯಲ್ಲಿ ಗಣೇಶ ಹಬ್ಬವನ್ನು ಆಚರಿಸದ ಪರಿಸ್ಥಿತಿ ಇದೆ. ಹೀಗಾಗಿ ಸರಳವಾಗಿ ಮನೆಗಳಲ್ಲೇ ಹಬ್ಬ ಆಚರಿಸಿ, ಪರಿಸರ ಗಣಪನನ್ನು ಆರಾಧಿಸುವ ಮೂಲಕ ಚೌತಿಯನ್ನು ಆಚರಣೆ ಮಾಡಿ ಎಂದು ಸಿಎಂ ಶುಭಾಶಯ ಕೋರಿದ್ದಾರೆ.

ಅಲ್ಲದೆ ಈ ಬಾರಿಯ ದಸರಾ ಆಚರಣೆಯೂ ಸರಳವಾಗಿ ಇರಲಿದೆ ಎಂದು ಸಿಎಂ ಇದೆ ವೇಳೆ ಸೂಚ್ಯವಾಗಿ ಹೇಳಿದ್ದಾರೆ.  

ಈಗಾಗಲೇ ರಾಜ್ಯ ಸರ್ಕಾರ ಚೌತಿಯ ಆಚರಣೆಗಾಗಿ ವಿಶೇಷ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಜನನಿಬಿಡ ಸ್ಥಳಗಳಲ್ಲಿ ಯಾವುದೇ ಕಾರಣಕ್ಕೂ ವಿಘ್ನ ವಿನಾಯಕನ ಮೂರ್ತಿಯನ್ನು ಕುಳ್ಳಿರಿಸುವಂತಿಲ್ಲ. ದೊಡ್ಡ ಮೂರ್ತಿಗಳಿಗಂತೂ ಅವಕಾಶವಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಮೂರ್ತಿಗಳ ಎತ್ತರಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ.

ಇನ್ನು ಇದರ ನಡುವೆ ಸರ್ಕಾರದ ನಿರ್ದೇಶನದ ಅರಿವಿಲ್ಲದೆ ದೊಡ್ಡ ಗಣಪತಿ ವಿಗ್ರಹ ನಿರ್ಮಿಸಿರುವ ಕಲಾಕಾರರು ಸಂಕಟಕ್ಕೆ ಬಿದ್ದಿದ್ದಾರೆ. ಮೂರ್ತಿಗಳನ್ನು ಕೊಳ್ಳುವವರು ಇಲ್ಲದೇ ಹಾಕಿರುವ ಬಂಡವಾಳವೂ ವಾಪಸ್ ಬರದ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆಯೂ ಸರ್ಕಾರ ಗಮನ ಹರಿಸಬೇಕಿದೆ.


Spread the love

About Laxminews 24x7

Check Also

ಮಂಡ್ಯದಲ್ಲಿ ಮೂರು ದಿನಗಳವರೆಗೆ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಕ್ತಾಯ

Spread the loveಮಂಡ್ಯ : ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ