Breaking News

ಸ್ಯಾಂಡಲ್‌ವುಡ್‌ಗೆ ಡ್ರಗ್ಸ್‌ ನಂಟು: ದಾಖಲೆ ಸಮೇತ 10 ರಿಂದ 15 ನಟ-ನಟಿಯರ ಬಣ್ಣ ಬಯಲು ಮಾಡಿದ ಇಂದ್ರಜೀತ್..!

Spread the love

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್‌ ನಂಟಿದೆ ಎನ್ನುವ ಹೇಳಿಯ ಕುರಿತು ಇಂದು ಸಿಸಿಬಿ ವಿಚಾರಣೆಗೆ ಹಾಜರಾಗಿದ್ದ ಇಂದ್ರಜೀತ್‌ ಲಂಕೇಶ್‌ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. 10 ರಿಂದ 15 ನಟ ನಟಿಯರ ಹೆಸರುಗಳನ್ನ ದಾಖಲೆ ಸಮೇತ ಅಧಿಕಾರಿಗಳಿಗೆ ನೀಡಿದ್ದೇನೆ ಎಂದಿದ್ದಾರೆ.

 

 

ಸಿಸಿಬಿ ವಿಚಾರಣೆಯ ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಇಂದ್ರಜೀತ್‌ ಲಂಕೇಶ್‌, “ಅಧಿಕಾರಿಗಳಿಗೆ ಡಿಜಿಟಲ್‌ ಯವಿಡನ್ಸ್ ನೀಡಿದ್ದೇನೆ. ಡ್ರಗ್ಸ್‌ ಪಾರ್ಟಿ ನಡೆಸಿದ ನಟ-ನಟಿಯರ ಹೆಸರಿನ ಸಮೇತ ಅವ್ರ ಕುರಿತ ಪೂರ್ಣ ದಾಖಲೆಯನ್ನ ನೀಡಿದ್ದೇನೆ. ನನ್ನ ವಿಚಾರಣೆಯಿಂದ ಅಧಿಕಾರಿಗಳಿಗೆ ಅವ್ರಿಗೂ ಸಂತೋಷವಾಗಿದೆ. ಯಾಕಂದ್ರೆ, ಅಷ್ಟೊಂದು ಮಾಹಿತಿ ನಾನು ನೀಡಿದ್ದೇನೆ” ಎಂದು ಹೇಳಿದ್ದಾರೆ.

ನನಗೆ ಮಾದ್ಯಮ ಸಹಿತ ರಾಜಕಾರಣಿಳು ಸಪೋರ್ಟ್‌ ಮಾಡಿದ್ದಾರೆ. ಅವ್ರಿಗೆ ಧನ್ಯವಾದಗಳು ಎಂದಿದ್ದಾರೆ. ಇನ್ನು ಚಿರಂಜೀವಿ ಸರ್ಜಾ ಬಗ್ಗೆ ಹೇಳಿದ ಮಾತುಗಳನ್ನ ವಾಪಾಸ್‌ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ ಇಂದ್ರಜೀತ್‌.

ರಾಜ್ಯ ರಾಜಧಾನಿಯಲ್ಲಿ ಸಿಸಿಬಿ ಪೊಲೀಸರು ಡ್ರಗ್ಸ್‌ ಮಾಫೀಯಾ ಭೇದಿಸಿದ್ದೇ ತಡ ಸ್ಯಾಂಡಲ್‌ವುಡ್‌ಗೆ ಡ್ರಗ್ಸ್‌ ನಂಟಿದೆ ಎನ್ನುವ ಆರೋಪ ಬಲವಾಗಿ ಕೇಳಿ ಬರ್ತಿದೆ. ಈ ನಡುವೆ ನಿರ್ದೇಶಕ ಇಂದ್ರಜೀತ್‌ ಲಂಕೇಶ್‌ ಸ್ಪೋಟಕ ಮಾಹಿತಿಗಳನ್ನ ಬಿಚ್ಚಿಟ್ಟಿದ್ದು, ಸ್ಯಾಂಡಲ್‌ ಡ್ರಗ್ಸ್‌ಗೆ ಸಂಬಂಧಿಸಿದಂತೆ ನನ್ನಲ್ಲಿ ಮಾಹಿತಿಗಳಿವೆ. ಸೂಕ್ತ ಭದ್ರತೆ ನೀಡುವುದಾದ್ರೆ ಅಧಿಕಾರಿಗಳಿಗೆ ಹಸ್ತಾಂರಿಸುವೆ ಎಂದಿದ್ದರು. ಅದ್ರಂತೆ, ನಿರ್ದೇಶಕ ಇಂದ್ರಜೀತ್‌ ಲಂಕೇಶ್‌ಗೆ ಸಿಸಿಬಿ ಪೊಲೀಸರು ನೋಟಿಸ್‌ ನೀಡಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದು, ಇಂದು ಸಿಸಿಬಿ ವಿಚಾರಣೆಗೆ ಇಂದ್ರಜೀತ್‌ ಹಾಜರಾಗಿದ್ದರು.


Spread the love

About Laxminews 24x7

Check Also

ಮಂಡ್ಯದಲ್ಲಿ ಮೂರು ದಿನಗಳವರೆಗೆ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಕ್ತಾಯ

Spread the loveಮಂಡ್ಯ : ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ