Breaking News

800ಗ್ರಾಂ ಚಿನ್ನ, ದಾಖಲೆ ಕಳವು ಮಾಡಿರುವ ಆರೋಪದ ಮೇಲೆ ಹಲಸೂರು ಗೇಟ್‌ ಪೊಲೀಸರು

Spread the love

ಬೆಂಗಳೂರು: ಪೊಲೀಸರ ಸೋಗಿನಲ್ಲಿ ಬಂದು 800ಗ್ರಾಂ ಚಿನ್ನ, ದಾಖಲೆ ಕಳವು ಮಾಡಿರುವ ಆರೋಪದ ಮೇಲೆ ಹಲಸೂರು ಗೇಟ್‌ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿರುವ ಘಟನೆ ಬೆಂಗಳೂರಿನ ಹಲಸೂರು ಗೇಟ್‌ನ ನಗರ್ತಪೇಟೆಯಲ್ಲಿ ನಡೆದಿದೆ.


ಚಿನ್ನಭಾರಣ ಪಾಲಿಶ್ ಮಾಡುವ ಗೀತಾ ಜುವೆಲ್ಲರ್ಸ್​ಗೆ ನುಗ್ಗಿದ ಆರು ಜನ ಪೊಲೀಸ ವೇಷಧರಿಸಿದ್ದ ಕಳ್ಳರು ದೀಪಾವಳಿ ಹಬ್ಬಕ್ಕೆ ನಕಲಿ‌ ಚಿನ್ನ ಮಾರಾಟ ಮಾಡುತ್ತಿರುವ ಆರೋಪ ಕೇಳಿಬಂದಿರುವುದರಿಂದ ನಿಮ್ಮ ಅಂಗಡಿಯನ್ನು ರೇಡ್ ಮಾಡುತ್ತಿದ್ದೇವೆ ಎಂದು ಹೇಳಿ ವಂಚನೆ ಮಾಡಿದ್ದಾರೆ.

 

ಮಾಲೀಕನಿಗೆ ಕರೆ ಮಾಡಿದ್ದ ಕಳ್ಳರು ಹೇಳಿದ್ದೇನು?
ಕಿರಾತಕರು ರೇಡ್​ ನೆಪದಲ್ಲಿ 800 ಗ್ರಾಂ ನಷ್ಟು ಚಿನ್ನಭಾರಣ ಹಾಗೂ ದಾಖಲೆಗಳನ್ನು ಕಳ್ಳತನ ಮಾಡಿದ್ದಾರೆ. ಅಲ್ಲದೆ ಕೋಲ್ಕತ್ತಾದಲ್ಲಿದ್ದ ಮಾಲೀಕನಿಗೆ ಕರೆ ಮಾಡಿದ ಕಳ್ಳರು ನಿಮ್ಮ ಅಂಗಡಿ‌ ಮೇಲೆ ರೇಡ್ ಮಾಡಿದ್ದೇನೆ ಹೀಗಾಗಿ ನೀವು ಪೊಲೀಸ್ ಠಾಣೆಗೆ ಬನ್ನಿ ಎಂದು ಬೆದರಿಸಿದ್ದಾರೆ.

ಕೋಲ್ಕತ್ತಾದಿಂದ ಬಂದ ಗೀತಾ ಜುವೈಲರ್ಸ್ ಮಾಲೀಕ ಕಾರ್ತಿಕ್ ಹಲಸೂರು ಗೇಟ್ ಪೊಲೀಸ್ ಠಾಣೆಗೆ ಬಂದು ಈ ಘಟನೆಯ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಖಾಕಿ ಸೋಗಿನಲ್ಲಿ ಬಂದಿದ್ದ ಕಳ್ಳರ ಆಟ ಬೆಳಕಿಗೆ ಬಂದಿದೆ. ಜುವೈಲರ್ಸ್ ಮಾಲೀಕ ಕಾರ್ತಿಕ್​ನಿಂದ ದೂರು ದಾಖಲಿಸಿಕೊಂಡ ಹಲಸೂರು ಗೇಟ್ ಪೊಲೀಸರು ದೂರಿನ್ವಯ ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದರು

 

 


Spread the love

About Laxminews 24x7

Check Also

ಲಿಂಗಾಯಿತ ಧರ್ಮದಲ್ಲಿರುವ ಜಂಗಮರು ಬೇಡ, ಬುಡ್ಗ ಜಂಗಮರಲ್ಲ: ಹೈಕೋರ್ಟ್​ ಸ್ಪಷ್ಟನೆ

Spread the love ಬೆಂಗಳೂರು: ವೀರಶೈವ ಲಿಂಗಾಯಿತ ಧರ್ಮದಲ್ಲಿರುವ ಜಂಗಮರು ‘ಬೇಡ’ ಅಥವಾ ‘ಬುಡ್ಗ’ ಜಂಗಮರಲ್ಲ. ಲಿಂಗಾಯಿತರಲ್ಲಿನ ಜಂಗಮರು ತಾವು ಬೇಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ