Breaking News

ನೀಟಾಗಿ ಡ್ರೆಸ್ ಮಾಡಿಕೊಂಡು ಮದುವೆ ನಡೆಯುತ್ತಿದ್ದ ಕಲ್ಯಾಣ ಮಂಟಪಗಳಿಗೆ ಒಬ್ಬ ಗೃಹಿಣಿಯಂತೆ ನುಗ್ಗಿ ಮಹಿಳೆಯರ ಆಭರಣಗಳನ್ನು ಕಳವು ಮಾಡುತ್ತಿದ್ದ ಕಳ್ಳಿಯನ್ನು

Spread the love

 

 

 

ನೀಟಾಗಿ ಡ್ರೆಸ್ ಮಾಡಿಕೊಂಡು ಮದುವೆ ನಡೆಯುತ್ತಿದ್ದ ಕಲ್ಯಾಣ ಮಂಟಪಗಳಿಗೆ ಒಬ್ಬ ಗೃಹಿಣಿಯಂತೆ ನುಗ್ಗಿ ಮಹಿಳೆಯರ ಆಭರಣಗಳನ್ನು ಕಳವು ಮಾಡುತ್ತಿದ್ದ ಕಳ್ಳಿಯನ್ನು   ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು ಬಂಧಿಸಿದ್ದಾರೆ .

ಬಂಧಿತ ಮಹಿಳೆಯನ್ನು ಕಮಲಮ್ಮ (26) ಎಂದು ಗುರುತಿಸಲಾಗಿದ್ದು ಆಕೆ ನಾಗರಹೊಳೆಯ ನಿವಾಸಿಯೆಂದು ತಿಳಿದುಬಂದಿದೆ .

ಪೊಲೀಸರ ಪ್ರಕಾರ ಕಮಲಮ್ಮನ ಕಳುವು ಮಾಡುವ ರೀತಿ ಸುಲಭವಾಗಿತ್ತು . ಮದುವೆ ನಡೆಯುತ್ತಿದ್ದ ಛತ್ರಗಳಿಗೆ ಆಕೆ ಸದ್ಗೃಹಿಣಿಯಂತೆ ಡ್ರೆಸ್ ಮಾಡಿಕೊಂಡು ಮದುವೆಮನೆಗಳ ನೆಂಟಳೇನೋ ಎಂಬಂತೆ ಪ್ರವೇಶಿಸುತ್ತಿದ್ದಳು . ಹೆಚ್ಚು ಆಭರಣ ಧರಿಸಿರುವ ಮಹಿಳೆಯರೇ ಆಕೆಯ ಟಾರ್ಗೆಟ್ ಆಗಿರುತ್ತಿದ್ದರು . ಅವರು ನಿದ್ರೆಗೆ ಜಾರಿದ ಕೂಡಲೇ ತನ್ನ ಕೈಚಳಕ ಮೆರೆಯುತ್ತಿದ್ದಳು . ತನ್ನ ಕೆಲಸವಾದ ನಂತರ ಕಮಲಮ್ಮ ಮೆತ್ತಗೆ ಅಲ್ಲಿಂದ ಜಾರುತ್ತಿದ್ದಳು .

ಕಳೆದ ತಿಂಗಳು ಕಾಮಾಕ್ಷಿಪಾಳ್ಯದ ಛತ್ರದಲ್ಲಿ ಮದುವೆಗೆ ಬಂದಿದ್ದವರ ಚಿನ್ನಾಭರಣವನ್ನು ಕದ್ದಿದ್ದ ಕಮಲಮ್ಮನ ವಿರುದ್ಧ ಕೇಸು ದಾಖಲಾಗಿತ್ತು . ಪೊಲೀಸರು ಆಕೆಯಿಂದ 5 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ .

 

*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??

ಸುದ್ದಿ ಮತ್ತು ಜಾಹೀರಾತುಗಳಿಗೆ ಸಂಪರ್ಕಿಸಿರಿ: 8123967576
Laxmi News

 

 


Spread the love

About Laxminews 24x7

Check Also

ಕ್ಷಮೆ ಕೇಳಲಿ, ಇಲ್ಲವೇ ಸಾರ್ವಜನಿಕರ ಪ್ರತಿಭಟನೆ ಎದುರಿಸಬೇಕಾದೀತು: ಸಚಿವೆ ಹೆಬ್ಬಾಳ್ಕರ್

Spread the loveಬೆಂಗಳೂರು: ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿಯ ವಿಧಾನ ಪರಿಷತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ